newsfirstkannada.com

×

‘ನಾಚಿಕೆ ಆಗಬೇಕು ನಿನಗೆ, ಕ್ಯಾಪ್ಟನ್ಸಿ ತೊರೆದು ಹೊರನಡಿ’- ರೋಹಿತ್​​ ವಿರುದ್ಧ ಬಹಿರಂಗ ಆಕ್ರೋಶ

Share :

Published September 20, 2024 at 7:49pm

    ಟೀಮ್​ ಇಂಡಿಯಾ, ಬಾಂಗ್ಲಾದೇಶದ ನಡುವಿನ ಮೊದಲ ಟೆಸ್ಟ್ ಪಂದ್ಯ!

    ಚೆನ್ನೈನ ಚಿದಂಬರಂ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆಯುತ್ತಿರೋ ಮ್ಯಾಚ್​​

    ಮಹತ್ವದ ಪಂದ್ಯದಲ್ಲಿ ಸರಿಯಾಗಿ ಕೈ ಕೊಟ್ಟ ಕ್ಯಾಪ್ಟನ್​ ರೋಹಿತ್​ ಶರ್ಮಾ

ಚೆನ್ನೈನ ಎಂ.ಎ ಚಿದಂಬರಂ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆಯುತ್ತಿರೋ ಟೀಮ್​ ಇಂಡಿಯಾ, ಬಾಂಗ್ಲಾದೇಶದ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಕಳಪೆ ಪ್ರದರ್ಶನ ನೀಡಿದ್ದಾರೆ.

ಟೆಸ್ಟ್‌ನ ಮೊದಲ ಮತ್ತು 2ನೇ ಇನ್ನಿಂಗ್ಸ್​ನಲ್ಲೂ ಟೀಮ್​ ಇಂಡಿಯಾ ಕ್ಯಾಪ್ಟನ್​ ಸರಿಯಾಗಿ ಕೈ ಕೊಟ್ಟರು. ಮೊದಲ ಇನ್ನಿಂಗ್ಸ್​ನಲ್ಲಿ ತಾನು ಎದುರಿಸಿದ 19 ಬಾಲ್​​ನಲ್ಲಿ 6 ರನ್​ ಗಳಿಸಿ ಔಟಾಗಿದ್ದ ರೋಹಿತ್​​ 2ನೇ ಇನ್ನಿಂಗ್ಸ್​ನಲ್ಲೂ ಅದೇ ರೀತಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ರು. 2ನೇ ಇನ್ನಿಂಗ್ಸ್​ನಲ್ಲಿ 7 ಬಾಲ್​ನಲ್ಲಿ 5 ರನ್​​ಗೆ ವಿಕೆಟ್​ ಒಪ್ಪಿಸಿದ್ರು.

ಕ್ಯಾಪ್ಟನ್​ ರೋಹಿತ್​ ಶರ್ಮಾ ವಿರುದ್ಧ ಆಕ್ರೋಶ

ಟೆಸ್ಟ್​ ಕ್ಯಾಪ್ಟನ್​ ಆಗಿ ರೋಹಿತ್​ ಶರ್ಮಾ ಸಂಪೂರ್ಣ ವಿಫಲರಾಗಿದ್ದಾರೆ. ಎರಡು ಇನ್ನಿಂಗ್ಸ್​ನಲ್ಲೂ ಇವರು 10 ರನ್​​ ಕೂಡ ದಾಟಿಲ್ಲ. ಫಿಫ್ಟಿ, ಸೆಂಚೂರಿ ಬಗ್ಗೆ ಮಾತಾಡುವ ಹಾಗೇ ಇಲ್ಲ. ಈ ರೀತಿಯ ಟೆಸ್ಟ್​ ಕ್ಯಾಪ್ಟನ್​ ನಮಗೆ ಬೇಡ. ನಾಚಿಕೆ ಆಗಬೇಕು ರೋಹಿತ್​ ಶರ್ಮಾಗೆ, ಇವರು ಕೂಡಲೇ ರಿಸೈನ್​ ಮಾಡಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಚೆನ್ನೈ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 376 ರನ್ ಕಲೆ ಹಾಕಿದೆ. ಭಾರತದ ಸ್ಟಾರ್​ ಆಲ್​ರೌಂಡರ್​​​ ರವಿಚಂದ್ರನ್ ಅಶ್ವಿನ್. ಅವರು ತಮ್ಮ ತವರು ನೆಲದಲ್ಲಿ 113 ರನ್‌ಗಳ ಅದ್ಭುತ ಶತಕ ಸಿಡಿಸಿ ಟೀಮ್ ಇಂಡಿಯಾಕ್ಕೆ ಆಸರೆಯಾದರು. ರವೀಂದ್ರ ಜಡೇಜಾ ಶತಕ ವಂಚಿತರಾಗಿ 86 ರನ್ ಗಳಿಸಿ ಔಟಾಗಿ ಪೆವಿಲಿಯನ್‌ಗೆ ಮರಳಿದರು.

ಇದನ್ನೂ ಓದಿ: ಬೌಲಿಂಗ್​​ನಲ್ಲಿ ಬುಮ್ರಾ ಕಮಾಲ್​​.. ಕೇವಲ 149 ರನ್​ಗೆ ಬಾಂಗ್ಲಾದೇಶ ಆಲೌಟ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಾಚಿಕೆ ಆಗಬೇಕು ನಿನಗೆ, ಕ್ಯಾಪ್ಟನ್ಸಿ ತೊರೆದು ಹೊರನಡಿ’- ರೋಹಿತ್​​ ವಿರುದ್ಧ ಬಹಿರಂಗ ಆಕ್ರೋಶ

https://newsfirstlive.com/wp-content/uploads/2024/09/Rohit-Sharma-News.jpg

Load More