newsfirstkannada.com

ಟೀಮ್ ಇಂಡಿಯಾದ ಮೇಲೆ ಮಾಜಿ ವೇಗಿಯ ಟೀಕಾಸ್ತ್ರ.. ಮ್ಯಾನೇಜ್​ಮೆಂಟ್ ಮೇಲೆ ಬೌನ್ಸರ್​ ಎಸೆದ ವೆಂಕಟೇಶ್​ ಪ್ರಸಾದ್

Share :

01-08-2023

    ವೆಂಕಟೇಶ್​ ಪ್ರಸಾದ್ ಟಾರ್ಗೆಟ್ ಈಗ ಟೀಮ್ ಇಂಡಿಯಾ

    ಕೋಚ್​ ದ್ರಾವಿಡ್​ ಮೇಲೆ ನಿಗಿನಿಗಿ ಕೆಂಡವಾದ ಮಾಜಿ ವೇಗಿ

    ಮೊದಲಿನಂತೆ ಬಲಿಷ್ಠವಾಗಿಲ್ವಾ ಟೀಮ್ ಇಂಡಿಯಾ..?

ಕನ್ನಡಿಗ ಕೆ.ಎಲ್.ರಾಹುಲ್ ಆಯ್ತು. ಮುಂಬೈಕರ್ ಸೂರ್ಯಕುಮಾರ್​ ಆಯ್ತು. ಈಗ ವೆಂಕಟೇಶ್​​ ಪ್ರಸಾದ್​ ಟೀಮ್ ಇಂಡಿಯಾವನ್ನೇ ಟಾರ್ಗೆಟ್​ ಮಾಡಿದ್ದಾರೆ. ಇಷ್ಟು ದಿನ ಆಟಗಾರರನ್ನೇ ಗುರಿಯಾಗಿಸಿದ್ದ ಮಾಜಿ ವೇಗಿ, ಈಗ ಬಿಸಿಸಿಐ ಹಾಗೂ ಟೀಮ್ ಮ್ಯಾನೇಜ್​ಮೆಂಟ್​ಗೆ ಬೌನ್ಸರ್​ಗಳನ್ನ ಎಸೆಯುತ್ತಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯ ಮುಗಿದು, ಮೂರನೇ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. ಈ ಪಂದ್ಯದ ಗೆಲುವಿನೊಂದಿಗೆ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಚಾರದಲ್ಲಿದೆ. ಆದ್ರೆ, ಏಕದಿನ ವಿಶ್ವಕಪ್ ಟೂರ್ನಿ ಸನಿಹದಲ್ಲಿ ಟೀಮ್ ಇಂಡಿಯಾ ಮಾಡಿರೋ ಅರ್ಥವಿಲ್ಲದ ಪ್ರಯೋಗದ ಚರ್ಚೆ ಮಾತ್ರ ದಿನದಿಂದ ದಿನಕ್ಕೆ ಕಾವೇರುತ್ತಿದೆ.

2ನೇ ಏಕದಿನ ಪಂದ್ಯದಲ್ಲಿ ಮಾಡಿದ್ದ ಪ್ರಯೋಗಕ್ಕೆ ಭಾರೀ ಬೆಲೆಯನ್ನೇ ತೆತ್ತಿದೆ. ಬ್ಯಾಟಿಂಗ್, ಬೌಲಿಂಗ್​​ನಲ್ಲಿ ಯಡವಟ್ಟು ಮಾಡಿಕೊಂಡ ಟೀಮ್ ಇಂಡಿಯಾ, ಈಗ ಗೆಲ್ಲಲೇಬೇಕಾದ ಸಂಕಷ್ಟಕ್ಕೆ ಸಿಲುಕಿದೆ. ಆದ್ರೆ, ವೆಸ್ಟ್ ಇಂಡೀಸ್​ ವಿರುದ್ಧದ ಹೀನಾಯ ಸೋಲು ಕ್ರಿಕೆಟ್​ ಪಂಡಿತರ ಆಕ್ರೋಶಕ್ಕೆ ಕಾರಣವಾಗಿದೆ.

ಟೀಮ್ ಇಂಡಿಯಾ ಮೇಲೆ ವೆಂಕಿ ಟೀಕಾಸ್ತ್ರ..!

ಕಳೆದೊಂದು ವರ್ಷದಿಂದ ಟೀಮ್ ಇಂಡಿಯಾ ಆಟಗಾರರ ವೈಫಲ್ಯವನ್ನೇ ಗುರಿಯಾಗಿಸಿ ಟೀಕೆ ಮಾಡ್ತಿದ್ದ ಮಾಜಿ ವೇಗಿ ವೆಂಕಟೇಶ್​​ ಪ್ರಸಾದ್​​, ಈಗ ಏಕಾಏಕಿ ಟೀಮ್ ಇಂಡಿಯಾ ಮೇಲೆ ಅಟ್ಯಾಕ್​ ಮಾಡಿದ್ದಾರೆ. ಅದರಲ್ಲೂ ಟೀಮ್ ಇಂಡಿಯಾ ನೀಡ್ತಿರೋ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಇತರೆ ತಂಡಗಳ ಜೊತೆಗೆ ಹೋಲಿಸಿ ಟೀಕಾ ಪ್ರಹಾರ ನಡೆಸಿದ್ದಾರೆ.

ಬಲಿಷ್ಠವಾಗಿ ಉಳಿದಿಲ್ಲ ಟೀಮ್ ಇಂಡಿಯಾ!

ಟೆಸ್ಟ್‌ ಕ್ರಿಕೆಟ್‌ ಪಕ್ಕಕ್ಕಿಡಿ. ಉಳಿದ ಎರಡು ಫಾರ್ಮೆಟ್​ನಲ್ಲೂ ಟೀಮ್ ಇಂಡಿಯಾದ ಪ್ರದರ್ಶನ ಸಾಮಾನ್ಯವಾಗಿದೆ. ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್‌ ಸರಣಿ ಸೋತಿದೆ. ಕಳೆದ ಎರಡು ಟಿ20 ವಿಶ್ವಕಪ್‌ ಟೂರ್ನಿಗಳಲ್ಲಿ ಟ್ರೋಫಿ ಗೆಲ್ಲಲು ವಿಫಲವಾಗಿದೆ. ಇಂಗ್ಲೆಂಡ್​ನಂತಹ ಅತ್ಯಾಕರ್ಷಕ ತಂಡವಾಗಿಯೂ ಟೀಮ್ ಇಂಡಿಯಾ ಇಲ್ಲ. ಆಸ್ಟ್ರೇಲಿಯಾದಂತೆ ಬಲಿಷ್ಠ ತಂಡವಾಗಿಯೂ ಉಳಿದಿಲ್ಲ.
ವೆಂಕಟೇಶ್​ ಪ್ರಸಾದ್​, ಮಾಜಿ ಆಟಗಾರ

ದ್ರಾವಿಡ್​ ಮೇಲೆಯೂ ಮುಗಿಬಿದ್ದ ವೆಂಕಟೇಶ್​..!

ವೆಂಕಟೇಶ್​ ಪ್ರಸಾದ್ ಜಸ್ಟ್​ ಟೀಮ್ ಇಂಡಿಯಾವನ್ನೇ ಮಾತ್ರ ಟೀಕೆ ಮಾಡ್ಲಿಲ್ಲ. ಕೋಚ್ ರಾಹುಲ್ ದ್ರಾವಿಡ್​​ರ ಕೋಚಿಂಗ್​ ಬಗ್ಗೆಯೂ ಅಸಮಧಾನ ವ್ಯಕ್ತಪಡಿಸಿದ್ದಾರೆ. ರವಿ ಶಾಸ್ತ್ರಿ ಬಳಿಕ ಟೀಮ್ ಇಂಡಿಯಾವನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ಯವ ನಿರೀಕ್ಷೆ ಮೂಡಿಸಿದ್ದ ದ್ರಾವಿಡ್, ಸತತ ವೈಫಲ್ಯ ಅನುಭವಿಸಿದ್ದಾರೆ. WTC ಫೈನಲ್​ ಸೇರಿದಂತೆ ಟಿ20 ವಿಶ್ವಕಪ್, ಏಷ್ಯಾಕಪ್​ಗಳಲ್ಲೂ ತಂಡ ಸೋಲು ಅನುಭವಿಸಿದೆ. ಇದೇ ಕಾರಣಕ್ಕೆ ಟೀಮ್ ಇಂಡಿಯಾದ ಸಾಮರ್ಥ್ಯ ಹಾಗೂ ಮನಸ್ಥಿತಿಯ ಬಗ್ಗೆ ಪ್ರಶ್ನಿಸಿರುವ ವೆಂಕಟೇಶ್​ ಪ್ರಸಾದ್, ಕೋಚ್ ದ್ರಾವಿಡ್​ರ ಮಾರ್ಗದರ್ಶನದ ಬಗ್ಗೆ ಪರೋಕ್ಷವಾಗಿ ಕೆಂಡಕಾರಿದ್ದಾರೆ.

ಸಣ್ಣ ಗೆಲುವನ್ನ ಸಂಭ್ರಮಿಸುವಂತಾಗಿದೆ!

ಹಣಬಲ ಮತ್ತು ಅಧಿಕಾರ ಇದ್ದು ಪ್ರಯೋಜನ ಏನು. ಸಾಧಾರಣ ಪ್ರದರ್ಶನಗಳನ್ನ ಟೀಮ್ ಇಂಡಿಯಾ ಸಂಭ್ರಮಿಸುವಂತಾಗಿದೆ. ಒಂದು ಚಾಂಪಿಯನ್‌ ತಂಡವಾಗುವುದರಿಂದ ಟೀಮ್ ಇಂಡಿಯಾ ಸಾಕಷ್ಟು ದೂರದಲ್ಲಿದೆ. ಟೀಮ್ ಇಂಡಿಯಾ ಸೇರಿ ಎಲ್ಲರೂ ಆಡುವುದು ಗೆಲ್ಲಲು. ಆದರೆ ದೀರ್ಘ ಕಾಲದಿಂದ ಸಾಮರ್ಥ್ಯಕ್ಕೆ ತಕ್ಕ ಆಟವಾಡದೇ ಇರುವಾಗ, ಅನುಸರಿಸುತ್ತಿರುವ ಮಾರ್ಗ ಮತ್ತು ಮನಸ್ಥಿತಿಯ ಬಗ್ಗೆ ಪ್ರಶ್ನೆ ಮೂಡುತ್ತದೆ.
ವೆಂಕಟೇಶ್​ ಪ್ರಸಾದ್​, ಮಾಜಿ ಆಟಗಾರ

ವೆಂಕಟೇಶ್​ ಪ್ರಸಾದ್​ರ ಈ ಟೀಕಾಸ್ತ್ರ, ಇದೇ ಮೊದಲಲ್ಲ. ಈ ಹಿಂದೆಯೂ ಸಾಲು ಸಾಲು ವೈಫಲ್ಯ ಅನುಭವಿಸಿದ್ದ ಸ್ಟಾರ್​ ಆಟಗಾರರಿಗೆ ಪಂಚ್ ನೀಡಿದ್ರು. ಸ್ಟಾರ್‌ ಆಟಗಾರ ಕೆ.ಎಲ್‌.ರಾಹುಲ್‌ ವಿರುದ್ಧವೂ ಗುಡುಗಿದ್ದರು. ಸಂಜು ಸ್ಯಾಮ್ಸನ್​ರನ್ನ ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆಯೂ ದನಿಯೆತ್ತಿದ್ದರು. ಸೂರ್ಯಕುಮಾರ್ ಯಾದವ್​ಗೆ ಪದೇ ಪದೇ ಚಾನ್ಸ್​ ನೀಡ್ತಿರುವ ಬಗ್ಗೆಯೂ ನೇರವಾಗಿ ಪ್ರಶ್ನಿಸಿದ್ದರು. ಇದೀಗ ಟೀಮ್​ ಇಂಡಿಯಾ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಮಾಡ್ತಿರೋದಕ್ಕೆ ಕಾರಣವೂ ಇದೆ.

ವೆಂಕಟೇಶ್​ ಪ್ರಸಾದ್
ವೆಂಕಟೇಶ್​ ಪ್ರಸಾದ್

ವೆಂಕಿಗೇಕೆ ಅಸಮಾಧಾನ..?

ಕೊಹ್ಲಿ & ರೋಹಿತ್ ಅನುಪಸ್ಥಿತಿಯಲ್ಲಿ ವೆಸ್ಟ್​ ಇಂಡೀಸ್​ ಎದುರು ಸೋಲು ಅನುಭವಿಸಿದ್ದು ವೆಂಕಟೇಶ್​ ಪ್ರಸಾದ್​ರ ಅಸಮಾಧಾನಕ್ಕೆ ಪ್ರಮುಖ ಕಾರಣ. 17 ಏಕದಿನ ಪಂದ್ಯಗಳಿಂದ ಒಂದೇ ಒಂದು ಅರ್ಧಶತಕ ಸಿಡಿಸದ ಸೂರ್ಯಗೆ, ಪದೇ ಪದೇ ಚಾನ್ಸ್​ ನೀಡಲಾಗ್ತಿದೆ. ಇದಕ್ಕಿಂತ ಮಿಗಿಲಾಗಿ ವಿಂಡೀಸ್ ವಿರುದ್ಧದ ಎರಡೂ ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದಲ್ಲಿ ಸ್ಪಷ್ಟತೆಯೇ ಇರಲಿಲ್ಲ. ಅದರಲ್ಲೂ 4ನೇ ಕ್ರಮಾಂಕದಲ್ಲಿ ಆಡಿರುವ ಅನುಭವ ಹೊಂದಿರುವ ಹಾರ್ದಿಕ್ & ಸೂರ್ಯ ಹೊರತಾಗಿ 4ನೇ ಕ್ರಮಾಂಕದಲ್ಲಿ ಅಕ್ಷರ್​ ಬ್ಯಾಟಿಂಗ್​​​ ಅತಿನ ಕೆಟ್ಟ ನಿರ್ಣಯಗಳಲ್ಲಿ ಒಂದಾಗಿತ್ತು. ರನ್​ಲೀಕ್​ ಮಾಡ್ತಿದ್ದ ಹಾರ್ದಿಕ್ ಪಾಂಡ್ಯ 6.4 ಓವರ್​​​ ಬೌಲಿಂಗ್​​ ಮಾಡಿದ್ದು ದುಬಾರಿಯಾಯ್ತು. ಇದೆಲ್ಲವೂ ಟೀಮ್ ಮ್ಯಾನೇಜ್​​ಮೆಂಟ್​ನ ಗೇಮ್​ಪ್ಲಾನ್ ಹಾಗೂ ಸ್ಟ್ರಾಟರ್ಜಿಯನ್ನೇ ಪ್ರಶ್ನಿಸುವಂತಿತ್ತು ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.

ಮತ್ತೊಂದು ಅಸಮಾಧಾನದ ವಿಚಾರ ಅಂದ್ರೆ, ವಿಶ್ವಕಪ್​ ಟೂರ್ನಿಗೆ ಕೆಲವೇ ಕೆಲವು ತಿಂಗಳು ಉಳಿದಿವೆ. ಇಂತಾ ಸಂದರ್ಭದಲ್ಲಿ ಬ್ಯಾಕ್​ ಆಪ್​ ಪ್ಲೇಯರ್​ಗಳನ್ನ ಹುಡುಕಿಕೊಳ್ಳೋದು ಬಿಟ್ಟು, ಬೇಕಾಬಿಟ್ಟಿ ಪ್ರಯೋಗ ನಡೆಸಲಾಯ್ತು. ಒಂದೇ ಮಾತಲ್ಲಿ ಹೇಳೋದಾದ್ರೆ, ಗಲ್ಲಿ ಕ್ರಿಕೆಟ್​ ಮ್ಯಾಚ್​ನ ಸ್ಟ್ರಾಟರ್ಜಿ ಮಾಡಿದಂತಿತ್ತು. ಹೀಗಾಗಿಯೇ ಟೀಮ್​ ಮ್ಯಾನೇಜ್​ಮೆಂಟ್​​ ವೆಂಕಟೇಶ್​ ಪ್ರಸಾದ್​ ಸೇರಿದಂತೆ, ಹಲ ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್ ಇಂಡಿಯಾದ ಮೇಲೆ ಮಾಜಿ ವೇಗಿಯ ಟೀಕಾಸ್ತ್ರ.. ಮ್ಯಾನೇಜ್​ಮೆಂಟ್ ಮೇಲೆ ಬೌನ್ಸರ್​ ಎಸೆದ ವೆಂಕಟೇಶ್​ ಪ್ರಸಾದ್

https://newsfirstlive.com/wp-content/uploads/2023/08/Venkatesh-Prasadh.jpg

Load More