ಟೀಮ್ ಇಂಡಿಯಾ ಯಶಸ್ಸಿನ ಹಿಂದೆ ಈತ ಪಾತ್ರ
ಭಾರತದ ಜೊತೆಗಿನಬಾಂಧವ್ಯ ಇಂದು, ನಿನ್ನೆಯದಲ್ಲ
ಸಚಿನ್-ದ್ರಾವಿಡ್ ಆಶಿರ್ವಾದ, ಬದಲಾಯ್ತು ಜೀವನ
ಈತ ಟೀಮ್ ಇಂಡಿಯಾ ಪ್ಲೇಯರ್ ಅಲ್ವೇ ಅಲ್ಲ. ಕೋಚಿಂಗ್ ಸ್ಟಾಫ್ ಜೊತೆಗೂ ಸಂಬಂಧ ಇಲ್ಲ. ಆದ್ರೂ ಈತ ಏಷ್ಯಾಕಪ್ ಟ್ರೋಫಿ ಎತ್ತಿದ್ರು. ಈತ ಟ್ರೋಫಿ ಎತ್ತಿದ್ದೆ ತಡ ಯಾರು ಈ ಮಿಸ್ಟ್ರಿ ಮ್ಯಾನ್ ಎಂಬ ಚರ್ಚೆ ಫ್ಯಾನ್ಸ್ ವಲದಲ್ಲಿ ಕೇಳಿಬರುತ್ತಿದೆ.
ಏಷ್ಯಾಕಪ್ ಟೂರ್ನಿಗೆ ಥ್ರಿಲ್ಲಿಂಗ್ ಎಂಡ್ ಸಿಕ್ತು. ಫೈನಲ್ನಲ್ಲಿ ಸಿಂಹಳೀಯರನ್ನು ಸದೆಬಡೆದ ಟೀಮ್ ಇಂಡಿಯಾ, ಟ್ರೋಫಿ ಎತ್ತಿ ಹಿಡಿಯಿತು. ಐತಿಹಾಸಿಕ ಗೆಲುವು ಕಂಡ ರೋಹಿತ್ ಪಡೆಗೆ ಏಷ್ಯಾನ್ ಕೌನ್ಸಿಲ್ ಅಧ್ಯಕ್ಷ ಜಯ ಶಾ ವಿತರಿಸಿದರು. ಟ್ರೋಫಿ ಎತ್ತಿ ಮುದ್ದಾಡುತ್ತ ಟೀಮ್ ಇಂಡಿಯಾ ಆಟಗಾರರು ಸಂಭ್ರಮದಲ್ಲಿ ತೇಲಾಡುತ್ತಿದ್ರು. ಈ ವೇಳೆ ಟೀಮ್ ಇಂಡಿಯಾ ಆಟಗಾರರ ಜೊತೆ ಟ್ರೋಫಿ ಕಾಣಿಸಿಕೊಂಡಿದ್ದು ಮಿಸ್ಟ್ರಿ ಮ್ಯಾನ್ ಜೊತೆ.
ಈತ ಟ್ರೋಫಿ ಲಿಫ್ಟ್ ಮಾಡಿದ್ದೇ ತಡ ಬಹುತೇಕ ಕ್ರಿಕೆಟ್ ಅಭಿಮಾನಿಗಳ ಚಿತ್ತ ಈತನ ಮೇಲೆ ನೆಟ್ಟಿತ್ತು. ಟೀಮ್ ಇಂಡಿಯಾ ಪ್ಲೇಯರ್ ಕೂಡ ಅಲ್ಲ. ಕೋಚಿಂಗ್ ಸ್ಟಾಫ್ ಸಿಬ್ಬಂದಿಯೂ ಅಲ್ಲ. ಮತ್ಯಾರು ಎಂಬ ಗುಸುಗುಸು ಬೊಬ್ಬೆ ಹೊಡೆದಿತ್ತು. ಈ ಮಿಸ್ಟ್ರಿ ಮ್ಯಾನ್ ಬೇಱರೂ ಅಲ್ಲ. ಟೀಮ್ ಇಂಡಿಯಾದ ಥ್ರೋಡೌನ್ ಎಕ್ಸ್ಪರ್ಟ್ ರಘವೇಂದ್ರ ಅಲಿಯಾಸ್ ರಘು.
ಆಟಗಾರನಲ್ಲದಿದ್ದರೂ ತಂಡಕ್ಕೆ ಈತ ಮುಖ್ಯ
ಆಟಗಾರನಲ್ಲ, ಕೋಚಿಂಗ್ ಸಿಬ್ಬಂದಿ, ಮೆಡಿಕಲ್ ಟೀಮ್ ಕೂಡ ಸಹ ಅಲ್ಲ. ಆದರೂ ಈತ ತಂಡದ ಮೇನ್ ವೆಪನ್. ಇದಕ್ಕೆ ಕಾರಣ ಥ್ರೋಡೌನ್ ಸ್ಪೆಷಲಿಸ್ಟ್ ಆಗಿ ಸುರಿಸುವ ಬೆವರು. ನೆಟ್ಸ್ನಲ್ಲಿ ಬೌಲರ್ಗಳಿಂಗಿಂತಲೂ ಹೆಚ್ಚು ಕಠಿಣ ಪರಿಶ್ರಮ ಪಡುವ ಈತ, ಟೀಮ್ ಇಂಡಿಯಾ ಸಕ್ಸಸ್ ಹಿಂದಿನ ಸಿಕ್ರೇಟ್ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ಬ್ಯಾಟ್ಸ್ಮನ್ಗಳ ಅಗತ್ಯಕ್ಕೆ ತಕ್ಕಂತೆ ಥ್ರೋಡೌನ್ ಮಾಡೋ ಈತನ ಶ್ರಮ ನಿಜಕ್ಕೂ ಲೆಕ್ಕಕ್ಕಿಲ್ಲ. ಘಾತಕ ವೇಗಕ್ಕೆ ಇಂದು ಟೀಮ್ ಇಂಡಿಯಾ ಎದೆಯೊಡ್ಡಿ ನಿಲ್ತಿದೆ ಅಂದ್ರೆ ಈ ಹಿಂದಿನ ಕ್ರೆಡಿಟ್ ಥ್ರೋಡೌನ್ ಸ್ಪೆಷಲಿಸ್ಟ್ ರಘುಗೆ ಸೇರುತ್ತೆ. ಇದನ್ನ ಸ್ವತಃ ಹಲವು ದಿಗ್ಗಜರೇ ಒಪ್ಪಿಕೊಂಡಿದ್ದಾರೆ.
ಟೀಮ್ ಇಂಡಿಯಾ ಜೊತೆ ಸುದೀರ್ಘ ಪಯಣ..!
ಟೀಮ್ ಇಂಡಿಯಾ ಜೊತೆ ರಘು ಪಯಣ. ಇಂದು ನಿನ್ನೆಯದ್ದಲ್ಲ. ಬರೋಬ್ಬರಿ 12 ವರ್ಷಗಳ ಕಾಲದ್ದಾಗಿದ್ದೆ. 2011ರಲ್ಲಿ ಮೊದಲ ಬಾರಿ ಇಂಡಿಯಾದ ಸಹಾಯಕನಾಗ ಆಸ್ಟ್ರೇಲಿಯಾಗೆ ಪ್ರಯಾಣಿಸಿದ್ದ ರಘು, ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಮಹೇಂದ್ರ ಸಿಂಗ್ ಸೇರಿದಂತೆ ಹಲವು ದಿಗ್ಗಜರಿಗೆ ನೆಟ್ಸ್ನಲ್ಲಿ ಬೌಲಿಂಗ್ ಮಾಡಿ ಸೈ ಎನಿಸಿಕೊಂಡಿದ್ರು. 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಈತನ ಅಳಿಲು ಸೇವೆ ಇತ್ತು ಅನ್ನೋದನ್ನು ಮರೆಯುವಂತಿಲ್ಲ. ಎನ್ಸಿಎನಲ್ಲೇ ಬಹುಪಾಲು ಕೆಲಸ ಮಾಡ್ತಿದ್ದ ರಘು, 2014ರಿಂದ ಸಂಪೂರ್ಣ ಟೀಮ್ ಇಂಡಿಯಾದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದ್ದಾರೆ.
ಕುಮುಟಾ ಟು ಟೀಮ್ ಇಂಡಿಯಾ.. ಜರ್ನಿಯೇ ರೋಚಕ
ಕುಮಟಾ ತಾಲೂಕಿನ ವಿವೇಕ್ ನಗರ ಮೂಲದ ರಘು, ಜೀವನ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಅಸಂಖ್ಯಾತ ಸಮಸ್ಯೆ ಎದುರಿಸಿದ್ದ ರಘು, ಕುಮಟಾ to ಎನ್ಸಿಎ.. ಎನ್ಸಿಎ to ಟೀಮ್ ಇಂಡಿಯಾ ಸೇರಿದ್ದೆ ರೋಚಕ ಕಥೆ. ಟೀಮ್ ಇಂಡಿಯಾ ಪರ ಆಡುವ ಕನಸು ಕಂಡಿದ್ದ ರಘು, ಥ್ರೋಡೌನ್ ಸ್ಪೆಷಲಿಸ್ಟ್ ಸೇರಿದ್ದು ಬೆಂಗಳೂರಿನ ಎನ್ಸಿಎಗೆ. ಇಲ್ಲಿಂದ ಶುರುವಾದ ರೋಚಕ ಜರ್ನಿ ಟೀಮ್ ಇಂಡಿಯಾ ತಲುಪುವಂತೆ ಮಾಡಿದ್ದು ದಿಗ್ಗಜ ಸಚಿನ್ ಹಾಗೂ ರಾಹುಲ್ ದ್ರಾವಿಡ್ ಅನ್ನೋದು ಮರೆಯುವಂತಿಲ್ಲ.
ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಕನ್ನಡಿಗ ರಘುಗೆ ಬಿಗ್ ಆಫರ್ಗಳೇ ಹುಡುಕಿ ಬಂದಿತ್ತು. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಸೇರಿದಂತೆ ಕೆಲ ಐಪಿಎಲ್ ತಂಡಗಳೂ ನೀಡಿದ್ವು. ಬಿಸಿಸಿಐ ಹಾಗೂ NCAಗೆ ನಿಷ್ಠರಾಗಿರಲು ಬಯಸಿದ್ದ ರಘು, ಬಿಗ್ ಆಫರ್ಗಳನ್ನೇ ತಿರಸ್ಕರಿಸಿ ಟೀಮ್ ಇಂಡಿಯಾಗಾಗಿ ಜೀವನ ಮುಡುಪಾಗಿಟ್ಟರು ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ.
ಒಟ್ನಲ್ಲಿ, ಅದೇನೇ ಆಗಲಿ ವಿರಾಟ್ ಕೊಹ್ಲಿ ಸೇರಿದಂತೆ ಹಲವರು ದಿಗ್ಗಜರಾಗಿ ಬೆಳೆಯುವ ಹಿಂದೆ ಕನ್ನಡಿಗ ಪಾತ್ರ ನಿಜಕ್ಕೂ ಬಹುದೊಡ್ಡದಿದೆ. ಇದು ಜಸ್ಟ್ ನಾವ್ ಹೇಳ್ತಿರೋ ಮಾತಲ್ಲ. ಸ್ವತಃ ವಿರಾಟ್ ಕೊಹ್ಲಿಯೇ ಈ ಬಗ್ಗೆ ಹೇಳಿಕೊಂಡಿದ್ದುಂಟು.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್