newsfirstkannada.com

ರಾಹುಲ್ ದ್ರಾವಿಡ್​ಗೆ ಬಿಸಿಸಿಐ ಗೇಟ್​ಪಾಸ್ ಕೊಡುತ್ತಾ? ಮುಂದಿನ ಕೋಚ್ ಯಾರು ಆಗಬಹುದು?

Share :

21-11-2023

    ವಿಶ್ವಕಪ್​​ನೊಂದಿಗೆ ಕೋಚ್​ ದ್ರಾವಿಡ್ ಒಪ್ಪಂದ ಅಂತ್ಯ

    BCCI ಪ್ಲಾನ್ ಏನು? ಯಾರು ನೂತನ ದ್ರೋಣಾಚಾರ್ಯ?

    ಭಾರತೀಯ ಕೋಚ್​ಗಳ​​​​​​ ಕಾರ್ಯವೈಖರಿ ಬಗ್ಗೆ ಅತೃಪ್ತಿ?

ಏಕದಿನ ವಿಶ್ವಕಪ್​​​ ಮುಕ್ತಾಯಗೊಂಡಿದೆ. ಟೀಮ್ ಇಂಡಿಯಾ ಹೆಡ್​ಕೋಚ್​​ ರಾಹುಲ್​​​​ ದ್ರಾವಿಡ್​​​​ ಒಪ್ಪಂದ ಅವಧಿ ಕೊನೆಗೊಂಡಿದೆ. ದಿ ವಾಲ್​​ರ ಮುಂದಿನ ನಡೆ ಏನು? ಮತ್ತೆ ಕೋಚ್​ ಹುದ್ದೆಯಲ್ಲಿ ಮುಂದುವರಿತಾರಾ? ಗುಡ್​ ಬೈ ಹೇಳ್ತಾರಾ? ಅಥವಾ ಬಿಸಿಸಿಐ, ದ್ರಾವಿಡ್​ಗೆ ಗೇಟ್​ಪಾಸ್​​​ ನೀಡುತ್ತಾ? ಒಂದು ವೇಳೆ ನೀಡಿದ್ರೆ ಮುಂದಿನ ಕೋಚ್​ ಯಾರಾಗ್ತಾರೆ? ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಏಕದಿನ ವಿಶ್ವಪ್​​​​ ಮುಗಿದ ಅಧ್ಯಾಯ. ಇದೀಗ ಟೀಮ್ ಇಂಡಿಯಾ ಹೊಸ ಅಸೈನ್​​ಮೆಂಟ್​​ಗೆ​​​ ಸಜ್ಜಾಗ್ತಿದೆ. ಬುಧವಾರದಿಂದ ಭಾರತ-ಆಸ್ಟ್ರೇಲಿಯಾ ಟಿ20 ಸರಣಿ ಆರಂಭಗೊಳ್ಳಲಿದೆ. ಯುವಸೈನ್ಯ ಆಸ್ಟ್ರೇಲಿಯಾ​​ ತಂಡವನ್ನ ಎದುರಿಸಲಿದ್ದು, ದ್ರಾವಿಡ್ ಅಲಭ್ಯತೆಯಲ್ಲಿ ವಿವಿಎಸ್​ ಲಕ್ಷ್ಮಣ್​​​ ಹೆಡ್​ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಹೆಡ್​ಕೋಚ್​​ ರಾಹುಲ್​ ದ್ರಾವಿಡ್​​ ಮುಂದಿನ ನಡೆ ಏನು..?

ಒನ್ಡೇ ವಿಶ್ವಕಪ್​​ ಮುಕ್ತಾಯದೊಂದಿಗೆ ಹೆಡ್​​ಕೋಚ್​ ರಾಹುಲ್​ ದ್ರಾವಿಡ್ ಒಪ್ಪಂದವೂ ಕೊನೆಗೊಂಡಿದೆ. ದ್ರಾವಿಡ್​ ನವೆಂಬರ್​​ 2021 ರಂದು ಹೆಡ್​​ಕೋಚ್ ಹುದ್ದೆಗೇರಿದ್ರು. ಎರಡು ವರ್ಷಗಳಲ್ಲಿ ಏಳು-ಬೀಳಿನ ಹಾದಿ ತುಳಿದ್ರು. ಇದೀಗ ಒಪ್ಪಂದ ಅಂತ್ಯವಾಗಿದ್ದು, 2ನೇ ಅವಧಿಗೆ ದ್ರಾವಿಡ್ ಕೋಚ್​ ಆಗಿ ಕಂಟಿನ್ಯೂ ಆಗ್ತಾರಾ? ಅಥವಾ ವಿಶ್ವಕಪ್ ಸೋಲಿನ ಹೊಣೆ ಹೊತ್ತು ಹುದ್ದೆ ತೊರೆಯುತ್ತಾರಾ ಅನ್ನೋ ಪ್ರಶ್ನೆ ಇದೀಗ ಉದ್ಭವಿಸಿದೆ. ಮುಂದಿನ ವರ್ಷ ಟಿ20 ವಿಶ್ವಕಪ್ ನಡೆಯಲಿದೆ. ದ್ರಾವಿಡ್ ಅವರೇ ಕೋಚ್ ಆಗಿ ಮುಂದುವರಿದ್ರೆ ತಂಡಕ್ಕೆ ಅನುಕೂಲ ಎಂದು ಒಂದು ವರ್ಗ ಹೇಳಿದ್ರೆ ಮತ್ತೊಂದು ವರ್ಗ ಇದನ್ನು ವಿರೋಧಿಸ್ತಿದೆ. ಆದರೆ ಈ ವಿಚಾರದಲ್ಲಿ ದ್ರಾವಿಡ್​ ಮಾತ್ರ ಸಸ್ಪೆನ್ಸ್ ಕಾಯ್ದುಕೊಂಡಿದ್ದಾರೆ.

ಪ್ರಾಮಾಣಿಕವಾಗಿ ಹೇಳುತ್ತೇನೆ ಅದರ ಬಗ್ಗೆ ಯೋಚಿಸಿಲ್ಲ. ವಿಶ್ವಕಪ್​​ ಟೂರ್ನಮೆಂಟ್​ ಮೇಲೆ ನಮ್ಮ ಪೂರ್ತಿ ಗಮನ ಕೇಂದ್ರಿಕರಿಸಿದ್ದೇವೆ. ಕೋಚ್​ ಹುದ್ದೆ ಬಗ್ಗೆ ಏನನ್ನೂ ಯೋಚಿಸಿಲ್ಲ. ಯಾವ ಪ್ಲಾನ್​​​​​ ಕೂಡ ಇಲ್ಲ. ಭವಿಷ್ಯದಲ್ಲಿ ಏನ್ ಆಗುತ್ತೆ ಅನ್ನೋದು ಗೊತ್ತಿಲ್ಲ-ರಾಹುಲ್​ ದ್ರಾವಿಡ್​​​, ಹೆಡ್​ ಕೋಚ್

ಇಂಡಿಯನ್ ಕೋಚ್​​​​​​ ಕಾರ್ಯವೈಖರಿ ಬಗ್ಗೆ ಅತೃಪ್ತಿ..?

ಎರಡು ವರ್ಷದಿಂದ ಕೋಚ್ ಆಗಿ ಕಾರ್ಯನಿರ್ವಹಿಸ್ತಿರೋ ರಾಹುಲ್​ ದ್ರಾವಿಡ್​​ ಮುಂದಿನ ನಡೆ ಏನು ಅನ್ನೋದು ನಿಗೂಢವಾಗಿದೆ. ಅವರು ಕೋಚ್​ ಹುದ್ದೆಯಲ್ಲಿ ಕಂಟಿನ್ಯೂ ಆಗ್ತಾರಾ? ಇಲ್ಲ ಕುಟುಂಬಕ್ಕೆ ಪ್ರಾಶಸ್ತ್ರ ನೀಡಿ ಹುದ್ದೆ ತೊರೆಯುತ್ತಾರಾ ಅನ್ನೋದಕ್ಕೆ ಕ್ಲಾರಿಟಿ ಸಿಕ್ಕಿಲ್ಲ. ಒಂದು ವೇಳೆ ದ್ರಾವಿಡ್​​​ ಮುಂದುವರಿಯಲು ಬಯಸಿದ್ರೆ, ಒಕೆ. ಇಲ್ಲದಿದ್ರೆ, ಬಿಸಿಸಿಐ ನಡೆ ಬಹುತೇಕ ಫಾರಿನ್ ಕೋಚ್​ಗಳತ್ತ.. ಯಾಕಂದ್ರೆ ಭಾರತೀಯ ಕೋಚ್​​ಗಳ ಕಾರ್ಯವೈಖರಿಗೆ ಬಿಸಿಸಿಐ ವಲಯದಲ್ಲಿ ಅಸಮಾಧಾನ ಇದೆ ಎಂದು ಹೇಳಲಾಗ್ತಿದೆ.

12 ವರ್ಷಗಳಿಂದ ಭಾರತ ತಂಡ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಫೇಲಾಗಿದೆ. ಇದರಿಂದ ಬಿಗ್​​​​ಬಾಸ್​ಗಳಲ್ಲಿ ಅಸಮಾಧಾನವಿದೆ. ಹೀಗಾಗಿ ಫಾರಿನ್ ಕೋಚ್ ನೇಮಕದ ಬಗ್ಗೆ ಆಸಕ್ತಿ ಹೆಚ್ಚಿದೆ. ಕಳೆದ 6 ತಿಂಗಳಿಂದ ಈ ಬಗ್ಗೆ ಚಿಂತನೆ ನಡೆದಿದೆ ಎಂಬುದು ಬಿಸಿಸಿಐ ಮೂಲಗಳ ಮಾಹಿತಿಯಾಗಿದೆ.

ಬಿಸಿಸಿಐಗೆ ವಿದೇಶಿ ಕೋಚ್​​ ಮೇಲೆ ಒಲವೇಕೆ..?

ಇಷ್ಟು ವರ್ಷಗಳ ಕೋಚ್​​ಗಳಲ್ಲಿ ಫಾರಿನರ್ಸ್​ ಹೆಚ್ಚು ಸಕ್ಸಸ್​ ಕಂಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಭಾರತ ತಂಡ ಐಸಿಸಿ ಟ್ರೋಫಿಗಳನ್ನ ಗೆದ್ದುಕೊಂಡಿದೆ. 2011ರ ಏಕದಿನ ವಿಶ್ವಕಪ್​​ನಲ್ಲಿ ಗ್ಯಾರಿ ಕರ್ಸ್ಟ​ನ್​​​​ ಭಾರತ ತಂಡದ ಹೆಡ್​​​ಕೋಚ್​ ​​ಆಗಿದ್ರು. ಅವರ ನೇತೃತ್ವದಲ್ಲಿ ಭಾರತ ತಂಡ 28 ವರ್ಷಗಳ ಬಳಿಕ ವಿಶ್ವಕಪ್ ಗೆದ್ದು ಹೊಸ ಇತಿಹಾಸ ಬರೆದಿತ್ತು. 2013 ರಲ್ಲಿ ಟಿಮ್ ಇಂಡಿಯಾ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನ ಗೆದ್ದಿದ್ದನ್ನ ಯಾರು ಮರೆಯಲು ಸಾಧ್ಯ ಹೇಳಿ ? ಈ ಹಿಸ್ಟಾರಿಕ್ ಟ್ರೋಫಿಯನ್ನ ಗೆಲ್ಲಿಸಿಕೊಟ್ಟಿದ್ದು ಅದೇ ಫಾರಿನ್ ಕೋಚ್​​​​. ಡಂಕನ್ ಫ್ಲೆಚರ್ ಮಾರ್ಗದರ್ಶನದಲ್ಲಿ ಭಾರತ ಟ್ರೋಫಿ ಜಯಿಸಿ ಮೆರೆದಾಡಿತ್ತು.

ವಿದೇಶಿ ಕೋಚ್​ಗಳ ಮಾರ್ಗದರ್ಶನದಲ್ಲಿ ಟೀಮ್​ ಇಂಡಿಯಾ ಐಸಿಸಿ ಟ್ರೋಫಿ ಜಯಿಸಿದೆ. ಹೀಗಾಗಿ ​ಫಾರಿನರ್ಸ್​ ಬಗ್ಗೆ ಬಿಸಿಸಿಐ ವಲಯದಲ್ಲಿ ಒಲವಿದೆ. ಮುಂದಿನ ನಿರ್ಧಾರ ರಾಹುಲ್​ ದ್ರಾವಿಡ್​ ಮೇಲೆ ನಿಂತಿದೆ. ದಿ ವಾಲ್​ ಏನು ನಿರ್ಧಾರ ತೆಗೆದುಕೊಳ್ತಾರೆ ಅನ್ನೋದ್ರ ಮೇಲೆ ಎಲ್ಲಾ ನಿರ್ಧಾರವಾಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರಾಹುಲ್ ದ್ರಾವಿಡ್​ಗೆ ಬಿಸಿಸಿಐ ಗೇಟ್​ಪಾಸ್ ಕೊಡುತ್ತಾ? ಮುಂದಿನ ಕೋಚ್ ಯಾರು ಆಗಬಹುದು?

https://newsfirstlive.com/wp-content/uploads/2023/11/RAHUL_DRAVID-1.jpg

Load More