newsfirstkannada.com

VIDEO: ಹೃದಯ ಗೆದ್ದ ಮಹೇಂದ್ರ ಸಿಂಗ್ ಧೋನಿ; ಫ್ಯಾನ್ಸ್​ ಜೊತೆ ‘ಕೂಲ್‌ ಕ್ಯಾಪ್ಟನ್‌’ ಹೇಗೆಲ್ಲ ಕಾಮಿಡಿ ಮಾಡ್ತಾರೆ ನೋಡಿ

Share :

16-07-2023

  ಫ್ಯಾನ್ಸ್​ ಜೊತೆ ಮಹೇಂದ್ರ ಸಿಂಗ್ ಧೋನಿ ಹೇಗೆಲ್ಲ ನಡೆದುಕೊಳ್ತಾರೆ

  ಕಾಮಿಡಿಯನ್​ ಯೋಗಿ ಬಾಬುಗೆ ಕೇಕ್​ ತಿನ್ನಿಸದಿದ್ದಕ್ಕೆ ಏನಾಯಿತು?

  ಪರಿಚಯವಿಲ್ಲದ ಜಾರ್ಖಂಡ್​ ಡ್ರೈವರ್​ ಸಿಕ್ಕಾಗ 20 ನಿಮಿಷ ಮಾತು

ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದ ಸಕ್ಸಸ್​ಫುಲ್ ಕ್ಯಾಪ್ಟನ್. ವಿಶ್ವ ಶ್ರೇಷ್ಠ ಕ್ಯಾಪ್ಟನ್. ಅಷ್ಟೇ ಅಲ್ಲ, ಆಟಗಾರರ ಕ್ಯಾಪ್ಟನ್ ಅಂತಾನೂ ಗೊತ್ತೇ ಇದೆ. ಆದ್ರೆ, ಧೋನಿ, ಫ್ಯಾನ್ಸ್ ಪಾಲಿಗೂ ಕೂಡ ಕ್ಯಾಪ್ಟನ್.

ಧೋನಿ ದಿ ಗ್ರೇಟ್ ಲೀಡರ್. ಆ ಹೆಸರಿಗೆ ಇರೋ ಕ್ರೇಜ್ ಈ ಮಹಾಪುರಷನಿಗೆ ಇರೋ ಫ್ಯಾನ್ ಫಾಲೋಯಿಂಗ್. ನಿಜಕ್ಕೂ ಬಣ್ಣಿಸಲು ಅಸಾಧ್ಯ. ಈ ಫ್ಯಾನ್ಸ್ ಫಾಲೋಯಿಂಗ್​ನಲ್ಲಿ ಡಿಫರೆಂಟ್ ಸ್ಟೈಲ್ಸ್ ಆಫ್ ಫ್ಯಾನ್ಸ್ ಇದ್ದಾರೆ. ಧೋನಿಯನ್ನ ಒಮ್ಮೆ ಕಣ್ತುಂಬಿಕೊಳ್ಳಬೇಕೆಂದು ಹಪಹಪಿಸ್ತಾರೆ. ಆಟೋಗ್ರಾಫ್ ಪಡೆಯಬೇಕು, ಒಮ್ಮೆ ಮೀಟ್ ಮಾಡಿದ್ರೆ, ಜನ್ಮ ಸಾರ್ಥಕ ಎಂದು ಆರಾಧಿಸ್ತಾರೆ.

ದೇಶದಲ್ಲೇ ಅಲ್ಲ, ವಿಶ್ವದಾದ್ಯಂತ ಫಾನ್ಸ್ ಕ್ಲಬ್ಸ್ ಇದ್ದಾವೆ. ಈ ಕ್ಲಬ್​ಗಳು ಧೋನಿ ಹೆಸರಲ್ಲಿ ಸತ್ಕಾರ್ಯವನ್ನೇ ಮಾಡ್ತಾರೆ. ಫ್ಯಾನ್ಸ್ ಮಾಹಿಯನ್ನ ಎಷ್ಟು ಪ್ರೀತಿಸ್ತಾರೋ ಅಷ್ಟೇ ಪ್ರೀತಿಯಿಂದ ಧೋನಿ, ಅಭಿಮಾನಿಗಳನ್ನ ಕಾಣ್ತಾರೆ. ಧೋನಿ ಫ್ಯಾನ್ಸ್ ಜೊತೆ ಎಷ್ಟು ಸಿಂಪಲ್ ಆಗಿ ಇರ್ತಾರೆ ಅನ್ನೋದನ್ನ ಪ್ರೊಡ್ಯೂಸರ್, ರೈಟರ್ ದೈವಯ್ಯ ಬೋಪಣ್ಣ ಮಾತಲ್ಲೇ ಕೇಳಿ.

ಧೋನಿ ಹೆಚ್ಚು ಮಂದಿಯ ಜತೆ ಮಾತನಾಡಲ್ಲ. ಆತ ಫ್ರೆಂಡ್ಲಿ ಮನುಷ್ಯ. ನಾವು ಜಾಹೀರಾತಿನ ಶೂಟ್​ಗಾಗಿ ಹೋಗಿದ್ದೇವು. ಧೋನಿ ಕೂಡ ಅದೇ ಜಾಹೀರಾತಿನಲ್ಲಿದ್ರು. ನಾವು ಶೂಟಿಂಗ್​ ಮಾಡುವಾಗ ನಮ್ಮ ಡ್ರೈವರ್ ಕಾರಿನಲ್ಲೇ ಇದ್ದರು. ಈತ ಜಾರ್ಖಂಡ್​ದವರಾಗಿದ್ದು ಧೋನಿಗೆ ಬಿಗ್ ಫ್ಯಾನ್ ಆಗಿದ್ದರು. ನಾವು ಶೂಟಿಂಗ್ ಶುರು ಮಾಡಿ ಧೋನಿಗೆ ನಮ್ಮ ಡ್ರೈವರ್ ಜಾರ್ಖಂಡ್​ದವರು ಇಲ್ಲಿಯೇ ಇದ್ದಾರೆ. ಧೋನಿ ಆತನನ್ನ ನೋಡಿ ಹಾಯ್ ಎಂದ್ರು, ಆಗ ಆತ ಕೆಲ ಸೆಕೆಂಡ್ ಶಾಕ್ ಆಗಿದ್ದ. ಆತನ ಜೊತೆ 20 ನಿಮಿಷಗಳ ಕಾಲ ಮಾತನಾಡಿದ್ದ ಧೋನಿ ಬಹುತೇಕ ಚೈಲ್ಡ್​ವುಡ್ ಸ್ಟೋರಿಗಳನ್ನೇ ಮಾತನಾಡಿದ್ದರು.

ದೇವಯ್ಯ ಬೋಪಣ್ಣ, ಪ್ರೊಡ್ಯೂಸರ್

ವಿಘ್ನೇಶ್ ಶಿವನ್ ಟೀ ಶರ್ಟ್ ಮೇಲೆ ಧೋನಿ ಆಟೋಗ್ರಾಫ್

ಕ್ರೀಡಾಲೋಕದಲ್ಲಿ ಧೋನಿಗೆ ಎಷ್ಟು ಮಂದಿ ಫ್ಯಾನ್ಸ್ ಇದ್ದರೋ, ಅಷ್ಟೇ ಸಿನಿಮಾ ಮಂದಿ ಧೋನಿಯ ಮಂತ್ರ ಜಪಿಸ್ತಾರೆ. ಈ ಪೈಕಿ ನಟಿ ನಯನತಾರಾ ಪತಿ, ನಿರ್ದೇಶಕ ವಿಘ್ನೇಶ್ ಶಿವನ್ ಒಬ್ಬರು. ಹಾಗಾಗ ಸ್ಟೇಡಿಯಂಗೆ ಬಂದು ಚಿಯರ್ ಮಾಡೋ ವಿಘ್ನೇಶ್, ಚೆನ್ನೈನಲ್ಲಿ ನಡೆದ ಲೆಟ್ಸ್‌ ಗೆಟ್‌ ಮ್ಯಾರೀಡ್‌ ಸಾಂಗ್ಸ್, ಟ್ರೇಲರ್‌ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ರು. ಈ ವೇಳೆ ತಮ್ಮ ಶರ್ಟ್‌ ಮೇಲೆ ಧೋನಿಯ ಆಟೋಗ್ರಾಫ್‌ ಹಾಕಿಸಿಕೊಂಡ ಸ್ವೀಟ್ ಮೆಮೊರಿಯನ್ನ ಶೇರ್ ಮಾಡಿರೋ ನಯನತಾರಾ ಪತಿ, ನನ್ನ ಹೀರೋ, ನನ್ನ ಕ್ಯಾಪ್ಟನ್. ನನ್ನ ರೋಲ್ ಮಾಡೆಲ್ ಅಂತೆಲ್ಲ ಕೊಂಡಾಡಿದ್ದಾರೆ.

ಅಭಿಮಾನಿ ಮನವಿಗೆ ಸ್ಪಂದಿಸಿ ಪೋಸ್ ಕೊಟ್ಟ ಮಾಹಿ!

ಸಿನಿಮಾ ಕಾರ್ಯಕ್ರಮಕ್ಕಾಗಿ ಚೆನ್ನೈಗೆ ಆಗಮಿಸಿದ್ದ ಧೋನಿ, ಜಸ್ಟ್ ಸಿನಿ ಮಂದಿಯನ್ನಷ್ಟೇ ಭೇಟಿಯಾಗಿರಲಿಲ್ಲ. ಹಲವು ಅಭಿಮಾನಿಗಳನ್ನೂ ಭೇಟಿಯಾಗಿದ್ದರು. ಈ ವೇಳೆ ಅಭಿಮಾನಿ ಫೋಟೋಗೆ ಪೋಸ್ ಕೊಟ್ಟಿದ್ರು. ಆದ್ರೆ, ಅಭಿಮಾನಿ ವಿಭಿನ್ನ ಫೋಸ್​ಗೆ ಮನವಿ ಮಾಡಿದ್ರು. ಅದರಂತೆಯೇ ನಡೆದುಕೊಂಡ ಮಾಹಿ, ಅಭಿಮಾನಿ ಮೊಗದಲ್ಲಿ ಸಂತಸ ಮೂಡಿಸಿದದ್ದರು.

ಮದುವೆಯಲ್ಲಿ ಮಾಹಿ.. ಫ್ಯಾನ್ಸ್​ಗೆ ನೀಡಿದ್ರೂ ಸಪ್ರೈಸ್..!

ಮಹೇಂದ್ರ ಸಿಂಗ್ ಧೋನಿ, ಫ್ಯಾನ್ಸ್​ಗೆ ಎಷ್ಟು ಪ್ರೀತಿ ಮಾಡ್ತಾರೆ ಅನ್ನೋದಕ್ಕೆ ಇದಕ್ಕಿಂತ ಬೆಸ್ಟ್ ಎಕ್ಸಾಂಪಲ್ ಸಿಗೋದೇ ಇಲ್ಲ. ಯಾಕಂದ್ರೆ, ಅಭಿಮಾನಿಯ ಮದುವೆಗೆ ಒಬ್ಬರೇ ತೆರಳಿ ಎಲ್ಲರಿಗೂ ಸರ್‌ಪ್ರೈಸ್ ನೀಡಿದ್ದರು.

ಧೋನಿಗೆ ಗಿಫ್ಟ್.. ಫ್ಯಾನ್ ಎಮೋಷನಲ್ ಮೂಮೆಂಟ್..!

ಧೋನಿ ಹಾಗೂ ಪತ್ನಿ ಸಾಕ್ಷಿಯನ್ನ ಭಬೇಟಿಯಾಗಿದ್ದ ಅಭಿಮಾನಿ, ಧೋನಿಯಿಂದ ಆಟೋಗ್ರಾಫ್ ಪಡೆಯುತ್ತಾರೆ. ತಾನು ಧರಿಸಿದ್ದ ಜರ್ಸಿ ಮೇಲೂ ಹಸ್ತಾಕ್ಷರ ಹಾಕಿಸಿಕೊಳ್ತಾನೆ. ಇಷ್ಟಕ್ಕೂ ಸುಮ್ಮನಾಗದ ಅಭಿಮಾನಿ, ಇಂಡಿಯಾ ಜರ್ಸಿ ಮೇಲೂ ಆಟೋಗ್ರಾಫ್ ಕೇಳ್ತಾನೆ. ಇಷ್ಟಾದ್ರೂ ಸಿಟ್ಟಾಗದ ಧೋನಿ, ನಗುನಗುತ್ತಲೇ ನೀಡ್ತಾರೆ.

ನಟ ಯೋಗಿ ಬಾಬು ಜೊತೆ ಧೋನಿ ಫನ್..!

LGM ಕಾರ್ಯಕ್ರಮದಲ್ಲಿ ಖ್ಯಾತ ನಟ ಯೋಗಿ ಬಾಬು ಕೂಡ ಹಾಜರಿದ್ರು. ಈ ವೇಳೆ ಸ್ಟೇಜ್ ಮೇಲೆ ಯೋಗಿ ಬಾಬುರಿಂದ ಕೇಕ್ ಕಟ್ ಮಾಡಿಸಲಾಯ್ತು. ಬಾಬು ಕೇಕ್ ಕಟ್ ಮಾಡಿದ್ದೇ ತಡ, ಕೇಕ್ ಪೀಸ್ ತೆಗೆದುಕೊಂಡ ತಾವೇ ತಿಂದ್ರು. ಈ ವೇಳೆ ಬಾಬು ಬೇಸರವಾದಂತೆ ಕಂಡ್ರೂ, ಧೋನಿಯ ರಿಯಾಕ್ಷನ್ ನೋಡಿ ಯೋಗಿ ಬಾಬು ನಕ್ಕು ಬಿಟ್ರು.

ದಿಗ್ಗಜ ಗವಾಸ್ಕರ್​ರಿಂದಲೇ ಧೋನಿಗೆ ಸಲಾಂ..!

ಕ್ರಿಕೆಟಿಗರು, ಸಿನಿಮಾ ಮಂದಿಯೇ ಅಲ್ಲ, ಬ್ಯಾಟಿಂಗ್ ಲೆಜೆಂಡ್ ಗವಾಸ್ಕರ್ ಕೂಡ ಧೋನಿಗೆ ಫ್ಯಾನ್ ಆಗಿದ್ದಾರೆ. ಐಪಿಎಲ್ ವೇಳೆ ಸ್ವತಃ ತಾವೇ ಆಟೋಗ್ರಾಫ್ ಪಡೆದು ಕ್ರಿಕೆಟ್ ಜಗತ್ತನ್ನೇ ಅಚ್ಚರಿಗೆ ದೂಡಿದ್ದು, ನಮ್ಮ ಕಣ್ಮುಂದೆ ಇದೆ. ಇಂಥಹ ದಿಗ್ಗಜರೇ ಧೋನಿಗೆ ಸಲಾಂ ಹೊಡೆದ್ಮೇಲೆ, ಇನ್ನು ಇತರರು ಧೋನಿ ನಡೆ-ನುಡಿಗೆ ಅಭಿಮಾನಿಯಾಗ್ದೇ ಇರುತ್ತಾರಾ?.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

VIDEO: ಹೃದಯ ಗೆದ್ದ ಮಹೇಂದ್ರ ಸಿಂಗ್ ಧೋನಿ; ಫ್ಯಾನ್ಸ್​ ಜೊತೆ ‘ಕೂಲ್‌ ಕ್ಯಾಪ್ಟನ್‌’ ಹೇಗೆಲ್ಲ ಕಾಮಿಡಿ ಮಾಡ್ತಾರೆ ನೋಡಿ

https://newsfirstlive.com/wp-content/uploads/2023/07/DHONI-1-1.jpg

Load More