newsfirstkannada.com

ಅಂದು ತಂಡದ ಮುಖ್ಯ ಆಟಗಾರನಾಗಿದ್ದೂ ವಿಶ್ವಕಪ್​ ಟಿಕೆಟ್ ಸಿಗಲಿಲ್ಲ; ದೇಶಪ್ರೇಮಕ್ಕಾಗಿ ಆ ಕೆಲಸ ಮಾಡಲಿಲ್ಲ?

Share :

22-10-2023

    ಟೀಮ್​ ಇಂಡಿಯಾದ ವೆರಿ ವೆರಿ ಸ್ಪೆಷಲ್​ ಹೈದರಾಬಾದ್ ಪ್ಲೇಯರ್

    ದ್ರಾವಿಡ್, ಗಂಗೂಲಿ, ಸಚಿನ್ ಜೊತೆ ಸಾಕಷ್ಟು ಮ್ಯಾಚ್ ಆಡಿದ್ದಾರೆ.!

    1996ರಿಂದ 2012ರವರೆಗೆ ದಶಕಕ್ಕೂ ಹೆಚ್ಚು ಕಾಲ ಟೀಮ್​ನಲ್ಲಿದ್ದರು

ಈತ ದಶಕಗಳ ಕಾಲ ಟೀಮ್​ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದ ಪ್ಲೇಯರ್​​. ಅದೆಷ್ಟೋ ಅವಿಸ್ಮರಣೀಯ ಗೆಲುವುಗಳ ರೂವಾರಿ ಕೂಡ ಹೌದು. ಆದ್ರೆ, ಈತನಿಗೆ ಒಂದೇ ಒಂದು ವಿಶ್ವಕಪ್​ ಪಂದ್ಯವನ್ನ ಆಡುವ ಭಾಗ್ಯ ಸಿಗಲಿಲ್ಲ.

ವಿಶ್ವಕಪ್ ಮಹಾ ಸಮರದಲ್ಲಿ ತಂಡವನ್ನ ಪ್ರತಿನಿಧಿಸಬೇಕು ಅನ್ನೋದು ಪ್ರತಿಯೊಬ್ಬ ಕ್ರಿಕೆಟಿಗನ ಅಲ್ಟೀಮೇಟ್​ ಡ್ರೀಮ್​. ನಮ್ಮ ಟೀಮ್​ ಇಂಡಿಯಾದ ವೆರಿ ವೆರಿ ಸ್ಪೆಷಲ್​ ಆಟಗಾರ, ಹಲ ಸ್ಮರಣೀಯ ಗೆಲುವುಗಳ ರೂವಾರಿ, ಮಿಸ್ಟರ್​ ಡಿಪೆಂಡೆಬೆಲ್​ ವಿವಿಎಸ್​ ಲಕ್ಷ್ಮಣ್​ ಕನಸೂ ಇದೇ ಆಗಿತ್ತು. ಆದ್ರೆ, ಕನಸು ನನಸಾಗಲೇ ಇಲ್ಲ.

ಕರಿಯರ್​ನಲ್ಲಿ 134 ಟೆಸ್ಟ್​​, 86 ಏಕದಿನ ಪಂದ್ಯಗಳಲ್ಲಿ ವಿವಿಎಸ್ ಲಕ್ಷ್ಮಣ್​​ ಟೀಮ್​ ಇಂಡಿಯಾ ಪ್ರತಿನಿಧಿಸಿದ್ದಾರೆ. 1996ರಿಂದ 2012ರವರೆಗೆ ದಶಕಕ್ಕೂ ಹೆಚ್ಚು ಕಾಲ ತಂಡದ ಅವಿಭಾಜ್ಯ ಅಂಗವೇ ಆಗಿದ್ದರು. ಏಕದಿನ ವಿಶ್ವಕಪ್​ ಆಡುವ ಭಾಗ್ಯ ಮಾತ್ರ ಸಿಗಲಿಲ್ಲ. 2003ರ ವಿಶ್ವಕಪ್​ ಸಂದರ್ಭದಲ್ಲಿ ಲಕ್ಷ್ಮಣ್​ಗೆ ಸ್ಥಾನ ಸಿಕ್ಕೇ ಸಿಗುತ್ತೆ ಎನ್ನಲಾಗಿತ್ತು. ಸ್ಲೋ ಬ್ಯಾಟಿಂಗ್​ ಲಕ್ಷ್ಮಣ್​ ಆಯ್ಕೆಗೆ ಅಡ್ಡಗಾಲಾಯ್ತಂತೆ.

ಹೀಗಾಗಿ ಲಕ್ಷ್ಮಣ್​ ಬದಲು ದಿನೇಶ್​ ಮೊಂಗಿಯಾಗೆ ಟೀಮ್​ ಮ್ಯಾನೇಜ್​ಮೆಂಟ್​ ಮಣೆ ಹಾಕಿತು. ಆ ಬಳಿಕ ಬೇಸರಗೊಂಡ ಲಕ್ಷ್ಮಣ್​ ಕ್ರಿಕೆಟ್​ ಕರಿಯರ್​ಗೆ ಫುಲ್​ ಸ್ಟಾಫ್​ ಇಡಲು ನಿರ್ಧರಿಸಿಬಿಟ್ಟಿದ್ರಂತೆ. ವಿಶ್ವಕಪ್​​ ಆಡದಿದ್ರೂ, ಉಳಿದಂತೆ ದೇಶಕ್ಕಾಗಿ ಆಡುತ್ತಿದ್ದೇನೆ ಎಂಬ ಹೆಮ್ಮೆಯ ಆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿತು ಎಂದು ಲಕ್ಷ್ಮಣ್​ ಈಗ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಂದು ತಂಡದ ಮುಖ್ಯ ಆಟಗಾರನಾಗಿದ್ದೂ ವಿಶ್ವಕಪ್​ ಟಿಕೆಟ್ ಸಿಗಲಿಲ್ಲ; ದೇಶಪ್ರೇಮಕ್ಕಾಗಿ ಆ ಕೆಲಸ ಮಾಡಲಿಲ್ಲ?

https://newsfirstlive.com/wp-content/uploads/2023/10/VVS_LAXMAN_1.jpg

Load More