newsfirstkannada.com

2024ರ IPL ಧೋನಿಗೆ ಕೊನೆನಾ..? ಈ ಹೇರ್​​ ಸ್ಟೈಲ್​ಗೂ, ಕೂಲ್​ ಕ್ಯಾಪ್ಟನ್​ ನಿವೃತ್ತಿಗೂ ಏನ್ ಸಂಬಂಧ?

Share :

28-08-2023

    ಅಭಿಮಾನಿಗಳ ವಲಯದಲ್ಲಿ ಧೋನಿ ಹವಾ ಕಡಿಮೆಯಾಗಿಲ್ಲ.!

    ಧೋನಿ ಅಂದರೆ ಪ್ರಾರಂಭದ ಆ ಹೇರ್​ ಸ್ಟೈಲ್​ ನೆನಪಾಗೋದು

    ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​​ ಬೈ ಹೇಳಿ 4 ವರ್ಷಗಳು ಆಗಿವೆ

ಐಪಿಎಲ್ ಸೀಸನ್​​ 16​ ಮುಗಿದು ಮೂರು ತಿಂಗಳಷ್ಟೇ ಆಯಿತು. ಈ ಬೆನ್ನಲ್ಲೇ ಮತ್ತೆ ಧೋನಿ ನಿವೃತ್ತಿಯ ಬಗ್ಗೆ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣವಾಗಿರೋದು ಧೋನಿಯ ಹೊಸ ಹೇರ್​ಸ್ಟೈಲ್​. ಧೋನಿ ನಿವೃತ್ತಿಗೂ, ಹೇರ್​​ ಸ್ಟೈಲ್​ಗೂ ಏನ್​ ಸಂಬಂಧ?.

ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದ ಸರ್ವ ಶ್ರೇಷ್ಠ ಮಾಜಿ ನಾಯಕ. ಟಿ20 ವಿಶ್ವಕಪ್‌, ಏಕದಿನ ವಿಶ್ವಕಪ್‌, ಚಾಂಪಿಯನ್ಸ್ ಟ್ರೋಫಿ ಸೇರಿದಂತೆ 3 ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕ. ಕೂಲ್​ ಕ್ಯಾಪ್ಟನ್​​ ಆಗಿ ವಿಶ್ವ ಕ್ರಿಕೆಟ್​ನಲ್ಲಿ ಚಾಪು ಮೂಡಿಸಿದ್ದ ಧೋನಿ, ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​​ ಬೈ ಹೇಳಿ 4 ವರ್ಷಗಳೇ ಕಳೆದಿವೆ. ಆದ್ರೆ, ಮಾಹಿ ಮೇಲಿನ ಮೋಹ ಮಾತ್ರ ಅಭಿಮಾನಿಗಳ ವಲಯದಲ್ಲಿ ಕಿಂಚಿತ್ತೂ ಕಡಿಮೆಯಾಗಿಲ್ಲ. ಇದಕ್ಕೆ ಕಳೆದ ಐಪಿಎಲ್​ ಸೀಸನ್​​​​​​​​​​​​​​​​​​​​ ಬೆಸ್ಟ್​ ಎಕ್ಸಾಂಪಲ್​.

ಎಂ.ಎಸ್ ಧೊನಿ ಬ್ಯಾಟಿಂಗ್ ಅಬ್ಬರ

ಕಳೆದ ಐಪಿಎಲ್​ನಲ್ಲಿ ನಡೆದಿದ್ದು, ಧೋನಿ ಜಾತ್ರೆ. ಧೋನಿ ಪಾಲಿನ ಲಾಸ್ಟ್​ ಐಪಿಎಲ್​ ಎಂದು ಸುದ್ದಿ ಹಬ್ಬಿದ್ದಕ್ಕೋ ಏನು, ಮೈದಾನಕ್ಕೆ ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು. ಇದೀಗ ಐಪಿಎಲ್​ ಮುಗಿದು 3 ತಿಂಗಳಾಯಿತು. ಧೋನಿ ಮುಂದಿನ ಸೀಸನ್​ ಆಡೋ ಇಂಗಿಂತ ವ್ಯಕ್ತಪಡಿಸಿದ್ದಾರೆ. ಆದ್ರೂ, ಮತ್ತೆ ಧೋನಿ ನಿವೃತ್ತಿ ವಿಚಾರದ ಚರ್ಚೆ ಜೋರಾಗಿ ನಡೆಯುತ್ತಿದೆ. ಇದಕ್ಕೆ ಕಾರಣ ಧೋನಿಯ ಹೊಸ ಹೇರ್​ಸ್ಟೈಲ್​.

ಕೇಶ ವಿನ್ಯಾಸದಿಂದಲೇ ಗಮನ ಸೆಳೆದಿದ್ದ ಮಹೇಂದ್ರ.!

ನಾಯಕನಾಗಿ, ಬ್ಯಾಟ್ಸ್​ಮನ್​ ಆಗಿ ಧೋನಿ ಎಷ್ಟೇ ಸಾಧನೆ ಮಾಡಿದ್ರೂ, ಧೋನಿ ಎಂಬ ಹೆಸರು ಕೇಳಿದಾಗ ಹಲವರಿಗೆ ನೆನಪಾಗುವುದು ಕೇಶ ವಿನ್ಯಾಸ. ಕರಿಯರ್​​ ಉದ್ದಕ್ಕೂ ಹಲ ಹೇರ್​​ಸ್ಟೈಲ್​ಗಳಲ್ಲಿ ಮಾಹಿ ಕಾಣಿಸಿಕೊಂಡಿದ್ದಾರೆ. ಆದ್ರೆ, ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿರೋದು ಆರಂಭಿಕ ದಿನಗಳ ಲಾಂಗ್​​ ಹೇರ್​​​ಸ್ಟೈಲ್​​.

2004ರ ಡಿಸೆಂಬರ್‌ 23.. ಬಾಂಗ್ಲಾ ವಿರುದ್ಧ ಧೋನಿ ಪದಾರ್ಪಣೆ ಮಾಡಿದ್ರು. ಈ ಪಂದ್ಯದಲ್ಲಿ ಆಡಿದ ಮೊಟ್ಟ ಮೊದಲ ಎಸೆತದಲ್ಲೇ ಧೋನಿ ರನೌಟ್‌ ಆಗಿದ್ರು. ಇಷ್ಟೇ ಅಲ್ಲ, ಸರಣಿಯ ಸಂಪೂರ್ಣ ವೈಫಲ್ಯ ಅನುಭವಿಸಿದ್ರು. ಆದ್ರೆ, ಉದ್ದನೆಯ ಕೂದಲು ಯುವ ಹುಡುಗ ಎಲ್ಲರ ಗಮನ ಸೆಳೆದಿದ್ದ.

ಹೇರ್​​ಸ್ಟೈಲ್​ನಿಂದ ಟ್ರೆಂಡ್​ ಸೆಟ್​ ಮಾಡಿದ್ದ ಮಾಹಿ.!

ಆರಂಭಿಕ ಸರಣಿಯಲ್ಲಿ ಧೋನಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರೂ, ಎಲ್ಲರ ಕಣ್ಣು ಕುಕ್ಕಿದ್ದು ಮಾತ್ರ ಕೂದಲು. ಪಾಕ್ ಎದುರು 148 ರನ್​ಗಳ ಬಿಗ್ ಇನ್ನಿಂಗ್ಸ್​ ಕಟ್ಟಿದಾಗ ಧೋನಿ ಹೀರೋ ಪಟ್ಟ ಗಿಟ್ಟಿಸಿಕೊಂಡಿದ್ರು. ಆ ಬಳಿಕ ಧೋನಿಯ ಹೈರ್​​​ ಸ್ಟ್ರೈಲ್​ ಟ್ರೆಂಡ್​ ಸೆಟ್ ಮಾಡಿ ಬಿಟ್ಟಿತು. ಆಗ ಯುವಕರ ಪಾಲಿನ ಫೇವರಿಟ್ ಹೈರ್​​ಸ್ಟ್ರೈಲ್​ ಎನಿಸಿಕೊಂಡಿತ್ತು.

ಮತ್ತೆ ಲಾಂಗ್​ ಹೇರ್​​ಸ್ಟೈಲ್​​ನಲ್ಲಿ​ ಮಾಹಿ ಮಿಂಚಿಂಗ್​.!

2008ರ ಬಳಿಕ ಉದ್ದನೆಯ ಕೂದಲು ಬಿಟ್ಟಿದ್ದೆ ಇಲ್ಲ. ಆದರೆ, ಐಪಿಎಲ್​ ಸೀಸನ್​-16ರ ಮುಕ್ತಾಯದ ಬಳಿಕ ವಿಶ್ರಾಂತಿಯಲ್ಲಿರುವ ಮಾಹಿ ಈಗ ಮತ್ತೆ ಲಾಂಗ್​ ಹೇರ್​​​ಸ್ಟೈಲ್​ನಿಂದ ಮಿಂಚುತ್ತಿದ್ದಾರೆ. ಧೋನಿಯ ಹೇರ್​ಸ್ಟ್ರೈಲ್​, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್​ ಆಗ್ತಿದೆ. ಈ ಕೇಶ ವಿನ್ಯಾಸದ ಹಿಂದಿನ ರಹಸ್ಯವೇನು ಎಂಬ ಗುಸು ಗುಸು ಕೂಡ ಫ್ಯಾನ್ಸ್​ ವಲಯದಲ್ಲಿ ನಡೆಯುತ್ತಿದೆ.

ಭಾರತದ ಮಾಜಿ ಕ್ಯಾಪ್ಟನ್​ ಧೋನಿ

ಲಾಂಗ್​ ಹೇರ್​​ಸ್ಟೈಲ್​ನೊಂದಿಗೆ ಕರಿಯರ್​ಗೆ ಫುಲ್​ಸ್ಟಾಪ್.?

ಮುಂಬರುವ ಐಪಿಎಲ್​ ಧೋನಿ ಪಾಲಿನ ಕೊನೆ ಐಪಿಎಲ್​ ಎಂಬ ಮಾತಿದೆ. ಇದ್ರ ನಡುವೆ ಲಾಂಗ್​ ಹೇರ್​​ಸ್ಟೈಲ್​ನೊಂದಿಗೆ ಮಾಹಿ ಮಿಂಚ್ತಾ ಇದ್ದಾರೆ. 2004ರಲ್ಲಿ ಧೋನಿ ಕರಿಯರ್ ಶುರುವಾಗಿದ್ದು ಲಾಂಗ್​ ಹೇರ್​​ಸ್ಟೈಲ್​ನೊಂದಿಗೆ. ಇದೀಗ ಅಂತ್ಯವನ್ನ ಅದೇ ಹೇರ್​​​ಸ್ಟೈಲ್​ನೊಂದಿಗೆ ಮಾಡ್ತಾರಾ ಅನ್ನೋದು ಚರ್ಚೆ ನಡೀತಾ ಇದೆ. ಯಾಕಂದ್ರೆ, ನಾನು ಎಲ್ಲವನ್ನೂ ಪ್ಲಾನ್ಡ್​ ಆಗೇ ಮಾಡ್ತೀನಿ ಅಂತಾ ಈ ಹಿಂದೆ ಮಾಹಿಯೇ ಹೇಳಿದ್ರು. ಅದರಂತೆ.. ಇಂಟರ್​ನ್ಯಾಷನಲ್​ ಕ್ರಿಕೆಟ್​​ಗೆ ಗುಡ್​ ಬೈ ಹೇಳಿದ್ರು. ಇದೀಗ ಐಪಿಎಲ್​ಗೂ ಅದೇ ತರ ಪ್ಲಾನ್​ ಇಟ್ಟಿರಬಹುದು ಅನ್ನೋದು ಸದ್ಯದ ಲೆಕ್ಕಾಚಾರ.

ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ಲಾಂಗ್​​ ಹೇರ್​​ಸ್ಟೈಲ್​ ಹೊಂದಿದ್ದ ಮಾಹಿ, ತನ್ನ ಬ್ಯಾಟಿಂಗ್​ನಿಂದ ಫ್ಯಾನ್ಸ್​ಗೆ ಫುಲ್​ ಟ್ರೀಟ್​ ಕೊಟ್ಟಿದ್ರು. ಇದೀಗ ಕೊನೆಯ ಐಪಿಎಲ್​​ ಅಂತಿರುವ ಸಮಯದಲ್ಲಿ ಮತ್ತೆ ಹಳೆ ಲುಕ್​ನಲ್ಲಿ ಕಂಗೊಳಿಸ್ತಾ ಇರೋ ಮಾಹಿ ಅಭಿಮಾನಿಗಳನ್ನ ರಂಜಿಸ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

2024ರ IPL ಧೋನಿಗೆ ಕೊನೆನಾ..? ಈ ಹೇರ್​​ ಸ್ಟೈಲ್​ಗೂ, ಕೂಲ್​ ಕ್ಯಾಪ್ಟನ್​ ನಿವೃತ್ತಿಗೂ ಏನ್ ಸಂಬಂಧ?

https://newsfirstlive.com/wp-content/uploads/2023/08/DHONI-2.jpg

Load More