newsfirstkannada.com

ಟೀಂ ಇಂಡಿಯಾಗೆ ಸಿಕ್ಕ ಮತ್ತೊಬ್ಬ ಯಂಗ್​ ಗನ್.. ಕ್ರಿಕೆಟ್ ಲೋಕದ ನ್ಯೂ ಸೆನ್ಸೇಷನ್ ಇವರು..!

Share :

10-08-2023

    ಏಕಾಗ್ರತೆ, ತಾಳ್ಮೆ, ಆತ್ಮವಿಶ್ವಾಸಕ್ಕೆ ಬಹುಪರಾಕ್​

    ವಯಸ್ಸಿಗೆ ಮೀರಿದ ಆಟಕ್ಕೆ ಮನಸೋತ ಕ್ರಿಕೆಟ್ ಲೋಕ

    ಡೆಬ್ಯೂ ಪಂದ್ಯದಲ್ಲೇ ಮಿಂಚಿನ ಆಟವಾಡಿ ಹೃದಯ ಗೆದ್ದ

ತಿಲಕ್​ ವರ್ಮಾ.. 20 ವರ್ಷದ ಯಂಗ್ ಗನ್​.. ಈ ಬಿಸಿ ರಕ್ತದ ಹುಡುಗ ಆಡಿದ್ದು ಕೇವಲ 3ನೇ ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನ ಮಾತ್ರ. ಆದರೆ, ಈತನ ಏಕಾಗ್ರತೆ, ತಾಳ್ಮೆ, ಆತ್ಮವಿಶ್ವಾಸದ ಆಟ ನೂರು ಪಂದ್ಯಗಳನ್ನಾಡಿದ ಅನುಭವಿಯನ್ನೇ ನೆನಪಿಸುತ್ತೆ. ಅಷ್ಟೇ ಅಲ್ಲ..! ಟೀಮ್ ಇಂಡಿಯಾದ ಫ್ಯೂಚರ್ ಸ್ಟಾರ್​ ಅನ್ನೋದನ್ನು ಸಾಬೀತು ಮಾಡಿದೆ.

ತಿಲಕ್​​ ವರ್ಮಾ.. ಟೀಮ್ ಇಂಡಿಯಾದ ನ್ಯೂ ಸೆನ್ಸೇಷನ್​.. ಟಿ20 ಡೆಬ್ಯೂ ಪಂದ್ಯದಲ್ಲೇ ಮಿಂಚಿನ ಆಟವಾಡಿ ಎಲ್ಲರ ಹೃದಯ ಗೆದ್ದಿರುವ ತಿಲಕ್​ ವರ್ಮಾ, ದಿನದಿಂದ ದಿನಕ್ಕೆ ಹೊಸ ಆಶಾಭಾವನೆ ಮೂಡಿಸಿದ್ದಾರೆ. ಡೆಬ್ಯೂ ಸಿರೀಸ್​ನಲ್ಲೇ ತಿಲಕ್​​​​​ ಆಡುತ್ತಿರುವ ನಿರ್ಭಾಯನಕ ಆಟ ಭವಿಷ್ಯದ ಸೂಪರ್ ಸ್ಟಾರ್​ ಅನ್ನೋದನ್ನೇ ಸಾರಿ ಸಾರಿ ಹೇಳುತ್ತಿವೆ. ಇದಕ್ಕೆಲ್ಲಾ ಕಾರಣ ವೆಸ್ಟ್​ ಇಂಡೀಸ್ ಟಿ20 ಸರಣಿಯ ಮೊದಲ ಮೂರು ಇನ್ನಿಂಗ್ಸ್​ಗಳಲ್ಲಿ ತಿಲಕ್ ಬ್ಯಾಟ್ ಬೀಸಿದ ಪರಿ.

ವಿಂಡೀಸ್​ನ ಕಠಿಣ ಪಿಚ್​​ಗಳಲ್ಲಿ ಟೀಮ್ ಇಂಡಿಯಾದ ಅನುಭವಿಗಳು, ಸ್ಟಾರ್​ ಬ್ಯಾಟ್ಸ್​ಮನ್​ಗಳು ದಿಕ್ಕೆಟ್ಟು ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ರೆ, ಕ್ರೀಸ್​ನಲ್ಲಿ ನೆಲೆಯೂರಿ ತಿಲಕ್​ ವರ್ಮಾ ಬ್ಯಾಟಿಂಗ್ ನಡೆಸಿದ್ರು. ಈ ಮೂಲಕ ಅನುಭವಿಗಳಿಗೆ ಬ್ಯಾಟಿಂಗ್ ಪಾಠವನ್ನೇ ಹೇಳಿಕೊಟ್ಟರು ಅಂದೂ ತಪ್ಪಾಗಲ್ಲ. ಇದ್ರೊಂದಿಗೆ ತಮ್ಮ ಟೀಮ್ ಇಂಡಿಯಾ ಕರೆಯನ್ನು ಸಮರ್ಥಿಸಿಕೊಂಡಿದ್ದು ಸುಳ್ಳಲ್ಲ.

ಡೆಬ್ಯು ಮ್ಯಾಚ್​ನಲ್ಲಿ ತಿಲಕ್ ವರ್ಮ ವಂಡರ್​..!

ಟ್ರಿನಿಡಾಡ್​​​ನ ಮೊದಲನೇ ಪಂದ್ಯ ಟೀಮ್ ಇಂಡಿಯಾ ಸೋತರೂ, ಎಲ್ಲರ ಕಣ್ಣು ಕುಕ್ಕಿದ್ದು ಮಾತ್ರ ತಿಲಕ್ ವರ್ಮಾರ ಆಟ. ಈ ಪಂದ್ಯದಲ್ಲಿ ಅನುಭವಿಗಳೆಲ್ಲ ವಿಕೆಟ್ ಒಪ್ಪಿಸಿ ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಸೇರಿದ್ರೆ, ಕ್ರೀಸ್​ನಲ್ಲಿ ಲೀಲಾಜಾಲವಾಗಿ ಬ್ಯಾಟ್​ ಬೀಸಿದ ತಿಲಕ್, 22 ಎಸೆತಗಳಲ್ಲಿ 39 ರನ್ ಸಿಡಿಸಿದ್ರು. ಈ ಅದ್ಭುತ ಇನ್ನಿಂಗ್ಸ್​ನಲ್ಲಿ ತಿಲಕ್ ಸಿಡಿಸಿದ ಮೂರು ಸಿಕ್ಸರ್​​ಗಳಂತೂ ಮನಮೋಹಕ.

2ನೇ ಪಂದ್ಯದಲ್ಲಿ ಅರ್ಧಶತಕದ ಮೆರಗು

ಮೊದಲ ಪಂದ್ಯದಲ್ಲಿ ಮಾತ್ರವೇ ಅಲ್ಲ. 2ನೇ ಟಿ20 ಪಂದ್ಯದಲ್ಲೂ ತಿಲಕ್​ ಅದ್ಭುತ ಆಟವಾಡಿದ್ರು. ಒತ್ತಡದ ಪರಿಸ್ಥಿಯಲ್ಲಿ ನಿರ್ಭಿತಿಯಿಂದ ಬ್ಯಾಟ್ ಬೀಸಿದ ತಿಲಕ್, 41 ಎಸೆತದಲ್ಲಿ 51 ರನ್ ಗಳಿಸಿದರು. ಈ ಅಮೋಘ ಇನ್ನಿಂಗ್ಸ್​ ನಿಜಕ್ಕೂ ಸಂಕಷ್ಟದಲ್ಲಿ ತಂಡಕ್ಕೆ ನೆರವಾಗೋದೇಗೆ ಅನ್ನೋದನ್ನು ಹೇಳುವಂತಿತ್ತು.

3ನೇ ಟಿ20 ಪಂದ್ಯದಲ್ಲಿ ವಿಜಯ ತಿಲಕ

ತಿಲಕ್ ವರ್ಮಾರ ಮೆಚ್ಯುರ್​​​ ಇನ್ನಿಂಗ್ಸ್​ 3ನೇ ಪಂದ್ಯದಲ್ಲೂ ಮುಂದುವರಿದಿತ್ತು. ಸೂರ್ಯ ಕುಮಾರ್​ ಜೊತೆ ಬಿಗ್ ಇನ್ನಿಂಗ್ಸ್​ ಕಟ್ಟಿದ್ದ ತಿಲಕ್ ವರ್ಮಾ, ಟೀಮ್ ಇಂಡಿಯಾ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು. 37 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಒಳಗೊಂಡ ಅಜೇಯ 49 ರನ್ ಗಳಿಸಿದ ತಿಲಕ್ ವರ್ಮಾ, ಜಸ್ಟ್​ ಒಂದೇ ಒಂದು ರನ್​​ನ ಅಂತರದಲ್ಲಿ ಅರ್ಧಶತಕ ವಂಚಿತರಾದರು. ಈ ಮೂರು ಇನ್ನಿಂಗ್ಸ್​ಗಳು ತಿಲಕ್ ವರ್ಮ ಸಾಮರ್ಥ್ಯವನ್ನ ಹೊರಹಾಕಿತ್ತು. ಈ ಇನ್ನಿಂಗ್ಸ್​ಗಳೇ ತಿಲಕ್ ಫ್ಯೂಚರ್ ಸ್ಟಾರ್​ ಅನ್ನೋದನ್ನೇ ಸಾರಿ ಸಾರಿ ಹೇಳ್ತಿವೆ.

ಭವಿಷ್ಯದ ಸ್ಟಾರ್​ ಆಗುವ ಮುನ್ಸೂಚನೆ ನೀಡಿದ ತಿಲಕ್​

ಡೆಬ್ಯು ಸಿರೀಸ್​ನಲ್ಲಿ ಪರಿಪಕ್ವ ಬ್ಯಾಟಿಂಗ್​​ ನಡೆಸಿದ ತಿಲಕ್​, ಇನ್ನಿಂಗ್ಸ್​ ಕಟ್ಟುವಲ್ಲಿ ನಾನು ನಿಪುಣ ಅನ್ನೋದನ್ನು ಪ್ರೂವ್ ಮಾಡಿದರು. ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸುವ ಕಲೆಯ ಜೊತೆಗೆ ಬಿಗ್ ಸಿಕ್ಸರ್​ ಸಿಡಿಸುವ ಸಾಮರ್ಥ್ಯ ನಿಜಕ್ಕೂ ಅದ್ಭುತ. ಅನುಭವಿಯಂತೆ ಗೇಮ್​ನ ಪರಿಸ್ಥಿತಿ​​ ತಟ್ಟನೇ ಅರ್ಥ ಮಾಡಿಕೊಳ್ಳುವ ಪರಿ ನಿಜಕ್ಕೂ ಗ್ರೇಟ್. ಹೀಗಾಗಿಯೇ ತಿಲಕ್, ಮೊದಲ ಮೂರು ಪಂದ್ಯಗಳಲ್ಲೇ ಟೀಮ್ ಇಂಡಿಯಾದ ಫ್ಯೂಚರ್​​​​​​​​ ಅನ್ನೋದನ್ನು ಫ್ರೂವ್ ಮಾಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಂ ಇಂಡಿಯಾಗೆ ಸಿಕ್ಕ ಮತ್ತೊಬ್ಬ ಯಂಗ್​ ಗನ್.. ಕ್ರಿಕೆಟ್ ಲೋಕದ ನ್ಯೂ ಸೆನ್ಸೇಷನ್ ಇವರು..!

https://newsfirstlive.com/wp-content/uploads/2023/08/TILAK_VARMA-1-1.jpg

Load More