ವಿದೇಶಿ ಟೆಸ್ಟ್ನಲ್ಲಿ ಮೂರಂಕಿ ದಾಟಲು ಕೊಹ್ಲಿ ವಿಫಲ
ವಿರಾಟ್ ವಿದೇಶಿ ನೆಲದಲ್ಲಿ ಶತಕ ಸಿಡಿಸಿ ಎಷ್ಟು ವರ್ಷ?
ಕೆರಿಬಿಯನ್ರ 2ನೇ ಟೆಸ್ಟ್ ಟಾರ್ಗೆಟ್ ಮಾಡಿದ ವಿರಾಟ್!
ವಿರಾಟ್ ಕೊಹ್ಲಿ ಶತಕಗಳ ಸಾಮ್ರಾಟ, ಮಾಡ್ರನ್ ಡೇ ಕ್ರಿಕೆಟ್ ಮಾಸ್ಟರ್. ವಿಂಡೀಸ್ ಎದುರಿನ ಮೊದಲ ಟೆಸ್ಟ್ನಲ್ಲಿ 75 ರನ್ ಗಳಿಸಿ ಭೇಷ್ ಎನಿಸಿಕೊಂಡ ಈ ಬ್ಯಾಟಿಂಗ್ ಮಾಸ್ಟರ್ಗೆ ಒಂದು ಕೊರಗು ಕಾಡ್ತಾನೇ ಇದೆ. ಅಂದ್ಹಾಗೆ ಕೊಹ್ಲಿಗೆ ಕಾಡ್ತಿರೋ ಕೊರಗೇನು..?
ಕೊಹ್ಲಿ ಶತಕಗಳ ಸರದಾರ. ಪಿಚ್ ಯಾವುದೇ ಆಗಲಿ, ಬೌಲರ್ ಯಾರೇ ಆಗಲಿ, ಎದುರಾಳಿ ಯಾರೇ ಆಗಲಿ, ಅಲ್ಲಿ ಕಿಂಗ್ ಕೊಹ್ಲಿಯದ್ದೇ ರಾಜ್ಯಭಾರ. ಇದೇ ಕಾರಣಕ್ಕೆ ಮಾಡ್ರನ್ ಡೇ ಕ್ರಿಕೆಟ್‌ನ ಗಾಡ್ ಕರೆಸಿಕೊಳ್ಳುವ ವಿರಾಟ್, ನಡೆದಿದ್ದೇ ದಾರಿ. ಇದೀಗ ಈ ಬ್ಯಾಟಿಂಗ್ ಖದರ್ ಮಾಯವಾಗಿದೆ.
ಕಿಂಗ್ ಕೊಹ್ಲಿಗೆ ಕಾಡುತ್ತಿದೆ ಆ ಕೊರಗು.!
ಸದ್ಯ ಡೊಮೆನಿಕಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ 75 ರನ್ ಗಳಿಸಿದ ವಿರಾಟ್ ಕೊಹ್ಲಿ, ಗೆಲುವಿನಲ್ಲಿ ಮಹತ್ವದ ಪಾತ್ರವನ್ನೇ ವಹಿಸಿದ್ದಾರೆ. ಕ್ರಿಕೆಟ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯೂ ಆಗಿದ್ದಾರೆ. ಆದ್ರೆ, ಕಿಂಗ್ ಕೊಹ್ಲಿಗೆ 75 ರನ್ ಗಳಿಸಿದರೂ ಕೂಡ ಒಂದು ಕೊರಗು ಇನ್ನಿಲ್ಲದಂತೆ ಕಾಡ್ತಿದೆ. ಇದಕ್ಕೆ ಕಾರಣ ವಿದೇಶದಲ್ಲಿ ಕೊಹ್ಲಿ ಎದುರಿಸ್ತಿರೋ ರನ್ ಬರ.
5 ವರ್ಷಗಳಿಂದ ವಿದೇಶಿ ಟೆಸ್ಟ್ನಲ್ಲಿ ಸಿಡಿಯಲಿಲ್ಲ ಶತಕ
3 ವರ್ಷ ಭಾರೀ ನಿರಾಸೆಯನ್ನೇ ವ್ಯಕ್ತಪಡಿಸಿದ್ದ ಕೊಹ್ಲಿ, ಕಳೆದ ಒಂದು ವರ್ಷದಿಂದ ಮೂರು ಫಾರ್ಮೆಟ್ನಲ್ಲಿ ಅಬ್ಬರಿಸಿ ಬೊಬ್ಬೆರೆದಿದ್ದಾರೆ. ಶತಕದ ಬರವನ್ನೂ ನೀಗಿಸಿಕೊಂಡಿದ್ದಾರೆ. ಆದ್ರೆ, ವಿದೇಶದಲ್ಲಿ ಮಾತ್ರ ಕಿಂಗ್ ಕೊಹ್ಲಿಯ ಶತಕದ ಬರ ನೀಗಿಲ್ಲ. ಅದರಲ್ಲೂ ಟೆಸ್ಟ್ ಫಾರ್ಮೆಟ್ನಲ್ಲಿ ಪರದಾಟ ನಡೆಸ್ತಿರೋ ವಿರಾಟ್, ಸಾಗರದಾಚೆ ಸೆಂಚೂರಿ ಸಿಡಿಸಿ ಬರೋಬ್ಬರಿ 5 ವರ್ಷಗಳೇ ಕಳೆದಿದೆ.
29 ಇನ್ನಿಂಗ್ಸ್.. ಕೊಹ್ಲಿಗೆ ಕಾಡಿದ ಶತಕದ ಕೊರಗು
14 ಡಿಸೆಂಬರ್ 2018.. ಆಸ್ಟ್ರೇಲಿಯಾ ವಿರುದ್ಧ ಕೊನೆ ವಿದೇಶಿ ಟೆಸ್ಟ್ ಶತಕ ಸಿಡಿಸಿದ್ದ ಕೊಹ್ಲಿ, ಈ ಬಳಿಕ ಆಡಿರೋ 16 ಟೆಸ್ಟ್ ಪಂದ್ಯಗಳ 29 ಇನ್ನಿಂಗ್ಸ್ಗಳಿಂದ ಒಂದೇ ಒಂದು ಶತಕ ಸಿಡಿಸಲು ವಿಫಲರಾಗಿದ್ದಾರೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಈ 29 ಇನ್ನಿಂಗ್ಸ್ಗಳಿಂದ ಜಸ್ಟ್ ಏಳೇ 7 ಅರ್ಧಶತಕ ದಾಖಲಿಸಿರೋ ವಿರಾಟ್, ಒಟ್ಟು ಗಳಿಸಿರೋ ರನ್ 806. ಇದೇ ಈಗ ಕಿಂಗ್ ಕೊಹ್ಲಿಯ ಕೊರಗನ್ನ ದುಪ್ಪಾಟ್ಟಾಗಿಸಿದೆ.
ಡೊಮಿನಿಕಾದಲ್ಲಿ 75 ರನ್ ಸಿಡಿಸಿದ್ರೂ ಕೊಹ್ಲಿಗಿಲ್ಲ ತೃಪ್ತಿ
ಡೊಮೆನಿಕಾದಲ್ಲಿ ಕೊಹ್ಲಿ ಅಮೋಘ 75 ರನ್ ಸಿಡಿಸಿದ್ದು ನಿಜ. ಆದ್ರೆ, ಈ ಇನ್ನಿಂಗ್ಸ್ ಕೊಹ್ಲಿಗೆ ತೃಪ್ತಿದಾಯಕ ಎನಿಸಿಲ್ಲ. ಇದಕ್ಕೆ ಕಾರಣ ಕೊಹ್ಲಿ ಬ್ಯಾಟ್ ಬೀಸಿದ ಪರಿಯೇ ಆಗಿದೆ. ಯಾಕಂದ್ರೆ, ಈ ಟೆಸ್ಟ್ನಲ್ಲಿ ಹಲವು ಜೀವದಾನಗಳನ್ನ ಪಡೆದ್ರೂ, ಕೊಹ್ಲಿ ಒಂದೇ ಒಂದು ಬೌಂಡರಿ ಗಳಿಸಲು ತೆಗೆದುಕೊಂಡಿದ್ದು ಬರೋಬ್ಬರಿ 81 ಬಾಲ್. ಇದು ನಿಜಕ್ಕೂ ವಿರಾಟ್ ಬ್ಯಾಟಿಂಗ್ ಶೈಲಿಯನ್ನೇ ಆತ್ಮವಲೋಕನ ಮಾಡಿಕೊಳ್ಳುವಂತೆ ಮಾಡಿದೆ.
ಒಂದು ಕಾಲದಲ್ಲಿ ಸೆಂಚೂರಿ ಸಿಡಿಸಿಯೂ ಸಂಭ್ರಮಿಸದ ಕೊಹ್ಲಿ, ಈಗ ಬೌಂಡರಿಗೂ ಸಂಭ್ರಮಿಸುವ ದುಸ್ಥಿತಿಗೆ ತಲುಪಿದ್ದಾರೆ. ಇದು ಸಹಜವಾಗಿ ಕೊಹ್ಲಿಯ ಬ್ಯಾಟಿಂಗ್ ಅನ್ನ ಪ್ರಶ್ನಿಸುವಂತೆ ಮಾಡಿದೆ. ಇದಿಷ್ಟೇ ಅಲ್ಲ, ಸಿನೀಯರ್ ಆಟಗಾರರ ಮುಂದೆ, ಯುವ ಆಟಗಾರರು ಸಲೀಸಾಗಿ ರನ್ ಕೊಳ್ಳೆ ಹೊಡೆಯುತ್ತಿದ್ದಾರೆ. ಹೀಗಾಗಿ ಸಿನೀಯರ್ಸ್ ರನ್ ಗಳಿಸಲೇಬೇಕಾದ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಸಂಕಷ್ಟದಲ್ಲಿ ಕೊಹ್ಲಿ.. 2ನೇ ಟೆಸ್ಟ್ ಪಂದ್ಯವೇ ಟಾರ್ಗೆಟ್!
ವಿದೇಶಿ ಟೆಸ್ಟ್ಗಳಲ್ಲಿ ಒಂದು ಕಡೆ ವಿರಾಟ್ ಕೊಹ್ಲಿ ರನ್ ಗಳಿಸಲು ಹೆಣಗಾಡ್ತಿದ್ರೆ. ಮತ್ತೊಂದ್ಕಡೆ ಸಿಕ್ಕ ಸಿಕ್ಕ ಅವಕಾಶಗಳಲ್ಲೇ ಅಬ್ಬರದ ಬ್ಯಾಟಿಂಗ್ ನಡೆಸ್ತಿರೋ ಯುವಕರು ಸಿನೀಯರ್ಗಳಿಗೆ ಪ್ರಬಲ ಪೈಪೋಟಿ ನೀಡ್ತಿದ್ದಾರೆ. ಇದು ಸಹಜವಾಗೇ ಕೊಹ್ಲಿಯನ್ನ ಒತ್ತಡಕ್ಕೆ ದೂಡುತ್ತಿದೆ. ಹೀಗಾಗಿ ವಿಂಡೀಸ್ ವಿರುದ್ಧದ 2ನೇ ಟೆಸ್ಟ್ನ ಟಾರ್ಗೆಟ್ ಮಾಡಿರೋ ಕೊಹ್ಲಿ, ಮನದಲ್ಲಿ ಕಾಡ್ತಿರೋ ಕೊರಗು ಈಡೇರಿಸಿಕೊಳ್ಳುವ ಪಣತೊಟ್ಟಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ