newsfirstkannada.com

×

ಬಾಂಗ್ಲಾ ಟೆಸ್ಟ್​ ಸರಣಿಗೆ ಗಂಭೀರ್​​​, ರೋಹಿತ್​ ಮಾಸ್ಟರ್​ ಪ್ಲಾನ್​​.. ಈ ಸ್ಟಾರ್​ ಆಟಗಾರರಿಗೆ ಮಾತ್ರ ಮಣೆ

Share :

Published August 14, 2024 at 4:18pm

    ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋತ ಟೀಮ್​ ಇಂಡಿಯಾ

    ಬಾಂಗ್ಲಾದೇಶ, ಟೀಮ್​ ಇಂಡಿಯಾ ನಡುವೆ ಟೆಸ್ಟ್​ ಸರಣಿ ಶುರು..!

    ಭಾರತ ಗೆದ್ದರೆ ನೇರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪ್ರವೇಶ

ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಸೋತ ಬೆನ್ನಲ್ಲೇ ಟೀಮ್​ ಇಂಡಿಯಾ ಬಾಂಗ್ಲಾದೇಶ ವಿರುದ್ಧದ ಟೆಸ್ಟ್​​ ಮೇಲೆ ಫುಲ್​​ ಫೋಕಸ್​ ಮಾಡುತ್ತಿದೆ. ಇದಕ್ಕಾಗಿ ಭಾರತ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ಭಾರೀ ತಯಾರಿ ನಡೆಸಿಕೊಂಡಿದ್ದಾರೆ. ಹಾಗಾಗಿ ಟೀಮ್​ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಭಾರೀ ರೋಚಕತೆಯಿಂದ ಕೂಡಿರಲಿದೆ.

ಮುಂದಿನ ತಿಂಗಳು ಸೆಪ್ಟೆಂಬರ್​​​ 19ನೇ ತಾರೀಕಿನಿಂದ ಭಾರತ ಮತ್ತು ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ಶುರುವಾಗಲಿದೆ. ಇದು ಅಕ್ಟೋಬರ್ 1 ರವರೆಗೆ ನಡೆಯಲಿದೆ. ಬಾಂಗ್ಲಾದೇಶ ವಿರುದ್ಧ ಗೆದ್ದರೆ ಟೀಮ್​ ಇಂಡಿಯಾ ನೇರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ತಲುಪಲಿದೆ.

ಇನ್ನು, ಈ ಮಹತ್ವದ ಸರಣಿಗಾಗಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ಮುಖ್ಯ ಗೌತಮ್​ ಗಂಭೀರ್​​ ಮಹತ್ವದ ಪ್ಲಾನ್​ ಮಾಡಿಕೊಂಡಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಸರಣಿಗಾಗಿ ಭಾರತ ಟೆಸ್ಟ್​ ತಂಡದಲ್ಲಿ ಭಾರೀ ಬದಲಾವಣೆ ಮಾಡಲಿದ್ದಾರೆ. ವಿಶೇಷ ಎಂದರೆ ಭಾರತದ ಟೆಸ್ಟ್ ತಂಡದಲ್ಲಿ ಮೂವರು ವಿಕೆಟ್​ ಕೀಪರ್​ ಬ್ಯಾಟರ್ಸ್​ಗೆ ಅವಕಾಶ ನೀಡಲಿದ್ದಾರೆ ಎಂಬುದು. ಅದರಲ್ಲೂ ಮೂವರಿಗೂ ಪ್ಲೇಯಿಂಗ್​ ಎಲೆವೆನ್​ನಲ್ಲಿ ಅವಕಾಶ ಸಿಗಲಿದೆ ಎಂದು ತಿಳಿದು ಬಂದಿದೆ. ಕೆ.ಎಲ್​ ರಾಹುಲ್​​, ರಿಷಭ್​ ಪಂತ್​ ಮತ್ತು ಧೃವ ಜುರೇಲ್​ ಮೂವರಿಗೆ ಅವಕಾಶ ನೀಡಲಾಗುತ್ತದೆ.

ಬಾಂಗ್ಲಾ ವಿರುದ್ಧ ಅಜೇಯ ಓಟ

ಭಾರತ ಮತ್ತು ಬಾಂಗ್ಲಾದೇಶ ಸುಮಾರು 24 ವರ್ಷಗಳಿಂದ ಟೆಸ್ಟ್‌ ಪಂದ್ಯಗಳನ್ನು ಆಡುತ್ತಿವೆ. ಇದುವರೆಗೂ ಒಟ್ಟು 13 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿ ಆಗಿವೆ. ಭಾರತ 11 ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ, 2 ಟೆಸ್ಟ್ ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ. ಬಾಂಗ್ಲಾದೇಶ ಕಳೆದ 24 ವರ್ಷಗಳಿಂದ ಒಂದು ಟೆಸ್ಟ್ ಪಂದ್ಯವೂ ಗೆಲ್ಲಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: IPL ಮಾದರಿಯಲ್ಲೇ ಮತ್ತೊಂದು ಲೀಗ್; ಬಿಸಿಸಿಐ ಮುಂದೆ ಬಿಗ್ ಪ್ರಾಜೆಕ್ಟ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಂಗ್ಲಾ ಟೆಸ್ಟ್​ ಸರಣಿಗೆ ಗಂಭೀರ್​​​, ರೋಹಿತ್​ ಮಾಸ್ಟರ್​ ಪ್ಲಾನ್​​.. ಈ ಸ್ಟಾರ್​ ಆಟಗಾರರಿಗೆ ಮಾತ್ರ ಮಣೆ

https://newsfirstlive.com/wp-content/uploads/2024/08/Rohit_Gambhir.jpg

Load More