newsfirstkannada.com

ಟೀಮ್​ ಇಂಡಿಯಾದಲ್ಲಿ ಕೆಲ ಪ್ರಯೋಗಗಳ ಬಗ್ಗೆ ಭಾರೀ ಟೀಕೆ; ಖಡಕ್​ ಆಗಿ ಉತ್ತರ ಕೊಟ್ಟ ಜಡೇಜಾ!

Share :

02-08-2023

    ಕೆರಿಬಿಯನ್​ ಟೂರ್ನಿಯ ವೇಳೆ ತಂಡದಲ್ಲಿ ಪ್ರಯೋಗ

    ಹಿರಿಯ ಆಟಗಾರರಿಗೆ ರೆಸ್ಟ್​, ಯುವ ಆಟಗಾರರಿಗೆ ಚಾನ್ಸ್​

    ಟೀಕೆಗಳಿಗೆ ಉತ್ತರ ನೀಡಿದ ಆಲ್​ರೌಂಡರ್ ಜಡೇಜಾ..!

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಟೀಂ ಇಂಡಿಯಾದಲ್ಲಿ ಹಲವು ಪ್ರಯೋಗಗಳನ್ನು ಮಾಡುತ್ತಿದೆ. ತವರಿನಲ್ಲಿ ನಡೆಯುವ 2023 ವಿಶ್ವಕಪ್​ ಪಂದ್ಯಗಳು ಹಾಗೂ ಏಷ್ಯಕಪ್​ಗೆ ಬಲಿಷ್ಠ ಟೀಮ್​ ತಯಾರು ಮಾಡಬೇಕಿದೆ. ಹೀಗಾಗಿಯೇ ರೋಹಿತ್​, ಕೊಹ್ಲಿ, ಶಮಿ ಸೇರಿದಂತೆ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಆಟಗಾರರಿಗೆ ಅವಕಾಶ ನೀಡಲಾಗುತ್ತಿದೆ. ಸದ್ಯ ಈ ಬಗ್ಗೆ ಆಲ್​ರೌಂಡರ್​ ಜಡೇಜಾ ಮಾತನಾಡಿದ್ದಾರೆ.

ಜಡೇಜಾ, ಕುಲ್​ದೀಪ್ ಯಾದವ್ ಮತ್ತು ಚಹಲ್

ತಂಡದಲ್ಲಿ ಬದಲಾವಣೆಗಳ ಬಗ್ಗೆ ಕೆಲವರಿಂದ ಟೀಕೆಗಳು ವ್ಯಕ್ತವಾಗಿದ್ದವು. ಈ ಬಗ್ಗೆ ಆಲ್​​ರೌಂಡರ್ ರವೀಂದ್ರ ಜಡೇಜಾ ಉತ್ತರ ನೀಡಿದ್ದಾರೆ. ಏಷ್ಯಾಕಪ್ ಮತ್ತು ವಿಶ್ವಕಪ್​​ಗಿಂತ ಮೊದಲು ಪ್ರಯೋಗ ಮಾಡಲು ಹಾಗೂ ಕಾಂಬಿನೇಷನ್​ ಬದಲಾಯಿಸಲು ಇರುವ ಏಕೈಕ ಸರಣಿ ಇದಾಗಿದೆ. ಇದೇ ಕಾರಣಕ್ಕೆ ತಂಡದಲ್ಲಿ ಪ್ರಯೋಗ ನಡೆಸಲಾಗ್ತಿದೆ. ವಿಶ್ವಕಪ್ ಗೆಲ್ಲಬೇಕು ಎನ್ನುವುದೇ ಮುಖ್ಯ ಉದ್ದೇಶವಾಗಿದೆ ಎಂದು ಜಡೇಜಾ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್​ ಇಂಡಿಯಾದಲ್ಲಿ ಕೆಲ ಪ್ರಯೋಗಗಳ ಬಗ್ಗೆ ಭಾರೀ ಟೀಕೆ; ಖಡಕ್​ ಆಗಿ ಉತ್ತರ ಕೊಟ್ಟ ಜಡೇಜಾ!

https://newsfirstlive.com/wp-content/uploads/2023/08/JADEJA.jpg

Load More