newsfirstkannada.com

‘IPL ಹೀರೋ ನಾಚಿಕೆ ಆಗಬೇಕು ನಿನಗೆ’- ಕ್ಯಾಪ್ಟನ್​ ಗಿಲ್​​ ವಿರುದ್ಧ ಬಹಿರಂಗ ಆಕ್ರೋಶ!

Share :

Published July 7, 2024 at 8:57pm

Update July 7, 2024 at 8:58pm

    ಜಿಂಬಾಬ್ವೆ ವಿರುದ್ಧ ಗೆದ್ರೂ ಟೀಮ್​ ಇಂಡಿಯಾ ಅಭಿಮಾನಿಗಳ ಭಾರೀ ಆಕ್ರೋಶ

    ಟೀಮ್​ ಇಂಡಿಯಾ ಕ್ಯಾಪ್ಟನ್​​​ ಶುಭ್ಮನ್​​​ ಗಿಲ್​​ ವಿರುದ್ಧ ಬಹಿರಂಗ ಅಸಮಾಧಾನ

    ಕ್ಯಾಪ್ಟನ್​ ಶುಭ್ಮನ್​ ಗಿಲ್​ ಒಂದೆಡೆ ಎಲ್ಲರ ಮೆಚ್ಚುಗೆ; ಮತ್ತೊಂದೆಡೆ ಆಕ್ರೋಶ..!

ಹರಾರೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ಕ್ರಿಕೆಟ್​​ ತಂಡದ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಬರೋಬ್ಬರಿ 100 ರನ್​ಗಳಿಂದ ಕ್ಯಾಪ್ಟನ್​​ ಶುಭ್ಮನ್​ ಗಿಲ್​ ಪಡೆ ಗೆಲುವು ಸಿಕ್ಕಿದೆ. ಹಾಗಾಗಿ ಕ್ಯಾಪ್ಟನ್​ ಶುಭ್ಮನ್​ ಗಿಲ್​​ ಎಲ್ಲರ ಕಡೆಯಿಂದ ಭಾರೀ ಮೆಚ್ಚುಗೆ ಕೇಳಿ ಬಂದಿದೆ.

ಭಾರತ ತಂಡದ ಕ್ಯಾಪ್ಟನ್​ ಆಗಿ ಶುಭ್ಮನ್​ ಗಿಲ್​ ಅವರಿಗೆ ಮೊದಲ ಗೆಲುವಾಗಿದೆ. ಹಾಗಾಗಿ ಒಂದೆಡೆ ಶುಭ್ಮನ್​​ ಗಿಲ್​​ಗೆ ಶಬ್ಬಾಶ್ ಕೊಟ್ಟರೆ, ಮತ್ತೊಂದು ಸೋಷಿಯಲ್​ ಮೀಡಿಯಾದಲ್ಲಿ ತನ್ನ ಕಳಪೆ ಪ್ರದರ್ಶನಕ್ಕಾಗಿ ಟ್ರೋಲ್​ ಮಾಡಲಾಗುತ್ತಿದೆ.

ಇತ್ತೀಚೆಗೆ ನಡೆದ ಮೊದಲ ಪಂದ್ಯದಲ್ಲಿ ಟೀಮ್​ ಇಂಡಿಯಾ ಸುಲಭ ಗೆಲವು ಸಾಧಿಸಬಹುದಿತ್ತು. ಆದರೆ, 29 ಬಾಲ್​ನಲ್ಲಿ 31 ರನ್​ ಗಳಿಸಿದ್ರೂ ತಂಡವನ್ನು ಗೆಲ್ಲಿಸಲಿಲ್ಲ. ಕೊನೆವರೆಗೂ ಕ್ರೀಸ್​ನಲ್ಲಿ ನಿಂತು ಆಡಲೇ ಇಲ್ಲ. ಇಂದು ಟೀಮ್​ ಇಂಡಿಯಾ ಗೆದ್ರೂ ಗಿಲ್​ ಕಳಪೆ ಪ್ರದರ್ಶನ ನೀಡಿದ್ರು. ಕೇವಲ 4 ಬಾಲ್​ನಲ್ಲಿ 2 ರನ್​ಗೆ ವಿಕೆಟ್​ ಒಪ್ಪಿಸಿ ಭಾರತ ತಂಡವನ್ನು ಸಂಕಷ್ಟಕ್ಕೆ ದೂಡಿದ್ರು.

ಗಿಲ್​ ವಿರುದ್ಧ ಆಕ್ರೋಶ..!

ಜಿಂಬಾಬ್ವೆ ತಂಡ ಕೇವಲ 115 ರನ್​ಗೆ ಆಲೌಟ್​ ಆಗಿತ್ತು. ಈ ಸಣ್ಣ ಗುರಿಯನ್ನು ಗಿಲ್​ ಸೇನೆಯಿಂದ ಚೇಸ್​ ಮಾಡಲು ಆಗಲಿಲ್ಲ. ಐಪಿಎಲ್​​ನಲ್ಲಿ ಹೀರೋ, ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಜೀರೋ ಎಂದು ಅಭಿಷೇಕ್​​, ಜುರೆಲ್​ ಮತ್ತು ರಿಯಾನ್​ ಪರಾಗ್​ಗೂ ಬೈದಿದ್ದಾರೆ. ಗಿಲ್​​ ನಿನಗೆ ನಾಚಿಕೆ ಆಗಬೇಕು ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಸೇಡಿಗೆ ಸೇಡು; ಮುಯ್ಯಿಗೆ ಮುಯ್ಯಿ; ಜಿಂಬಾಬ್ವೆ ವಿರುದ್ಧ ಭಾರತಕ್ಕೆ 100 ರನ್​​ಗಳ ರೋಚಕ ಜಯ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘IPL ಹೀರೋ ನಾಚಿಕೆ ಆಗಬೇಕು ನಿನಗೆ’- ಕ್ಯಾಪ್ಟನ್​ ಗಿಲ್​​ ವಿರುದ್ಧ ಬಹಿರಂಗ ಆಕ್ರೋಶ!

https://newsfirstlive.com/wp-content/uploads/2024/04/Shubhman_Gill.jpg

Load More