newsfirstkannada.com

‘ನೀವು ಒಂದು ಬೌಂಡರಿ ಹೊಡೆದ್ರೆ, ಬೌನ್ಸರ್​ ಹಾಕಿ ವಿಕೆಟ್ ಎತ್ತೀನಿ’- ಇದು ಡೇವಿಡ್ ಜಾನ್ಸನ್ ಪಾಲಿಸಿ ಆಗಿತ್ತು..!

Share :

Published June 20, 2024 at 3:03pm

Update June 20, 2024 at 3:32pm

  ಟೀಂ ಇಂಡಿಯಾದ ಮಾಜಿ ಆಟಗಾರ ಡೇವಿಡ್​ ಜಾನ್ಸನ್ ಸಾವು

  ಎದುರಾಳಿ ಬ್ಯಾಟ್ಸ್​ಮನ್​ಗೆ ಕೇರ್​ ಮಾಡದ ಆ್ಯಟಿಟ್ಯೂಡ್ ಇವರದ್ದು

  ನ್ಯೂಸ್​ಫಸ್ಟ್​ಗೆ ಕೊನೆಯ ಸಂದರ್ಶನ ನೀಡಿದ್ದರು ಡೇವಿಡ್​ ಜಾನ್ಸನ್

ಟೀಂ ಇಂಡಿಯಾದ ಮಾಜಿ ಆಟಗಾರ ಡೇವಿಡ್​ ಜಾನ್ಸನ್ (53)​ ಸಾವನ್ನಪ್ಪಿದ್ದಾರೆ. ಡೇವಿಡ್ ಜಾನ್ಸನ್‌ ಸಾವಿಗೆ ಕ್ರಿಕೆಟ್​ ತಾರೆಯರು ಕಂಬನಿ ಮಿಡಿದಿದ್ದಾರೆ.

ಈ ಹಿಂದೆ ನ್ಯೂಸ್​ ಫಸ್ಟ್​ನ ಕ್ರಿಕೆಟ್​​ ಫಸ್ಟ್​ ವಿಭಾಗಕ್ಕೆ ಟೀಂ ಇಂಡಿಯಾ ಡೇವಿಡ್​ ಜಾನ್ಸನ್ ವಿಶೇಷ ಸಂದರ್ಶನ ನೀಡಿದ್ದರು. ಆ ವೇಳೆ ಹಲವು ಅಚ್ಚರಿಯ ಸಂಗತಿಯನ್ನು ಬಿಚ್ಚಿಟ್ಟಿದ್ದರು. ಸಂದರ್ಶನ ವೇಳೆ ‘ನೀನು ನನಗೆ ಬೌಂಡರಿ ಹೊಡೆದರೆ ನಾನು ನಿನಗೆ ಬೌನ್ಸರ್​ ಹಾಕುತ್ತೇನೆ. ನನ್ನ ಆ್ಯಟಿಟ್ಯೂಡ್​​ ಆ ಥರ ಇತ್ತು’ ಎಂದು ಹೇಳಿದ್ದರು.

ಕರ್ನಾಟಕ ಮತ್ತು ತಮಿಳುನಾಡಿನ ಕ್ರಿಕೆಟ್​ ಪಂದ್ಯ ಮತ್ತು ಪೈಪೋಟಿ ಬಗ್ಗೆ ಮಾತನಾಡಿದ್ದ ಡೇವಿಡ್​ ಜಾನ್ಸನ್​. ‘ನಾನು ಬೌಲಿಂಗ್​ನಲ್ಲಿ 100%. ಸ್ಪ್ಲಿಟ್​​ ಹೊಡೆದು ಬೌಲಿಂಗ್​ ಮಾಡುತ್ತಿದ್ದೆ. ಅವರು 90 ಹೊಡೆದರೆ ನಾನು 100 ರನ್​ ಹೊಡೆಯೋಕೆ ನೋಡುತ್ತಿದ್ದೆ. ಎದುರಾಳಿ ಬ್ಯಾಟ್ಸ್​ಮನ್​ಗೆ ನಾವು ಕೇರ್​ ಮಾಡುತ್ತಿರಲಿಲ್ಲ. ನೀನು ನನಗೆ ಬೌಂಡರಿ ಹೊಡೆದರೆ ನಾನು ನಿಗಗೆ ಬೌನ್ಸರ್​ ಹಾಕುತ್ತೇನೆ. ನನ್ನ ಆ್ಯಟಿಟ್ಯೂಡ್​​ ನನಲ್ಲಿ ಇತ್ತು. ನಾನು ಯಾರ ಬಗ್ಗೆ ಯೋಚನೆ ಮಾಡ್ತಾ ಇರಲಿಲ್ಲ. ನನ್ನ ಎಸೆತಕ್ಕೆ ಬಹಳ ಜನ ಹೆದರುತ್ತಿದ್ದರು. ಎಷ್ಟೋ ಜನರು ಮ್ಯಾಚ್​ಗೆ ಬರ್ತಾ ಇರಲಿಲ್ಲ. ನಮ್ಮ ಸ್ಟೇಟ್​ ಪ್ಲೇಯರ್ಸ್ ಕೂಡ​ ಮ್ಯಾಚ್​​ಗೆ ಬರ್ತಾ ಇರಲಿಲ್ಲ’ ಎಂದು ಹೇಳಿದ್ದರು.

ಆದರಿಂದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗನ ಅಗಲಿಕೆ ಎಲ್ಲರನ್ನೂ ಆಘಾತಕ್ಕೆ ದೂಡಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ನೀವು ಒಂದು ಬೌಂಡರಿ ಹೊಡೆದ್ರೆ, ಬೌನ್ಸರ್​ ಹಾಕಿ ವಿಕೆಟ್ ಎತ್ತೀನಿ’- ಇದು ಡೇವಿಡ್ ಜಾನ್ಸನ್ ಪಾಲಿಸಿ ಆಗಿತ್ತು..!

https://newsfirstlive.com/wp-content/uploads/2024/06/David-Johnson.webp

Load More