ಶುಭ್ಮನ್ ಡೇಟಿಂಗ್ ಮಾಡ್ತಿರೋ ಬ್ಯೂಟಿ ಸ್ಟಾರ್ ಗರ್ಲ್ ಯಾರು..?
ಸಾರಾ ಅಲಿಖಾನ್, ಸಾರಾ ತೆಂಡೂಲ್ಕರ್ ಸದ್ಯ ಕೇಳಿ ಬರ್ತಿರೋ ಹೆಸರು
ಶುಭ್ಮನ್ ಗಿಲ್ ಕ್ಲೀನ್ ಬೋಲ್ಡ್ ಆಗಿರೋದು ಯಾವ ಚೆಲುವೆಗೆ..?
ಶುಭ್ಮನ್ ಗಿಲ್ ಮನ ಕದ್ದ ಚೆಲುವೆ ಯಾರು?. ಸಾರಾ ತೆಂಡೂಲ್ಕರ್ ಆ?. ಸಾರಾ ಅಲಿ ಖಾನಾ?. ಅಭಿಮಾನಿಗಳ ತಲೆಯಲ್ಲಿ ಗಿರಕಿ ಹೊಡೀತಾ ಇರೋ ಪ್ರಶ್ನೆಯಿದು. ಈ ಕನ್ಫೂಷನ್ಗೆ ಇವತ್ತು ಬ್ರೇಕ್ ಹಾಕ್ತಿವಿ. ಶುಭ್ಮನ್ ಗಿಲ್ ಕ್ಲೀನ್ ಬೋಲ್ಡ್ ಆಗಿರೋದು ಯಾವ ಚೆಲುವೆಗೆ?.
ಟೀಮ್ ಇಂಡಿಯಾದ ಯಂಗ್ ಸೆನ್ಸೇಷನ್ ಶುಭ್ಮನ್ ಗಿಲ್ ವಿಚಾರದಲ್ಲಿ 2 ಚರ್ಚೆ ಸದಾ ನಡೀತಾ ಇರುತ್ತೆ. ಆನ್ಫೀಲ್ಡ್ನ ಆಟದ ಬಗ್ಗೆ ಒಂದು ಕಡೆ ಡಿಬೆಟ್ ನಡೀತಾ ಇರೋದು ಕಾಮನ್. ಆದ್ರೆ, ಆಫ್ ದ ಫೀಲ್ಡ್ನ ಡೇಟಿಂಗ್ ಗಾಸಿಪ್ ಇದ್ಯಲ ಅದು. ತೀರಾ ದೊಡ್ಡಮಟ್ಟದಲ್ಲಿ ಚರ್ಚೆಯಾಗ್ತಿದೆ. ಫ್ಯಾನ್ಸ್ ಪಾಲಿಗಂತೂ ಒಂದು ಅನುಮಾನ ಯಕ್ಷಪ್ರಶ್ನೆಯಾಗಿ ಕಾಡ್ತಿದೆ.
ಶುಭ್ಮನ್ ಕ್ಲೀನ್ಬೋಲ್ಡ್ ಆಗಿರೋದು ಯಾರಿಗೆ.?
ಫ್ಯಾನ್ಸ್ಗೆ ಮನದಲ್ಲಿರೋ ಡೌಟ್ ಇದೇ ನೋಡಿ. ಆರಂಭದಲ್ಲಿ ಎಲ್ರೂ ಸಾರಾ ತೆಂಡೂಲ್ಕರ್ ಅಂತಲೇ ಫಿಕ್ಸ್ ಆಗಿದ್ರು. ಆದ್ರೆ, ಯಾವಾಗ ಶುಭ್ಮನ್ ಒಂದು ಸಲ ಸಾರಾ ಅಲಿ ಖಾನ್ ಜೊತೆ ಹೋಟೆಲ್ನಲ್ಲಿ ಕಾಣಿಸಿಕೊಂಡ್ರೋ, ಇಂಟರ್ವ್ಯೂನಲ್ಲಿ ಡೇಟಿಂಗ್ ಬಗ್ಗೆ ಅಡ್ಡ ಗೋಡೆ ಮೇಲೆ ದೀಪ ಇಟ್ಟ ಉತ್ತರ ಕೊಟ್ರೋ ಆಗ್ಲೆ ಶುರುವಾಗಿದ್ದು ಅನುಮಾನ.
ನಾನು ಆ ಸಾರಾ ಅಲ್ಲವೇ ಅಲ್ಲ.. ನನ್ ಬಿಟ್ಬಿಡಿ…!
ಸಾರಾ ಅಲಿಖಾನ್ ಬಗ್ಗೆ ಗಿಲ್ ಓಪನ್ ಸ್ಟೇಟ್ಮೆಂಟ್ ಕೊಟ್ಟ ದಿನದಿಂದ ಶುರುವಾಗಿದ್ದ ಡೌಟ್ಗೆ ಇಂದಿಗೂ ಫ್ಯಾನ್ಸ್ ತಲೆಯಲ್ಲಿ ಡೌಟಾಗೆ ಉಳಿದಿದೆ. ಸಾರಾ ಅಲಿಖಾನಾ ಅಥವಾ ಸಾರಾ ತೆಂಡುಲ್ಕರ್ ಆ ಅನ್ನೋ ಕನ್ಫೂಷನ್ ಕಾಡ್ತಿದೆ. ಆ ಕನ್ಫೂಷನ್ಗೆ ಸಾರಾ ಅಲಿಖಾನ್ ಕೊನೆಗೂ ತೆರೆ ಎಳೆದಿದ್ದಾರೆ.
ತೆಂಡೂಲ್ಕರ್ ಪುತ್ರಿಯೇ ಯುವರಾಜನ ಮನದರಸಿ.!
ಸಾರಾ ಅಲಿಖಾನ್ ಓಪನ್ ಆಗಿ ಡೇಟಿಂಗ್ ಗಾಸಿಪ್ ಅನ್ನ ಸಾರಾಸಗಟಾಗಿ ತಿರಸ್ಕರಿಸ್ತಿದ್ದಂತೆ ತೆಂಡುಲ್ಕರ್ ಪುತ್ರಿ ಟ್ರೆಂಡಿಂಗ್ನಲ್ಲಿದ್ದಾರೆ. ಸಚಿನ್ ಪುತ್ರಿ ಸಾರಾಗೆ ಶುಭ್ಮನ್ ಗಿಲ್ ಕ್ಲೀನ್ಬೋಲ್ಡ್ ಆಗಿದ್ದಾರೆ ಅಂತಾ ಫ್ಯಾನ್ಸ್ ಫುಲ್ ಫಿಕ್ಸ್ ಆಗಿಬಿಟ್ಟಿದ್ದಾರೆ. ಇವರಿಬ್ಬರ ಇತ್ತೀಚಿನ ನಡೆ ಇದಕ್ಕೆ ಪುಷ್ಟಿ ನೀಡಿದೆ.
ಒಂದೇ ಹೋಟೆಲ್, ಒಟ್ಟಾಗಿ ಕಾಣಿಸಿಕೊಂಡ್ರು ಸಾರಾ – ಶುಭ್ಮನ್.!
ಕಳೆದ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಹಿಂದಿನ ದಿನ ನಡೆದ ಘಟನೆಯಿದು. ಖಾಸಗಿ ಕಾರ್ಯಕ್ರಮವನ್ನ ಮುಗಿಸಿ ಮುಂಬೈನ ಹೋಟೆಲ್ ಒಂದರಿಂದ ಶುಭ್ಮನ್ ಗಿಲ್ ಹೊರ ಬರ್ತಾರೆ. ಗಿಲ್ ಹಿಂದೆ ಸಾರಾ ಕೂಡ ಕಾಣಿಸಿಕೊಳ್ತಾರೆ. ಇಬ್ಬರು ಒಟ್ಟಾಗಿ ಕಾಣಿಸಿಕೊಂಡ ಈ ವಿಡಿಯೊ ಡೇಟಿಂಗ್ ರೂಮರ್ಸ್ಗೆ ಸಾಕ್ಷಿ ನೀಡಿದೆ.
ವಿಶ್ವಕಪ್ ಪಂದ್ಯಗಳಲ್ಲೂ ಸಾರಾ-ಶುಭ್ಮನ್ ಧ್ಯಾನ.!
ವಿಶ್ವಕಪ್ ಮೆಗಾ ಟೂರ್ನಿಯಲ್ಲೂ ಸಾರಾ- ಶುಭ್ಮನ್ ಗಿಲ್ ಪ್ರೇಮಕಾವ್ಯದ ಸದ್ದು ಜೋರಾಗಿದೆ. ಟೀಮ್ ಇಂಡಿಯಾ ಪಂದ್ಯಗಳನ್ನ ನೋಡೋಕೆ ಸಾರಾ ಸ್ಟೇಡಿಯಂಗೆ ಬಂದು ಕೂರ್ತಿದ್ದಾರೆ. ಶುಭ್ಮನ್ ಬ್ಯಾಟಿಂಗ್ ಮಾಡ್ತಿದ್ರೆ, ಗ್ಯಾಲರಿ ಕೂತು ಸಾರಾ ಚಿಯರ್ ಮಾಡ್ತಿದ್ದಾರೆ.
ಇದಿಷ್ಟೇ ಅಲ್ಲ, ಫ್ಯಾನ್ಸ್, ಗಿಲ್ ಕಂಡಾಗಲೆಲ್ಲ ಮೈದಾನದಲ್ಲಿ ಸಾರಾ ಜಪ ಮಾಡ್ತಿದ್ದಾರೆ. ಸಾರಾ.. ಸಾರಾ ಎಂದು ಫ್ಯಾನ್ಸ್ ಕೂಗ್ತಿದ್ರೆ, ಟೀಮ್ ಇಂಡಿಯಾ ಪ್ಲೇಯರ್ಸ್ ಗಿಲ್ ಕಾಲೆಳೆಯುತ್ತಿದ್ದಾರೆ. ಸಾರಾ ಹೇಗಿದಾರೆ ಎಂದು ಫ್ಯಾನ್ಸ್ ಕೇಳಿದ್ರೆ, ವಿರಾಟ್ ಕೊಹ್ಲಿಯಂತೂ ಗಿಲ್ನೇ ಕೇಳಿ ಎಂದು ಹೇಳ್ತಿದ್ದಾರೆ.
ಒಂದೆಡೆ ಸಾರಾ ಅಲಿಖಾನ್ ಡೇಟಿಂಗ್ ರೂಮರ್ಸ್ನ ಸಾರಾಸಗಟಾಗಿ ತಿರಸ್ಕರಿಸಿದ್ರೆ, ಶುಭ್ಮನ್- ಸಾರಾ ನಡೆ ಡೇಟಿಂಗ್ ರೂಮರ್ಸ್ ಪುಷ್ಠಿ ಕೊಡ್ತಿದೆ. ಸುಮಾರು 2-3 ವರ್ಷದಿಂದ ಸಿಕ್ಕಾಪಟ್ಟೆ ಟ್ವಿಸ್ಟ್ & ಟರ್ನ್ಗಳನ್ನ ಕಂಡಿರೋ ಈ ಲವ್ ಕಹಾನಿಯಲ್ಲಿ ಮುಂದೆ ಏನಾಗುತ್ತೆ ಅನ್ನೋದನ್ನ ಆ ದೇವರೆ ಬಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ