ಕಿವೀಸ್ ಕಿವಿ ಹಿಂಡಿದ ಸ್ಪೀಡ್ ಸ್ಟರ್ ಶಮಿ ಸೆನ್ಸೇಷನ್
ಮೊದಲ ನಾಲ್ಕು ಪಂದ್ಯಗಳಲ್ಲಿ ಬೆಂಚ್ ಸೀಮಿತ
ಮೊಹಮ್ಮದ್ ಶಮಿ ಆಟಕ್ಕೆ ದಂಗಾದ ಕಿವೀಸ್
ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಈತ ಮೊದಲ 4 ಪಂದ್ಯಗಳಲ್ಲಿ ಬೆಂಚ್ಗೆ ಸೀಮಿತನಾದ. ಡ್ರಿಂಕ್ಸ್ ಬ್ರೇಕ್ನಲ್ಲಿ ವಾಟರ್ ಬಾಟಲ್ ಹೊರುವ ಕೆಲಸವನ್ನೂ ನಿಭಾಯಿಸಿದ. ಧೃತಿಗೆಡಲಿಲ್ಲ. ತಾಳ್ಮೆಯಿಂದ ಅವಕಾಶಕ್ಕಾಗಿ ಕಾದ.. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಆತನೇ ಮೊಹಮ್ಮದ್ ಶಮಿ. ನಿನ್ನೆಯ ಪಂದ್ಯದ FIVE STAR SHAMI!
ಇಂಡೋ-ಕಿವೀಸ್ ಫೈಟ್ನಲ್ಲಿ ಗೆದ್ದವರು ಸೋತವರ ಕಥೆ ಬಿಟ್ ಬಿಡಿ. ಈ ಟೂರ್ನಿಯಲ್ಲಿ ಫಸ್ಟ್ ಮ್ಯಾಚ್ ಆಡಿದ ಮೊಹಮ್ಮದ್ ಶಮಿ ಮಾಡಿದ್ದು ಮಾತ್ರ ಮೋಡಿ. ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಶಮಿಯೇ ಸೆನ್ಸೇಷನ್. ಅಬ್ಬಾ.. ಒಂದೊಂದು ವಿಕೆಟ್.. ಒಂದೊಂದು ಎಸೆತ ಖತರ್ನಾಕ್. 5 ಸ್ಟಾರ್ ಶಮಿಯ ಸೆನ್ಸೇಷನಲ್ ಆಟಕ್ಕೆ ಕಿವೀಸ್ ಪಡೆ ನಿನ್ನೆ ದಂಗಾಗಿ ಹೋಯ್ತು.
ಈ ಪಂದ್ಯದಲ್ಲಿ 5 ವಿಕೆಟ್ ಕಬಳಿಸೋದ್ರೊಂದಿಗೆ ಶಮಿ, ಇರ್ಫಾನ್ ಪಠಾಣ್ರನ್ನೂ ಓವರ್ ಟೇಕ್ ಮಾಡಿದ್ರು. ಏಕದಿನದಲ್ಲಿ ಹೆಚ್ಚು ವಿಕೆಟ್ ಕಬಳಿಸಿದ ಭಾರತದ 9ನೇ ಬೌಲರ್ ಎಂಬ ಖ್ಯಾತಿಗೂ ಪಾತ್ರರಾದ್ರು.. ಇಷ್ಟೇ ಅಲ್ಲ.. 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ 2 ಬಾರಿ 5 ವಿಕೆಟ್ ಕಬಳಿಸಿದ ಏಕೈಕ ಭಾರತೀಯ ಎಂಬ ಅವಿಸ್ಮರಣೀಯ ಸಾಧನೆಯನ್ನೂ ಮಾಡಿದ್ರು.
ತಾಳ್ಮೆಯಿಂದ ಅವಕಾಶಕ್ಕಾಗಿ ಕಾದ ಶಮಿ, ಸಿಕ್ಕ ಅವಕಾಶದಲ್ಲಿ ತನ್ನ ತಾಕತ್ತು ಏನು ಅನ್ನೋದನ್ನ ನಿರೂಪಿಸಿದ್ದಾರೆ. ಭರ್ಜರಿ ಬೌಲಿಂಗ್ ಮೂಲಕ ತಂಡದ ಸೇವೆಗೆ ಸದಾ ಸಿದ್ಧ ಎಂಬ ಸಂದೇಶವನ್ನೂ ರವಾನಿಸಿದ್ದಾರೆ. ಸಿಕ್ಕ ಒಂದು ಅವಕಾಶದಲ್ಲಿ ಮಿಂಚಿರೋ ಶಮಿಗೆ ಮುಂದಿನ ಪಂದ್ಯಗಳಲ್ಲೂ ಚಾನ್ಸ್ ಸಿಗಲಿ ಅನ್ನೋದೇ ಎಲ್ಲರ ಆಶಯವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್