newsfirstkannada.com

ಗಿಲ್​ ಮೇಲಿನ ಬೆಟ್ಟದಷ್ಟು ನಿರೀಕ್ಷೆ ಠುಸ್.. ಬಿಸಿಸಿಐಗೆ ಭಾರೀ ನಿರಾಸೆ.. IPL ಸ್ಟಾರ್​ಗೆ ಆಗಿದ್ದೇನು..?

Share :

22-07-2023

    BCCIನ ಮೊದಲ ಎಕ್ಸ್​ಪೆರಿಮೆಂಟ್​​ನಲ್ಲೇ ಗಿಲ್​ ಫೇಲ್

    ಪೂಜಾರ ಹೊರತಾಗಿ 3ನೇ ಕ್ರಮಾಂಕಕ್ಕೆ ಮತ್ಯಾರು?

    ವಿಶ್ವ ಟೆಸ್ಟ್​ ಫೈನಲ್​​ನಲ್ಲೂ ಶುಭ್​ಮನ್ ಗಿಲ್ ಫೇಲ್ ​

ವೆಸ್ಟ್​ ಇಂಡೀಸ್ ಟೂರ್​ನಲ್ಲಿ ಟೀಮ್ ಇಂಡಿಯಾ ಗೆಲ್ಲೋದು ಬಹುತೇಕ ಕನ್ಫರ್ಮ್. ಆದ್ರೆ, ಟೀಮ್ ಇಂಡಿಯಾ ಮ್ಯಾನೇಜ್​ಮೆಂಟ್​ಗೆ ಮಾತ್ರ ಒಂದು ತಲೆನೋವು ಕಾಡ್ತಾನೇ ಇದೆ. ಅದೇ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡೋದು ಯಾರು..?

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಸೋತಿದ್ದೇ ತಡ ಟೀಮ್ ಇಂಡಿಯಾ, ಪ್ರಯೋಗಗಳ ಶಾಲೆಯಾಗಿ ಮಾರ್ಪಟ್ಟಿದೆ. ವೆಸ್ಟ್​ ಇಂಡೀಸ್ ಸರಣಿಯಲ್ಲೇ ಪ್ರಯೋಗಗಳಿಗೆ ನಾಂದಿಯಾಡಿರೋ ಟೀಮ್ ಮ್ಯಾನೇಜ್​ಮೆಂಟ್​, ಹಿರಿಯ ಆಟಗಾರರಿಗೆ ಕೊಕ್​ ನೀಡಿ ಯಂಗ್​​ಸ್ಟರ್ಸ್​ಗೆ ಚಾನ್ಸ್​ ನೀಡಿತ್ತು. ಆದ್ರೆ, ಈ ಪ್ರಯೋಗ ಫಸ್ಟ್​ ಅಟೆಮ್ಟ್​​​ನಲ್ಲೇ ಫೇಲ್ಯೂರ್ ಆಗಿದೆ.

ವರ್ಕ್​ ಆಗಲಿಲ್ಲ ಪೂಜಾರ ರಿಪ್ಲೇಸ್​ಮೆಂಟ್ ಲೆಕ್ಕಚಾರ

ವೆಸ್ಟ್​ ಇಂಡೀಸ್ ಪ್ರವಾಸ ಕೈಗೊಂಡಿರೋ ಟೀಮ್ ಇಂಡಿಯಾ ಮುಂದಿದ್ದೇ ಪೂಜಾರ ರಿಪ್ಲೇಸ್​ಮೆಂಟ್ ಪ್ರಶ್ನೆ. ಪೂಜಾರ ಬದಲಿ ಸ್ಥಾನದಲ್ಲಿ ಸೆಲೆಕ್ಷನ್ ಕಮಿಟಿ ಯಶಸ್ವಿ ಜೈಸ್ವಾಲ್​ಗೆ ಬುಲಾವ್ ನೀಡಿತ್ತು. ಅಂತಿಮ ಕ್ಷಣದಲ್ಲಿ ಶುಭ್​​ಮನ್​​ ಗಿಲ್​ರನ್ನ 3ನೇ ಕ್ರಮಾಂಕದಲ್ಲಿ ಪ್ರಯೋಗಿಸಿ ಸಕ್ಸಸ್​ ಕಾಣೋ ಲೆಕ್ಕಚಾರದಲ್ಲಿತ್ತು. ಆದ್ರೀಗ ಈ ಲೆಕ್ಕಚಾರ ಮೊದಲ ಪ್ರಯೋಗದಲ್ಲೇ ಫೇಲ್ಯೂರ್ ಆಗಿದೆ.

ನಿರೀಕ್ಷೆ ಹುಸಿಗೊಳಿಸಿದ ಪಂಜಾಬ್​ ಪುತ್ತರ್​..!

ಆರಂಭಿಕನಾಗಿ ಸಕ್ಸಸ್​​ ಕಂಡಿದ್ದ ಶುಭ್​ಮನ್​, 3ನೇ ಕ್ರಮಾಂಕದಲ್ಲಿ ಸಕ್ಸಸ್​ ಕಾಣುವ ನಿರೀಕ್ಷೆ ಹುಟ್ಟಿಹಾಕಿದ್ರು. ಆದ್ರೆ, ಮೊದಲೆರೆಡು ಪಂದ್ಯಗಳಲ್ಲೇ ವೈಫಲ್ಯ ಅನುಭವಿಸಿದ ಗಿಲ್, ತಮ್ಮ ಮೇಲಿನ ಎಕ್ಸ್​ಪೆಕ್ಟೇಷನ್​​​​​​ ಹುಸಿಯಾಗಿಸಿದ್ದಾರೆ.

ಡೊಮಿನಿಕಾದಲ್ಲಿ ರನ್ ಗಳಿಸಲು ಪರದಾಡಿದ ಗಿಲ್ 11 ಎಸೆತಗಳಲ್ಲಿ 6 ರನ್​ ಗಳಿಸಿ ವಿಕೆಟ್ ಒಪ್ಪಿಸಿದರು. ಟ್ರಿನಿಡಾಡ್ ನಡೆಯುತ್ತಿರೋ 2ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲೂ ಜಸ್ಟ್​ 10 ರನ್​​ಗೆ ಪೆವಿಲಿಯನ್​ಗೆ ಸೇರಿದರು. ಇದರೊಂದಿಗೆ 3ನೇ ಕ್ರಮಾಂಕಕ್ಕೆ ಉತ್ತರವಿಲ್ಲದ ಪ್ರಶ್ನೆಯನ್ನಾಗಿಸಿದ್ದಾರೆ. ಅಷ್ಟೇ ಅಲ್ಲ, ಟೀಮ್ ಇಂಡಿಯಾಗೆ ಪೂಜಾರ ಅಲಭ್ಯತೆ ನೆನಪಾಗಿಸಿದರು..

1 ದಶಕದ ಕಾಲ 3ನೇ ಸ್ಲಾಟ್​​ನಲ್ಲಿ ಪೂಜಾರ ಮಿಂಚು

ಟೀಮ್ ಇಂಡಿಯಾಗೆ 1 ದಶಕದ ಕಾಲ 3ನೇ ಕ್ರಮಾಂಕದಲ್ಲಿ ಅಪದ್ಭಾಂದವರಾಗಿದ್ದೇ ಚೇತೇಶ್ವರ ಪೂಜಾರ. ಟೀಮ್ ಇಂಡಿಯಾ ಪರ ಆಡಿರೋ 103 ಪಂದ್ಯಗಳ ಪೈಕಿ 94ರಲ್ಲಿ 3ನೇ ಕ್ರಮಾಂಕದಲ್ಲೇ ಬ್ಯಾಟ್ ಬೀಸಿದ ಪೂಜಾರ, ಬರೋಬ್ಬರಿ ಕೊಳ್ಳೆ ಹೊಡೆದಿದ್ದು 6,529 ರನ್. ಇದೀಗ ಪೂಜಾರ ಅನುಪಸ್ಥಿತಿಯಲ್ಲಿ ಶುಭ್​ಮನ್ ಗಿಲ್​​​ಗೆ ಪ್ರಯೋಗಕ್ಕಿಳಿಸಿದ ಟೀಮ್ ಮ್ಯಾನೇಜ್​ಮೆಂಟ್, ಮೊದಲ ಪ್ರಯೋಗದಲ್ಲೇ ಕೈ ಸುಟ್ಟುಕೊಂಡಿದೆ. ಈ ಕಾರಣಕ್ಕಾಗಿಯೇ 3ನೇ ಕ್ರಮಾಂಕಕ್ಕೆ ಮತ್ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.

ಗಿಲ್​​ ಮುಂದುವರಿಕೆನಾ..? ಋತುರಾಜ್​​ಗೆ ಚಾನ್ಸ್​ ನೀಡ್ತಾರಾ..?

ಸದ್ಯ ಬ್ಯಾಕ್ ಟು ಬ್ಯಾಜ್ ವೈಫಲ್ಯ ಅನುಭವಿಸಿರೋ ಶುಭ್​​ಮನ್​ 3ನೇ ಕ್ರಮಾಂಕಕ್ಕೆ ಯೋಗ್ಯವಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಆದ್ರೆ, ಇದರ ಹೊರಾತಾಗಿ​ ಗಿಲ್​​ಗೆ, 2ನೇ ಇನ್ನಿಂಗ್ಸ್​ನಲ್ಲಿ ತನ್ನ ಸಾಮರ್ಥ್ಯ ಫ್ರೂವ್ ಮಾಡಿಕೊಳ್ಳಲು ಮತ್ತೊಂದು ಚಾನ್ಸ್​ ಇದ್ದೇ ಇದೆ. ಅಕಸ್ಮಾತ್ ಈ ಅವಕಾಶದಲ್ಲೂ ಗಿಲ್​ ವೈಫಲ್ಯ ಕಂಡ್ರೆ, ಸಂಕಷ್ಟ ಖಾಯಂ. ಇದು ಸಹಜವಾಗೇ ಋತುರಾಜ್​​ಗೆ ಅಡ್ವಾಟೇಜ್​​ ಆಗಲಿದೆ. ಯಾಕಂದ್ರೆ, ಟಾಪ್ ಆರ್ಡರ್​ನಲ್ಲಿ ಆಡಿರೋ ಅನುಭವ ಹೊಂದಿರೋ ಋತುರಾಜ್, ಈ ಕ್ರಮಾಂಕದಲ್ಲಿ ಸಕ್ಸಸ್​ ಕಾಣುವ ಎಲ್ಲಾ ಸಾಧ್ಯತೆಯೂ ಇದೆ. ಹೀಗಾಗಿ ಗಿಲ್, 2ನೇ ಇನ್ನಿಂಗ್ಸ್​ನಲ್ಲಿ ಅಸಲಿ ಬ್ಯಾಟಿಂಗ್ ಖದರ್ ತೋರಬೇಕಿದೆ.

ಅಹ್ಮದಾಬಾದ್​ನಲ್ಲಿ ಮಾತ್ರವೇ ಶುಭ್​ಮನ್ ಅಬ್ಬರ..!

2023ರ ಐಪಿಎಲ್‌ನಲ್ಲಿ 3 ಶತಕ, 4 ಅರ್ಧಶತಕ ಸಿಡಿಸಿದ್ದ ಶುಭ್‌ಮನ್ ಗಿಲ್, ಐಪಿಎಲ್‌ ನಂತರ ಫುಲ್​​ ಸೈಲೆಂಟಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ WTC ಫೈನಲ್​ನಲ್ಲಿ ವೈಫಲ್ಯ ಕಂಡಿದ್ದ ಗಿಲ್, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲು ಫೇಲ್ಯೂರ್ ಆಗಿದ್ದಾರೆ.

ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಅಹ್ಮದಾಬಾದ್​ ಪಿಚ್​​ನಲ್ಲಿ ಮಾತ್ರವೇ ಗಿಲ್ ಅಬ್ಬರ ನಡೆಯುತ್ತಿದೆ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​ ಈತ ಕೊನೆಯ ಬಾರಿ ಸಿಡಿಸಿದ ಸೆಂಚೂರಿಗಳು ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಹೀಗಾಗಿ ಸ್ಥಾನ ಉಳಿಸಿಕೊಳ್ಳಬೇಕಾದ್ರೆ, ಸಿಕ್ಕ ಅವಕಾಶದಲ್ಲಿ ಅಬ್ಬರಿಸಲೇಬೇಕು. ಒಂದು ವೇಳೆ ಫಾರ್ಮ್​ ಕಂಡುಕೊಳ್ಳದಿದ್ರೆ, ಟೆಸ್ಟ್​ ತಂಡದಿಂದ ಗೇಟ್ ಪಾಸ್ ಸಿಗೋದು ಫಿಕ್ಸ್. ಅದೇನೇ ಆಗಲಿ, ನಂಬರ್ 3 ಸ್ಲಾಟ್​ನಲ್ಲಿ ಫೇಲ್ಯೂರ್ ಆಗಿರೋ ಶುಭ್​ಮನ್, ಲಯ ಕಂಡುಕೊಂಡು ಅಬ್ಬರಿಸ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಗಿಲ್​ ಮೇಲಿನ ಬೆಟ್ಟದಷ್ಟು ನಿರೀಕ್ಷೆ ಠುಸ್.. ಬಿಸಿಸಿಐಗೆ ಭಾರೀ ನಿರಾಸೆ.. IPL ಸ್ಟಾರ್​ಗೆ ಆಗಿದ್ದೇನು..?

https://newsfirstlive.com/wp-content/uploads/2023/07/SHUBHMAN_GILL-1.jpg

Load More