ಯುವರಾಜ್ ಸಿಂಗ್ ಮಾಡಿದ ತಪ್ಪಿಗೆ ಅಂದು ಗಂಗೂಲಿ ತಬ್ಬಿಬ್ಬು
ತಂಡಕ್ಕೆ ಡೆಬ್ಯೂ ಮಾಡುವ ಮುಂಚೆಯೇ ಗಂಗೂಲಿಗೆ ಕೊಟ್ಟ ಕೆಲಸವೇನು?
ಯುವರಾಜ್ ಸಿಂಗ್ ತಪ್ಪಿಸಿಕೊಳ್ಳದಂತೆ ಕಣ್ಣಿಟ್ಟಿದ್ದ ಸೆಕ್ಯೂರಿಟಿಗಾರ್ಡ್
ಸಿಕ್ಸರ್ ಕಿಂಗ್ ಯುವರಾಜ್ ಎದುರಾಳಿ ಬೌಲರ್ಗಳ ನಿದ್ದೆ ಗೆಡಿಸುತ್ತಿದ್ದ ವಿಷ್ಯ ನಮಗೆ ಗೊತ್ತೇ ಇದೆ. ಆದ್ರೆ, ಟೀಮ್ ಇಂಡಿಯಾ ನಾಯಕ ಗಂಗೂಲಿಗೂ ನಿದ್ದೆ ಬರದಂತೆ ಮಾಡಿದ್ದ ಸ್ಟೋರಿಯನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.
ಯುವರಾಜ್ ಸಿಂಗ್ ವಿಶ್ವ ಕ್ರಿಕೆಟ್‌ನ ಸಿಕ್ಸರ್ ಕಿಂಗ್. ಬ್ಯಾಟ್ಸ್ಮನ್ ಆಗಿ, ಸ್ಪಿನ್ನರ್, ಫೀಲ್ಡರ್ ಆಗಿ 2 ದಶಕಗಳ ಕಾಲ ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಪ್ಲೇಯರ್ ಆಗಿ ರಾರಾಜಿಸಿದ್ರು. 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರವನ್ನೇ ವಹಿಸಿದ್ದಾರೆ. ಇಂಥ ಶ್ರೇಷ್ಠ ಆಟಗಾರ ಟೀಮ್ ಇಂಡಿಯಾಗೆ ಪರ ಡೆಬ್ಯೂ ಮಾಡೋ ಮುನ್ನವೇ ನಾಯಕ ಸೌರವ್ ಗಂಗೂಲಿಗೆ ದೊಡ್ಡ ಟ್ರಬಲ್ ತಂದೊಡ್ಡಿದ್ರು ಅಂದ್ರೆ ನೀವು ನಂಬಲೇಬೇಕು.
2000ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನ ಪಡೆದಿದ್ದ ಯುವಿ ಮರು ದಿನ ಬೆಳಗ್ಗೆ ಕೀನ್ಯಾ ವಿರುದ್ಧ ಡೆಬ್ಯೂ ಮ್ಯಾಚ್ ಆಡಬೇಕಿತ್ತು. ಡೆಬ್ಯೂ ಮ್ಯಾಚ್ಗೆ ಪ್ರಿಪೇರ್ ಆಗಬೇಕಿದ್ದ ಯುವರಾಜ್ ಮಾತ್ರ ಪಾರ್ಟಿ ಅಂತೇಳಿ ರಾತ್ರಿ ಕ್ಲಬ್ಗೆ ಹೋಗಿ ದಾದಾ ನಿದ್ದೆ ಗೆಡಿಸಿದ್ದರು. ಟೀಮ್ ಮೀಟಿಂಗ್ ನಂತರ ಯುವರಾಜ್ ರೂಮ್ನಿಂದ ಎಸ್ಕೇಪ್ ಆಗಿದ್ರು. ಗಂಗೂಲಿ ಕರೆಯನ್ನೂ ಸ್ವೀರಿಸಿರಲಿಲ್ಲ. ಇದರಿಂದ ಗಂಗೂಲಿ ಭಯ ಭೀತರಾಗಿದ್ರು. ಕೂಡಲೇ ಸೆಕ್ಯುರಿಟಿ ಗಾರ್ಡ್ಗೆ ಕರೆ ಮಾಡಿ ಹತ್ತಿರದ ನೈಟ್ ಕ್ಲಬ್ ಬಗ್ಗೆ ವಿಚಾರಿಸಿದ್ದರು.
ಅಂದು ರಾತ್ರಿಪೂರ್ತಿ ಭಯದಲ್ಲೇ ಕಳೆದ ರೂಮಿನಲ್ಲಿ ಯುವರಾಜ್ ಇದ್ದಾನೋ ಇಲ್ವೋ ಅನ್ನೋದನ್ನು ಕನ್ಫರ್ಮ್ ಮಾಡಿಕೊಳ್ಳಲು ಆಗಾಗ ಫೋನ್ ಮಾಡ್ತಿದ್ರು. ಸೆಕ್ಯೂರಿಟಿ ಗಾರ್ಡ್ಗೆ ಯುವರಾಜ್ ಮೇಲೆ ಹದ್ದಿನ ಕಣ್ಣಿಡುವಂತೆ ಗಂಗೂಲಿ ಸೂಚಿಸಿದ್ದರು. ಮರುದಿನ ಕೀನ್ಯಾ ಎದುರು ಡೆಬ್ಯೂ ಮಾಡಿದ್ದ ಯುವರಾಜ್ ತಂಡದ ಗೆಲುವಿಗೆ ಮಹತ್ವದ ಪಾತ್ರವಹಿಸಿದ್ದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ