ವಿರಾಟ್ ಕೊಹ್ಲಿ ಮೆಸೇಜ್ ಮಾಡುತ್ತಿರುವುದು ಯಾರಿಗೆ, ಯಾಕೆ?
ಪ್ರಾಬ್ಲಮ್ಸ್ ನೇರ ಹಿಟ್ ಮಾಡ್ತಿದ್ದ ಕೊಹ್ಲಿ ಈ ದಾರಿ ಹಿಡಿದಿದ್ದು ನಿಗೂಢ
ಇನ್ಸ್ಟಾದಲ್ಲಿ ಮೇಲಿಂದ ಮೇಲೆ ಶೇರ್ ಪೋಸ್ಟ್ ಮಾಡ್ತಿದ್ದಾರೆ ವಿರಾಟ್
ವಿರಾಟ್ ಕೊಹ್ಲಿಗೆ ಏನಾಗಿದೆ ಎನ್ನುವ ಪ್ರಶ್ನೆ ಸದ್ಯ ಹೆಚ್ಚು ಚರ್ಚೆಯಲ್ಲಿದೆ. ಇದು ಆನ್ಫೀಲ್ಡ್ ಕಥೆಯಲ್ಲ. ಆಫ್ ದ ಫೀಲ್ಡ್ನ ಕಹಾನಿ. ವಿರಾಟ್ ಕೊಹ್ಲಿಯ ನಿಗೂಢ ನಡೆ ನೋಡಿರೋ ಫ್ಯಾನ್ಸ್, ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಅಷ್ಟಕ್ಕೂ ಕೊಹ್ಲಿ ಮಾಡಿದ್ದೇನು?.
ಈ ನಡುವೆ ಕೊಹ್ಲಿಯನ್ನ ಅರ್ಥ ಮಾಡಿಕೊಳ್ಳೋದೆ ಕಷ್ಟವಾಗ್ತಿದೆ. ಹೆಜ್ಜೆ ಹೆಜ್ಜೆಗೂ ನಿಗೂಢ ನಡೆಯನ್ನ ಕಿಂಗ್ ಕೊಹ್ಲಿ ಇಡ್ತಿದ್ದಾರೆ. ಎದುರಾಗೋ ಪ್ರತಿ ಸಮಸ್ಯೆಯನ್ನ ಡೈರೆಕ್ಟ್ ಹಿಟ್ ಮಾಡ್ತಿದ್ದ ವಿರಾಟ್ ಕೊಹ್ಲಿ, ಇತ್ತೀಚೆಗೆ ಬೇರೆಯದ್ದೇ ಹಾದಿ ತುಳಿದಿದ್ದಾರೆ. ಆನ್ಫೀಲ್ಡ್ನಲ್ಲಿ ಹಿಂದಿನಂತೆ ಕಂಡರೂ ಆಫ್ ಫೀಲ್ಡ್ನಲ್ಲಿ ಪರೋಕ್ಷ ಹೆಜ್ಜೆ ಇಡ್ತಿದ್ದಾರೆ.
ಮತ್ತೊಂದು ನಿಗೂಢ ಪೋಸ್ಟ್ ಹಾಕಿದ ಕೊಹ್ಲಿ..!
ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರೋ ಕೊಹ್ಲಿ ಟೆಸ್ಟ್ ಸರಣಿಗೆ ಭರ್ಜರಿ ಸಿದ್ಧತೆ ಆರಂಭಿಸಿದ್ದಾರೆ. ನೆಟ್ಸ್ನಲ್ಲಿ ಬೆವರಿಳಿಸ್ತಾ ಇರೋ ಕೊಹ್ಲಿ, ತನ್ನದೇ ಆದ ಸ್ಟೈಲ್ನಲ್ಲಿ ಕೆರಬಿಯನ್ ನಾಡಲ್ಲಿ ಘರ್ಜಿಸಲು ರೆಡಿಯಾಗಿದ್ದಾರೆ. ಇದು ಆನ್ ಫೀಲ್ಡ್ ಕಥೆ. ಆದ್ರೆ, ಆಫ್ ದ ಫೀಲ್ಡ್ ಕಥೆ ಬೇರೆನೆ ಇದೆ.
‘ನಾವೆಲ್ಲಾ ಒಂದೇ ಮರದ ಎಲೆಗಳು, ಒಂದೇ ಸಮುದ್ರದ ಅಲೆಗಳು’
ಹೊಸ ಚರ್ಚೆ ಹುಟ್ಟು ಹಾಕಿರುವ ಕಿಂಗ್ ಕೊಹ್ಲಿಯ ಲೇಟಸ್ಟ್ ಇನ್ಸ್ಸ್ಟಾ ಪೋಸ್ಟ್ ಇದು. ಬೌದ್ಧ ಬಿಕ್ಕುವೊಬ್ಬರ ಪ್ರಖ್ಯಾತ ಕೋಟ್ ಇದಾಗಿದ್ದು, ಮೇಲ್ನೋಟಕ್ಕೆ ಇದು ಸಾಮರಸ್ಯದ ಸಂದೇಶ ಸಾರುವಂತೆ ಕಾಣ್ತಿದೆ. ಆದ್ರೆ, ಇದ್ರ ಬೆನ್ನಲ್ಲೇ ಕೊಹ್ಲಿ ಮತ್ತೊಂದು ಅದು ಹೊಸ ಚರ್ಚೆಗೆ ನಾಂದಿ ಹಾಡಿದೆ.
‘ನೀವು ಬೇರೆಯವರೊಂದಿಗೆ ನಿಮ್ಮನ್ನ ಹೋಲಿಸಿಕೊಳ್ಳದಿದ್ರೆ, ನೀವು ಏನಾಗಿದ್ದಿರೋ ಹಾಗೆ ಉಳಿಯುತ್ತಿರಿ. ಹೋಲಿಸಿಕೊಳ್ಳುವುದರಿಂದ ನೀವು ಮತ್ತಷ್ಟು ಚುರುಕಾಗಿ, ಮತ್ತಷ್ಟು ಸುಂದರವಾಗಿ ಇರಬೇಕೆಂದು ಆಶಿಸುತ್ತೀರಿ. ಆದ್ರೆ, ನೀವು ಹಾಗೆ ಮಾಡುತ್ತೀರಾ? ಸತ್ಯ ಏನಂದ್ರೆ, ಇದು ನಿಮ್ಮ ಶಕ್ತಿಯನ್ನ ಹಾಳು ಮಾಡುತ್ತದೆ. ಯಾವುದೇ ಹೋಲಿಕೆಯಿಲ್ಲದೆ ನಿಮ್ಮನ್ನು ನೋಡುವುದು ನಿಮಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ’
ಭಾರತದ ಆಧ್ಯಾತ್ಮಿಕ ನಾಯಕರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲೂ ಜಿಡ್ಡು ಕೃಷ್ಣಮೂರ್ತಿಯವರ ಪುಸ್ತಕದ ಕೋಟ್ ಇದು. ಇದರ ಅರ್ಥ ಯಾರೊಂದಿಗೂ ಹೋಲಿಸಿಕೊಳ್ಳಬೇಡಿ. ನಿಮ್ಮಷ್ಟಕ್ಕೆ ನೀವಿರಿ ಅನ್ನೋದಷ್ಟೇ. ಆದ್ರೆ, ಕೊಹ್ಲಿ ಇದನ್ನ ಯಾಕೆ ಶೇರ್ ಮಾಡಿದ್ದಾರೆ. ಮತ್ತು ಯಾರಿಗೆ ಅನ್ನೋದು ಸದ್ಯದ ಪ್ರಶ್ನೆ.
ಮೇಲಿಂದ ಮೇಲೆ ಕೊಹ್ಲಿಯಿಂದ ನಿಗೂಢ ಪೋಸ್ಟ್.!
ಕಳೆದ ಕೆಲ ತಿಂಗಳಿನಿಂದ ಕೊಹ್ಲಿ ಹೀಗೆ ಮೇಲಿಂದ ಮೇಲೆ ನಿಗೂಢ ಪೋಸ್ಟ್ಗಳನ್ನ ಹಾಕ್ತಿದ್ದಾರೆ. ಆದ್ರೆ, ಯಾರಿಗೆ, ಯಾಕೆ ಅನ್ನೋ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿಲ್ಲ. ಈ ಹಿಂದೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸೋಲಿನ ಬಳಿಕ ಒಂದು ಪೋಸ್ಟ್ ಹಾಕಿದರು. ಮೌನ ಬಲಿಷ್ಠ ಬಲದ ಮೂಲ ಅನ್ನೋ ಕೋಟ್ ಹಾಕಿ ಶಾಂತಿ ಮಂತ್ರ ಪಠಿಸಿದರು. ಇದು ತಂಡದ ಒಗ್ಗಟ್ಟಿನ ಬಗ್ಗೆಯೇ ಪ್ರಶ್ನೆ ಹುಟ್ಟು ಹಾಕಿತ್ತು.
ಇಷ್ಟೇ ಅಲ್ಲ, ಇದೇ ಫೈನಲ್ ಪಂದ್ಯದ 4 ದಿನದಾಟದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ್ರು. ಆನ್ಫೀಲ್ಡ್ನಲ್ಲಿ ಫುಲ್ ಜೋಶ್ನಲ್ಲೇ ಇದ್ದರು. ಆದ್ರೆ, ಆಫ್ ದ ಫೀಲ್ಡ್ ಬಂದ ಬೆನ್ನಲ್ಲೇ ಮತ್ತೊಂದು ಇನ್ಸ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ ಅಚ್ಚರಿ ಮೂಡಿಸಿದ್ರು.
‘ನಮಗೆ ಹಲವಾರು ಚಿಂತೆಗಳು, ಭಯಗಳು ಮತ್ತು ಅನುಮಾನಗಳು ಇದ್ದರೆ, ಅಲ್ಲಿ ಇರಲು ಅಥವಾ ಪ್ರೀತಿಸಲು ಅವಕಾಶವೇ ಇರಲ್ಲ. ಹೀಗಾಗಿ ನಾವು ಬಿಟ್ಟು ಬಿಡುವುದನ್ನ ಕಲಿಯಬೇಕಿದೆ’
ಇನ್ನೂ ಹಲವು ನಿಗೂಢ ಅರ್ಥದ ಪೋಸ್ಟ್ಗಳನ್ನ ಕೊಹ್ಲಿ ಮೇಲಿಂದ ಮೇಲೆ ಶೇರ್ ಮಾಡುತ್ತಲೇ ಇದ್ದಾರೆ. ಆದ್ರೆ, ಯಾಕೆ ಮತ್ತು ಯಾರಿಗೆ ಅನ್ನೋದಕ್ಕೆ ಮಾತ್ರ ಉತ್ತರವಿಲ್ಲ. ಕ್ರಿಕೆಟ್ಗೆ ಕಾಲಿಟ್ಟ ಆರಂಭದಲ್ಲಿ ಬಿಂದಾಸ್ ಆಗಿದ್ದ ಕೊಹ್ಲಿ ಪಾರ್ಟಿ ಬಾಯ್ ಆಗಿದ್ರು. ಆದ್ರೆ, ಕ್ರಿಕೆಟ್ ಅನ್ನ ಸೀರಿಯಸ್ಸಾಗಿ ತೆಗೆದುಕೊಂಡ ಬಳಿಕ, ಕಂಪ್ಲೀಟ್ ಬದಲಾದ್ರು. ಫಿಟ್ನೆಸ್ಗೆ ಹೆಚ್ಚಿನ ಮಹತ್ವ ಕೊಟ್ರು. ಡಯಟ್ ಆರಂಭಿಸಿದ್ರು. ಆ ಬಳಿಕ 2019ರ ಬಳಿಕ ಫಾರ್ಮ್ ಸಮಸ್ಯೆಗೆ ಸಿಲುಕಿದ ಬಳಿಕ, ಆಧ್ಯಾತ್ಮಿಕ ಕಡೆ ವಾಲಿದ್ರು. ಈಗಂತೂ ದೇವರ ಸನ್ನಿದಾನ, ಆಶ್ರಮಗಳ ಕಡೆ ಹೋಗ್ತಿದ್ದಾರೆ.
ಕ್ರಿಕೆಟ್ಗೆ ಕಾಲಿಟ್ಟ ದಿನದಿಂದ ಈವರೆಗೂ ಆನ್ ಫೀಲ್ಡ್ನಲ್ಲಿ ಕೊಹ್ಲಿ ಹಾಗೆ ಉಳಿದಿದ್ದಾರೆ. ಎದುರಾಳಿಗಳು ಅಪ್ಪಿತಪ್ಪಿ ಕೆಣಕಿದ್ರೆ ಸ್ಪಾಟ್ನಲ್ಲೆ ತಿರುಗೇಟು ಫಿಕ್ಸ್. ಆದ್ರೆ, ಆಫ್ ಫೀಲ್ಡ್ನಲ್ಲಿ ಮಾತ್ರ, ಬದಲಾಗುತ್ತಲೇ ಬಂದಿದ್ದಾರೆ. ತಮ್ಮ ಇನ್ಸ್ಸ್ಟಾಗ್ರಾಂ ಸ್ಟೋರಿಗಳ ಮೂಲಕ ಕೊಹ್ಲಿ, ಸದ್ಯ ಶಾಂತಿಯ ಮಂತ್ರ ಪಠಿಸ್ತಿದ್ದಾರೆ. ಆದ್ರೆ, ಈ ಸ್ಟೋರಿಗಳನ್ನ ಹಾಕ್ತಿರೋದು ಯಾಕೆ ಉತ್ತರ ಸಿಗದ ಪ್ರಶ್ನೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ