ಕಂಡ ಕನಸು ಪಟ್ಟ ಪರಿಶ್ರಮ ಎಲ್ಲವೂ ವ್ಯರ್ಥ
ದಣಿವರಿಯದೆ ಹೋರಾಡಿದವರಿಗೆ ಧನ್ಯವಾದ
ಜಗಮೆಚ್ಚಿದ ನಾಯಕ ರೋಹಿತ್ಗೆ ಸಲಾಂ
ಫೈನಲ್ ಫೈಟ್ನ ಸೋಲು ಟೀಮ್ ಇಂಡಿಯಾದ ಅಜೇಯ ಓಟಕ್ಕೆ ಬ್ರೇಕ್ ಹಾಕಿದೆ. ಪ್ರತಿಷ್ಟಿತ ವಿಶ್ವಕಪ್ ಟ್ರೋಫಿಯೂ ಆಸ್ಟ್ರೇಲಿಯಾದ ಪಾಲಾಗಿದೆ. ಸೋಲಿನೊಂದಿಗೆ ಟೀಮ್ ಇಂಡಿಯಾದ ಅಭಿಯಾನ ಅಂತ್ಯವಾದ ಮಾತ್ರಕ್ಕೆ ಆಟಗಾರರ ಹೋರಾಟವನ್ನ ಗೌರವಿಸದಿರೋಕೆ ಆಗುತ್ತಾ? ಅದ್ರಲ್ಲೂ ಈ ನಾಲ್ವರಿಗೆ ಧನ್ಯವಾದ ಹೇಳದೆ ಇರೋಕಾಗುತ್ತಾ? ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿ ಕೂಡ ಇವರಿಗೆ ಥ್ಯಾಂಕ್ಯೂ ಎಂದು ಹೇಳಲೇಬೇಕು.
ಇಡೀ ಭಾರತವನ್ನ ವಿಶ್ವಕಪ್ ಫೈನಲ್ ಫೈಟ್ನ ಸೋಲಿನ ಕಹಿ ಆವರಿಸಿದೆ. ದುಖಃದ ಭಾವ ಎಲ್ಲರನ್ನ ಕಾಡ್ತಿದ್ದು ಕ್ರಿಕೆಟ್ ಅಭಿಮಾನಿಗಳ ಹೃದಯ ಭಾರವಾಗಿದೆ. ನೆಚ್ಚಿನ ತಂಡದ ಆಟವನ್ನ ನೋಡಿ ಎಂಜಾಯ್ ಮಾಡುತ್ತ ತಂಡವನ್ನು ಬೆಂಬಲಿಸೋ ನಮಗೆ ಇಷ್ಟು ನೋವಾಗಿದೆ. ಅಂತಾದ್ರಲ್ಲಿ ಕೊಟ್ಯಂತರ ಜನರ ಕನಸನ್ನ ಹೆಗಲ ಮೇಲೆ ಹೊತ್ತು ಕಠಿಣ ಪರಿಶ್ರಮ ಪಟ್ಟು, ಟೂರ್ನಿಯಲ್ಲಿ ಅಜೇಯ ಓಟ ನಡೆಸಿ ಫೈನಲ್ನಲ್ಲಿ ಸೋಲುಂಡಾಗ ತಂಡದ ಆಟಗಾರರಿಗೆ ಇನ್ನೆಷ್ಟು ನೋವಾಗಿರಬೇಡ.
ಈ ವಿಶ್ವಕಪ್ ಫೈನಲ್ನಲ್ಲಿ ಸೋತರೂ ಮಂಬರುವ ವಿಶ್ವಕಪ್ ಆಡೋ ಅವಕಾಶ ತಂಡದಲ್ಲಿರೋ ಕೆಲವರಿಗಿದೆ. ಈ ನಾಲ್ವರಿಗೆ ಮುಂದಿನ ವಿಶ್ವಕಪ್ ಆಡೋ ಅವಕಾಶ ತೀರಾ ಕಡಿಮೆ. ಈ ಬಾರಿ ತವರಿನಲ್ಲಿ ವಿಶ್ವಕಪ್ ಗೆಲ್ಲಲೇಬೇಕು, ಅಭಿಮಾನಿಗಳ ಕನಸು ನನಸು ಮಾಡಬೇಕು ಎಂದು ಟೊಂಕ ಕಟ್ಟಿ ಹೋರಾಡಿದ ಧೀರರು ಇವರು. ವಿಶ್ವಕಪ್ ಗೆದ್ವೋ, ಬಿಡ್ವೋ ಅನ್ನೋದು ಸೆಕೆಂಡರಿ ಆದ್ರೆ ಹಾಕಿದ ಶ್ರಮ ಪಟ್ಟ ಕಷ್ಟಕ್ಕೆ ಸಲಾಂ ಹೇಳಲೇಬೇಕು.
ಜಗಮೆಚ್ಚಿದ ನಾಯಕನಿಗೆ ಒಂದು ದೊಡ್ಡ ಸಲಾಂ..!
ಈ ಬಾರಿಯ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಫೈನಲ್ಗೆ ತಲುಪಿದ್ರ ಹಿಂದಿರೋ ಬಿಗ್ ರೀಸನ್ ಕ್ಯಾಪ್ಟನ್ ರೋಹಿತ್ ಶರ್ಮಾ. ಟೂರ್ನಿಯೂದ್ದಕ್ಕೂ ಸೆಲ್ಫ್ಲೆಸ್ ಇನ್ನಿಂಗ್ಸ್ಗಳನ್ನ ಕಟ್ಟಿದ್ದ ಹಿಟ್ಮ್ಯಾನ್, ತಂಡದ ಹಿತಕ್ಕಾಗಿ ದುಡಿದ್ರು. ಟೂರ್ನಿ ಗೆಲ್ಲಲು 2 ವರ್ಷದಿಂದಲೇ ಬ್ಲೂ ಪ್ರಿಂಟ್ ರೂಪಿಸಿದ್ದ ಹಿಟ್ಮ್ಯಾನ್, ನಾಯಕತ್ವವನ್ನೂ ಸಮರ್ಥವಾಗಿ ನಿರ್ವಹಿಸಿದ್ರು. ಅನ್ಫಾರ್ಚುನೆಟ್ಲಿ ಕಪ್ ಗೆಲುವಿನ ಕನಸು ನನಸಾಗಲಿಲ್ಲ.
ಥ್ಯಾಂಕ್ಯೂ ಕೋಚ್, ನಿಮ್ಮ ಶ್ರಮಕ್ಕೆ ನಮ್ಮ ನಮಸ್ಕಾರ
ಕೋಚ್ ರಾಹುಲ್ ದ್ರಾವಿಡ್ ಈ ವಿಶ್ವಕಪ್ ಗೆಲ್ಲಬೇಕು ಅನ್ನೋ ಏಕಮೇವ ಉದ್ದೇಶದಿಂದ ಮಾಡಿದ ಸರ್ಕಸ್ ಒಂದಾ..? ಎರಡಾ.? ಸಾಲು ಸಾಲು ಪ್ರಯೋಗಗಳನ್ನ ಮಾಡಿ ಪರ್ಫೆಕ್ಟ್ ತಂಡವನ್ನ ಕಟ್ಟಿದ್ರು. ಸೀನಿಯರ್-ಜೂನಿಯರ್ ಆಟಗಾರರ ನಡುವೆ ಭಾಂದವ್ಯ ವೃದ್ಧಿ ಮಾಡಿದ್ರು. ಡ್ರೆಸ್ಸಿಂಗ್ ರೂಮ್ನಲ್ಲಿ ಹೆಲ್ದಿ ವಾತಾವರಣ ಬರುವಂತೆ ಮಾಡಿದ್ರು. ಇದ್ರ ಜೊತೆಗೆ ಅದ್ಭುತವಾಗಿ ತಂತ್ರ, ರಣತಂತ್ರಗಳನ್ನೂ ರೂಪಿಸಿದ್ರು. ಆದ್ರೆ, ಕನಸು ನನಸು ಮಾಡಿಕೊಳ್ಳುವಲ್ಲಿ ವಿಫಲರಾದ್ರು.
ಚಕ್ರಾದಿಪತಿ ಕೊಹ್ಲಿಯ ದಣಿವರಿಯದ ಆಟಕ್ಕೆ ಧನ್ಯವಾದ
ಈ ಬಾರಿಯ ವಿಶ್ವಕಪ್ನಲ್ಲಿ ಕಿಂಗ್ ಕೊಹ್ಲಿ ಅಕ್ಷರಶಃ ವಿರಾಟ್ ರೂಪ ದರ್ಶನ ಮಾಡಿಸಿದ್ರು. ತಂಡದ ಅಗತ್ಯಕ್ಕೆ ತಕ್ಕಂತೆ ಅದ್ಭುತ ಆಟವಾಡಿದ ಕೊಹ್ಲಿ, ತಂಡದ ಹಲ ಗೆಲುವುಗಳ ಹರಿಕಾರನಾದ್ರು. ಫೈನಲ್ ಪಂದ್ಯದಲ್ಲೂ ಕೊಹ್ಲಿ ಅರ್ಧಶತಕ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದ್ರು. ಹೈಯೆಸ್ಟ್ ರನ್ ಗೆಟ್ಟರ್ ಆಗಿ ಟೂರ್ನಿಗೆ ಗುಡ್ ಬೈ ಹೇಳಿದ ಕೊಹ್ಲಿಗೆ ಕಪ್ ಗೆಲ್ಲೋಕೆ ಸಾಧ್ಯವಾಗಲೇ ಇಲ್ಲ.
ಸುನಾಮಿ ಎಬ್ಬಿಸಿದ ಶಮಿಗೊಂದು ಸಲಾಂ..!
ಈ ಬಾರಿಯ ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಬೆಂಚ್ ಕಾದ ಶಮಿ ಆ ಬಳಿಕ ಸಿಕ್ಕ ಅವಕಾಶದಲ್ಲಿ ಸುನಾಮಿಯನ್ನೇ ಎಬ್ಬಿಸಿದ್ರು. ರಣಬೇಟೆಗಾರನಂತೆ ವಿಕೆಟ್ ಬೇಟೆಯಾಡಿ ಎದುರಾಳಿಗಳನ್ನು ಕಾಡಿದ್ರು. ಹಲವು ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಗೆಲುವಿನ ರೂವಾರಿಯೂ ಆದ್ರು. ವಿಶ್ವಕಪ್ ಗೆಲುವಿನ ಕನಸು ಮಾತ್ರ ನನಸು ಮಾಡಿಕೊಳ್ಳುವಲ್ಲಿ ವಿಫಲರಾದರು.
ಕೋಚ್ ರಾಹುಲ್ ದ್ರಾವಿಡ್ರ ಒಪ್ಪಂದ ವಿಶ್ವಕಪ್ನೊಂದಿಗೆ ಅಂತ್ಯವಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮೊಹಮ್ಮದ್ ಶಮಿ ಮುಂದಿನ ವಿಶ್ವಕಪ್ ಆಡೋದು ಅನುಮಾನವೇ. ಬಹುತೇಕ ಕೊನೆಯ ಏಕದಿನ ವಿಶ್ವಕಪ್ ಆಡಿರುವ ಇವರು ಟ್ರೋಫಿಯನ್ನ ಗೆದ್ದು ಕೊಡಲಿಲ್ಲ ನಿಜ. ತಮ್ಮ ಆಟ, ಹೋರಾಟದಿಂದ ಇಡೀ ಭಾರತದ ಮನಸ್ಸುಗಳನ್ನ ಗೆದ್ದಿರೋದು ಸುಳ್ಳಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್