newsfirstkannada.com

12 ವರ್ಷ, 17 ಸರಣಿ, ಅಜೇಯ ಟೀಮ್​ ಇಂಡಿಯಾ.. ಇಂಗ್ಲೆಂಡ್ ವಿರುದ್ಧದ ಟೆಸ್ಟ್​​ನ ಹೈಲೈಟ್ಸ್..!

Share :

Published February 27, 2024 at 1:43pm

    ಮಿಂಚಿನ ಪ್ರದರ್ಶನ ನೀಡಿದ ಯಂಗ್​ಸ್ಟರ್ಸ್​

    ರಾಂಚಿ ರಣಾಂಗಣದಲ್ಲಿ ಸ್ಪಿನ್ನರ್ಸ್​ ದರ್ಬಾರ್

    ಆಂಗ್ಲರ ಬಝ್​​ಬಾಲ್, ಭಾರತದಲ್ಲಿ​​​ ಶಟ್​ಡೌನ್

ರಾಂಚಿ ರಣಾಂಗಣದಲ್ಲಿ ಟೀಮ್​ ಇಂಡಿಯಾ ಜಯಭೇರಿ ಬಾರಿಸಿದೆ. ರೋಹಿತ್​ ಪಡೆಯ ಆಲ್​​ರೌಂಡ್​ ಪರ್ಫಾಮೆನ್ಸ್​ ಮುಂದೆ ಇಂಗ್ಲೆಂಡ್​ ಆಟ ನಡಿಲೇ ಇಲ್ಲ. ಆಂಗ್ಲರ​ ಬಝ್​ಬಾಲ್​ಗೆ ಟೀಮ್​ ಇಂಡಿಯನ್ಸ್​​ ಸರಿಯಾದ ಕೌಂಟರ್​​ ಕೊಟ್ರು. ರಾಂಚಿ ಟೆಸ್ಟ್​ನಲ್ಲಿ ರೋಹಿತ್​ ಪಡೆಯ ಗೆಲುವಿನ ಯಾತ್ರೆ ಹೇಗಿತ್ತು?

4ನೇ ದಿನದಾಟದಲ್ಲಿ ಭರ್ಜರಿ ಫೈಟ್​ ಕೊಟ್ಟ ಆಂಗ್ಲ ಪಡೆ ಪ್ರಮಖ 5 ವಿಕೆಟ್​ಗಳನ್ನು ಉರುಳಿಸುವಲ್ಲಿ ಯಶಸ್ವಿಯಾಯ್ತು. ರೋಹಿತ್​ ಶರ್ಮಾ ಹಾಗೂ ಶುಭ್​ಮನ್​ ಗಿಲ್​ರ ಅರ್ಧಶತಕ ಹಾಗೂ ದೃವ್​ ಜುರೇಲ್​ರ ಕೆಚ್ಚೆದೆಯ ಹೋರಾಟದ ಮುಂದೆ ಆಂಗ್ಲರ ಗೆಲುವಿನ ಕನಸು ನುಚ್ಚುನೂರಾಯ್ತು. 5 ವಿಕೆಟ್​​ಗಳ ಜಯ ಸಾಧಿಸಿದ ಟೀಮ್​ ಇಂಡಿಯಾ ಸರಣಿ ಗೆದ್ದು ಬೀಗಿದ್ರೆ ಆಂಗ್ಲ ಪಡೆ ಸರಣಿ ಸೋಲಿನ ಮುಖಭಂಗಕ್ಕೆ ಒಳಗಾಯ್ತು.

12 ವರ್ಷ, 17 ಸರಣಿ, ಅಜೇಯ ಟೀಮ್​ ಇಂಡಿಯಾ
ಟೀಮ್​ ಇಂಡಿಯಾ ತವರಿನಲ್ಲಿ ಟೆಸ್ಟ್​ ಸರಣಿ ಸೋತಿದ್ದು 12 ವರ್ಷಗಳ ಹಿಂದೆ. 2012ರಲ್ಲಿ ಆಂಗ್ಲರ ವಿರುದ್ಧ ಕೊನೆಯ ಬಾರಿ ಸರಣಿ ಕೈಚೆಲ್ಲಿದ್ದ ಟೀಮ್​ ಇಂಡಿಯಾ ಈವರೆಗೂ ಅಜೇಯ ಓಟ ನಡೆಸಿದೆ. ಸದ್ಯ ನಡೀತಾ ಇರೋ ಸರಣಿಯೂ ಸೇರಿ ಒಟ್ಟು 17 ಟೆಸ್ಟ್​ ಸರಣಿಗಳಲ್ಲಿ ಗೆಲುವಿನ ಪತಾಕೆ ಹಾರಿಸಿದೆ.

ಮಿಂಚಿನ ಪ್ರದರ್ಶನ ನೀಡಿದ ಯಂಗ್​ಸ್ಟರ್ಸ್​

ರಾಂಚಿ ಟೆಸ್ಟ್​ ಪಂದ್ಯದ ನಿಜವಾದ ಗೆಲುವಿನ ರೂವಾರಿಗಳು ಯಂಗ್​​ಸ್ಟರ್ಸ್​. ಮೊದಲ ದಿನದಾಟದಲ್ಲಿ ಡೆಬ್ಯೂಟಂಟ್​​ ಆಕಾಶ್​ ದೀಪ್​ ಸಾಲಿಡ್​ ಸ್ಪೆಲ್​ ಮೂಲಕ ಅಬ್ಬರಿಸಿದ್ರು. ಆ ಬಳಿಕ ಬ್ಯಾಟಿಂಗ್​ನಲ್ಲಿ ಯಶಸ್ವಿ ಜೈಸ್ವಾಲ್​, ಧ್ರುವ ಜುರೇಲ್​ ಹಾಫ್​ ಸೆಂಚುರಿ ಸಿಡಿಸಿ ಮಿಂಚಿದ್ರು. 2ನೇ ಇನ್ನಿಂಗ್ಸ್​​ನಲ್ಲಿ ಜೈಸ್ವಾಲ್​, ಶುಭ್​ಮನ್​ ಗಿಲ್​, ದೃವ್​ ಜುರೇಲ್​ ಡಿಸೆಂಟ್​ ಪರ್ಫಾಮೆನ್ಸ್​ ನೀಡಿ ಎಲ್ಲರ ಮನಗೆದ್ರು. ಇವ್ರ ಆಟಕ್ಕೆ ಫಿದಾ ಸಚಿನ್​ ತೆಂಡುಲ್ಕರ್​, ವಿರಾಟ್​ ಕೊಹ್ಲಿ ಕೂಡ ಫಿದಾ ಆಗಿ ಸಲಾಂ ಅಂದಿದ್ದಾರೆ.

ರಾಂಚಿ ರಣಾಂಗಣದಲ್ಲಿ ಇಂಡಿಯನ್​ ಸ್ಪಿನ್ನರ್ಸ್​ ದರ್ಬಾರ್
ಆರಂಭದಲ್ಲಿ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟುಹಾಕಿದ್ದ ರಾಂಚಿ ಪಿಚ್​​ನಲ್ಲಿ ಟೀಮ್​ ಇಂಡಿಯಾ ಸ್ಪಿನ್ನರ್ಸ್​ ದರ್ಬಾರ್​ ನಡೆಸಿದ್ರು. ಮೊದಲ ಇನ್ನಿಂಗ್ಸ್​ನಲ್ಲಿ ರವೀಂದ್ರ ಜಡೇಜಾ 4 ವಿಕೆಟ್​​ ಕಬಳಿಸಿ ಆಂಗ್ಲರಿಗೆ ಶಾಕ್​ ಕೊಟ್ರು. 2ನೇ ಇನ್ನಿಂಗ್ಸ್​​ನಲ್ಲಿ ಅಶ್ವಿನ್​ 5, ಕುಲ್​​ದೀಪ್​ ಯಾದವ್​ 4 ವಿಕೆಟ್​​ ಕಬಳಿಸಿ ಇಂಗ್ಲೆಂಡ್​ ಕಥೆ ಮುಗಿಸಿದ್ರು. ಇಂಡಿಯನ್​ ಸ್ಪಿನ್ನರ್ಸ್​ ಒಟ್ಟು 15 ವಿಕೆಟ್​​​ ಬೇಟೆಯಾಡಿದ್ರು.

ಆಂಗ್ಲರ ಬಝ್​​ಬಾಲ್, ಭಾರತದಲ್ಲಿ​​​ ಶಟ್​ಡೌನ್.​.!
ವಿಶ್ವ ಕ್ರಿಕೆಟ್​​ ಲೋಕದಲ್ಲಿ ಹೊಸ ಅಲೆ ಎಬ್ಬಿಸಿದ್ದ ಆಂಗ್ಲರ ಬಝ್​ಬಾಲ್​ ಭಾರತದ ನೆಲದಲ್ಲಿ ಕಂಪ್ಲೀಟ್​ ಶಟ್​​ಡೌನ್​ ಆಯ್ತು. ಬೆನ್​ ಸ್ಟೋಕ್ಸ್​ – ಮೆಕಲಮ್​ ಜೋಡಿಯ ಅಗ್ರೆಸ್ಸಿವ್​ ಅಪ್ರೋಚ್​​ಗೆ ರೋಹಿತ್​ ಶರ್ಮಾ – ರಾಹುಲ್​ ದ್ರಾವಿಡ್​ ಜೋಡಿ ತಿರುಮಂತ್ರ ಹಾಕಿತು. ರಣವ್ಯೂಹದಲ್ಲಿ ಸಿಲುಕಿದ ಇಂಗ್ಲೆಂಡ್​ ಇತ್ತ ಬಝ್​ಬಾಲ್​ ಸಮರ್ಥಿಸಲೂ ಆಗದೇ, ಡಿಫೆನ್ಸಿವ್​ ಆಟ ಆಡಲೂ ಆಗದೇ ತಿಣುಕಾಡಿಬಿಡ್ತು.

WTC ಱಂಕಿಂಗ್​ನಲ್ಲಿ ಭಾರತದ 2ನೇ ಸ್ಥಾನ ಭದ್ರ..!
ರಾಂಚಿ ಟೆಸ್ಟ್​ನಲ್ಲಿ 5 ವಿಕೆಟ್​​ಗಳ ಗೆಲುವಿನೊಂದಿಗೆ ಟೀಮ್​ ಇಂಡಿಯಾ ವರ್ಲ್ಡ್​ ಟೆಸ್ಟ್​ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ 2ನೇ ಸ್ಥಾನವನ್ನ ಭದ್ರ ಪಡಿಸಿಕೊಂಡಿದೆ. ಆಡಿರುವ 8 ಪಂದ್ಯಗಳಲ್ಲಿ 5 ರಲ್ಲಿ ಜಯ ಸಾಧಿಸಿರುವ ಟೀಮ್​ ಇಂಡಿಯಾ 64.58ರ ಗೆಲುವಿನ ಸರಾಸರಿಯೊಂದಿಗೆ 2ನೇ ಸ್ಥಾನದಲ್ಲಿ ಉಳಿದಿದೆ. ಕೇವಲ 19.44ರ ಗೆಲುವಿನ ಸರಾಸರಿ ಹೊಂದಿರೋ ಇಂಗ್ಲೆಂಡ್​ ಕೊನೆಯಿಂದ 2ನೇ ಸ್ಥಾನದಲ್ಲಿದೆ.

ಇದೇ ಸರಣಿಯ ಹೈದ್ರಾಬಾದ್​​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲುಂಡಿತ್ತು. ಆದ್ರೆ, ಆ ಬಳಿಕ ರೋಹಿತ್​ ಪಡೆ ಕಮ್​ಬ್ಯಾಕ್​ ಮಾಡಿದ ರೀತಿ ನಿಜಕ್ಕೂ ರಣರೋಚಕ. ಸ್ಟಾರ್​​ಗಳ ಅಲಭ್ಯತೆಯ ನಡುವೆ ಯುವ ತಂಡವನ್ನ ರೋಹಿತ್​ ಶರ್ಮಾ ಲೀಡ್​ ಮಾಡಿದ ರೀತಿಗೆ ಸಲಾಂ ಹೇಳಲೇಬೇಕು. ಸದ್ಯ, ಅಬ್ಬರದ ಆಟದಿಂದ 3-1 ಅಂತರದಲ್ಲಿ ಸರಣಿ ಗೆದ್ದಿರುವ ಟೀಮ್​ ಇಂಡಿಯಾ ಧರ್ಮಶಾಲಾದಲ್ಲಿ ನಡೆಯಲಿರೋ ಅಂತಿಮ ಟೆಸ್ಟ್​ನಲ್ಲೂ ದರ್ಬಾರ್​ ನಡೆಸಲಿ ಅನ್ನೋದು ಫ್ಯಾನ್ಸ್​ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

12 ವರ್ಷ, 17 ಸರಣಿ, ಅಜೇಯ ಟೀಮ್​ ಇಂಡಿಯಾ.. ಇಂಗ್ಲೆಂಡ್ ವಿರುದ್ಧದ ಟೆಸ್ಟ್​​ನ ಹೈಲೈಟ್ಸ್..!

https://newsfirstlive.com/wp-content/uploads/2024/02/TEAM-INDIA-27.jpg

Load More