newsfirstkannada.com

ಸ್ಟಾರ್​​ ಆಟಗಾರರ ಮುಂದೆ ನಡೆಯಲಿಲ್ಲ ದ್ರಾವಿಡ್ ಆಟ.. ಕೊಚ್ ಸ್ಥಾನಕ್ಕೆ ಗುಡ್​ಬೈ ಹೇಳ್ತಾರಾ?

Share :

09-06-2023

  ಕೋಚ್​ ದ್ರಾವಿಡ್​ ಸಾಮರ್ಥ್ಯದ ಬಗ್ಗೆ ಸವಾಲ್

  ಸ್ಟಾರ್​ಗಿರಿಯ ಮುಂದೆ ಮಂಕಾದ್ರಾ ದ್ರಾವಿಡ್​?

  ಟೀಮ್​ ಸೆಲೆಕ್ಷನ್​ ವಿಚಾರದಲ್ಲಿ ದ್ರಾವಿಡ್​​ಗಿಲ್ಲ ಅಧಿಕಾರ​?

ಟೀಮ್​ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್​ರ ಸಾಮರ್ಥ್ಯದ ಬಗ್ಗೆ​​ ಜೋರು ಚರ್ಚೆ ನಡೀತಿದೆ. ಸ್ಟಾರ್​​ ಆಟಗಾರರ ಮುಂದೆ ದ್ರಾವಿಡ್​​ ಆಟ ನಡೆಯಲ್ಲ ಅನ್ನೋ ವಾದ ಬಹುತೇಕರದ್ದಾಗಿದೆ.

ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​ ಭರಾಟೆ ಜೋರಾಗಿದೆ. ಮೊದಲ 2 ದಿನದ ಆಟ ಅಂತ್ಯ ಕಂಡಿದ್ದು ಸೋಲು-ಗೆಲುವಿನ ಲೆಕ್ಕಾಚಾರಗಳು ಜೋರಾಗಿವೆ. ಇದರ ನಡುವೆಯೇ ಟೀಮ್​ ಇಂಡಿಯಾ ಹೆಡ್​ ಕೋಚ್​ ರಾಹುಲ್​ ದ್ರಾವಿಡ್​​ರ ಬಗ್ಗೆ ದೊಡ್ಡ ಡಿಬೇಟ್​​ ನಡೀತಿದೆ. ಲೆಜೆಂಡ್​​ ಆಟಗಾರನ ಸಾಮರ್ಥ್ಯವನ್ನೇ ಹಲವರು ಪ್ರಶ್ನೆ ಮಾಡ್ತಿದ್ದಾರೆ.

ಕೋಚ್​ ದ್ರಾವಿಡ್​ ಸಾಮರ್ಥ್ಯದ ಬಗ್ಗೆ ಸವಾಲ್
ರಾಹುಲ್​ ದ್ರಾವಿಡ್​​, ಕ್ರಿಕೆಟ್​ ಲೋಕ ಕಂಡ ಗ್ರೆಟೆಸ್ಟ್​ ಬ್ಯಾಟ್ಸ್​ಮನ್​. ವಿಶ್ವದ ಮೂಲೆ ಮೂಲೆ ರನ್​ಗಳಿಸಿ ಬೌಲರ್​​ಗಳ ನಿದ್ದೆಗೆಡಿಸಿರೋ ಸರದಾರ. ದ್ರಾವಿಡ್​​ ಬ್ಯಾಟಿಂಗ್​ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡುವಂತೇ ಇಲ್ಲ. ಬ್ಯಾಟ್ಸ್​ಮನ್​ ಆಗಿ ಯಶಸ್ಸಿನ ಉತ್ತುಂಗಕ್ಕೇರಿದ ದ್ರಾವಿಡ್​, ಜೂನಿಯರ್​​ ಲೆವೆಲ್​ನಲ್ಲಿ ಕೋಚ್​​ ಆಗಿಯೂ ಸಕ್ಸಸ್​ ಕಂಡರು. ಆದ್ರೆ ಈಗ ಟೀಮ್​ ಇಂಡಿಯಾ ಕೋಚ್​ ಆಗಿ ಸಕ್ಸಸ್​​ ಕಂಡರಾ ಅನ್ನೋ ಪ್ರಶ್ನೆ ಎದುರಾಗಿದೆ.

ಸ್ಟಾರ್​ಗಿರಿಯ ಮುಂದೆ ಮಂಕಾದ್ರಾ ದ್ರಾವಿಡ್​?
ಟೀಮ್​ ಇಂಡಿಯಾದಲ್ಲಿ ಇರೋ ಬಹುತೇಕ ಆಟಗಾರರು ಸ್ಟಾರ್ಸ್​​. ಇವ್ರ ಮುಂದೆಯೇ ದ್ರಾವಿಡ್​ ಮಂಕಾದ್ರಾ ಅನ್ನೋ ಪ್ರಶ್ನೆ ಈಗ ಹುಟ್ಟಿದೆ. ಅಂಡರ್​-19 ಕೋಚ್ ದ್ರಾವಿಡ್​​ಗೂ ಈಗಿರೋ ದ್ರಾವಿಡ್​ಗೂ ಸಿಕ್ಕಾಪಟ್ಟೆ ವ್ಯತ್ಯಾಸವಿದೆ ಅಂತಿದ್ದಾರೆ ಫ್ಯಾನ್ಸ್​. ಹೆಡ್​​ ಕೋಚ್​ ಅಂದ್ರೆ ಒಂದರ್ಥದಲ್ಲಿ ಹೆಡ್​ಮೇಷ್ಟ್ರು ಇದ್ದಂತೆ. ಹೀಗಾಗಿಯೇ ಈ ಸ್ಥಾನಕ್ಕೆ ದ್ರಾವಿಡ್​ ಬೆಸ್ಟ್​ ಆಯ್ಕೆ ಅಂತಾ ಎಲ್ರೂ ಭಾವಿಸಿದ್ರು. ಆದ್ರೆ ಆಗಿದ್ದೇ ಬೇರೆ!

ಪ್ಲೇಯಿಂಗ್​ ಇಲೆವೆನ್​ ಆಯ್ಕೆಯಲ್ಲಿ ನಾಯಕನಷ್ಟೇ, ಕೋಚ್​ಗೂ ಜವಾಬ್ದಾರಿಯಿರುತ್ತೆ. ಆದ್ರೆ ಈ ವಿಚಾರದಲ್ಲಿ ದ್ರಾವಿಡ್​ಗೆ ಅಧಿಕಾರವೇ ಇಲ್ಲ ಅನ್ನೋ ಪ್ರಶ್ನೆ ಎಲ್ಲರೂ ಕಾಡ್ತಿದೆ. ಇದಕ್ಕೆ ತಾಜಾ ಉದಾಹರಣೆ. ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ ಪಂದ್ಯ. ಈ ಪ್ರತಿಷ್ಠೆಯ ಕದನದಲ್ಲಿ ಅಶ್ವಿನ್​ರನ್ನು ಕಣಕ್ಕಿಳಿಸೋ ಇರಾದೆ ಕೋಚ್​ ದ್ರಾವಿಡ್​ದಾಗಿತ್ತು. ಆದ್ರೆ ಅದು ಸಾಧ್ಯವಾಗಲಿಲ್ಲ. ಕ್ಯಾಪ್ಟನ್​ ರೋಹಿತ್​ ನಿರ್ಧಾರದ ಮುಂದೆ ದ್ರಾವಿಡ್​​ ಹಿಂದೆ ಬಿದ್ರು.

ನಾಗ್ಪುರ ಟೆಸ್ಟ್​ನಲ್ಲೂ ಕೋಚ್​​ ವಿರುದ್ಧ ಕ್ಯಾಪ್ಟನ್​​​ಗೆ ಜಯ
ಈ ಹಿಂದೆ ಆಸ್ಟ್ರೇಲಿಯಾ ಭಾರತದ ಪ್ರವಾಸಕ್ಕೆ ಬಂದಾಗ್ಲೂ ಟೀಮ್​ ಸೆಲೆಕ್ಷನ್​ ದೊಡ್ಡ ಡಿಬೇಟ್​ ಆಗಿತ್ತು. ಸೂರ್ಯ ಕುಮಾರ್​ ಯಾದವ್​ VS ಶುಭ್​ಮನ್​ ಗಿಲ್​ ಇಬ್ಬರಲ್ಲಿ ಯಾರಿಗೆ ಚಾನ್ಸ್​ ನೀಡಬೇಕು ಅನ್ನೋದು ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಆಗ ತವರಿನ ಸೂರ್ಯ ಕುಮಾರ್​ ಬೆಂಬಲಕ್ಕೆ ರೋಹಿತ್​ ಶರ್ಮಾ ನಿಂತಿದ್ರು. ಇನ್ನೊಂದೆಡೆ ಶಿಷ್ಯ ಶುಭ್​ಮನ್​ ಗಿಲ್​ ಪರ ದ್ರಾವಿಡ್​ ಬ್ಯಾಟಿಂಗ್​ ಮಾಡ್ತಿದ್ರು. ಆದ್ರೆ ಕೊನೆಗೆ ಚಾನ್ಸ್​​ ಸಿಕ್ಕಿದ್ದು ಟೆಸ್ಟ್​ ಕ್ರಿಕಟ್​​​ಗೆ ಫಿಟ್​ ಆಗೋದೆ ಇಲ್ಲ ಅನ್ನೋ ಸೂರ್ಯ ಕುಮಾರ್​​ ಯಾದವ್​ಗೆ.

ಜೂನಿಯರ್​ ಕ್ರಿಕೆಟ್​ನಲ್ಲಿದ್ದಾಗ ದ್ರಾವಿಡ್​ ಬಾಸ್​
ಟೀಮ್​ ಇಂಡಿಯಾ ಕೋಚ್​​ ಆಗೋಕೂ ಮುನ್ನ NCA ಡೈರೆಕ್ಟರ್​ ಆಗಿದ್ದ ದ್ರಾವಿಡ್​, ಜೂನಿಯರ್​ ಲೆವೆಲ್​ನ ಕ್ರಿಕೆಟರ್​ಗಳನ್ನು ಟ್ರೈನ್​ ಮಾಡ್ತಿದ್ರು. ಆಗ ಕೋಚಿಂಗ್​ ಸ್ಟೈಲ್​ ಬೇರೆನೇ ಇತ್ತು. ಅಂಡರ್​-19 ವಿಶ್ವಕಪ್​ ಟೂರ್ನಿಯಲ್ಲೂ ಯಶಸ್ಸು ಸಾಧಿಸಿದ್ರು. ಈ ಕಾರಣದಿಂದಲೇ ದ್ರಾವಿಡ್​ ಟೀಮ್​ ಇಂಡಿಯಾದ​ ಕೋಚ್​ ಆಗ್ತಾರೆ ಅಂದಾಗ ಸಿಕ್ಕಾಪಟ್ಟೆ ಹೈಪ್​ ಕ್ರಿಯೇಟ್​ ಆಗಿತ್ತು. ಆದ್ರೆ ಟೀಮ್​ ಇಂಡಿಯಾ ಕೋಚ್​ ಆದ ಮೇಲೆ ಆಗಿದ್ದೇ ಬೇರೆ.

ಕೇವಲ ಕ್ಯಾಪ್ಟನ್​ ರೋಹಿತ್​ ಶರ್ಮಾ ವಿಚಾರದಲ್ಲಿ ಮಾತ್ರವಲ್ಲ. ಉಳಿದ ಸೀನಿಯರ್​ ಆಟಗಾರರ ವಿಚಾರದಲ್ಲೂ ದ್ರಾವಿಡ್​ ಖಡಕ್​ನೆಸ್​ ಮಾಯವಾಗಿದ್ದು ಕಂಡುಬಂದಿದೆ. ಅದರ ಜೊತೆಗೆ ಏಷ್ಯಾಕಪ್​ ಟೂರ್ನಿ, ಟಿ20 ವಿಶ್ವಕಪ್​ ಟೂರ್ನಿಯಂತಹ ಬಿಗ್​ ಟೂರ್ನಮೆಂಟ್​ಗಳ ಸೋಲುಗಳು ಕೂಡ ಕೋಚ್​​ ದ್ರಾವಿಡ್​ ಸಾಮರ್ಥ್ಯದ ಬಗ್ಗೆ ಪ್ರಶ್ನಿಸುವಂತೆ ಮಾಡಿವೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

ಸ್ಟಾರ್​​ ಆಟಗಾರರ ಮುಂದೆ ನಡೆಯಲಿಲ್ಲ ದ್ರಾವಿಡ್ ಆಟ.. ಕೊಚ್ ಸ್ಥಾನಕ್ಕೆ ಗುಡ್​ಬೈ ಹೇಳ್ತಾರಾ?

https://newsfirstlive.com/wp-content/uploads/2023/06/RAHUL_DRAVID-1.jpg

Load More