ಮೂರು ವರ್ಷದಿಂದ ಶತಕವಿಲ್ಲದಿದ್ದರೂ ವಿರಾಟ್ ಕೊಹ್ಲಿಗೆ ಕೊಕ್ ಇಲ್ಲ
ಆವತ್ತು ಭಾರತ ತಂಡಕ್ಕೆ ಮಿಸ್ ಆಗಿದ್ದು ಭವಿಷ್ಯದ ನಾಯಕ ರಹಾನೆ..!
ರಹಾನೆ ಬಗ್ಗೆ ತಿಳಿದಿದ್ದ ರಾಹುಲ್ ದ್ರಾವಿಡ್ ಕಮ್ಬ್ಯಾಕ್ ಮಾಡಿಸಲಿಲ್ಲ
ಟೀಮ್ ಇಂಡಿಯಾದ ಮ್ಯಾನೇಜ್ಮೆಂಟ್ ಅಜಿಂಕ್ಯಾ ರಹಾನೆ ಬಳಿ ಕ್ಷಮೆ ಕೇಳಲೇಬೇಕು. ಅಂದು ಮಾಡಿದ ದೊಡ್ಡ ಪ್ರಮಾದ ಇದೀಗ ಟೀಮ್ ಇಂಡಿಯಾವನ್ನೇ ಸಂಕಷ್ಟಕ್ಕೆ ದೂಡಿದೆ. ಬಹುಶಃ ಅಂದು ಆ ತಪ್ಪನ್ನ ಮಾಡದಿದ್ದಿದ್ರೆ, ಇಂದು ಟೆಸ್ಟ್ ಚಾಂಪಿಯನ್ ಶಿಪ್ ಕಿರೀಟ ಭಾರತದ ಮುಡಿಗೇರುತ್ತಿತ್ತೇನೋ?.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ನಲ್ಲಿ ಟೀಮ್ ಇಂಡಿಯಾ ಸೋಲುಂಡಿದ್ದು ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ತಂಡವನ್ನ ಟೀಕಿಸೋ ಭರದಲ್ಲಿ ಅದೇ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಅಮೋಘ ಆಟವಾಡಿದ ಅಜಿಂಕ್ಯಾ ರಹಾನೆಯನ್ನ ಎಲ್ರೂ ಮರೆತು ಬಿಟ್ಟಿದ್ದಾರೆ. ಕಳಪೆ ಪರ್ಫಾಮೆನ್ಸ್ ನೀಡಿ ಟೀಮ್ ಇಂಡಿಯಾದಿಂದಲೇ ಹೊರ ಬಿದ್ದಿದ್ದ ರಹಾನೆ, ಹಾರ್ಡ್ ವರ್ಕ್ ಮಾಡಿ ಕಮ್ ಬ್ಯಾಕ್ ಮಾಡಿದ ಪಂದ್ಯದಲ್ಲಿ ಕಮಾಲ್ ಮಾಡಿದ್ರು.
ಕಮ್ ಬ್ಯಾಕ್ಗೆ ಪಣ ತೊಟ್ಟಿದ್ದ ಮುಂಬೈಕರ್.!
2022 ಜನವರಿ 11ರಂದು ಟೀಮ್ ಇಂಡಿಯಾ ಪರ ಕೊನೆ ಪಂದ್ಯವನ್ನಾಡಿದ ರಹಾನೆ ಕಮ್ ಬ್ಯಾಕ್ ಮಾಡೋ ಶಪಥ ಮಾಡಿದ್ರು. ತಂಡದಿಂದ ಹೊರಬಿದ್ದ ಮೇಲೆ ಕಠಿಣ ಅಭ್ಯಾಸ ನಡೆಸಿದ್ದ ಮುಂಬೈಕರ್, ಡೊಮೆಸ್ಟಿಕ್ ಅಖಾಡಕ್ಕೆ ಧುಮುಕಿ ಫಾರ್ಮ್ ಕಂಡುಕೊಳ್ಳುವಲ್ಲೂ ಯಶಸ್ವಿಯಾದ್ರು. ಈ ಸೀಸನ್ ಐಪಿಎಲ್‌ನಲ್ಲ್ಲಂತೂ ಎಲ್ಲರೂ ನಿಬ್ಬೆರಗಾಗುವ ಫರ್ಪಾಮೆನ್ಸ್ ನೀಡಿದ್ರು. ಇದ್ರ ಬೆನ್ನಲೇ ಟೆಸ್ಟ್ ಟೀಮ್ಗೂ ಕಮ್ಬ್ಯಾಕ್ ಮಾಡಿ ತಮ್ಮ ತಾಖತ್ ಅನ್ನು ಫೈನಲ್ ಪಂದ್ಯದಲ್ಲಿ ನಿರೂಪಿಸಿದ್ದಾರೆ.
ಟೀಮ್ ಇಂಡಿಯಾದಿಂದ ರಹಾನೆಗೆ ಅನ್ಯಾಯ.!
ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಅತಿರಥ ಮಹಾರಥರೆಲ್ಲ ಪೆವಿಲಿಯನ್ ಸೇರಿದ್ರು. ಅತ್ಯಂತ ಹೀನಾಯ ಸೋಲಿಗೆ ಗುರಿಯಾಗೋ ಆತಂಕ ಟೀಮ್ ಇಂಡಿಯಾಗೆ ಎದುರಾಗಿತ್ತು. ಕಠಿಣ ಸಂದರ್ಭದಲ್ಲಿ ಆಪತ್ಭಾಂದವನಂತೆ ಕೆಚ್ಚೆದೆಯ ಹೋರಾಟ ನಡೆಸಿ ಮರ್ಯಾದೆ ಉಳಿಸಿದ್ದು ಅಜಿಂಕ್ಯಾ ರಹಾನೆ. ಕಾಂಗರೂಗಳ ದಾಳಿಯನ್ನ ಸಮರ್ಥವಾಗಿ ದಂಡಿಸಿ ರಹಾನೆ ಆಡದಿದ್ರೆ, ಟೀಮ್ ಇಂಡಿಯಾ ಹೀನಾಯ ಸೋಲಿಗೆ ಗುರಿಯಾಗ್ತಿದ್ದು ಅಂದ್ರೆ, ಅದನ್ನ ಉಹಿಸೋಕು ಸಾಧ್ಯವಿಲ್ಲ. ಇಂತಾ ಆಪತ್ಭಾಂದವನಿಗೆ ಟೀಮ್ ಇಂಡಿಯಾದಿಂದ ಆಗಿದ್ದು ಅನ್ಯಾಯ.
ದ್ರಾವಿಡ್ ರಹಾನೆಯ ಕ್ಷಮೆ ಕೇಳಲೇಬೇಕು..!
ರಹಾನೆ ಎಂತಾ ವಿಶಿಷ್ಠ ಬ್ಯಾಟ್ಸ್ಮನ್ ಅನ್ನೋದನ್ನ ವಿಶ್ವದ ಮೂಲೆ ಮೂಲೆಯಲ್ಲಿರೋ ಕ್ರಿಕೆಟರ್ಗಳೇ ಹೇಳ್ತಾರೆ. ಟೆಸ್ಟ್ ಕ್ರಿಕೆಟ್ಗೆ ಬೇಕಾದ ಪೇಶನ್ಸ್, ಟೆಂಪರ್ಮೆಂಟ್, ಟೆಕ್ನಿಕ್ ಎಲ್ಲವೂ ರಹಾನೆಗಿದೆ. ಆದ್ರೆ, ಆಟ ಅಂದ ಮೇಲೆ ಏಳು ಬೀಳು ಸಹಜ. ರಹಾನೆಗೂ ಕೂಡ ಬ್ಯಾಡ್ ಟೈಂ ವಕ್ಕರಿಸಿತ್ತು. ಸತತ ವೈಫಲ್ಯ ಅನುಭವಿಸಿದ ರಹಾನೆ, ಮೇಲೆ ಟೀಕಾಕಾರರು ಮುಗಿಬಿದ್ದು ಬಿಟ್ರು. ಇಷ್ಟೇ ಆಗಿದ್ದು ಸೀನ್ ಕಟ್ ಮಾಡಿದ್ರೆ, ಸೌತ್ ಆಫ್ರಿಕಾ ಟೂರ್ ಮುಗಿದಿದ್ದೇ ತಡ ರಹಾನೆ ಟೀಮ್ ಇಂಡಿಯಾದಿಂದಲೇ ಔಟ್ ಆಗಿಬಿಟ್ರು.
ರೋಹಿತ್ ಸತತ ವೈಫಲ್ಯ, ಚಾನ್ಸ್ ಮೇಲೆ ಚಾನ್ಸ್..!
ರೋಹಿತ್ ಶರ್ಮಾ ಈಗಲೂ ಕನ್ಸಿಸ್ಟೆಂಟ್ ಆಟವನ್ನೇ ಆಡ್ತಿಲ್ಲ. 3 ವರ್ಷ ಶತಕ ಸಿಡಿಸಿದ ಕೊಹ್ಲಿ, ಕಳೆದ ಒಂದು ವರ್ಷಕ್ಕೂ ಮುನ್ನ ರನ್ ಗಳಿಕೆಗೂ ಪರದಾಡಿದ್ರು. ಚೇತೇಶ್ವರ್ ಪೂಜಾರ ಈಗಲೂ ಫ್ಲಾಪ್ ಶೋ ನೀಡ್ತಿದ್ದಾರೆ. ಹಾಗಿದ್ರೂ, ಇವಱರ ಸ್ಥಾನಕ್ಕೂ ಕುತ್ತು ಬಂದೇ ಇಲ್ಲ.. ಆದ್ರೆ, ರಹಾನೆ ಮಾತ್ರ ತಂಡದಿಂದ ಔಟ್ ಆಗಿ ಬಿಟ್ರು. ಅದೂ ರಹಾನೆ ತನ್ನ ಐಡಿಯಲ್ ಎಂದು ಆರಾಧಿಸೋ ರಾಹುಲ್ ದ್ರಾವಿಡ್ ಕೋಚ್ ಆದ ಮೇಲೆ ಅನ್ನೋದು ಇನ್ನೊಂದು ವಿಪರ್ಯಾಸ. ರಹಾನೆ ಸ್ಟ್ರೆಂಥ್ ಬಗ್ಗೆ ಅರಿವಿದ್ದ ದ್ರಾವಿಡ್ ಬ್ಯಾಕ್ ಮಾಡಬಹುದಿತ್ತು.
ಟೀಮ್ ಇಂಡಿಯಾಗೆ ಮಿಸ್ ಆಗಿದ್ದು ಭವಿಷ್ಯದ ನಾಯಕ.!
ಅಂದು ಸೆಲೆಕ್ಷನ್ ಕಮಿಟಿ ಹಾಗೂ ಟೀಮ್ ಮ್ಯಾನೇಜ್ಮೆಂಟ್ ರಹಾನೆಯನ್ನ ಹೊರಗಿಟ್ಟು ದೊಡ್ಡ ಪ್ರಮಾದವನ್ನೇ ಮಾಡಿಬಿಡ್ತು. ಸೌತ್ ಆಫ್ರಿಕಾ ಸರಣಿ ಅಂತ್ಯದ ಬೆನ್ನಲ್ಲೇ, ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ಗುಡ್ ಬೈ ಹೇಳಿದಾಗ ಟೀಮ್ ಇಂಡಿಯಾ ಮುಂದಿದ್ದ ಬೆಸ್ಟ್ ಆಪ್ಷನ್ ಅಜಿಂಕ್ಯಾ ರಹಾನೆ. ರಹಾನೆಯಲ್ಲಿರೋ ಕ್ಯಾಪ್ಟನ್ಸಿ ಸ್ಕಿಲ್ ಬಗ್ಗೆ ಬಹುಷಃ ಯಾರಿಗೂ ವಿವರಣೆ ನೀಡೋ ಅಗತ್ಯವೇ ಇಲ್ಲ.. ಅನಾನುಭವಿ ತಂಡವನ್ನ ಇಟ್ಟುಕೊಂಡು, ಅಪಾಯಕಾರಿ ಆಸ್ಟ್ರೇಲಿಯಾ ತಂಡವನ್ನ, ಅವರದ್ದೇ ನೆಲದಲ್ಲಿ ಸೋಲಿಸಿ ಸರಣಿ ಗೆಲ್ಲೋದು ಅಂದ್ರೆ ಅದು ಸಾಧಾರಣ ಸಾಧನೆಯಲ್ಲಾ.? ಇದನ್ನ ಸಲೀಸಾಗಿ ಮಾಡಿ ತೋರಿಸಿದ್ರು ರಹಾನೆ.
ರಹಾನೆ ಏನೋ ಇಡೀ ವಿಶ್ವ ಕ್ರಿಕೆಟ್ ಲೋಕ ಅಸಾಧ್ಯ ಎಂದಿದ್ದನ್ನ ಸಾಧ್ಯವಾಗಿಸಿ ತೋರಿಸಿ ತನ್ನ ಖದರ್ ಪ್ರೂವ್ ಮಾಡಿದ್ರು. ಆದ್ರೆ, ಟೀಮ್ ಮ್ಯಾನೇಜ್ಮೆಂಟ್ ಇದರ ಬೆಲೆಯ ಅರ್ಥವೇ ಆಗಲಿಲ್ಲ ಅನ್ನಿಸುತ್ತೆ. ಸೌತ್ ಆಫ್ರಿಕಾ ಟೂರ್ ಮುಗಿದ ಬೆನ್ನಲ್ಲೇ ರಹಾನೆಯನ್ನ ತಂಡದಿಂದಲೇ ಹೊರ ಹಾಕಿ ರೋಹಿತ್ ಶರ್ಮಾಗೆ ನಾಯಕನ ಪಟ್ಟ ಕಟ್ಟಿದ್ರು. ಬಿಸಿಸಿಐ ಮೂಲಗಳು ಹೇಳೋ ಪ್ರಕಾರ ಟೆಸ್ಟ್ ಕ್ಯಾಪ್ಟನ್ಸಿಗೆ ಸ್ವತಃ ರೋಹಿತ್ ಕೂಡ ನೋ ಎಂದಿದ್ರಂತೆ. ಆದ್ರೆ, ಕೊಹ್ಲಿ ಮೇಲಿನ ಜಿದ್ದಿಗೋ ಏನೋ. ಮ್ಯಾನೇಜ್ಮೆಂಟ್ ಪಟ್ಟು ಬಿಡದೇ ಪಟ್ಟ ಕಟ್ಟಿತು. ಈ ಹಗ್ಗಜಗ್ಗಾಟದಲ್ಲಿ ರಹಾನೆ ಕಳೆದೇ ಹೋದ್ರು. ನಾಯಕನಾದ ಬಳಿಕ ರೋಹಿತ್ ಕೂಡ ರಹಾನೆ ಚಾನ್ಸ್ ನೀಡೋಕೆ ಮನಸ್ಸು ಮಾಡಲಿಲ್ಲ.
ಸದ್ಯ, ಟೆಸ್ಟ್ ನಾಯಕತ್ವಕ್ಕೆ ರೋಹಿತ್ ಶರ್ಮಾರನ್ನ ಕೈ ಬಿಡಬೇಕು ಅನ್ನೋ ಕೂಗು ಕೇಳಿ ಬರ್ತಾ ಇದೆ. ಸದ್ಯ ಭವಿಷ್ಯದ ನಾಯಕರು ಎಂದು ಗುರುತಿಸಿಕೊಂಡಿರೋರು ಯಾರು ತಂಡದಲ್ಲಿಲ್ಲ. ಹೀಗಾಗಿ, ರಹಾನೆಗೆ ಪಟ್ಟ ಕಟ್ಟೋಕೆ ಇದು ಬೆಸ್ಟ್ ಟೈಂ. ವಯಸ್ಸು 35 ಆಗಿದ್ರೂ, ಒಂದೇ ಫಾರ್ಮೆಟ್ಗೆ ಸೀಮಿತವಾಗಿರೋದ್ರಿಂದ ರಹಾನೆಗೆ ಜವಾಬ್ದಾರಿ ನೀಡಬಹುದು. ಹಿಂದೆ ಮಾಡಿದ ಪ್ರಮಾದಕ್ಕೆ ಇದನ್ನ ಪಶ್ಚಾತಾಪ ಅಂದು ಕೊಂಡ್ರೋ ತಪ್ಪಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ