ಏಕದಿನ ಅಂದರೆ ವಿರಾಟ್ ಕೊಹ್ಲಿಗೆ ಸಖತ್ ಇಷ್ಟ
ಒನ್ ಡೇ ಮ್ಯಾಚ್ಗಳಿಂದಲೇ ಕೊಹ್ಲಿ ಸೂಪರ್ ಸ್ಟಾರ್
ವಿರಾಟ್ ಕೊಹ್ಲಿ ಆಡಿರುವ ಆ ಮಾತುಗಳು ಏನೇನು?
ಏಕದಿನ ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ, ಒಂದು ಮಾದರಿಯ ಕ್ರಿಕೆಟ್ನಿಂದ ದೂರವಾಗ್ತಾರೆ ಎಂಬ ಮಾತು ಹಲವು ದಿನದಿಂದ ಚರ್ಚೆಯಲ್ಲಿದೆ. ಇದೀಗ, ಈ ಬಗ್ಗೆ ಸ್ವತಃ ಕಿಂಗ್ ಕೊಹ್ಲಿಯೇ ಹಿಂಟ್ ನೀಡದ್ದಾರೆ. ಹಾಗಾದ್ರೆ, ಕೊಹ್ಲಿ ನೀಡಿರುವ ಆ ಹಿಂಟ್ ಏನು..?
ಟೆಸ್ಟ್ ಕ್ರಿಕೆಟ್ಗೆ ಕಿಂಗ್ ಕೊಹ್ಲಿ ಗುಡ್ಬೈ..?
ಏಕದಿನ ವಿಶ್ವಕಪ್ ಬಳಿಕ ವಿರಾಟ್, ಕ್ರಿಕೆಟ್ಗೆ ಗುಡ್ ಬೈ ಹೇಳ್ತಾರಾ..? ಈ ಪ್ರಶ್ನೆ ಕಳೆದೊಂದು ವರ್ಷದಿಂದ ವಿಶ್ವ ಕ್ರಿಕೆಟ್‌ನ ಹಾಟ್ ಟಾಪಿಕ್ ಸುದ್ದಿಯಾಗಿದೆ. ಬಿಸಿಸಿಐ ವಲಯದಲ್ಲೂ ಕೊಹ್ಲಿಯನ್ನ ಒಂದು ಫಾರ್ಮೆಟ್ನಿಂದ ಕೈ ಬಿಡೋ ಕಸರತ್ತು ನಡೆಯುತ್ತಿದೆ. ಈ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಗಳು ನಡೆದಿದ್ದು, ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ನೀಡಿದ್ದಾಗಿದೆ. ಆದ್ರೆ, ಕೊಹ್ಲಿ ಮಾತ್ರ ಈ ವಿಚಾರದಲ್ಲಿ ಸೈಲೆಂಟ್ ಆಗಿದ್ರು. ಇದೀಗ ವಿರಾಟ್ ಕೊಹ್ಲಿ ಮೊದಲ ಬಾರಿ ಈ ಬಗ್ಗೆ ಮಾತನಾಡಿದ್ದಾರೆ.
ಏಷ್ಯಾಕಪ್ಗೂ ಮುನ್ನ ಕೊಹ್ಲಿ ಹೇಳಿರುವ ಒಂದೇ ಒಂದು ಹೇಳಿಕೆ ಸದ್ಯ ಸಂಚಲನ ಮೂಡಿಸಿದೆ. ಏಕದಿನ ವಿಶ್ವಕಪ್ ಬಳಿಕ ಚಾಂಪಿಯನ್ ಕೊಹ್ಲಿ, ಯಾವೂದಾದರೂ ಒಂದು ಫಾರ್ಮೆಟ್ಗೆ ಗುಡ್ಬೈ ಹೇಳೋ ಬಗ್ಗೆ ಹಿಂಟ್ ನೀಡಿದ್ದಾರೆ. ವಿರಾಟ್ ಕೊಹ್ಲಿಯ ಮಾತುಗಳನ್ನ ಗಮನಿಸಿದ್ರೆ ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳೋ ಲೆಕ್ಕಾಚಾರದಲ್ಲಿ ಇದ್ದಾರೆ.
ನಾನು ಏಕದಿನ ಕ್ರಿಕೆಟ್ ಆಡುವುದನ್ನ ಪ್ರೀತಿಸುತ್ತೇನೆ. ನನ್ನ ಪ್ರಕಾರ, ಏಕದಿನ ಕ್ರಿಕೆಟ್ ನಿಮ್ಮನ್ನ ಸಂಪೂರ್ಣ ಪರೀಕ್ಷಿಸುವ ಫಾರ್ಮೆಟ್. ನಿಮ್ಮ ಟೆಕ್ನಿಕ್, ತಾಳ್ಮೆ ಹಾಗೂ ಪ್ಲೇಯಿಂಗ್ ಕಂಡೀಷನ್ಸ್ ಸೇರಿದಂತೆ ವಿವಿಧ ಹಂತಗಳಲ್ಲಿ ವಿಭಿನ್ನವಾಗಿ ಆಡಬೇಕು. ಆದ್ದರಿಂದ ಏಕದಿನ ಫಾರ್ಮೆಟ್ ನಿಮ್ಮನ್ನು ಪರೀಕ್ಷಿಸುತ್ತದೆ. ಏಕದಿನ ಕ್ರಿಕೆಟ್ ನನ್ನಿಂದ ಉತ್ತಮವಾದುದ್ದನ್ನ ಹೊರ ತಂದಿದೆ. ಸವಾಲನ್ನ ಸ್ವೀಕರಿಸಲು ಇಷ್ಟ ಪಡುತ್ತೇನೆ. ತಂಡದ ಗೆಲುವಿಗೆ ಅನುಗುಣವಾಗಿ ಆಡಲು ಇಷ್ಟಪಡುತ್ತೇನೆ. ನನ್ನ ಬ್ಯಾಟಿಂಗ್‌ನ ಪರೀಕ್ಷಿಸಲು ಅವಕಾಶ ನೀಡುತ್ತದೆ. ಅದಕ್ಕಾಗಿಯೇ ಏಕದಿನ ಕ್ರಿಕೆಟ್ ಆಡುವುದನ್ನ ನಿಜವಾಗಿ ಆನಂದಿಸುತ್ತೇನೆ.
ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ಆಟಗಾರ
ಕೊಹ್ಲಿ ಹೇಳಿರುವ ಈ ಒಂದೇ ಒಂದು ಹೇಳಿಕೆಯೇ, ಏಕದಿನ ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ, ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳ್ತಾರಾ ಎಂಬ ಅನುಮಾನವನ್ನ ಹುಟ್ಟು ಹಾಕಿದೆ.
ಏಕದಿನದಲ್ಲಿ ಮುಂದುವರೀತಾರಾ ಕೊಹ್ಲಿ..?
ಏಕದಿನ ಕ್ರಿಕೆಟ್‌ನ ವಿರಾಟ್ ಕೊಹ್ಲಿ ಬಹುವಾಗಿ ಪ್ರೀತಿ ಮಾಡ್ತಾರೆ. ಇದಕ್ಕೆ ಕಾರಣ ವೃತ್ತಿ ಜೀವನದಲ್ಲಿ ವಿರಾಟ್, ಇಂದು ಏನೆಲ್ಲ ಸಾಧನೆ ಮಾಡಿದ್ದಾರೋ ಅದಕ್ಕೆ ಏಕದಿನ ಕ್ರಿಕೆಟ್ ಪ್ರಮುಖ ಕಾರಣ. ವಿಶ್ವ ಕ್ರಿಕೆಟ್ನಲ್ಲಿ ಬಹು ಎತ್ತರಕ್ಕೆ ಬೆಳೆದು, ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡಿರುವುದರ ಹಿಂದೆ ಏಕದಿನ ಫಾರ್ಮೆಟ್ ಕೊಡುಗೆ ಅಪಾರ. ಇದೇ ಕಾರಣಕ್ಕೆ ವಿರಾಟ್, ಏಕದಿನ ಫಾರ್ಮೆಟ್ನಲ್ಲಿ ಮುಂದುವರಿಯೋ ಸಾಧ್ಯತೆ ಇದೆ.
ಉತ್ತಮ ಟಚ್ನಲ್ಲಿದ್ದಾರೆ ವಿರಾಟ್ ಕೊಹ್ಲಿ..!
35ರ ವಿರಾಟ್, ರೆಡ್ ಬಾಲ್ ಕ್ರಿಕೆಟ್ಗೆ ಹೋಲಿಸಿದ್ರೆ. ವೈಟ್ಬಾಲ್ ಫಾರ್ಮೆಟ್ನಲ್ಲಿ ಅದ್ಭುತ ಲಯದಲ್ಲಿದ್ದಾರೆ. ಅದರಲ್ಲೂ ವೈಟ್ಬಾಲ್ ಕ್ರಿಕೆಟ್ನಲ್ಲಿ ಸಹಸ್ರಾರು ರನ್ ಕಲೆ ಹಾಕಿರುವ ವಿರಾಟ್ ಕೊಹ್ಲಿಯ ದೃಷ್ಟಿ, ಈಗ ಏಕದಿನ ವಿಶ್ವಕಪ್ ಮೇಲೆ ನೆಟ್ಟಿದೆ. ಹೀಗಾಗಿ ವೈಟ್ಬಾಲ್ನತ್ತ ಗಮನ ಹರಿಸಿರುವ ವಿರಾಟ್, ಏಕದಿನ ವಿಶ್ವಕಪ್ ಹಾಗೂ ನಂತರದ ಟಿ20 ವಿಶ್ವಕಪ್ ಗೆಲುವಿನೊಂದಿಗೆ ಗುಡ್ ಬೈ ಹೇಳೋ ಲೆಕ್ಕಾಚಾರದಲ್ಲಿದ್ದಾರೆ. ಹೀಗಾಗಿ ಮುಂದಿನ ಒಂದೆರೆಡು ವರ್ಷ ಏಕದಿನ ಫಾರ್ಮೆಟ್ನಲ್ಲಿ ಮುಂದುವರಿಯೋ ಸಾಧ್ಯತೆಯಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ