newsfirstkannada.com

×

ದ್ರಾವಿಡ್​​​​ ಡೇರಿಂಗ್ ಡಿಸಿಷನ್​ಗೆ ಕೊನೆಗೂ ಫಲ.. ದ್ರೋಣಾಚಾರ್ಯನಿಗೆ ಈ ವಿಚಾರದಲ್ಲಿ ಸಲಾಂ ಹೇಳಲೇಬೇಕು..!

Share :

Published November 17, 2023 at 8:05am

    ಅಂದಿನ ಹುಚ್ಚು ಪ್ರಯೋಗವೇ ಈಗ ಸಕ್ಸಸ್ ಮಂತ್ರ

    2 ವರ್ಷ.. 25 ಮಂದಿ ಡೆಬ್ಯು.. 55ಕ್ಕೂ ಹೆಚ್ಚು ಪ್ರಯೋಗ

    ಕೋಚ್ ದ್ರಾವಿಡ್​ ಪ್ರಯೋಗಕ್ಕೆ ಕೊನೆಗೂ ಪ್ರತಿಫಲ..

ಕ್ರಿಕೆಟ್​ ಆಡೋ ಕಾಲದಲ್ಲಿ ಮಿಸ್ಟರ್​ ಡಿಪೆಂಡೆಬಲ್​ ಆಗಿದ್ದ ದ್ರಾವಿಡ್​​, ಡಿಫೆನ್ಸಿವ್​ ಮೂಡ್​ನಲ್ಲಿದ್ರು. ಕೋಚ್​ ಆದ ಮೇಲೂ ಎಲ್ಲರದ್ದೂ ಇದೇ ನಿರೀಕ್ಷೆಯಿತ್ತು. ಕೋಚ್​ ಆದ ಬೆನ್ನಲ್ಲೇ ದ್ರಾವಿಡ್​​, ಶಿಫ್ಟ್​ ಆಗಿದ್ದು ರೆಬೆಲ್​ ಮೂಡ್​ಗೆ. ದ್ರಾವಿಡ್​ ಮಾಡಿದ ಪ್ರಯೋಗಗಳು, ತೆಗೆದುಕೊಂಡ ಟಫ್​ ಕಾಲ್​ಗಳಿಗೆ ಲೆಕ್ಕವೇ ಇಲ್ಲ.. ಈ ವಿಚಾರದಲ್ಲೂ ದ್ರಾವಿಡ್​ ಎದುರಿಸಿದ್ದು ಸಾಲು ಸಾಲು ಟೀಕೆಗಳನ್ನೇ.

2023ರ ಏಕದಿನ ವಿಶ್ವಕಪ್​​ನಲ್ಲಿ ಟೀಮ್ ಇಂಡಿಯಾದಲ್ಲಿ ಒಂದೊಂದು ಸ್ಲಾಟ್​, ಒಂದೊಂದು ವಿಭಾಗದಲ್ಲೂ ಪ್ರಶ್ನೆಗಳೇ ಉದ್ಬವಿಸಿದ್ವು. ಸಾಲು ಸಾಲು ಸಮಸ್ಯೆಗಳು, ಇದೇ ಸಮಸ್ಯೆಗಳು ಟೀಮ್ ಇಂಡಿಯಾ ಗೆಲುವಿಗೆ ಅಡ್ಡಿಯಾಗುತ್ತೆ ಅಂತಾನೇ ಕೋಚ್ ದ್ರಾವಿಡ್ ಆ್ಯಂಡ್ ಟೀಮ್ ಮ್ಯಾನೇಜ್​ಮೆಂಟ್ ನಡೆಯನ್ನು ಟೀಕಿಸಿದ್ರು. ಅವೇ ಈಗ ಟೀಮ್ ಇಂಡಿಯಾ ಸಕ್ಸಸ್​ಗೆ ಕಾರಣವಾಗಿದೆ.

ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾದಲ್ಲಿ ಎಕ್ಸ್​ಪರಿಮೆಂಟ್​

2023ರ ಏಕದಿನ ವಿಶ್ವಕಪ್​ನಲ್ಲಿ ನಿಜಕ್ಕೂ ಟೀಮ್ ಇಂಡಿಯಾದಲ್ಲಿ ನಡೆದಿದ್ದೇ ಪ್ರಯೋಗ. ಸರಣಿ ಸರಣಿ, ಪಂದ್ಯ ಪಂದ್ಯಕ್ಕೂ ಆಟಗಾರರನ್ನ ಪ್ರಯೋಗಕ್ಕೆ ಒಳಪಡಿಸುತ್ತಿದ್ದ ಟೀಮ್ ಮ್ಯಾನೇಜ್​ಮೆಂಟ್, ಎಕ್ಸ್​ಪರಿಮೆಂಟ್​ನಲ್ಲಿ ಕೈಸುಟ್ಟುಕೊಂಡು ಕೆಲ ಪಂದ್ಯಗಳನ್ನು ಕೈಚೆಲ್ಲಿತ್ತು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಟೀಮ್ ಮ್ಯಾನೇಜ್​ಮೆಂಟ್, ಏಕದಿನ ವಿಶ್ವಕಪ್​ ಮುಂದಿನ ಸರಣಿ ತನಕ ಪ್ರಯೋಗದಲ್ಲೇ ನಿರತವಾಗಿತ್ತು. ಆಟಗಾರರನ್ನು ಅಗ್ನಿಪರೀಕ್ಷೆಗೆ ದೂಡುತ್ತಲೇ ಇತ್ತು. ಕೊನೆಗೂ ಕೋಚ್​​ ದ್ರಾವಿಡ್​​ರ ಪ್ರಯೋಗ ವರ್ಕೌಟ್ ಆಗಿದೆ.

ರಾಹುಲ್ ದ್ರಾವಿಡ್ ಕೋಚ್ ಹುದ್ದೆಗೇರಿ 3 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಬರೋಬ್ಬರಿ ಟೀಮ್ ಇಂಡಿಯಾ ಪರ ಡೆಬ್ಯು ಮಾಡಿದ ಆಟಗಾರರ ಸಂಖ್ಯೆ 25. ಇಂಟ್ರೆಸ್ಟಿಂಗ್ ಅಂದ್ರೆ ಏಕದಿನ ಫಾರ್ಮೆಟ್​ಗೆ 11 ಮಂದಿ ಡೆಬ್ಯು ಮಾಡಿದ್ರೆ, ಟೆಸ್ಟ್​ ಪರ 6 ಹಾಗೂ ಟಿ20ಯಲ್ಲಿ 18 ಮಂದಿ ಆಟಗಾರರ ಕಾಲಿಟ್ಟಿದ್ದಾರೆ. ಇನ್​ಫ್ಯಾಕ್ಟ್ ಬರೋಬ್ಬರಿ 55 ಆಟಗಾರರ ಎಕ್ಸ್​ಪರಿಮೆಂಟ್​ನಲ್ಲಿ ಶಿಖರ್ ಧವನ್​​ರಂಥ ಕೆಲ ಹಿರಿಯ ಆಟಗಾರರು ತೆರೆಮರೆಗೆ ಸರಿದಿದ್ದು ಕಣ್ಮುಂದೆಯೇ ಇದೆ.

ಇಂಟ್ರೆಸ್ಟಿಂಗ್ ಅಂದ್ರೆ ಈಗ ಅದೇ ತಂಡ ವಿಶ್ವ ಕ್ರಿಕೆಟ್‌ನ ರಾಜ ಎನಿಸಿಕೊಂಡಿದೆ. ಒಂದಲ್ಲ, ಎರಡಲ್ಲ.. ಮೂರೂ ಫಾರ್ಮಾಟ್‌ನಲ್ಲಿ ನಂಬರ್.1 ಆಗಿದೆ. ಇದೆಲ್ಲವೂ ದ್ರಾವಿಡ್ ಪ್ರಯೋಗಗಳ ಫಲಿತಾಂಶ. ಇದಷ್ಟೇ ಅಲ್ಲ. ಈ ಪ್ರಯೋಗಗಳ ಪರಿಣಾಮವೇ ಟೀಮ್ ಇಂಡಿಯಾ, ವಿಶ್ವಕಪ್​ನಲ್ಲಿ ಪ್ರಬಲ ಶಕ್ತಿಯಾಗಿ ಬೆಳೆಯಿತು. ಗೆಲುವಿಗೆ ಒಬ್ಬರು, ಇಬ್ಬರನ್ನೇ ನಂಬಿಕೊಳ್ಳದಂತಾಗಿದೆ.

ಸಾಲು ಸಾಲು ಇಂಜುರಿ.. ಮ್ಯಾನೇಜ್​​​ಮೆಂಟ್​ ಬಗ್ಗೆ ಟೀಕೆ..!

ಒಂದ್ಕಡೆ ಆಟಗಾರರ ಪ್ರಯೋಗ ನಡೀತಿದ್ರೆ, ಮತ್ತೊಂದೆಡೆ ಆಟಗಾರರ ಸಾಲು ಸಾಲು ಇಂಜುರಿ ಇನ್ನಿಲ್ಲದೇ ಕಾಡಿತ್ತು. ಅಘಾತಕಾರಿ ಅಂದ್ರೆ ವಿಶ್ವಕಪ್​ಗೂ ಮುನ್ನ 15 ಆಟಗಾರರು ಇಂಜುರಿಗೆ ತುತ್ತಾಗಿದ್ರು. ನಾಯಕ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ದೀಪಕ್ ಚಹರ್​, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ, ಜಸ್​ಪ್ರೀತ್​ ಬೂಮ್ರಾ ಸೇರಿದಂತೆ ಇನ್ನಿತರ ಆಟಗಾರರು ಇಂಜುರಿ ಎಂಬ ಪೆಡಂಭೂತಕ್ಕೆ ಸಿಲುಕಿದ್ರು. ಅದರಲ್ಲೂ ಏಕದಿನ ವಿಶ್ವಕಪ್​ ಮುನ್ನ ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಜಸ್​ಪ್ರೀತ್ ಬೂಮ್ರಾ ಇಂಜುರಿ ಟೀಮ್ ಇಂಡಿಯಾವನ್ನ ಚಿಂತೆಗೆ ದೂಡಿತ್ತು.

ವಿಶ್ವಕಪ್​​ಗೆ 15 ಆಟಗಾರರ ಆಯ್ಕೆಯೇ ಆಗಿತ್ತು ಕಗ್ಗಂಟು

ಆಟಗಾರರ ಪ್ರಯೋಗ, ಇಂಜುರಿ, ಆಟಗಾರರ ಇನ್​​ಫಾರ್ಮ್​ನಿಂದಾಗಿ ಟೀಮ್ ಇಂಡಿಯಾಗೆ ಪರ್ಫೆಕ್ಟ್​, ಪ್ಲೆಯಿಂಗ್ ಇಲೆವೆನ್ ಸಿಗುತ್ತಾ ಎಂಬ ಅನುಮಾನ ಹುಟ್ಟಿಹಾಕಿತ್ತು. ಇನ್​ಫ್ಯಾಕ್ಟ್ ಆಗಲೇ ಇಂಜುರಿಯಿಂದ ಗುಣಮುಖರಾಗಿದ್ದ ಕೆ.ಎಲ್.ರಾಹುಲ್, ಶ್ರೇಯಸ್​ ಅಯ್ಯರ್, ಜಸ್​ಪ್ರೀತ್ ಬೂಮ್ರಾ, ಜಸ್ಟ್ ಒಂದೆರಡು ಪಂದ್ಯಗಳನ್ನಾಡಿದರು. ಇವರ ಆಯ್ಕೆ ಬಗ್ಗೆ ಎಷ್ಟು ಸರಿ..? ಎಷ್ಟು ತಪ್ಪು.? ಎಷ್ಟರ ಮಟ್ಟಿಗೆ ಫಿಟ್ ಇದ್ದಾರೆ..? ಎಂಬೆಲ್ಲಾ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಇದ್ಯಾವುದಕ್ಕು ತಲೆಕೆಡಿಸಿಕೊಳ್ಳದ ಕೋಚ್ ದ್ರಾವಿಡ್​​​​​​ ನಂಬಿಕೆ ಇಟ್ಟು ಡೇರಿಂಗ್ ಡಿಸಿಷನ್ ತೆಗೆದುಕೊಂಡ್ರು. ಇದೆಲ್ಲದರ ಪರಿಣಾಮವೇ ಟೀಮ್ ಇಂಡಿಯಾದ ಇಂದಿನ ಗೆಲುವಿನ ನಾಗಲೋಟವಾಗಿದೆ.

ಅದೇನೇ ಇರಲಿ, ವಿಶ್ವಕಪ್​ಗೂ ಮುನ್ನ ಹೆಡ್​ಕೋಚ್ ರಾಹುಲ್​ ದ್ರಾವಿಡ್​​​​​​ ತಂಡದಲ್ಲಿ ಮಾಡಿದ ಬದಲಾವಣೆ ಯಶಸ್ಸು ತಂದುಕೊಟ್ಟಿದೆ ಅನ್ನೋದು ಈಗ ಓಪನ್​ ಸೀಕ್ರೆಟ್​. 12 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲೋ ಭರವಸೆ ಎಲ್ಲರ ಮನದಲ್ಲೂ ದೃಢವಾಗಿ ಬೇರೂರಿದೆ. ಇದಕ್ಕೆ ನಾವು ದ್ರೋಣಾಚಾರ್ಯನಿಗೆ ಸಲಾಂ ಅನ್ನಲೇಬೇಕು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ದ್ರಾವಿಡ್​​​​ ಡೇರಿಂಗ್ ಡಿಸಿಷನ್​ಗೆ ಕೊನೆಗೂ ಫಲ.. ದ್ರೋಣಾಚಾರ್ಯನಿಗೆ ಈ ವಿಚಾರದಲ್ಲಿ ಸಲಾಂ ಹೇಳಲೇಬೇಕು..!

https://newsfirstlive.com/wp-content/uploads/2023/11/DRAVID.jpg

Load More