newsfirstkannada.com

Kapil Dev: ಬಿಕ್ಕಿ, ಬಿಕ್ಕಿ ಅತ್ತಿದ್ದ ವಿಶ್ವಕಪ್​ ವಿನ್ನರ್ ಕ್ಯಾಪ್ಟನ್​; ಕಪಿಲ್​ ದೇವ್​ ಮೇಲೆ ಆರೋಪ ಮಾಡಿದವರು ಯಾರು?

Share :

15-08-2023

    ಕೋಟ್ಯಾಂತರ ಭಾರತೀಯರ ಕನಸು ನನಸು ಮಾಡಿದ ಕ್ರಿಕೆಟಿಗ

    ನಗುಮುಖದ ಒಡೆಯ ಕಪಿಲ್ ದೇವ್ ಕಣ್ಣೀರು ಹಾಕಿದ್ದು ಯಾಕೆ?

    ಮೊದಲು ವಿಶ್ವಕಪ್​ಗೆ ಮುತ್ತಿಕ್ಕಿದ ಕಪಿಲ್ ದೇವ್‌ಗೆ ಏನಾಗಿತ್ತು?

ಮೊದಲ ಬಾರಿ ಭಾರತದ ಮುಡಿಗೆ ವಿಶ್ವಕಪ್​ ಕಿರೀಟ ತೊಡಿಸಿದ ಕಪಿಲ್​ ದೇವ್,​ ಭಾರತೀಯರ ಹೆಮ್ಮೆ. ದಿಗ್ಗಜ ಕಪಿಲ್​ ದೇವ್​​​​ ಎಂದಾಕ್ಷಣ ಸದಾ ಮಂದಹಾಸ ಬೀರುವ ಮುಖ ಕಣ್ಣೆದುರು ಬರುತ್ತೆ. ಆದ್ರೆ, ಈ ನಗುಮುಖದ ಒಡೆಯ ಕಪಿಲ್​ ಹಿಂದೊಮ್ಮೆ ಬಿಕ್ಕಿ.. ಬಿಕ್ಕಿ ಅತ್ತಿದ್ರು. ಕಪಿಲ್​ ಕಣ್ಣೀರಿಗೆ ಕಾರಣ ಏನು ಅನ್ನೋದೇ ಇವತ್ತಿನ ಸಖತ್​ ಸ್ಟೋರಿ.

ಕಪಿಲ್​ ದೇವ್​.. ಕೋಟ್ಯಾಂತರ ಭಾರತೀಯ ಅಭಿಮಾನಿಗಳ ಕನಸನ್ನ ನನಸು ಮಾಡಿದ ಕಣ್ಮಣಿ. 1983ರಲ್ಲಿ ವಿಶ್ವದ ಯಾವ ರಾಷ್ಟ್ರ ಕೂಡ ಭಾರತ ವಿಶ್ವಕಪ್​ ಗೆಲ್ಲೋ ಹಾಟ್​ ಫೇವರಿಟ್​ ಎಂದು ಊಹಿಸಿರಲಿಲ್ಲ. ಭಾರತೀಯ ಅಭಿಮಾನಿಗಳು ಕೂಡ ಇಂಥಾ ಚಮತ್ಕಾರ ಆಗುತ್ತೆ ಎಂದುಕೊಂಡಿರಲಿಲ್ಲ. ಆಂಗ್ಲರ ನಾಡಿಗೆ ಹಾರಿದ್ದ ಟೀಮ್​ ಇಂಡಿಯಾ ಆಟಗಾರರಲ್ಲೂ ಆ ಕಾನ್ಫಿಡೆನ್ಸ್​ ಇರಲಿಲ್ಲ. ಆದ್ರೆ, ತಂಡದ ನಾಯಕ ಕಪಿಲ್​ ದೇವ್​ ಕಣ್ಣು ಮಾತ್ರ ಟ್ರೋಫಿಯ ಮೇಲಿತ್ತು. ಗೆಲುವಿಗೆ ಪಣ ತೊಟ್ಟಿದ್ದ ಕಪಿಲ್​, ಟ್ರೋಫಿಯನ್ನ ಎತ್ತಿ ಹಿಡಿಯುವವರೆಗೂ ಹೋರಾಟ ನಡೆಸಿದ್ದರು.

ಕಪಿಲ್ ದೇವ್ ಮೇಲೆ ಆರೋಪ ಮಾಡಿದ್ದ ಮಾಜಿ ಕ್ರಿಕೆಟರ್ ಮನೋಜ್​ ಪ್ರಭಾಕರ್

ಟೀಮ್​ ಇಂಡಿಯಾದ ಕೋಚ್ ಆಗಿದ್ದ ಕಪಿಲ್ ದೇವ್..!

ಬಲಾಢ್ಯ ವಿಂಡೀಸ್​ ಪಡೆಯನ್ನ ಮಣಿಸಿ ಲಾರ್ಡ್ಸ್​ ಅಂಗಳದಲ್ಲಿ ಭಾರತ ಟ್ರೋಫಿ ಗೆದ್ದ ಕ್ಷಣವನ್ನ ಯಾರೂ ಮರೆಯಲು ಸಾಧ್ಯವೇ ಇಲ್ಲ. ಅಂತಾ ಅವಿಸ್ಮರಣೀಯ ಗೆಲುವನ್ನ ದಕ್ಕಿಸಿಕೊಟ್ಟ ಕ್ಯಾಪ್ಟನ್​ ಕಪಿಲ್​ ದೇವ್​, ಹಿಂದೊಮ್ಮೆ ಬಿಕ್ಕಿ ಬಿಕ್ಕಿ ಅತ್ತಿದ್ರು. 1999ರಲ್ಲಿ ಕಪಿಲ್​ ದೇವ್​ ಟೀಮ್​ ಇಂಡಿಯಾದ ಕೋಚ್​ ಹುದ್ದೆಗೇರಿದ್ರು. ಈ ವೇಳೆ ಬರಸಿಡಿಲಿನಂತೆ ಆರೋಪವೊಂದು ಕಪಿಲ್​ ದೇವ್​ ವಿರುದ್ಧ ಕೇಳಿ ಬಂದಿತ್ತು.

1994ರಲ್ಲಿ ಶ್ರೀಲಂಕಾದಲ್ಲಿ ನಡೆದ ಸರಣಿ ವೇಳೆ ಕಪಿಲ್​, ನನಗೆ ಲಂಚ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ರು ಅನ್ನೋ ಬಲವಾದ ಆರೋಪವನ್ನ ಮನೋಜ್​ ಪ್ರಭಾಕರ್​ ಮಾಡಿದರು. ಇದರಿಂದ ನೊಂದ ಕಪಿಲ್​ ದೇವ್​, ಸಂದರ್ಶನವೊಂದರಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಕೊನೆಗೆ ಕೋಚ್​ ಹುದ್ದೆಗೂ ಗುಡ್​ ಬೈ ಹೇಳಿದರು. ಯಾವ ಕಪಿಲ್​ದೇವ್ ವಿಶ್ವಕಪ್​ ಗೆದ್ದು ಮುಖದಲ್ಲಿ ಮಂದಹಾಸ ಮೂಡಿಸಿದ್ರೋ ಅದೇ ಕಪಿಲ್​ ದೇವ್ ಬಿಕ್ಕಿ ಬಿಕ್ಕಿ ಅತ್ತಿದ್ದು, ಇಂದಿಗೂ ಅದು ಅಭಿಮಾನಿಗಳನ್ನ ಕಾಡ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Kapil Dev: ಬಿಕ್ಕಿ, ಬಿಕ್ಕಿ ಅತ್ತಿದ್ದ ವಿಶ್ವಕಪ್​ ವಿನ್ನರ್ ಕ್ಯಾಪ್ಟನ್​; ಕಪಿಲ್​ ದೇವ್​ ಮೇಲೆ ಆರೋಪ ಮಾಡಿದವರು ಯಾರು?

https://newsfirstlive.com/wp-content/uploads/2023/08/KAPIL_DEV_CRYING.jpg

Load More