ಅಸ್ಸಾಂಗೆ ಭೇಟಿ ನೀಡಿದ ಗುರು ಗೌತಮ್ ಗಂಭೀರ್
ದೇವರ ಮೊರೆ ಹೋದ ಕೋಚ್, ವಿಶೇಷ ಪೂಜೆ ಸಲ್ಲಿಕೆ
ಕಾಮಾಕ್ಯ ದೇವಿ ಕಾಪಾಡಮ್ಮಾ..! ಗಂಭೀರ್ ಪ್ರಾರ್ಥನೆ
ಟಿ20 ವಿಶ್ವಕಪ್ ಗೆದ್ದಿದ್ದು ಬಿಟ್ರೆ ಉಳಿದಂತೆ ಕಳೆದ ಕೆಲವು ವರ್ಷಗಳಿಂದ ದುರಾದೃಷ್ಟ ಟೀಮ್ ಇಂಡಿಯಾವನ್ನ ಬೀಡದೆ ಕಾಡಿದೆ. ಇದೀಗ ತಂಡದ ಮುಂದಿನ ಬ್ಯುಸಿ ಶೆಡ್ಯೂಲ್ ಆರಂಭಕ್ಕೂ ಮುನ್ನ ಗುರು ಗೌತಮ್ ಗಂಭೀರ್, ದುರಾದೃಷ್ಟಕ್ಕೆ ಟ್ರಬಲ್ ಶೂಟ್ ಮಾಡಲು ಮುಂದಾಗಿದ್ದಾರೆ.
ಟೀಮ್ ಇಂಡಿಯಾ ಟೆಸ್ಟ್ ಸೀಸನ್ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಲಂಕಾ ಪ್ರವಾಸದ ಬಳಿಕ ವಿಶ್ರಾಂತಿಗೆ ಜಾರಿರುವ ಟೀಮ್ ಇಂಡಿಯಾ, ಸಪ್ಟೆಂಬರ್ 19ರಂದು ಆರಂಭವಾಗಲಿರೋ ಬಾಂಗ್ಲಾದೇಶ ವಿರುದ್ಧ ಸರಣಿಯೊಂದಿಗೆ ಮೈದಾನಕ್ಕಿಳಿಯಲಿದೆ. ಕೆಲ ದಿನಗಳಿಂದ ಮೈದಾನದಿಂದ ದೂರ ಉಳಿದಿದ್ದ ಆಟಗಾರರು ಮೈದಾನಕ್ಕೆ ಕಮ್ಬ್ಯಾಕ್ ಮಾಡ್ತಿದ್ದಾರೆ. ಸಿದ್ಧತೆಯ ಭಾಗವಾಗಿ ದುಲೀಪ್ ಟ್ರೋಫಿಯಲ್ಲಿ ಕೆಲವ್ರು ಆಡ್ತಿದ್ರೆ, ಅದ್ರಿಂದ ಹೊರಗುಳಿದಿರೋ ಆಟಗಾರರು ವೈಯಕ್ತಿಕ ಅಭ್ಯಾಸ ನಡೆಸ್ತಿದ್ದಾರೆ. ಈ ನಡುವೆ ಕೋಚ್ ಗಂಭೀರ್ ದೇವರ ಮೊರೆ ಹೋಗಿದ್ದಾರೆ.
ಇದನ್ನೂ ಓದಿ:ದುಲೀಪ್ ಟ್ರೋಫಿಯಲ್ಲಿ ಮುಷೀರ್ ಶತಕ ವೈಭವ; ಪಡಿಕ್ಕಲ್ ಹಿಂಗೆ ಆಡಿದ್ರೆ RCB ಕ್ಯಾರೇ ಮಾಡಲ್ಲ..!
ಕಾಮಾಕ್ಯ ದೇವಿ ಕಾಪಾಡಮ್ಮಾ
ಒಂದೆಡೆ ಆಟಗಾರರು ಮೈದಾನಕ್ಕೆ ವಾಪಾಸ್ಸಾಗ್ತಾ ಇದ್ರೆ, ಇನ್ನೊಂದೆಡೆ ಕೋಚ್ ಗೌತಮ್ ಗಂಭೀರ್ ದೇವರ ಮೊರೆ ಹೋಗಿದ್ದಾರೆ. ಸಪ್ಟೆಂಬರ್ 19ರಿಂದ ಟೀಮ್ ಇಂಡಿಯಾ ಸಾಲು ಸಾಲು ಸರಣಿಗಳಲ್ಲಿ ಬ್ಯುಸಿಯಾಗಲಿದೆ. ಅದಕ್ಕೂ ಮುನ್ನ ಅಸ್ಸಾಂನ ಗುವಾಹಟಿಯಲ್ಲಿರೋ ಪವಿತ್ರ ಸ್ಥಳವಾದ ಮಾ ಕಾಮಾಕ್ಯ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಒಳಿತಿಗಾಗಿ ಪ್ರಾರ್ಥಿಸಿದ್ದಾರೆ.
ಕೋಚ್ ಗೌತಮ್ ಗಂಭೀರ್ ಮುಂದಿದೆ ಅಗ್ನಿ ಪರೀಕ್ಷೆ
ಟೀಮ್ ಇಂಡಿಯಾ ಕೋಚ್ ಆದ ಮೊದಲ ಟಾಸ್ಕ್ನಲ್ಲಿ ಭರ್ಜರಿ ಗೆಲುವು, ಹೀನಾಯ ಸೋಲು ಎರಡನ್ನೂ ಕಂಡಿರುವ ಗೌತಮ್ ಗಂಭೀರ್ ಮುಂದೆ ಬಿಗ್ ಟಾಸ್ಕ್ ಇದೆ. ಬಾಂಗ್ಲಾ ಸರಣಿಯ ಬೆನ್ನಲ್ಲೇ, ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಿದೆ. ಆ ಬಳಿಕ ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾ ಪ್ರತಿಷ್ಟಿತ ಬಾರ್ಡರ್-ಗವಾಸ್ಕರ್ ಸರಣಿಯನ್ನಾಡಲಿದೆ. ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕ್ವಾಲಿಫೈ ದೃಷ್ಟಿಯಿಂದ ಗೆಲುವು ಅನಿವಾರ್ಯವಾಗಿದೆ. ಆ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಈ ಮಹತ್ವದ ಸರಣಿಗಳಿಗೂ ಮುನ್ನ ಯಶಸ್ಸಿಗಾಗಿ ಕಾಮಾಕ್ಯ ದೇವಿಗೆ ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ದುಲೀಪ್ ಟ್ರೋಫಿಯಲ್ಲಿ RCB ಸ್ಟಾರ್ ಬಿರುಗಾಳಿ; ಅಯ್ಯರ್ ಕನಸು ಭಗ್ನಗೊಳಸಿದ ಕನ್ನಡಿಗ ವೈಶಾಕ್
ಕಾಮಾಕ್ಯ ದೇವಿಯ ಪರಮ ಭಕ್ತ ಗೌತಮ್ ಗಂಭೀರ್
ಕೋಚ್ ಗೌತಮ್ ಗಂಭೀರ್ ಕಾಮಾಕ್ಯ ದೇವಿಯ ಪರಮ ಭಕ್ತ. ಆಗಾಗ ಈ ದೇವಸ್ಥಾನಕ್ಕೆ ಭೇಟಿ ನೀಡ್ತಾರೆ. ಪವಿತ್ರ ಸ್ಥಳಕ್ಕೆ ಪೂಜೆ ಸಲ್ಲಿಸಿ, ಪ್ರಾರ್ಥಿಸಿದ್ರೆ ಒಳಿತಾಗುತ್ತೆ ಅನ್ನೋದು ಗಂಭೀರ್ ನಂಬಿಕೆ. ಆ ನಂಬಿಕೆ ನಿಜವಾಗಿದೆ ಕೂಡ. ಈ ಹಿಂದೆ ಕೆಕೆಆರ್ ಮೆಂಟರ್ ಆಗಿದ್ದ ಗಂಭೀರ್ ಕಳೆದ 2024ರ ಐಪಿಎಲ್ಗೂ ಮುನ್ನ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥಿಸಿದ್ರು. ಸೀಸನ್ನ ಅಂತ್ಯದಲ್ಲಿ ಕೆಕೆಆರ್ ಚಾಂಪಿಯನ್ ಆಗಿ ಹೊರ ಹೊಮ್ಮಿತು.
51 ಶಕ್ತಿಪೀಠಗಳಲ್ಲಿ ಪ್ರಮುಖವಾದದ್ದು ಕಾಮಾಕ್ಯ ದೇವಸ್ಥಾನ
ನಮ್ಮ ದೇಶದಲ್ಲಿ ಹಲವು ದೇವ ಸನ್ನಿಧಿಗಳು ಅನನ್ಯತೆಯ ಕಾರಣದಿಂದಲೇ ಪ್ರಮುಖ ಧಾರ್ಮಿಕ ಕೇಂದ್ರಗಳಾಗಿ ರೂಪುಗೊಂಡಿವೆ. ಅಂತಹ ಅಪೂರ್ವ ತಾಣಗಳಲ್ಲಿ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಸ್ಥಾನ ಕೂಡಾ ಒಂದು. ಅಸ್ಸಾಂಗೆ ಭೇಟಿ ನೀಡಿದ ಪ್ರವಾಸಿಗರು ಈ ದೇವಸ್ಥಾನಕ್ಕೆ ಹೋಗದೇ ಬರೋದು ತೀರಾ ಕಡಿಮೆ. ಈ ಪವಿತ್ರ ಸ್ಥಳಕ್ಕಿರುವ ಮಹತ್ವ ಮತ್ತು ಶಕ್ತಿ ಅಂತಾದ್ದು.
ಕಾಮಾಕ್ಯ ದೇವಸ್ಥಾನ ದೇಶದ 51 ಶಕ್ತಿಪೀಠಗಳಲ್ಲಿ ಒಂದಾಗಿದೆ. ಈ ದೇವಸ್ಥಾನ ತಾಂತ್ರಿಕ ಚಟುವಟಿಕೆಗಳಿಂದಲೇ ಹೆಚ್ಚು ಹೆಸರುವಾಸಿಯಾಗಿದೆ. ಈ ಪವಿತ್ರ ಸ್ಥಳಕ್ಕೆ ಬೇಟಿ ನೀಡಿ, ಪೂಜೆ ಸಲ್ಲಿಸಿ ಭಕ್ತಿಯಿಂದ ಪ್ರಾರ್ಥಿಸಿದ್ರೆ, ದುಷ್ಟಶಕ್ತಿಗಳಿಂದ ಮುಕ್ತಿ ಸಿಗುತ್ತೆ ಅನ್ನೋದು ಭಕ್ತರ ನಂಬಿಕೆಯಾಗಿದೆ. ವಿಶೇಷವಾಗಿ ಮಾಟ ಮಂತ್ರದ ಬಾಧೆಯಿಂದ ಮುಕ್ತಿ ಪಡೆಯುವ ಸಲುವಾಗಿಯೇ ಸಾಕಷ್ಟು ಮಂದಿ ಇಲ್ಲಿಗೆ ಭೇಟಿ ನೀಡ್ತಾರೆ.
ಇದನ್ನೂ ಓದಿ:ಮಂಕಾದ ದರ್ಶನ್, ಸಹೋದರ ದಿನಕರ ಎದುರು ಬೇಸರ.. ತೋಡಿಕೊಂಡ ಅಳಲು ಏನು?
ಕೆಟ್ಟ ಕಣ್ಣುಗಳ ಪ್ರಭಾವವೋ, ದುರಾದೃಷ್ಟವೋ ಗೊತ್ತಿಲ್ಲ. ಕಳೆದ ಕೆಲ ವರ್ಷಗಳಿಂದ ಪ್ರಮುಖ ಸರಣಿಗಳಲ್ಲಿ ಟೀಮ್ ಇಂಡಿಯಾಗೆ ಅದೃಷ್ಟ ಕೈಕೊಟ್ಟ ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲೇ ಗಂಭೀಯ ದೇವಿಯ ಸನ್ನಿಧಿಗೆ ತೆರಳಿ ಪ್ರಾರ್ಥಿಸಿದ್ದಾರೆ ಅನ್ನೋದು ಅಭಿಮಾನಿಗಳ ಊಹೆ. ಅದೇನೆ ಇರಲಿ.. ಗಂಭೀರ್ ಪ್ರಾರ್ಥನೆ ಫಲಿಸಲಿ. ಮಾತೆಯ ಆಶೀರ್ವಾದದದಿಂದ ಟೀಮ್ ಇಂಡಿಯಾಗೆ ಒಳಿತಾಗಲಿ ಅನ್ನೋದು ಎಲ್ಲರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್