newsfirstkannada.com

ಬೊಂಬಾಟ್​ ಬೌಲಿಂಗ್​ಗೆ ಜಯದ ಮೆಟ್ಟಿಲೇರುತ್ತಿರುವ ಟೀಂ ಇಂಡಿಯಾ.. ವಿಕೆಟ್​ ಕೀಳೋದ್ರಲ್ಲಿ ನಮ್ಮವರು ಮೇಲುಗೈ

Share :

07-11-2023

    ಟೀಮ್​ ಇಂಡಿಯಾದ ಮುಂದೆ ಎಲ್ಲರೂ ಡಮ್ಮಿ

    ಘಟಾನುಘಟಿಗಳಿಗೂ ಶಾಕ್​ ಕೊಟ್ಟ ಬೌಲರ್ಸ್​

    ಬೌಲಿಂಗ್​ನಿಂದಲೇ ಭಾರತಕ್ಕೆ ಸಿಗ್ತಿದೆ ಯಶಸ್ಸು

ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ಕೆ.ಎಲ್​ ರಾಹುಲ್​, ಶುಭ್​ಮನ್​ ಗಿಲ್​ ಹೀಗೆ ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಒಂದೊಂದು ಗೆಲುವು ಕಂಡಾಗಲೂ ಒಬ್ಬೊಬ್ಬ ಬ್ಯಾಟ್ಸ್​​ಮನ್​ಗಳ ಹವಾ ಜೋರಾಗ್ತಿದೆ. ಆದರೆ, ಬ್ಯಾಟಿಂಗ್​ ಅಬ್ಬರದಲ್ಲಿ ಬೌಲಿಂಗ್​ ಯುನಿಟ್​ನ ಮರೆಯೋಕೆ ಆಗುತ್ತಾ.? ಬೊಂಬಾಟ್​ ಬೌಲಿಂಗ್​ ಮಾಡದೇ ಇದ್ದಿದ್ರೆ, ರೋಹಿತ್​ ಪಡೆ ಸಕ್ಸಸ್​ ಕಾಣೋಕೆ ಸಾಧ್ಯವಿತ್ತಾ..? ನೋ ವೇ ಚಾನ್ಸೇ ಇಲ್ಲ.

ಬೌಲಿಂಗ್​ ವಿಭಾಗವೇ ಯಶಸ್ಸಿನ ಗುಟ್ಟು.!

ಈ ಟೂರ್ನಿಯಲ್ಲಿ ಬಲಿಷ್ಠ ತಂಡಗಳಿಗೆ ಟೀಮ್​ ಇಂಡಿಯಾ ಮಣ್ಣು ಮುಕ್ಕಿಸ್ತಿದೆ ಅಂದ್ರೆ ಅದಕ್ಕೆ ಕಾರಣ ನಮ್ಮ ಬೌಲಿಂಗ್​ ಯುನಿಟ್​.! ನಮ್ಮ ಹೆಮ್ಮೆಯ ಬೌಲರ್ಸ್​​ ಬೌಲಿಂಗ್​ ಮಾಡ್ತಿರೋ ರೀತಿಗೆ ಎಂತವರೂ ಸಲಾಂ ಹೇಳಬೇಕು. ಹಂಗಿದೆ ಕಣ್ರಿ ಪರ್ಫಾಮೆನ್ಸ್​.! ಇನ್​​ಫ್ಯಾಕ್ಟ್​,​ ರೋಹಿತ್​ ಪಡೆಯ ಸಕ್ಸಸ್​ ಹಿಂದಿನ ಬಿಗ್​ ರೀಸನ್​ ನಮ್ಮ ಬೌಲರ್ಸೇ.!

83 ರನ್​ಗಳಿಗೆ ಗಂಟುಮೂಟೆ ಕಟ್ಟಿದ ಆಫ್ರಿಕನ್ಸ್​.!

ಈ ಬಾರಿ ಸೌತ್​ ಆಫ್ರಿಕನ್ ಬ್ಯಾಟ್ಸ್​ಮನ್​ಗಳು ವಿಶ್ವಕಪ್​ ಅಕ್ಷರಶಃ ದರ್ಬಾರ್​ ನಡೆಸ್ತಿದ್ದಾರೆ. ಸೆಂಚುರಿ ಸ್ಟಾರ್​​ಗಳ ದಂಡೇ ತಂಡದಲ್ಲಿದೆ. ಆದರೆ, ಟೀಮ್​ ಇಂಡಿಯಾ ಬೌಲರ್ಸ್​ ಎದುರು ಅವರ ಆಟವೇ ನಡೀಲಿಲ್ಲ. ಕೇವಲ 83 ರನ್​ಗಳಿಗೆ​ ಆಫ್ರಿಕನ್ಸ್​ ಗಂಟುಮೂಟೆ ಕಟ್ಟೇ ಬಿಟ್ರು.

55 ರನ್​ಗಳಿಗೆ ಲಂಕನ್​​ ಲಯನ್ಸ್​ ಉಡೀಸ್​.!

ಬೆಂಕಿ-ಬಿರುಗಾಳಿಯಂತೆ ಬೌಲಿಂಗ್​ ಮಾಡ್ತಿರೋ ಟೀಮ್​ ಇಂಡಿಯಾದ ಮುಂದೆ ಶ್ರೀಲಂಕಾ ತಂಡ ನಿಲ್ಲೋಕಾಗುತ್ತಾ..? 19.4 ಓವರ್​​, 55 ರನ್​, ಅಷ್ಟೇ ನಮ್ಮ ಬೌಲರ್ಸ್​​ ಲಂಕನ್​ ಲಯನ್ಸ್​ ಬೇಟೆಯಾಡಿಬಿಟ್ರು.

129 ರನ್​, ಇಂಗ್ಲೆಂಡ್​ ಖೇಲ್​ ಖತಃ..!

ಇಂಗ್ಲೆಂಡ್​ ಕ್ರಿಕೆಟ್​ ತಂಡದ ಬ್ಯಾಟಿಂಗ್​ ಲೈನ್​ಅಪ್​ನಲ್ಲಿ ಘಟಾನುಘಟಿಗಳ ದಂಡೇ ಇದೆ. ಎಲ್ರೂ ಸ್ಟಾರ್​ಗಳೇ. ಆದರೆ, ಟೀಮ್​ ಇಂಡಿಯಾ ಬೌಲರ್ಸ್​​ಗೆ ಇವರ್ಯಾರೂ ಲೆಕ್ಕಕ್ಕೇ ಇಲ್ಲ. 129 ರನ್​ಗಳಿಗೆ ಆಂಗ್ಲರ ಕಥೆ ಮುಗಿಸಿದ್ರು ನಮ್ಮ ಬೌಲರ್ಸ್​​.

ನಮೋ ಮೈದಾನದಲ್ಲಿ ಪತರುಗುಟ್ಟಿದ ಪಾಕ್​.!

ಇಂಡೋ – ಪಾಕ್​ ಫೈಟ್​​ ಅಂದ್ರೇನೆ ಪ್ರೆಶರ್​​. ಅದರಲ್ಲೂ ಭಾರತದಲ್ಲಿ ಪಂದ್ಯ ನಡೆಯುತ್ತೆ ಅಂದ್ರೆ ಆಟಗಾರರು ಎಷ್ಟು ನರ್ವಸ್​ ಆಗಿರಬೇಡ. ಆದರೆ, ಟೀಮ್​ ಇಂಡಿಯಾ ಬೌಲರ್ಸ್​ ಪ್ರೆಶರ್​ ಡೊಂಟ್​ಕೇರ್​​ ಅಂದೇ ಬಿಟ್ರು. ಕೇವಲ 191 ರನ್​​ ಪಾಕ್​ ಪಡೆ ಉಡೀಸ್​ ಆಗಿ ಬಿಡ್ತು.

199 ರನ್​ಗೆ ಬಲಿಷ್ಟ ಆಸಿಸ್​ ಉಡೀಸ್​.!

ವಿಶ್ವಕಪ್​ನ ಮೊದಲ ಪಂದ್ಯದಲ್ಲೇ ನಮ್ಮ ಬೌಲರ್ಸ್​ ತಮ್ಮ ತಾಕತ್ತನ್ನ ನಿರೂಪಿಸಿದ್ರು. ಟ್ರೋಫಿ ಗೆಲ್ಲೋ ಹಾಟ್​ ಫೇವರಿಟ್​ ಅನಿಸಿಕೊಂಡಿದ್ದ ಆಸ್ಟ್ರೇಲಿಯಾ ಪಡೆ ಬ್ಯಾಟ್ಸ್​​ಮನ್​ಗಳು ಜಸ್ಟ್​ 199 ರನ್​ಗಳಿಗೆ ನಮ್ಮ ಎದುರು ಮಂಡಿಯೂರಿದ್ರು.

ಈ 5 ಪಂದ್ಯ ಮಾತ್ರವಲ್ಲ, ಉಳಿದ 3 ಪಂದ್ಯಗಳಲ್ಲೂ ಭಾರತೀಯ ಬೌಲರ್ಸ್​ ದರ್ಬಾರ್​​ ನಡೆಸಿದ್ದಾರೆ. ಒಟ್ಟಿನಲ್ಲಿ ಟೀಮ್​ ಇಂಡಿಯಾ ಬೌಲಿಂಗ್​ ಅಟ್ಯಾಕ್​ ಅಲ್ಟಿಮೆಟ್​ ಆಗಿದೆ. ಈ ಫಾರ್ಮ್​ ಕಂಟಿನ್ಯೂ ಆದ್ರೆ, ಯಾರಿಂದಲೂ ಟ್ರೋಫಿಯನ್ನ ನಮ್ಮಿಂದ ದೂರ ಮಾಡೋಕೆ ಸಾಧ್ಯಾನೆ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಬೊಂಬಾಟ್​ ಬೌಲಿಂಗ್​ಗೆ ಜಯದ ಮೆಟ್ಟಿಲೇರುತ್ತಿರುವ ಟೀಂ ಇಂಡಿಯಾ.. ವಿಕೆಟ್​ ಕೀಳೋದ್ರಲ್ಲಿ ನಮ್ಮವರು ಮೇಲುಗೈ

https://newsfirstlive.com/wp-content/uploads/2023/11/Team-India-Bowlers.jpg

Load More