newsfirstkannada.com

ಹಾರ್ದಿಕ್​​ ಪಾಂಡ್ಯಗೆ ಅಗ್ನಿಪರೀಕ್ಷೆ; ಇಂದು ವಿಂಡೀಸ್​​ ವಿರುದ್ಧ ಟೀಂ ಇಂಡಿಯಾ ಗೆಲ್ಲಲೇಬೇಕು!

Share :

12-08-2023

    ಟೀಂ ಇಂಡಿಯಾ, ವೆಸ್ಟ್​ ಇಂಡೀಸ್​​ ಮಧ್ಯೆ T20 ಸೀರೀಸ್​​

    4ನೇ ಪಂದ್ಯದಲ್ಲಿ ಹಾರ್ದಿಕ್​​ ಪಡೆಗೆ ಅಗ್ನಿಪರೀಕ್ಷೆ ಶುರು..!

    ಟೀಂ ಇಂಡಿಯಾ ಗೆಲ್ಲಲು ಸಂಘಟಿತ ಹೋರಾಟ ಅಗತ್ಯ

ಇಂದು ಟೀಂ ಇಂಡಿಯಾ, ವೆಸ್ಟ್​ ಇಂಡೀಸ್​​ ಮಧ್ಯೆ 4ನೇ ಪಂದ್ಯ ನಡೆಯಲಿದೆ. ಕಳೆದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಟೀಂ ಇಂಡಿಯಾಗೆ ಇಂದಿನ ಪಂದ್ಯ ಮಾಡು ಇಲ್ಲವೆ ಮಡಿ ಎಂಬಂತಾಗಿದೆ. ಸರಣಿ ಉಳಿಸಿಕೊಳ್ಳಲು ಹೇಗಾದ್ರೂ ಮಾಡಿ ಮ್ಯಾಚ್​ ಗೆಲ್ಲಲೇಬೇಕಿದೆ.

ಹೌದು, 3ನೇ ಪಂದ್ಯದಲ್ಲಿ ಗೆದ್ದಿದ ಹಾರ್ದಿಕ್​​ ಪಾಂಡ್ಯ ಪಡೆ ಇಂದು ಅದೇ ಲಯ ಮುಂದುವರಿಸೋ ಸಾಧ್ಯತೆ ಇದೆ. 4ನೇ ಪಂದ್ಯದಲ್ಲಿ ಕಮ್​ಬ್ಯಾಕ್​ ಮಾಡಲು ಸಂಘಟಿತ ಹೋರಾಟ ಅನಿವಾರ್ಯ ಆಗಿದೆ. ಅದರಲ್ಲೂ ಸೂರ್ಯಕುಮಾರ್​ ಯಾದವ್​ ಜತೆಗೆ ಟೀಂ ಇಂಡಿಯಾದ ಓಪನಿಂಗ್​​ ಜೋಡಿ ಮಿಂಚಲೇಬೇಕು. ಶುಭ್ಮನ್​​ ಗಿಲ್​​ ಮತ್ತು ಜೈಸ್ವಾಲ್​ ಆಡಲೇಬೇಕಾದ ಪರಿಸ್ಥಿತಿ ಎದುರಾಗಿದೆ.

ಫ್ಲೋರಿಡಾದ ಸೆಂಟ್ರಲ್ ಬ್ರೊವಾರ್ಡ್ ರೀಜಿನಲ್ ಪಾರ್ಕ್ ಸ್ಟೇಡಿಯಂ ಬ್ಯಾಟಿಂಗ್​ ಪಿಚ್​​. ಮೊದಲು ಬ್ಯಾಟಿಂಗ್​ ಮಾಡೋರು 170ಕ್ಕೂ ಹೆಚ್ಚು ಸ್ಕೋರ್​ ಮಾಡಬೇಕು. ಮೊದಲು ಬ್ಯಾಟಿಂಗ್‌ಗೆ ಉತ್ತಮ ನೆರವು ನೀಡಿದ ಬಳಿಕ ಬೌಲರ್‌ಗಳು ಮೇಲುಗೈ ಸಾಧಿಸುವ ಅವಕಾಶವಿದೆ. ಹೀಗಾಗಿ ಟಾಸ್​​ ಮಹತ್ವದ ಪಾತ್ರ ವಹಿಸಲಿದೆ.

ಟೀಂ ಇಂಡಿಯಾ ಹೀಗಿದೆ..!

ಯಶಸ್ವಿ ಜೈಸ್ವಾಲ್, ಶುಭ್ಮನ್​​, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಮುಖೇಶ್ ಕುಮಾರ್, ರವಿ ಬಿಷ್ಣೋಯ್, ಉಮ್ರಾನ್ ಮಲಿಕ್, ಇಶಾನ್ ಕಿಶನ್ , ಅವೇಶ್ ಖಾನ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾರ್ದಿಕ್​​ ಪಾಂಡ್ಯಗೆ ಅಗ್ನಿಪರೀಕ್ಷೆ; ಇಂದು ವಿಂಡೀಸ್​​ ವಿರುದ್ಧ ಟೀಂ ಇಂಡಿಯಾ ಗೆಲ್ಲಲೇಬೇಕು!

https://newsfirstlive.com/wp-content/uploads/2023/08/TEAM_IDNIA.jpg

Load More