ರೋಹಿತ್-ಕೊಹ್ಲಿ ಅಲ್ಲ.. ಜಡೇನಾ ಇಂಪ್ಯಾಕ್ಟ್ ಪ್ಲೇಯರ್
ರನ್ಭೂಮಿಯಲ್ಲಿ ತ್ರಿಡೈಮನ್ಶಿಯಲ್ ಆಟಗಾರನ 3D ಆಟ
ಫೀಲ್ಡಿಂಗ್ನಲ್ಲೂ ವಿಶ್ವದ ನಂಬರ್.1 ಫೀಲ್ಡರ್ ಹವಾ..!
ಏಕದಿನ ವಿಶ್ವಕಪ್ನಲ್ಲಿ ಸದ್ಯ ಟೀಮ್ ಇಂಡಿಯಾದ್ದೇ ಹವಾ. ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿರುವ ಟೀಮ್ ಇಂಡಿಯಾದ ಸಕ್ಸಸ್ ಸಿಕ್ರೇಟ್ ಏನು ಅಂದ್ರೆ, ಬಹುತೇಕರು ರೋಹಿತ್, ವಿರಾಟ್ ಕೊಹ್ಲಿ ಹೆಸರು ಹೇಳಬಹುದು. ಇನ್ನು ಕೆಲವರು ಟೀಮ್ ಆಡ್ತಿರೋ ಆಟ, ಭೌಲರ್ಸ್ ಪ್ರದರ್ಶನ ಅನ್ನೋ ಉತ್ತರ ನೀಡಬಹುದು. ಇದೆಲ್ಲದರ ಜೊತೆಗೆ ಅಸಲಿ ಇಂಪ್ಯಾಕ್ಟ್ ಪ್ಲೇಯರ್ ಮತ್ತೊಬ್ಬರಿದ್ದಾರೆ. ಅವರು ಯಾರು ಗೊತ್ತಾ?.
ಟೀಮ್ ಇಂಡಿಯಾ ವಿಶ್ವಕಪ್ನಲ್ಲಿ ಗೆಲುವಿನ ದಂಡೆಯಾತ್ರೆ ನಡೆಸ್ತಿದೆ. ಪರ್ಫಾಮೆನ್ಸ್ ವಿಷ್ಯದಲ್ಲಂತೂ ತಂಡದಲ್ಲೇ ನಾನಾ ನೀನಾ ಅನ್ನೋ ರೇಂಜ್ಗೆ ಫೈಟ್ ನಡೀತಿದೆ. ರನ್ಗಳಿಕೆಯಲ್ಲಿ, ವಿಕೆಟ್ ಬೇಟೆಯಲ್ಲಿ, ಕ್ಯಾಂಚಿಂಗ್ ವಿಷ್ಯದಲ್ಲೂ ಪೈಪೋಟಿ ಇದ್ದೇ ಇದೆ. ಆದರೆ, ಈ ಮೂರರಲ್ಲೂ ಟೀಮ್ ಇಂಡಿಯಾಗೆ ನೆರವಾಗುತ್ತಾ, ಗೆಲುವಿನಲ್ಲಿ ಮಹತ್ವದ ಪಾತ್ರವಹಿಸ್ತಿರುವ ಇಂಪ್ಯಾಕ್ಟ್ ಪ್ಲೇಯರ್ ಮಾತ್ರ ಒಬ್ಬರೆ. ಅದೇ ಒನ್ ಆ್ಯಂಡ್ ಒನ್ಲಿ ರವೀಂದ್ರ ಜಡೇಜಾ.
ಬ್ಯಾಟಿಂಗ್ನಲ್ಲಿ ರವೀಂದ್ರ ಜಡೇಜಾ ಅದ್ಭುತ..!
ಬ್ಯಾಟಿಂಗ್ನಲ್ಲಿ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರನ್ವಾರ್ ನಡೆಸ್ತಿದ್ದಾರೆ ನಿಜ. ಆದರೆ, ಡೆತ್ ಓವರ್ಗಳಲ್ಲಿ ಟೀಮ್ ಇಂಡಿಯಾದ ಶಕ್ತಿಯಾಗಿರೋದು ಮಾತ್ರ ರವೀಂದ್ರ ಜಡೇಜಾ. ನ್ಯೂಜಿಲೆಂಡ್ ಎದುರಿನ ಅಜೇಯ 39 ರನ್ಗಳ ಇನ್ನಿಂಗ್ಸ್, ಲಂಕಾ ಎದುರಿನ 35 ರನ್ಗಳ ಆಟ, ಸೌತ್ ಆಫ್ರಿಕನ್ಸ್ ಎದುರಿನ ಸ್ಪೋಟಕ 29 ರನ್ಗಳ ಅಜೇಯ ಇನ್ನಿಂಗ್ಸ್. ಇವೆಲ್ಲವೂ ಜಡ್ಡು ಬ್ಯಾಟಿಂಗ್ ಶಕ್ತಿಗೆ ಸಾಕ್ಷಿಯಾಗಿವೆ.
ಬೌಲಿಂಗ್ನಲ್ಲೂ ಜಡೇಜಾದ್ದೇ ಕ್ರೂಶಿಯಲ್ ರೋಲ್..!
ಈ ಬಾರಿ ವೇಗಿಗಳ ದರ್ಬಾರ್ ನಡೆವೆಯೂ ಈ ವಿಶ್ವಕಪ್ನಲ್ಲಿ ರವೀಂದ್ರ ಜಡೇಜಾರ ಬೌಲಿಂಗ್ ಪರ್ಫಾಮೆನ್ಸ್ ಭರ್ಜರಿಯಾಗಿದೆ. ಮಿಡಲ್ ಓವರ್ಗಳಲ್ಲಿ ಇಂಪ್ಯಾಕ್ಟ್ಫುಲ್ ಪರ್ಫಾಮೆನ್ಸ್ ಮೂಲಕ ಗೆಲುವಿಗೆ ನಾಂದಿ ಹಾಡ್ತಿರೋದೆ ಜಡೇಜಾ. ಎದುರಾಳಿಗಳ ರನ್ಗಳಿಕೆಗೆ ಬ್ರೇಕ್ ಹಾಕ್ತಿರೋ ಜಡೇಜಾ, ಕ್ರೂಶಿಯಲ್ ಟೈಮ್ನಲ್ಲಿ ವಿಕೆಟ್ ಬೇಟೆಯಾಡ್ತಿದ್ದಾರೆ.. ಇದು ಟೀಮ್ ಇಂಡಿಯಾಗೆ ಬಿಗ್ ಅಡ್ವಾಂಟೇಜ್ ಆಗ್ತಿದೆ.
ವಿಶ್ವಕಪ್ನಲ್ಲಿ ಜಡೇಜಾ ಬೌಲಿಂಗ್
ಪಂದ್ಯ 08
ಓವರ್ 64.3
ವಿಕೆಟ್ 14
ಏಕಾನಮಿ 3.76
ಪ್ರಸಕ್ತ ವಿಶ್ವಕಪ್ನಲ್ಲಿ 8 ಪಂದ್ಯಗಳಿಂದ 64.3 ಓವರ್ ಬೌಲಿಂಗ್ ಮಾಡಿರೋ ಜಡೇಜಾ, 14 ವಿಕೆಟ್ ಉರುಳಿಸಿದ್ದಾರೆ. 3.76ರ ಏಕಾನಮಿಯಲ್ಲಿ ರನ್ ನೀಡಿದ್ದಾರೆ. ಇದ್ರ ಜೊತೆಗೆ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ 3ನೇ ಬೌಲರ್ ಕೂಡ ಆಗಿದ್ದಾರೆ.
ಫೀಲ್ಡಿಂಗ್ನಲ್ಲೂ ಜಡೇಜಾ ಜಬರ್ದಸ್ತ್ ಪರ್ಫಾಮೆನ್ಸ್.!
ಸದ್ಯ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಹೆಚ್ಚು ಸದ್ದು ಮಾಡಿರೋದು ಫೀಲ್ಡಿಂಗ್ನಿಂದ. ಆನ್ಫೀಲ್ಡ್ನಲ್ಲಿ ನೆಕ್ಟ್ ಲೆವೆಲ್ ಫೀಲ್ಡಿಂಗ್ ಮಾಡ್ತಿದೆ. ಫೀಲ್ಡಿಂಗ್ ಕೈಚಳಕದಿಂದಲೇ ಪಂದ್ಯಗಳನ್ನು ಗೆಲ್ತಿದೆ ಅಂದ್ರೆ ತಪ್ಪಿಲ್ಲ. ಈ ವಿಚಾರದಲ್ಲಿ ಎಲ್ಲರಿಗಿಂತ ಅತಿ ಹೆಚ್ಚು ಪರಿಣಾಮಕಾರಿಯಾಗಿರೋದು ಜಡೇಜಾ. ಅದ್ಭುತ ಫೀಲ್ಡಿಂಗ್ನಿಂದ ರನ್ ಸೇವ್ ಮಾಡ್ತಿರೋ ಜಡ್ಡು, 4 ಮನೋಮೋಹಕ ಕ್ಯಾಚ್ ಹಿಡಿದು ತಂಡಕ್ಕೆ ಆಸರೆಯಾಗಿದ್ದಾರೆ. ಈ ಪೈಕಿ ಬಾಂಗ್ಲಾ ಎದುರಿನ ಕ್ಯಾಚ್ ಅಂತೂ ನೆಕ್ಟ್ಸ್ ಲೆವೆಲ್ ಬಿಡಿ.
ಒಟ್ಟಿನಲ್ಲಿ! 2011ರ ವಿಶ್ವಕಪ್ನಲ್ಲಿ ಯುವರಾಜ್ ಸಿಂಗ್ ಮ್ಯಾಚ್ ವಿನ್ನಿರ್ ರೋಲ್ ನಿಭಾಯಿಸಿದ್ರು. ಈ ಬಾರಿ ರವಿಂದ್ರ ಜಡೇಜಾ ಆ ಪಾತ್ರವನ್ನ ನಿಭಾಯಿಸ್ತಿದ್ದಾರೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರರಲ್ಲೂ ಯುವಿಯನ್ನ ಪರ್ಫೆಕ್ಟ್ ಆಗಿ ರಿಪ್ಲೇಸ್ ಮಾಡಿದ್ದಾರೆ. ತಮ್ಮ ತ್ರಿಡೈಮನ್ಶಿಯಲ್ ಆಟದಿಂದ ಮೊಸ್ಟ್ ಇಂಪ್ಯಾಕ್ಟ್ಫುಲ್ ಪ್ಲೇಯರ್ ಆಗಿ ಹೊರ ಹೊಮ್ಮಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ