newsfirstkannada.com

ಟೀಂ ಇಂಡಿಯಾದಲ್ಲಿ ಕಾಡ್ತಿದೆ ಸಮಸ್ಯೆಗಳ ಸರಮಾಲೆ.. ಈ ಟಾಪ್-5 ಬ್ಯಾಟ್ಸ್​ಮನ್​​​ಗಳೇ ಭಾರತಕ್ಕೆ ಆಧಾರ

Share :

16-08-2023

    ಬಿಟ್ಟು ಬಿಡದೆ ಕಾಡ್ತಿದೆ ಒಂದಿಲ್ಲೊಂದು ಸಮಸ್ಯೆಗಳು

    ವಿಂಡೀಸ್ ಟೂರ್​ನಲ್ಲಿ ವಿಕ್ನೇಸ್​ ಬಟಾಬಯಲು​

    ಬಾಲಗೊಂಚಿಗಳಿಗಿಲ್ಲ ಬ್ಯಾಟಿಂಗ್ ಮಾಡೋ ಸಾಮರ್ಥ್ಯ

ವೆಸ್ಟ್​ ಇಂಡೀಸ್ ಪ್ರವಾಸದಲ್ಲಿ ಟೀಮ್ ಇಂಡಿಯಾ, ಜಸ್ಟ್​ ಸೋಲಿನ ಮುಖಭಂಗ ಅನುಭವಿಸಿದ್ದು ಮಾತ್ರವಲ್ಲ. ಕೆಲ ವಿಕ್ನೇಸ್​​ಗಳೂ ಕೂಡ ಬಟಾಬಯಲಾಗಿದೆ. ಯುವ ಆಟಗಾರರ ಪಾಲಿಗೆ ಮಹತ್ವದ ಪ್ರವಾಸವಾಗಿದ್ದ ಈ ಪ್ರವಾಸ ನಿಜಕ್ಕೂ ಎಚ್ಚರಿಕೆಯ ಕರೆಗಂಟೆಯನ್ನೇ ನೀಡಿದೆ.

ವೆಸ್ಟ್​ ಇಂಡೀಸ್ ವಿರುದ್ಧದ ಟಿ20 ಸಿರೀಸ್​. ಅಕ್ಷರಶಃ ಯುವ ಆಟಗಾರರ ಪಾಲಿಗೆ ಭವಿಷ್ಯ ಸೃಷ್ಟಿಸುವ ಸರಣಿಯಾಗಿತ್ತು. ಈ ಒಂದೇ ಒಂದು ಸರಣಿಯಲ್ಲಿ ಅದ್ಬುತ ಪ್ರದರ್ಶನ ನೀಡಿದ್ರೆ ಸಾಕಿತ್ತು. ಯುವ ಆಟಗಾರರ ಕರಿಯರ್​ಗೆ ಉತ್ತಮ ಅಡಿಗಲ್ಲೇ ಆಗುತ್ತಿತ್ತು. ಆದ್ರೆ, ಈ ಲಕ್ಕಿ ಚಾನ್ಸ್​ ಎನ್​​ಕ್ಯಾಶ್​ ಮಾಡಿಕೊಂಡಿದ್ದು ಮಾತ್ರ ಒಂದೆರೆಡು ಮಂದಿ ಮಾತ್ರ. ಆದ್ರೆ, ಇದೇ ಸರಣಿ ಟೀಮ್ ಇಂಡಿಯಾಗೆ ಎಚ್ಚರಿಕೆ ಕರೆಗಂಟೆ ನೀಡಿದೆ. ಇದಕ್ಕೆ ಕಾರಣ ಮಿಷನ್-2024.

ಹೌದು! 2024ರ ಟಿ20 ವಿಶ್ವಕಪ್ ದೃಷ್ಟಿಯಿಂದ ಯುವ ಆಟಗಾರರನ್ನೇ ಪ್ರಯೋಗಿಸ್ತಿರುವ ಟೀಮ್ ಮ್ಯಾನೇಜ್​ಮೆಂಟ್​, ಬಲಿಷ್ಠ ತಂಡವನ್ನ ಕಟ್ಟೋಕೆ ಹೊರಟಿದೆ. ಆದರೆ ಆರಂಭದಲ್ಲೇ ಒಂದಿಲ್ಲೊಂದು ಸಮಸ್ಯೆಗಳು, ವಿಘ್ನಗಳು ಟೀಮ್ ಇಂಡಿಯಾಗೆ ಇನ್ನಿಲ್ಲದೆ ಕಾಡ್ತಿದೆ.

ಟಿ20 ವಿಶ್ವಕಪ್​​ ಮುನ್ನವೇ ಟೀಮ್ ಇಂಡಿಯಾಗೆ ತಲೆನೋವು!

2024ರ ಟಿ20 ವಿಶ್ವಕಪ್​ ಟೂರ್ನಿಗೆ ಒಂದೇ ಒಂದು ವರ್ಷ ಇಲ್ಲ. ಆಗಲೇ ಟೀಮ್ ಇಂಡಿಯಾಗೆ ಇನ್ನಿಲ್ಲದ ಸಮಸ್ಯೆಗಳು ಎದುರಾಗಿದೆ. ಪರಿಹಾರ ಸಿಗದ ಹಲವು ಪ್ರಶ್ನೆಗಳೂ ಹೆಡ್ ಕೋಚ್ ರಾಹುಲ್ ದ್ರಾವಿಡ್​ ಮುಂದೆ ತಲೆ ಎತ್ತಿವೆ.

ಯೆಸ್​..! 2024ರ ಟಿ20 ವಿಶ್ವಕಪ್​ ದೃಷ್ಟಿಯಿಂದ ಯಂಗ್ ಇಂಡಿಯಾ ಕಟ್ಟಲು ಬಿಸಿಸಿಐ ಹೊರಟಿದೆ. ಆದ್ರೆ, ಉತ್ತಮ ಅಡಿಗಲ್ಲು ಹಾಕುತ್ತಿರುವಾಗಲೇ ಪದೇ ಪದೇ ಎಡವಿ ಬೀಳ್ತಿದೆ. ಬ್ಯಾಟಿಂಗ್​ನಲ್ಲಿ ಟಾಪ್ ಆರ್ಡರ್ ಹಾಗೂ ಮಿಡಲ್ ಆರ್ಡರ್​ ಪರವಾಗಿಲ್ಲ ಎನಿಸಿದ್ರೂ, ಲೊವರ್​ ಡೌನ್​ ಬ್ಯಾಟಿಂಗ್​ ಭಾರೀ ಹಿನ್ನಡೆಯಾಗಿದೆ.

ವಿಂಡೀಸ್ ಟೂರ್​ನಲ್ಲಿ ಬಟಾಬಯಲಾಯ್ತು ಬ್ಯಾಟಿಂಗ್ ಡೆಪ್ತ್​..!

ಟಿ20 ಫಾರ್ಮೆಟ್​ನಲ್ಲಿ ಬ್ಯಾಟಿಂಗ್ ಡೆಪ್ತ್ ಅನ್ನೋದು ಇಂಪಾರ್ಟೆಂಟ್​​​ ರೋಲ್ ಪ್ಲೇ ಮಾಡುತ್ತೆ. ಅದರಲ್ಲೂ ಬಾಲಗೋಚಿಗಳು ಬೌಲಿಂಗ್ ಜೊತೆಗೆ ಬ್ಯಾಟ್ ಬೀಸಿ ಎಳೆಷ್ಟು ರನ್​ ಕಲೆಹಾಕಿದ್ರೆ. ಫಲಿತಾಂಶವೇ ಬದಲಾಗುತ್ತೆ. ಆದರೆ ಈ ವಿಚಾರದಲ್ಲಿ ಟೀಮ್ ಇಂಡಿಯಾ ಕಂಪ್ಲೀಟ್ ಫೇಲ್ಯೂರ್ ಆಗಿದೆ. ಇದು ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯಲ್ಲಿ ಆಡಿದ ಯಂಗ್​​ ಟೀಮ್ ಸಾಕ್ಷಿ. ಈ ಬಗ್ಗೆ ಸ್ವತಃ ರಾಹುಲ್ ದ್ರಾವಿಡ್ ಬೆಳಕು ಚೆಲ್ಲಿದ್ದಾರೆ.

ಹೌದು! ರಾಹುಲ್ ದ್ರಾವಿಡ್ ಹೇಳಿದಂತೆ ವಿಂಡೀಸ್​​ನ 11ನೇ ಬ್ಯಾಟರ್​ ಕೂಡ ಅದ್ಬುತ ಬ್ಯಾಟಿಂಗ್ ಮಾಡಿ ಸಿಕ್ಸರ್ ಸಿಡಿಸಬಲ್ಲ. ಆದರೆ, ಈ ವಿಚಾರದಲ್ಲಿ ಟೀಮ್ ಇಂಡಿಯಾ ಕಂಪ್ಲೀಟ್ ಉಲ್ಟಾ.. ಯಾಕಂದ್ರೆ, ಟೀಮ್ ಇಂಡಿಯಾದ ಟಾಪ್​-5 ಬ್ಯಾಟ್ಸ್​ಮನ್​​​ಗಳು ಬಿಟ್ರೆ. ಉಳಿದವರಿಂದ ರನ್​ ಬರಲೇ ಇಲ್ಲ. ಒಂದು ಮಾತಲ್ಲಿ ಹೇಳೋದಾದ್ರೆ, ಈ ಬಾಲಗೋಚಿಗಳಿಗೆ ಕನಿಷ್ಠ ಪಕ್ಷ ಒಂದಿಷ್ಟು ಬಾಲ್ ಫೇಸ್ ಮಾಡೋ ಕೆಪಾಸಿಟಿಯೂ ಇಲ್ಲ.

ಬೌಲಿಂಗ್​ಗೆ ಮಾತ್ರ ಸಿಮೀತ..!

ಕುಲ್​ದೀಪ್​ – ಬ್ಯಾಟಿಂಗ್ ಇಲ್ಲ
ಆರ್ಷ್​ದೀಪ್​ – ಬ್ಯಾಟಿಂಗ್ ಇಲ್ಲ
ಚಹಲ್​ – ಬ್ಯಾಟಿಂಗ್ ಇಲ್ಲ
ಮುಖೇಶ್​ – ಬ್ಯಾಟಿಂಗ್ ಇಲ್ಲ

ಹೌದು! ಪ್ರಮುಖವಾಗಿ ಹೇಳೋದಾದ್ರೆ, ಕುಲ್​ದೀಪ್ ಯಾದವ್, ವೇಗಿ ಅರ್ಷ್​ದೀಪ್ ಸಿಂಗ್​​ಗೆ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಇಲ್ಲ. ಇವರ ಹೊರತಾಗಿ ಯಜುವೇಂದ್ರ ಚಹಲ್, ಮುಖೇಷ್ ಕುಮಾರ್ ಒನ್ ಟು ಒನ್ ಸಿಂಗಲ್ ತೆಗೆಯುವಷ್ಟು ಸಾಮಾರ್ಥ್ಯವೂ ಇರಲಿಲ್ಲ.

​​ಜಸ್ಟ್​ ಬೌಲಿಂಗ್​​​​ಗೆ ಮಾತ್ರವೇ ಸಿಮೀತವಾಗಿರೋ ಇವರನ್ನ ನಂಬಿಕೊಂಡ್ರೆ, ಟೀಮ್ ಇಂಡಿಯಾ ಕಥೆ ನಿಜಕ್ಕೂ ಹರೋಹರ.

6-7 ಕನ್ಸಿಸ್ಟೆನ್ಸಿ ಇಲ್ಲ.. ಅಕ್ಷರ್​​-ಹಾರ್ದಿಕ್​ ನಂಬೋಕಾಗಲ್ಲ..!

YES! 6 ಆ್ಯಂಡ್ 7 ಸ್ಲಾಟ್.. ಈ ಸ್ಲಾಟ್​ ಪಂದ್ಯದ ಗತಿಯನ್ನ ಬದಲಿಸುವ ಸ್ಲಾಟ್.. ಆದರೆ, ಈ ಸ್ಲಾಟ್​ನಲ್ಲಿ ಬ್ಯಾಟ್ ಬೀಸ್ತಿರುವ ಆಟಗಾರರಿಗೆ ಕನ್ಸಿಸ್ಟನ್ಸಿ ಅನ್ನೋದೆ ಗೊತ್ತಿಲ್ಲ. ಹಾರ್ದಿಕ್ ಪಾಂಡ್ಯ ಬಂದಷ್ಟೇ ಬೇಗ ವಿಕೆಟ್ ಒಪ್ಪಿಸಿ ಹೊರ ನಡೆದ್ರೆ. ಅಕ್ಷರ್​ ಪಟೇಲ್ ನಾನೇನು ಕಡಿಮೆ ಎಂಬಂತೆ ಕ್ಷಣ ಮಾತ್ರದಲ್ಲೇ ವಿಕೆಟ್ ಒಪ್ಪಿಸ್ತಾರೆ. ಹೀಗಾಗಿ ಇವರನ್ನ ನಂಬೋದು ಹಗ್ಗದ ಮೇಲಿನ ನಡಿಗೆಯೇ ಆಗಿದೆ.

ಲೋವರ್ ಆರ್ಡರ್​ಗೆ ಮತ್ಯಾರು ಪರ್ಯಾಯ..?

ಸದ್ಯ ಟೀಮ್ ಇಂಡಿಯಾಗೆ ಕಾಡ್ತಿರುವ ಪ್ರಶ್ನೆಯೇ ಲೋವರ್ ಆರ್ಡರ್​ಗೆ ಪರ್ಯಾಯ ಯಾರು ಅನ್ನೋದು ಆಗಿದೆ. ಆದರೆ, ಇದಕ್ಕೆ ಸದ್ಯ ಕಾಣ್ತಿರುವ ಉತ್ತರ ಆಲ್​ರೌಂಡರ್​ಗಳಾದ ವೆಂಕಟೇಶ್ ಅಯ್ಯರ್, ಶಿವಂ ದುಬೆ, ವಾಷಿಗ್ಟನ್ ಸುಂದರ್​… ಬ್ಯಾಟಿಂಗ್​ ಜೊತೆ ಜೊತೆಗೆ ಬೌಲಿಂಗ್​ನಲ್ಲೂ ಕಮಾಲ್ ಮಾಡುವ ಇವರು, ಟಿ20ಯ ಗೇಮ್​ ಚೇಂಜರ್​ಗಳು ಅನ್ನೋದು ಮರೆಯುವಂತಿಲ್ಲ. ಹೀಗಾಗಿ ವಿಶ್ವಕಪ್​​ ದೃಷ್ಟಿಯಿಂದ ಈ ತ್ರಿವಳಿಗಳನ್ನ ತಂಡಕ್ಕೆ ಕರೆತರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೀಂ ಇಂಡಿಯಾದಲ್ಲಿ ಕಾಡ್ತಿದೆ ಸಮಸ್ಯೆಗಳ ಸರಮಾಲೆ.. ಈ ಟಾಪ್-5 ಬ್ಯಾಟ್ಸ್​ಮನ್​​​ಗಳೇ ಭಾರತಕ್ಕೆ ಆಧಾರ

https://newsfirstlive.com/wp-content/uploads/2023/08/Team-India-2.jpg

Load More