newsfirstkannada.com

ಆಸ್ಟ್ರೇಲಿಯಾಕ್ಕೆ ಬಿಗ್ ಟಾರ್ಗೆಟ್​ ಸೆಟ್ ಮಾಡಿದ ಟೀಮ್ ಇಂಡಿಯಾ.. ರೋಹಿತ್ ಮಿಂಚಿನಾಟ ಹೇಗಿತ್ತು?

Share :

Published June 24, 2024 at 10:19pm

    ಶತಕಕ್ಕೆ ಇನ್ನು ಕೆಲವೇ ರನ್ ಇರುವಾಗ ರೋಹಿತ್ ಶರ್ಮಾ ಔಟ್

    ಭಾರತದ ಆಟಗಾರರ ಬ್ಯಾಟಿಂಗ್​ಗೆ ಶಾಕ್ ಆದ ಆಸಿಸ್​ ಬೌಲರ್ಸ್

    ವಿರಾಟ್ ಕೊಹ್ಲಿ ಡಕೌಟ್, ರೋಹಿತ್ ಶರ್ಮಾ ಹಾಫ್ ಸೆಂಚುರಿ

ವೆಸ್ಟ್​ ಇಂಡೀಸ್​​ನಲ್ಲಿ ನಡೆಯುತ್ತಿರುವ T20 ವರ್ಲ್ಡ್​​ಕಪ್​ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 206 ರನ್​ಗಳ ಬಿಗ್​ ಟಾರ್ಗೆಟ್​ ಸೆಟ್ ಮಾಡಿದೆ.

ಇದನ್ನೂ ಓದಿ: ಹೊಡಿಬಡಿ ಬ್ಯಾಟಿಂಗ್ ಮಾಡ್ತಿರೋ ಕ್ಯಾಪ್ಟನ್ ರೋಹಿತ್.. ಹಾಫ್​ಸೆಂಚುರಿ ಸಿಡಿಸಿದ ಹಿಟ್​ ಮ್ಯಾನ್

ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್​ನ ಡೇರೆನ್ ಸಾಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಟೀಮ್ ಇಂಡಿಯಾ ಬ್ಯಾಟಿಂಗ್​​ಗೆ ಆಗಮಿಸಿತು. ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಉತ್ತಮ ಆರಂಭ ಪಡೆಯಲಿಲ್ಲ. ವಿರಾಟ್ ಕೊಹ್ಲಿ ಡಕೌಟ್ ಆದರು. ಆದರೆ ನಿರಾಸೆ ಆಗದ ರೋಹಿತ್ ಭರ್ಜರಿ ಬ್ಯಾಟಿಂಗ್​ನಿಂದ ಕೇವಲ 41 ಎಸೆತಗಳಲ್ಲಿ 7 ಬೌಂಡರಿ, 8 ಸಿಕ್ಸರ್ ಸಮೇತ 92 ರನ್​ಗಳನ್ನ ಸಿಡಿಸಿದರು. ಇನ್ನೇನು ಸೆಂಚುರಿಗೆ ಕೇವಲ 8 ರನ್​ ಬಾಕಿ ಇರುವಾಗಲೇ ಮಿಚೆಲ್ ಸ್ಟಾರ್ಕ್​ ಬೌಲಿಂಗ್​ನಲ್ಲಿ ಔಟ್ ಆದರು.

ಇದನ್ನೂ ಓದಿ: ರೋಹಿತ್ ಬ್ಯಾಟಿಂಗ್​ ಅಬ್ಬರಕ್ಕೆ ಬೆಚ್ಚಿಬಿದ್ದ ಆಸಿಸ್​.. ಸೆಂಚುರಿ ಬಾರಿಸದೇ ನಿರಾಸೆಯಿಂದ ಹೊರನಡೆದ ಹಿಟ್​ಮ್ಯಾನ್

ವಿರಾಟ್ ಕೊಹ್ಲಿ ಬಳಿಕ ಕ್ರೀಸ್​​ಗೆ ಆಗಮಿಸಿದ ರಿಷಬ್ ಪಂತ್ ಅವರು 15 ರನ್​​ಗಳಿಸಿ ಆಡುವಾಗ ಸ್ಟೊನ್ನಿಸ್ ಬೌಲಿಂಗ್​ನಲ್ಲಿ ಔಟ್ ಆದರು. ಸುರ್ಯಕುಮಾರ್ ಯಾದವ್ ಆಸಿಸ್​ ಬೌಲರ್​ಗಳನ್ನು ಸ್ವಲ್ಪ ಕಾಡಿದರು. 3 ಬೌಂಡರಿ, 2 ಸಿಕ್ಸರ್ ಸಮೇತ 31 ರನ್​ ಗಳಿಸಿ ಔಟ್ ಆದರು. ಶಿವಂ ದುಬೆ 28ಕ್ಕೆ ವಿಕೆಟ್ ಒಪ್ಪಿಸಿದರು. ಹಾರ್ದಿಕ್ ಪಾಂಡ್ಯ ಅವರು ಮಿಂಚಿನ ಆಟವಾಡಿ 1 ಬೌಂಡರಿ, 2 ಸಿಕ್ಸರ್​​ನಿಂದ 27 ರನ್​ಗಳಿಸಿ ಔಟ್ ಆಗದೇ ಉಳಿದರು. ಜಡೇಜಾ 9 ರನ್​ ಗಳಿಸಿದರು. ಈ ಮೂಲಕ ಭಾರತ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​​ಗೆ 206ರನ್​ಗಳ ಬಿಗ್​ ಟಾರ್ಗೆಟ್ ಅನ್ನು ಆಸ್ಟ್ರೇಲಿಯಾಕ್ಕೆ ನೀಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಆಸ್ಟ್ರೇಲಿಯಾಕ್ಕೆ ಬಿಗ್ ಟಾರ್ಗೆಟ್​ ಸೆಟ್ ಮಾಡಿದ ಟೀಮ್ ಇಂಡಿಯಾ.. ರೋಹಿತ್ ಮಿಂಚಿನಾಟ ಹೇಗಿತ್ತು?

https://newsfirstlive.com/wp-content/uploads/2024/06/ROHIT_SHARMA-7.jpg

Load More