ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಸ್ಥಾನಕ್ಕೆ ಯಾರು ಬರುತ್ತಾರೆ ಎನ್ನುವುದು ಪ್ರಶ್ನೆ
ಭಾರತ ತಂಡದಲ್ಲಿ ವಿಕೆಟ್ ಕೀಪರ್ ಸ್ಥಾನಕ್ಕೂ ಬಿಗ್ ಫೈಟ್ ನಡೆಯುತ್ತಿದೆ..!
ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ನಡುವೆ ಕಾಂಪಿಟೇಷನ್
ಒಂದು ತಿಂಗಳ ಗ್ಯಾಪ್‌ನ ಬಳಿಕ ಮತ್ತೆ ಟೀಮ್ ಇಂಡಿಯಾ ಟೆಸ್ಟ್ ಸರಣಿಗೆ ಅಣಿಯಾಗುತ್ತಿದೆ. ಈಗಾಗಲೇ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ತಲುಪಿದ್ದು, ಸಿದ್ಧತೆಯನ್ನೂ ಆರಂಭಿಸಿದೆ. ಒಪ್ಪಂದದ ಪ್ರಕಾರ ಕೋಚ್ ದ್ರಾವಿಡ್‌ಗೆ ಇದು ಕೊನೆಯ ಟೆಸ್ಟ್ ಸರಣಿಯಾಗಿದ್ದು, ಇದಕ್ಕೂ ಮುನ್ನ ಹೊಸ ಟೆನ್ಶನ್ಗೆ ಸಿಲುಕಿದ್ದಾರೆ.
ಬರೋಬ್ಬರಿ 1 ತಿಂಗಳ ಬ್ರೇಕ್ನ ಬಳಿಕ ಮತ್ತೊಂದು ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಸಜ್ಜಾಗುತ್ತಿದೆ. ಸರಣಿಗಾಗಿ ವೆಸ್ಟ್ ಇಂಡೀಸ್ ತಲುಪಿರೋ ಟೀಮ್ ಇಂಡಿಯಾ 3ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ. ಆದ್ರೆ, ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ, ಕ್ಯಾಪ್ಟನ್ ರೋಹಿತ್ ಆ್ಯಂಡ್ ಕೋಚ್ ದ್ರಾವಿಡ್‌ಗೆ ಅಸಲಿ ಪರೀಕ್ಷೆ ಎದುರಾಗಿದೆ.
ಟೆಸ್ಟ್ ತಂಡದ ಕೆಲ ಹಿರಿಯರಿಗೆ ಕೊಕ್ ನೀಡಿ ಕೆರಬಿಯನ್ ನಾಡಿಗೆ ಹಾರಿರೋ ಟೀಮ್ ಇಂಡಿಯಾ, ಪ್ಲೇಯಿಂಗ್ ಇಲೆವೆನ್ ವಿಚಾರದಲ್ಲಿ ಭಾರೀ ಗೊಂದಲಕ್ಕೆ ಸಿಲುಕಿದೆ. ಚಾನ್ಸ್ ಗಿಟ್ಟಿಸಿಕೊಂಡಿರುವ ಯುವ ಆಟಗಾರರು ಆರ್ಭಟಿಸಲು ರೆಡಿಯಾಗಿದ್ದಾರೆ. ಈ ಪೈಪೋಟಿಯ ನಡುವೆ ದಿ ಬೆಸ್ಟ್ ಇಲೆವೆನ್ ಆಯ್ಕೆ ಕ್ಯಾಪ್ಟನ್ ರೋಹಿತ್ ಹಾಗೂ ಕೋಚ್ ದ್ರಾವಿಡ್ರನ್ನ ಇಕ್ಕಟ್ಟಿಗೆ ಸಿಲುಕಿಸಿದೆ.
ಯಶಸ್ವಿ V/S ಋತುರಾಜ್.. ಯಾರಿಗೆ ಅದೃಷ್ಟ..?
ಸದ್ಯ ಟೆಸ್ಟ್ ತಂಡದ ಆಯ್ಕೆಯಲ್ಲಿ ಎದುರಾಗಿರುವ ಕಠಿಣ ಸವಾಲಿದು. ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಸ್ಥಾನವನ್ನ ಯಾರು ತುಂಬ್ತಾರೆ ಅನ್ನೋದು ಯಕ್ಷಪ್ರಶ್ನೆಯಾಗಿ ಕಾಡ್ತಿದೆ. ಈ ಸ್ಥಾನಕ್ಕಾಗಿ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ನಡುವೆ ಟಫ್ ಕಾಂಪಿಟೇಷನ್ ನಡೀತಿದೆ. ಈ ಪ್ರತಿಭಾನ್ವಿತ ಆಟಗಾರರಲ್ಲಿ ಯಾರಿಗೆ ಟೆಸ್ಟ್ ಕ್ಯಾಪ್ ನೀಡಬೇಕು ಅನ್ನೋದು ಕೋಚ್- ಕ್ಯಾಪ್ಟನ್ ಗೊಂದಲಕ್ಕೆ ಕಾರಣವಾಗಿದೆ.
ಕೆರಿಬಿಯನ್ ಪ್ರವಾಸದಲ್ಲಿ ಇಶಾನ್ಗೆ ಸಿಗುತ್ತಾ ಚಾನ್ಸ್.?
3ನೇ ಸ್ಲಾಟ್ ಮಾತ್ರವಲ್ಲ, ವಿಕೆಟ್ ಕೀಪರ್ ಯಾರ್ ಆಗ್ತಾರೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಪಂತ್ ಅಲಭ್ಯತೆಯಲ್ಲಿ ವಿಕೆಟ್ ಹಿಂದೆ ಗಮನ ಸೆಳೆದಿರೋ ಕೆ.ಎಸ್.ಭರತ್, ವಿಕೆಟ್ ಮುಂದೆ ಅಂದ್ರೆ ಬ್ಯಾಟಿಂಗ್ನಲ್ಲಿ ಅಟ್ಟರ್ಫ್ಲಾಪ್ ಆಗಿದ್ದಾರೆ. ಹೀಗಾಗಿ ಇಶಾನ್ಗೆ ಸ್ಥಾನ ನೀಡುವ ಒತ್ತಾಯಗಳು ಕೇಳಿ ಬರುತ್ತಿವೆ. ಆದ್ರೆ, ವೈಟ್ಬಾಲ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ಇಶಾನ್, ಟೆಸ್ಟ್ ಫಾರ್ಮೆಟ್ಗೆ ಎಷ್ಟು ಸಮರ್ಥ ಅನ್ನೋ ಪ್ರಶ್ನೆ ಎದುರಾಗಿದೆ.
ಅಶ್ವಿನ್-ಜಡೇಜಾ.. ಅಕ್ಷರ್‌ಗೂ ಜಾಕ್‌ಪಾಟ್..?
ಸ್ಪಿನ್ ಕೋಟಾದಲ್ಲಿ ಆಫ್ ಸ್ಪಿನ್ನರ್ ಅಶ್ವಿನ್, ಆಲ್ರೌಂಡರ್ ರವೀಂದ್ರ ಜಡೇಜಾ ಜೊತೆ ಜೊತೆಗೆ ಅಕ್ಷರ್ ಪಟೇಲ್ ಕೂಡ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದ್ರೆ, ಈ ಮೂವರ ಪೈಕಿ ಜಡ್ಡು-ಅಶ್ವಿನ್ ಸ್ಥಾನ ಪಡೆಯೋದು ಖಾಯಂ. ಆದ್ರೆ, ವಿಂಡೀಸ್ ಮೈದಾನಗಳೂ ಸ್ಪಿನ್ ಫ್ರೆಂಡ್ಲಿ, ಹೀಗಾಗಿ 3ನೇ ಸ್ಪಿನ್ನರ್ ಆಯ್ಕೆಯಾಗಿ ಅಕ್ಷರ್ಗೂ ಜಾಕ್ಪಾಟ್ ಹೊಡೆಯೋ ಸಾಧ್ಯತೆಯಿದೆ.
ಸಿರಾಜ್ಗೆ ಸಾಥ್ ನೀಡುವ ವೇಗಿ ಯಾರು..?
ಸೀನಿಯರ್ಗಳ ಅಲಭ್ಯತೆಯಲ್ಲಿ ಸಿರಾಜ್, ಸ್ಪೀಡ್ ಬೌಲಿಂಗ್ ಹೊಣೆ ಹೊರೋದು ಖಾಯಂ. ಆದ್ರೆ, ಸಿರಾಜ್ ಜೊತೆ ಚೆಂಡು ಹಂಚಿಕೊಳ್ಳುವ ಮತ್ತೊಬ್ಬ ವೇಗಿ ಯಾರೆಂಬ ಗೊಂದಲವೂ ಟೀಮ್ ಇಂಡಿಯಾದಲ್ಲಿದೆ. ಇದಕ್ಕಾಗಿ ಜೈದೇವ್ ಉನಾದ್ಕತ್, ನವದೀಪ್ ಸೈನಿ ಜೊತೆ ಮುಖೇಶ್ ಕುಮಾರ್ ಕೂಡ ಪೈಪೋಟಿ ನಡೆಸ್ತಿದ್ದಾರೆ. ಆದ್ರೆ, ಬಹುತೇಕ ಅನುಭವಿ ಉನಾದ್ಕತ್, ಸಿರಾಜ್ ಜೊತೆ ದಾಳಿಗಿಳಿಯೋ ಸಾಧ್ಯತೆ ದಟ್ಟವಾಗಿದೆ.
ಗೊಂದಲದಿಂದ ಹೊರಬರ್ತಾರಾ ವಾಲ್..?
ವೆಸ್ಟ್ ಇಂಡೀಸ್ ಪ್ರವಾಸದ ಟೆಸ್ಟ್ ಸರಣಿ ಬ್ಯುಸಿಯಾಗಿರುವ ದ್ರಾವಿಡ್‌ಗೆ ಇದೇ ಕೊನೆ ಟೆಸ್ಟ್ ಸರಣಿಯಾಗಿದೆ. ಯಾಕಂದ್ರೆ, ಏಕದಿನ ವಿಶ್ವಕಪ್ ಬಳಿಕ ದ್ರಾವಿಡ್ ಒಪ್ಪಂದ ಕೊನೆಗೊಳ್ಳಲಿದೆ. ದ್ರಾವಿಡ್ ಮುಂದುವರಿಕೆ ಬಹುತೇಕ ಅನುಮಾನ. ಹೀಗಾಗಿ ಈ ಕೊನೆಯಲ್ಲಿ ಪರಿಣಾಮಕಾರಿ ನಿರ್ಧಾರ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ದ್ರಾವಿಡ್‌ಗೆ ಇದೆ. ಆ ಮೂಲಕ ತಂಡದಲ್ಲಿರೋ ಗೊಂದಲಗಳ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ