2025ರ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರೇಜ್ ಹೆಚ್ಚಾಗುತ್ತಲೇ ಇದೆ..!
ಇದಕ್ಕೆ ಕಾರಣ ಮುಂದಿನ ಸೀಸನ್ಗೆ ಮುನ್ನ ನಡೆಯಲಿರೋ ಮೆಗಾ ಆಕ್ಷನ್
ಮೆಗಾ ಹರಾಜಿಗೆ ಮುನ್ನವೇ 2025ರ ಐಪಿಎಲ್ಗೆ ಯುವರಾಜ್ ಸಿಂಗ್ ಎಂಟ್ರಿ
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಭಾರೀ ಕುತೂಹಲ ಹೆಚ್ಚಿಸಿದೆ. ಮುಂದಿನ ಸೀಸನ್ಗೆ ಮುನ್ನವೇ ವರ್ಷದ ಕೊನೆಗೆ ಮೆಗಾ ಹರಾಜು ನಡೆಯಲಿದ್ದು, ಸ್ಟಾರ್ ಆಟಗಾರರ ಖರೀದಿಗೆ ಐಪಿಎಲ್ ತಂಡಗಳು ಪ್ಲಾನ್ ಮಾಡಿಕೊಂಡಿವೆ. ಇದರ ಮಧ್ಯೆ ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ 2025ರ ಐಪಿಎಲ್ಗೆ ಕಮ್ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.
ಯುವರಾಜ್ ಸಿಂಗ್ ಟೀಮ್ ಇಂಡಿಯಾದ ದಿಗ್ಗಜ. ಈಗಾಗಲೇ ಇವರು ಎಲ್ಲಾ ಮಾದರಿ ಕ್ರಿಕೆಟ್ಗೂ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಮುಂದಿನ ಐಪಿಎಲ್ ಸೀಸನ್ನಲ್ಲಿ ಆಟಗಾರನಾಗಿ ಅಲ್ಲ, ಬದಲಿಗೆ ಹೆಡ್ ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ ಎಂದು ವರದಿಯಾಗಿದೆ.
ಯಾವ ತಂಡಕ್ಕೆ ಯುವರಾಜ್ ಸಿಂಗ್ ಕೋಚ್!
ಮೆಗಾ ಹರಾಜಿಗೂ ಮೊದಲು ಕೋಚ್ ಪಾತ್ರಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಯುವರಾಜ್ ಸಿಂಗ್ ಅವರನ್ನು ಸಂಪರ್ಕಿಸಿದೆ. ಈಗಾಗಲೇ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ 3 ಸೀಸನ್ಗಳಲ್ಲಿ ಪ್ಲೇ ಆಫ್ಗೆ ಹೋಗಿದ್ದ ಡೆಲ್ಲಿ ಕ್ಯಾಪಿಟಲ್ಸ್ 2024ರಲ್ಲಿ 6ನೇ ಸ್ಥಾನದಲ್ಲಿತ್ತು. ಹಾಗಾಗಿ ರಿಕಿ ಪಾಂಟಿಂಗ್ ಕೊಕ್ ನೀಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ ಕೋಚ್ ಯುವರಾಜ್ ಸಿಂಗ್ ಆಗುವ ಸಾಧ್ಯತೆಗಳು ಇವೆ.
ಯುವಿ ಮೊದಲ ಬಾರಿಗೆ ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಜೊತೆ ಸಹಿ ಹಾಕಿದ್ರೆ, ಇದು ಕ್ರಿಕೆಟ್ ತಂಡದ ಕೋಚ್ ಆಗಿ ಯುವಿಗೆ ಮೊದಲ ಅವಧಿಯಾಗಲಿದೆ.
ಇದನ್ನೂ ಓದಿ: IPL 2025: ಈ ಅಪಾಯಕಾರಿ ಆಟಗಾರರನ್ನು ಖರೀದಿ ಮಾಡಲು ಆರ್ಸಿಬಿ ಮಾಸ್ಟರ್ ಪ್ಲಾನ್!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ