ಫಿಸಿಕ್ನಲ್ಲೂ ವಿರಾಟ್ ಕೊಹ್ಲಿಯನ್ನ ಹಿಂದಿಕ್ಕಿದ್ದ ಶುಭ್ಮನ್ ಗಿಲ್!
ಎಲ್ಲದರಲ್ಲೂ ವಿರಾಟ್ಗೆ ಕಾಂಪಿಟೇಟರ್ ಆಗ್ತಿರುವ ಪಂಜಾಬ್ ಪುತ್ತರ್
ಕ್ರಿಕೆಟ್ ಪ್ರಿನ್ಸ್ ಕೆಲವೇ ವರ್ಷಗಳಲ್ಲಿ, ಕಿಂಗ್ ಪಟ್ಟ ಅಲಂಕರಿಸ್ತಾರಾ?
ಟೀಮ್ ಇಂಡಿಯಾದ ರನ್ ಮಷಿನ್, ಫಿಟೆಸ್ಟ್ ಕ್ರಿಕೆಟರ್ ಯಾರು ಅಂದ್ರೆ, ಮೊದಲು ಕೇಳಿ ಬರೋ ಹೆಸರೇ ವಿರಾಟ್ ಕೊಹ್ಲಿ. ಅತ್ಯುತ್ತಮ ಫಿಸಿಕ್ ಹೊಂದಿರೋ ಆಟಗಾರ ಯಾರು ಅಂದ್ರೂ, ಮೊದಲು ಹೇಳೋ ಹೆಸರು ವಿರಾಟ್ ಕೊಹ್ಲಿಯೇ. ಆದ್ರೆ, ಕಾಲ ಬದಲಾಗಿದೆ. ಈಗಲೂ ಕೊಹ್ಲಿ ಕಿಂಗ್ ಆಗಿದ್ರೂ, ಫ್ರಿನ್ಸ್ ನಿಧಾನವಾಗಿ ಓವರ್ ಟೇಕ್ ಮಾಡಲು ಶುರು ಮಾಡಿದ್ದಾಗಿದೆ.
ಕ್ರಿಕೆಟ್.. ಈಗ ಸಂಪೂರ್ಣ ಬದಲಾಗಿದೆ. ಆಟದ ವೈಖರಿ. ನೋಡುವ ದೃಷ್ಟಿಯ ಜೊತೆ ಜೊತೆಗೆ ಕಾಲಕ್ಕನುಗುಣವಾಗಿ ಕ್ರಿಕೆಟ್ ಬದಲಾಗುತ್ತ ಹೋಗ್ತಿದೆ. ಈಗ ಕ್ರಿಕೆಟ್ ಜಸ್ಟ್ ಆಟಕ್ಕೆ ಮಾತ್ರವೇ ಸಿಮೀತವಾಗಿಲ್ಲ. ಆನ್ಫೀಲ್ಡ್ನ ಬೌಂಡರಿ ಗೆರೆ ದಾಟಿ, ಆಫ್ ದ ಫೀಲ್ಡ್ಗೂ ಬಂದಿದೆ. ಕ್ರಿಕೆಟರ್ಗಳೂ ಪ್ರತಿ ನಡೆಯು ಇಲ್ಲಿ ಕೌಂಟ್ ಆಗ್ತಿದೆ.
ಫಿಟ್ನೆಸ್ನಲ್ಲಿ ಕೊಹ್ಲಿಯನ್ನೇ ಮೀರಿಸಿದ್ದ ಗಿಲ್..!
ಒಂದು ಕಾಲಗಟ್ಟದಲ್ಲೇ ಜಸ್ಟ್ ಕಣ್ಣಿಗೆ ಕಾಣ್ತಾ ಇದ್ದಿದ್ದು ಚಾಕ್ಲೆಟ್ ಬಾಯ್ನಂತ ಆಟಗಾರರು. ಆದ್ರೆ ಈಗ ಕಥೆ ಬೇರೆ. ಈ ಹಿಂದೆ ಕ್ರಿಕೆಟ್ನಲ್ಲಿ ಫಿಟ್ನೆಸ್ ಅನ್ನೋ ಸುದ್ದಿನೇ ಇರಲಿಲ್ಲ. ಆದ್ರೀಗ ಫಿಟ್ನೆಸ್ ಪ್ರತಿಯೊಬ್ಬ ಆಟಗಾರನ ಜೀವನದ ಪ್ರಮುಖ ಅಂಶವಾಗಿದೆ. ಲಾಂಗ್ ಟರ್ಮ್ ಸಕ್ಸಸ್ ಬೇಕಂದ್ರೆ ಫಿಟ್ನೆಸ್ ಬೇಕೆ ಬೇಕು. ಫಿಟ್ನೆಸ್ ಇಲ್ಲದೇ ಅದೆಷ್ಟೋ ಮಂದಿ ತಂಡದಿಂದ ಹೊರಬಿದ್ದಿದ್ದು ಇದೆ.
ಟೀಮ್ ಇಂಡಿಯಾ ಕೂಡ ಫಿಟ್ನೆಸ್ ವಿಚಾರದಲ್ಲಿ ಟಾಪರ್ ಎಮ್.ಎಸ್ ಧೋನಿ ಟೀಮ್ ಇಂಡಿಯಾಗೆ ಫಿಟ್ನೆಸ್ ಇಂಟ್ರಡ್ಯೂಸ್ ಮಾಡಿದ್ರೆ, ಕೊಹ್ಲಿ ಫಿಟ್ನೆಸ್ ಕ್ರಾಂತಿ ಮಾಡಿದ್ರು. ಟೀಮ್ ಇಂಡಿಯಾದ ಫಿಟ್ಟೆಸ್ಟ್ ಕ್ರಿಕೆಟರ್ ಯಾರು.? ಅಂದ್ರೆ ಮೊದಲು ಬರೋ ಹೆಸರೆ ಕೊಹ್ಲಿ. ಆದ್ರೆ, ಇನ್ಮುಂದೆ ಕೊಹ್ಲಿ ಹೆಸರನ್ನ ಬಹುತೇಕರು ಹೇಳಲ್ಲ ಅನ್ಸುತ್ತೆ. ಯಾಕಂದ್ರೆ, ಕೊಹ್ಲಿಗೆ ಟೀಮ್ ಇಂಡಿಯಾದಲ್ಲೇ ಕಾಂಪಿಟೇಟರ್ ಓರ್ವ ಹುಟ್ಟಿಕೊಂಡಿದ್ದಾನೆ. ಆ ಕಾಂಪಿಟೇಟರ್ ಬೇಱರು ಅಲ್ಲ. ಪಂಜಾಬ್ ಕಾ ಪುತ್ತರ್ ಶುಭ್ಮನ್ ಗಿಲ್.
ಮತ್ತೊಂದು ವಿಚಾರದಲ್ಲೂ ಕೊಹ್ಲಿಗೆ ಗಿಲ್ ಸೆಡ್ಡು!
ಈಗಾಗಲೇ ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಯ ಉತ್ತರಾಧಿಕಾರಿಯಾಗಿ ಬಿಂಬಿತವಾಗಿರುವ ಶುಭ್ಮನ್ ಗಿಲ್, ಅದೇ ಹಾದಿಯಲ್ಲಿ ಹೆಜ್ಜೆ ಹಾಕ್ತಿದ್ದಾರೆ. ಅಷ್ಟೇ ಅಲ್ಲ, ಕಳೆದ ಯೋ-ಯೋ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿಯನ್ನೇ ಮೀರಿಸಿ ಟೀಮ್ ಇಂಡಿಯಾದ ಫಿಟೆಸ್ಟ್ ಕ್ರಿಕೆಟರ್ ಎಂಬ ಪಟ್ಟವನ್ನೂ ಆಲಂಕರಿಸಿದ್ದಾರೆ. ಇದೀಗ ಇದೇ ಶುಭ್ಮನ್ ಗಿಲ್, ಮತ್ತೊಂದು ವಿಚಾರದಲ್ಲೂ ಕಿಂಗ್ ಕೊಹ್ಲಿಗೆ ಸೆಡ್ಡು ಹೊಡೆಯುತ್ತಿದ್ದಾರೆ.
ಶುಭ್ಮನ್ ಫಿಸಿಕ್ಗೆ ನಿಬ್ಬೆರಗಾದ ಕ್ರಿಕೆಟ್ ಲೋಕ..!
ವಿರಾಟ್ ಕೊಹ್ಲಿ ಲೈಫ್ ಸ್ಟೈಲ್, ಡಯಟ್, ಬಾಡಿ ಟ್ರಾನ್ಸ್ಪರ್ಮೇಷನ್ ಎಂತಹವರಿಗೂ ಸ್ಪೂರ್ತಿ. ಯಾಕಂದ್ರೆ, ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟಾಗ ಚಾಕಲೇಟ್ ಹೀರೋ ರೀತಿ ಕಾಣ್ತಿದ್ದ ಕೊಹ್ಲಿ, ನೋಡ ನೋಡ್ತಿದ್ದಂತೆ ಫಿಟ್ನೆಸ್ ಗುರುವಾಗಿಬಿಟ್ರು. ಅದರಲ್ಲೂ ವಿರಾಟ್ ಕೊಹ್ಲಿ ಸಿಕ್ಸ್ ಪ್ಯಾಕ್ಗೆ ಕ್ಲೀನ್ ಬೋಲ್ಡ್ ಆದವರೆಷ್ಟೋ ಮಂದಿ. ಇದೀಗ ಈ ವಿಚಾರದಲ್ಲೂ ಕಿಂಗ್ ಕೊಹ್ಲಿಗೆ ಗಿಲ್, ಟಕ್ಕರ್ ನೀಡ್ತಿದ್ದಾರೆ.
ಕಟ್ಟು ಮಸ್ತಾದ ದೇಹ ಹೊಂದಿರುವ ಶುಭ್ಮನ್, ತನ್ನ ಫಿಸಿಕ್ನಿಂದ ಕ್ರಿಕೆಟ್ ಲೋಕದ ಗಮನ ಸೆಳೆಯುತ್ತಿದ್ದಾರೆ. ತನ್ನ ಸ್ಟೈಲಿಶ್ ಲುಕ್ನಿಂದಲೂ ಎಲ್ಲರ ಮನ ಗೆಲ್ತಿರುವ ಶುಭ್ಮನ್, ಸದ್ಯ ಮಹಿಳಾ ಅಭಿಮಾನಿಗಳ ಹಾಟ್ ಫೇವರಿಟ್ ಆಗಿದ್ದಾರೆ.
ಒಂದ್ಕಡೆ ತನ್ನ ಅದ್ಭುತ ಬ್ಯಾಟಿಂಗ್ನಿಂದ ಕಿಂಗ್ ಕೊಹ್ಲಿಯ ಉತ್ತರಾಧಿಕಾರಿ ಎನಿಸಿಕೊಂಡಿರುವ ಪ್ರಿನ್ಸ್ ಶುಭ್ಮನ್, ಮತ್ತೊಂದೆಡೆ ಫಿಟ್ನೆಸ್ನಲ್ಲೂ ಕೊಹ್ಲಿಯನ್ನ ಪಕ್ಕಕ್ಕೆ ಸರಿಸಿದ್ದಾರೆ. ಇದೀಗ ಹಾಟ್ ಲುಕ್ಸ್ನಿಂದಲೂ ಕ್ರಿಕೆಟ್ ದುನಿಯಾದಲ್ಲಿ ಹವಾ ಎಬ್ಬಿಸಿರೋ ಪ್ರಿನ್ಸ್ ಕೆಲವೇ ವರ್ಷಗಳಲ್ಲಿ, ಕಿಂಗ್ ಪಟ್ಟವನ್ನೂ ಅಲಂಕರಿಸೋದು ಪಕ್ಕಾ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ