ಏಷ್ಯಾಕಪ್ ಟೂರ್ನಿ ಆರಂಭಕ್ಕೆ ಏಳೇ ದಿನ ಬಾಕಿ!
ಬೆಂಗಳೂರಿನಿಂದಲೇ ಮಿಷನ್ ಏಷ್ಯಾಕಪ್ ಶುರು
14 ನೆಟ್ ಬೌಲರ್ಗಳಿಗೆ ಬಿಸಿಸಿಐ ಬುಲಾವ್
ಏಷ್ಯಾಕಪ್ ಟೂರ್ನಿಗೆ ಜಸ್ಟ್ ಆರೇ ಆರು ದಿನಗಳು ಮಾತ್ರ ಬಾಕಿಯಿದ್ದು, ನಾಳೆಯಿಂದ ಟೀಮ್ ಇಂಡಿಯಾದ ಪೂರ್ವಾಭ್ಯಾಸ ಶುರುವಾಗಲಿದೆ. ಬೆಂಗಳೂರಿನಲ್ಲಿ ಏಷ್ಯಾಕಪ್ ತಯಾರಿ ನಡೆಸಲಿರುವ ಟೀಮ್ ಇಂಡಿಯಾಗೆ, ಈ ಕ್ಯಾಂಪ್ ಮೋಸ್ಟ್ ಇಂಪಾರ್ಟೆಂಟ್.
ಏಷ್ಯಾಕಪ್ ಮಹಾಸಮರಕ್ಕೆ ಕೌಂಟ್ಡೌನ್ ಶುರುವಾಗಿದೆ. ಆಗಸ್ಟ್ 30ರಿಂದ ಆರಂಭವಾಗಲಿರುವ ಈ ಮೆಗಾ ಟೂರ್ನಿಗೆ ಜಸ್ಟ್ ಏಳೇ ಏಳು ದಿನ ಬಾಕಿ ಉಳಿದಿದ್ದು, ಇದಕ್ಕೂ ಮುನ್ನ ಟೀಮ್ ಇಂಡಿಯಾ 5 ದಿನಗಳ ಕ್ಯಾಪ್ ನಡೆಸಲು ಮುಂದಾಗಿದೆ.
ಬೆಂಗಳೂರಲ್ಲಿ ಟೀಮ್ ಇಂಡಿಯಾ.. ನಾಳೆಯಿಂದ ತಯಾರಿ..!
ಬೆಂಗಳೂರಿನ ಆಲೂರಿನಲ್ಲಿ ನಡೆಯಲಿರುವ ಈ ಕ್ಯಾಂಪ್ಗಾಗಿ ಟೀಮ್ ಇಂಡಿಯಾ ಆಟಗಾರರು, ಈಗಾಗಲೇ ಸಿಲಿಕಾನ್ ಸಿಟಿ ಸೇರಿಕೊಂಡಿದ್ದಾರೆ. ನಾಳೆಯಿಂದ ಏಷ್ಯಾಕಪ್ ತಯಾರಿ ಆರಂಭಿಸಲಿದ್ದು, ಪ್ರಮುಖ ಆಟಗಾರರು ಇಂಜುರಿಗೆ ತುತ್ತಾಗದಂತೆ 14 ನೆಟ್ ಬೌಲರ್ಗಳಿಗೆ ಬಿಸಿಸಿಐ ಬುಲಾವ್ ನೀಡಿದೆ. ಅಷ್ಟೇ ಅಲ್ಲ. ಈ ಕ್ಯಾಂಪ್ ವೇಳೆ ಕೋಚ್ ದ್ರಾವಿಡ್ ಆ್ಯಂಡ್ ಟೀಮ್ ಜೊತೆ ಜೊತೆಗೆ ಸೆಲೆಕ್ಷನ್ ಕಮಿಟಿಯೂ ಉಪಸ್ಥಿತಿ ಇರಲಿದೆ. ಆದರೆ, 5 ದಿನಗಳ ಕಾಲ ನಡೆಯಲಿರುವ ಈ ಕ್ಯಾಂಪ್, ಜಸ್ಟ್ ಕ್ಯಾಂಪ್ ಆಗಿ ಉಳಿದಿಲ್ಲ. ಟೀಮ್ ಇಂಡಿಯಾ ಶಕ್ತಿ, ಸಾಮರ್ಥ್ಯದ ಜೊತೆ ಜೊತೆಗೆ ಕೆಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಕ್ಯಾಂಪ್ ಆಗಿದೆ.
ನಂಬರ್.1 ಟೀಮ್ ಬಾಂಡಿಂಗ್..!
ಏಷ್ಯಾಕಪ್ನಲ್ಲಿರುವ ರಣಕಲಿಗಳ ತಂಡ, ಜೊತೆಯಾಗಿ ಕಾಣಿಸಿಕೊಂಡು ವರ್ಷಕ್ಕೂ ಅಧಿಕ ದಿನಗಳೇ ಕಳೆದಿದೆ. ಈ ನಿಟ್ಟಿನಲ್ಲಿ ಆಟಗಾರರ ನಡುವಿನ ಬಾಂಡಿಂಗ್ಗೆ ವೃದ್ಧಿಸಿಕೊಳ್ಳಲು ಈ ಕ್ಯಾಂಪ್ ಸಹಕಾರಿಯಾಗಲಿದೆ. 6 ದಿನಗಳ ಕ್ಯಾಂಪ್ ಆಟಗಾರರ ಸ್ನೇಹಕ್ಕೆ ಮತ್ತೊಂದು ತಿರುವನ್ನೇ ನೀಡುತ್ತೆ. ಇದು ಮೆಗಾ ಟೂರ್ನಿಯಲ್ಲಿ ನಾವೊಂದೇ ಎಂಬ ಮನಸ್ಥಿತಿಯನ್ನು ಆಟಗಾರರಲ್ಲಿ ಮೂಡಿಸೋದ್ರಲ್ಲಿ ಅನುಮಾನವೇ ಇಲ್ಲ.
ನಂಬರ್.2: ಶ್ರೇಯಸ್-ರಾಹುಲ್ ಮ್ಯಾಚ್ ಫಿಟ್ನೆಸ್ ಟೆಸ್ಟ್
ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್.ರಾಹುಲ್ ಏಷ್ಯಾಕಪ್ಗೆ ಆಯ್ಕೆಯಾದರೂ ಫಿಟ್ನೆಸ್ ಅನುಮಾನಕ್ಕೆ ಬ್ರೇಕ್ ಮಾತ್ರ ಬಿದ್ದಿಲ್ಲ. ಇವರ ಫಿಟ್ನೆಸ್ ಕ್ಲಿಯರೆನ್ಸ್ ಬಗ್ಗೆ ಗೊಂದಲಗಳು ಇದ್ದೇ ಇದೆ. ಇದಕ್ಕೆಲ್ಲ 6 ದಿನಗಳ ಏಷ್ಯಾಕಪ್ ಕ್ಯಾಂಪ್ ಸ್ಪಷ್ಟ ಚಿತ್ರಣ ನೀಡೋದು ಗ್ಯಾರಂಟಿ. ಯಾಕಂದ್ರೆ ಈ 6 ದಿನಗಳ ಕ್ಯಾಂಪ್ನಲ್ಲಿ ಕೆಲ ಅಭ್ಯಾಸ ಪಂದ್ಯಗಳನ್ನಾಡಲಿದೆ. ಈ ವೇಳೆ ಪಂದ್ಯಕ್ಕೆ ಎಷ್ಟರ ಮಟ್ಟಿಗೆ ಫಿಟ್ ಇದ್ದಾರೆ ಎಂಬ ಬಗ್ಗೆ ಉತ್ತರ ಸಿಗಲಿದೆ.
ನಂಬರ್-3: ಟೀಮ್ ಕಾಂಬಿನೇಷನ್ ಹುಡುಕಾಟ
ಸದ್ಯ ಎಲ್ಲರಿಗೂ ಕಾಡ್ತಿರುವ ಪ್ರಶ್ನೆ ಟೀಮ್ ಕಾಂಬಿನೇಷನ್ ಹೇಗಿರುತ್ತೆ? ಇದಕ್ಕೆ ಕಾರಣ ಟಾಪ್-3 ಬಿಟ್ಟರೆ, ಉಳಿದೆಲ್ಲಾ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಗೊಂದಲಗಳು ಇದ್ದೇ ಇದೆ. ಅದರಲ್ಲೂ 4 ಆ್ಯಂಡ್ 5TH ಸ್ಲಾಟ್ ಯಕ್ಷ ಪ್ರಶ್ನೆಯಾಗಿ ಕಾಡ್ತಿದೆ. ಇದೆಲ್ಲರ ಜೊತೆ ಮ್ಯಾಚ್ ಫಿನಿಷರ್ ಹುಡುಕಾಟ ನಿರಂತರ ನಡೀತಿದೆ. ಹೀಗಾಗಿ ಟೀಮ್ ಇಂಡಿಯಾದ ಕಾಂಬಿನೇಷನ್ ಹೇಗಿರಬೇಕೆಂಬ ಸ್ಪಷ್ಟ ಚಿತ್ರಣ ಕಂಡುಕೊಳ್ಳಬೇಕಿದೆ.
ನಂಬರ್-4: ಸರಿ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಹಕಾರಿ
ಏಷ್ಯಾಕಪ್ನಲ್ಲಿ ಸ್ಥಾನ ಪಡೆದ ಬಹುಪಾಲು ಆಟಗಾರರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿ ಹಲ ದಿನಗಳೇ ಕಳೆದಿವೆ. ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಶಮಿ ಸೇರಿದಂತೆ ಕೆಲ ಆಟಗಾರರು ಆಡಿಲ್ಲ. ಹೀಗಾಗಿ ಮ್ಯಾಚ್ ಸಿಮ್ಯುಲೇಷನ್ನಲ್ಲಿ ಆಟಗಾರರ ವಿಕ್ನೇಸ್ ಮೇಲೆ ವರ್ಕ್ ಮಾಡಬಹುದಾಗಿದೆ. ಇದು ಏಷ್ಯಾಕಪ್ನಲ್ಲಿ ಸರಿಪಡಿಸಿಕೊಳ್ಳಲು ಸಹಕಾರಿಯಾಗಲಿದೆ.
ನಂಬರ್-5: ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳೋಕೆ ಪೂರ್ವ ತಯಾರಿ
ಏಷ್ಯಾಕಪ್ನಲ್ಲಿ ಸ್ಥಾನ ಪಡೆದ ಬಹುಪಾಲು ಆಟಗಾರರು, ಇಂಜುರಿಯಿಂದ ದೂರ ಉಳಿದು ಕಮ್ಬ್ಯಾಕ್ ಮಾಡಿದ್ರೆ. ಕೆಲ ಆಟಗಾರರು ಏಕದಿನ ಪಂದ್ಯಗಳನ್ನ ಆಡಿ ವರ್ಷಗಳೇ ಕಳೆದಿವೆ. ಇದು ಸಹಜವಾಗೇ ಆಟಗಾರರ ಆತ್ಮವಿಶ್ವಾಸ ಕುಂದಿಸಿರುತ್ತೆ. ಹೀಗಾಗಿ ಮೆಂಟಲಿ ಆಟಗಾರರು ಸಜ್ಜಾಗಲು ಹಾಗೂ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಈ 6 ದಿನಗಳ ಪೂರ್ವ ತಯಾರಿ ಬಹುಮುಖ್ಯವಾದ ಪಾತ್ರವನ್ನೇ ವಹಿಸುತ್ತೆ.
Here's the Rohit Sharma-led team for the upcoming #AsiaCup2023 🙌#TeamIndia pic.twitter.com/TdSyyChB0b
— BCCI (@BCCI) August 21, 2023
ಅದೇನೇ ಆಗಲಿ, ಇಂದಿನಿಂದ ಆರಂಭವಾಗಲಿರುವ 6 ದಿನಗಳ ಏಷ್ಯಾಕಪ್ನಲ್ಲಿ ಟೀಮ್ ಇಂಡಿಯಾ ಕೆಲ ಪ್ರಶ್ನೆ ಹಾಗೂ ಗೊಂದಲಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಗೇಮ್ಪ್ಲಾನ್, ಸ್ಟ್ರಾಟರ್ಜಿಯನ್ನೇ ಇಲ್ಲೇ ರೂಪಿಸಿಕೊಳ್ಳಬೇಕಿದೆ. ಇಲ್ಲ, ಏಷ್ಯಾಕಪ್ನಲ್ಲಿ ಮತ್ತೊಮ್ಮೆ ಮುಖಭಂಗ ತಪ್ಪಿದಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್