newsfirstkannada.com

ಕೊಹ್ಲಿಯ ಜರ್ನಿ ಎಲ್ಲರಿಗೂ ಸ್ಫೂರ್ತಿ.. ವಿರಾಟ್ ಬೆಳೆದು ಬಂದ ಹಾದಿಯೇ ರೋಚಕ; ಇಶಾಂತ್ ಶರ್ಮಾ ಹೇಳಿದ್ದೇನು?

Share :

26-06-2023

  ವಿರಾಟ್ ಕೊಹ್ಲಿಗೆ ಬರಸಿಡಿಲಿನಂತೆ ಅಪ್ಪಳಿಸಿತ್ತು ಅಪ್ಪನ ಸಾವು

  ‘ನನಗೆ ಏನಾದ್ರೂ ಆ ರೀತಿ ಆಗಿದ್ದರೇ ಗ್ರೌಂಡ್​ಗೆ ಇಳಿಯುತ್ತಿರಲಿಲ್ಲ’

  ನೋವನ್ನು ಇಟ್ಟುಕೊಂಡು ಕೊಹ್ಲಿ ಗುರುತಿಸಿಕೊಂಡಿದ್ದೇ ಇತಿಹಾಸ

ಟೀಮ್ ಇಂಡಿಯಾ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿಯ ಯಶೋಗಾಥೆ ಎಲ್ಲರಿಗೂ ಸ್ಪೂರ್ತಿಯ ಕಥನ. ಈಗ ವಿಶ್ವದ ಶ್ರೇಷ್ಠ ಕ್ರಿಕೆಟರ್ ಪಟ್ಟಕ್ಕೇರಿರುವ ವಿರಾಟ್ ಕೊಹ್ಲಿ ಬೆಳೆದು ಬಂದ ಹಾದಿಯೇ ರೋಚಕ. ಸಾಮಾನ್ಯ ಕೊಹ್ಲಿಯಾಗಿ ಜರ್ನಿ ಆರಂಭಿಸಿ, ಇಂದು ಕಿಂಗ್ ಕೊಹ್ಲಿಯಾಗಿ ಕ್ರಿಕೆಟ್ ಸಾಮ್ರಾಜ್ಯವನ್ನ ಆಳ್ತಿರೋ ವಿರಾಟ್.

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಸದ್ಯ ವಿಶ್ವವನ್ನೇ ಗೆದ್ದಿರುವ ಕ್ರಿಕೆಟಿಗ. ಬ್ಯಾಟ್ಸ್​ಮನ್‌ಗಳಿಗೆ ಕಠಿಣ ಸವಾಲೊಡ್ಡುವ ಇಂಗ್ಲೆಂಡ್, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ನ್ಯೂಜಿಲೆಂಡ್ ಹೀಗೆ ವಿಶ್ವದ ಮೊಸ್ಟ್ ಡೇಂಜರಸ್ ಪಿಚ್​ಗಳಲ್ಲಿ, ಮೋಸ್ಟ್ ಡೇಂಜರಸ್ ಬೌಲರ್​ಗಳ ದಾಳಿಯನ್ನ ಪುಡಿ ಪುಡಿ ಮಾಡಿ ಲೀಲಾಜಾಲವಾಗಿ ರನ್‌ಗಳಿಸಿದ ಸಾಧಕ ವಿರಾಟ್. ಈತನ ಮಾಂತ್ರಿಕ ಬ್ಯಾಟಿಂಗ್​ ಮರುಳಾಗದವರೇ ಇಲ್ಲ.

ವಿರಾಟನ ಆಟಕ್ಕೆ, ಅಭಿಮಾನಕ್ಕೆ ಗಡಿಯೇ ಇಲ್ಲ, ಭಾರತ, ಏಷ್ಯಾ ಮಾತ್ರವಲ್ಲ. ವಿಶ್ವಾದ್ಯಂತ ಕೊಹ್ಲಿಯ ಅಸಂಖ್ಯ ಅಭಿಮಾನಿಗಳ ದಂಡೇ ಇದೆ. ಪುಟ್ಟ ಬಾಲಕರಿಂದ ಹಿಡಿದು 90 ದಾಡಿದ ಹಿರಿಯ ಜೀವಗಳಿಗೂ ವಿರಾಟ್ ಅಂದ್ರೆ ಪ್ರಾಣ. ಕೊಹ್ಲಿಯ ಅಮೋಘ ಆಟ, ಆ್ಯಟಿಟ್ಯೂಡ್, ಛಲದ ಹೋರಾಟ, ವ್ಯಕ್ತಿತ್ವಕ್ಕೆ ಮಾರು ಹೋಗದವರೇ ಇಲ್ಲ.

ಸಾಧಿಸಲು ಹೊರಟವನಿಗೆ ಸಾಲು ಸಾಲು ಸವಾಲು.!

ಇಂದು ವಿರಾಟ್ ಕೊಹ್ಲಿ ಸಲೀಸಾಗಿ ಕಿಂಗ್ ಪಟ್ಟಕ್ಕೇರಿ ಕುಳಿತಿಲ್ಲ. ಅದ್ರ ಹಿಂದಿರೋ ಶ್ರಮ, ತ್ಯಾಗ ಅಪಾರ. ಕೊಹ್ಲಿ, ಬಾಲ್ಯದಲ್ಲಿ ಕ್ರಿಕೆಟರ್ ಆಗಬೇಕು ಅಂದುಕೊಂಡಾಗ ಗುರಿ ಸ್ಪಷ್ಟವಾಗಿತ್ತು. ಆದ್ರೆ, ಆ ಬಳಿಕವೇ ಎದುರಾಗಿದ್ದು ಸಾಲು ಸಾಲು ಸವಾಲು. ಆರಂಭದಲ್ಲೇ ಅಪ್ಪನ ಸಾವು ಬರಸಿಡಿಲಿನಂತೆ ಅಪ್ಪಳಿಸಿತ್ತು. ಆದ್ರೆ, ಗುರಿ ಸ್ಪಷ್ಟವಾಗಿರಿಸಿಕೊಂಡಿದ್ದ ಕೊಹ್ಲಿ ಧೃತಿಗೆಡಲಿಲ್ಲ. ತಂದೆಯ ಸಾವಿನ ದುಖಃದ ನಡುವೆಯು ಬ್ಯಾಟಿಂಗ್ ನಡೆಸಿ ತಂಡವನ್ನ ಗೆಲ್ಲಿಸಿದ್ದ.

ನಾವು ಯಾವಾಗ್ಲೂ ಬ್ಯಾಟಿಂಗ್ -ಬೌಲಿಂಗ್ ಅಂತಾ ಮಜಾ ಮಾಡ್ತಿದ್ವಿ. ಟೆನ್ಷನ್ ಯಾಕೆ ಆಗಿದ್ದಾನೆ ಎಂದು ಕೇಳಿದೆ. ಆತನಿಗೆ ಏನು ಕೇಳಬೇಡ ಎಂದ. ನಾನು ಆತನ ತಲೆಗೆ ಬಾರಿಸಿದೆ. ಏನ್ ಆಯ್ತು ಚೀಕು.? ಯಾಕೆ ಮಾತಾಡ್ತಾ ಇಲ್ಲ ಎಂದು ಕೇಳಿದೆ. ಜೊತೆಗಿದ್ದವ ಹೇಳಿದ ಅವರ ತಂದೆ ತೀರಿಕೊಂಡಿದ್ದಾರೆ ಎಂದು. ನನಗೆ ಏನು ಮಾಡಬೇಕು ಎಂದೇ ಗೊತ್ತಾಗಲಿಲ್ಲ. ಆಗ ನಾವು 17 ವರ್ಷದವರಾಗಿದ್ವಿ. ಆಮೇಲೆ ಅತ ಬ್ಯಾಟಿಂಗ್ ಮಾಡಿ 90 ರನ್​ಗಳಿಸಿದ. ನನಗೆ ಒಂದಂತೂ ಅರ್ಥ ಆಗಲಿಲ್ಲ. ಹಾಗೇನಾದ್ರೂ ನನಗೆ ಆಗಿದ್ರೆ, ನಾನು ಮೈದಾನಕ್ಕೆ ಇಳೀತಾನೆ ಇರಲಿಲ್ಲ.

ಇಶಾಂತ್ ಶರ್ಮಾ, ಟೀಮ್​ ಇಂಡಿಯಾ ಆಟಗಾರ

ಕೊಹ್ಲಿಯನ್ನ ಆರಂಭದಿಂದಲೂ ತುಂಬಾ ಹತ್ತಿರದಿಂದ ನೋಡಿರುವ ಇಶಾಂತ್ ಶರ್ಮಾ ಹೇಳಿರುವ ಮಾತಗಳಿವು. ಕೊಹ್ಲಿ ತಂದೆಯ ಸಾವಿನ ನೋವಿನ ನಡುವೆಯೂ ಬ್ಯಾಟಿಂಗ್ ಮಾಡಿದ ಅನ್ನೋದಕ್ಕಿಂತ, ನನಗೆ ಹಾಗೆ ಆಗಿದ್ರೆ ಮೈದಾನಕ್ಕೆ ಇಳೀತಾನೆ ಇರಲಿಲ್ಲ ಎಂದ ಇಶಾಂತ್ ಮಾತೇ ಹೇಳುತ್ತೆ ಕೊಹ್ಲಿಯ ಡೆಡಿಕೇಷನ್ ಏನು ಅನ್ನೋದನ್ನ.

ರಾತ್ರಿ ಪೂರ್ತಿ ಪಾರ್ಟಿ, ಮರುದಿನ ಭರ್ಜರಿ ಬ್ಯಾಟಿಂಗ್.!

ಈಗ ವಿರಾಟ್ ಕೊಹ್ಲಿ ತನ್ನ ಕರಿಯರ್ ಆರಂಭದಲ್ಲಿ ಪಾರ್ಟಿಗೆ ಸಿಕ್ಕಾಪಟ್ಟೆ ಅಡಿಕ್ಟ್ ಆಗಿದ್ರು.. ಎಷ್ಟರ ಮಟ್ಟಿಗೆ ಅಂದ್ರೆ, ಮರುದಿನ ಪಂದ್ಯವಿದ್ರೂ, ಇಡೀ ರಾತ್ರಿ ಪಾರ್ಟಿ ಮಾಡ್ತಿದ್ರಂತೆ.. ಅದೂ 19ರ ವಯಸ್ಸಿನಲ್ಲಿದ್ದಾಗಲೇ..!

ಆತ ತುಂಬಾ ಬದಲಾಗಿದ್ದಾನೆ. ಚಿಕ್ಕವನಿಂದ ಇಲ್ಲಿವರೆಗೆ ಎಲ್ಲವನ್ನೂ ನೋಡಿದ್ದೆನೆ. ಪಾರ್ಟಿ ಮಾಡ್ತಿದ್ದ ಹುಡುಗನನ್ನೂ ನೋಡಿದ್ದೇನೆ. ಬೇರೆ, ಬೇರೆ.. ಟ್ಯಾಟೂ ಬಾಯ್ ನೋಡಿದ್ದೇನೆ. ಅಂಡರ್-19 ಝೋನ್ ಮ್ಯಾಚ್ ಕಲ್ಕತ್ತಾದಲ್ಲಿ ಆಡುವಾಗ ಆತ ರಾತ್ರಿ ಪೂರ್ತಿ ಪಾರ್ಟಿ ಮಾಡಿದ್ದ. ಮರುದಿನ ಹೋಗಿ 200 ರನ್ ಬಾರಿಸಿದ್ದನು.

2012ರ ಬಳಿಕ ಸಂಪೂರ್ಣ ಬದಲಾದ ವಿರಾಟ್ ಕೊಹ್ಲಿ..!

ಪಕ್ಕಾ ಪಾರ್ಟಿ ಬಾಯ್ ಆಗಿದ್ದ ವಿರಾಟ್ ಕೊಹ್ಲಿ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟ ಮೇಲೂ ಹಾಗೇ ಇದ್ರು. ಐಪಿಎಲ್​ನಲ್ಲಿ ಸಕ್ಸಸ್, ಕೊಹ್ಲಿಯಲ್ಲಿದ್ದ ಮತ್ತನ್ನ ಮತ್ತಷ್ಟು ಹೆಚ್ಚಿಸಿತ್ತು. ಇದೇ ಮತ್ತಲ್ಲಿ ಕೊಹ್ಲಿ ತೇಲಾಡ್ತಾ ಉಳಿದು ಬಿಟ್ಟಿದ್ರೆ, ವಿಶ್ವ ಸಾಮ್ರಾಟ ವಿರಾಟ್, ಕ್ರಿಕೆಟ್ ಲೋಕಕ್ಕೆ ಸಿಗ್ತಾನೇ ಇರಲಿಲ್ಲ.. ಆದ್ರೆ, ಒನ್ ಪಾಯಿಂಟ್ ಆಫ್ ಟೈಮ್​ನಲ್ಲಿ ಕೊಹ್ಲಿ ಸಡನ್ ಆಗಿ ಬದಲಾದ್ರು. ಕ್ರಿಕೆಟ್ನಲ್ಲಿ ಮತ್ತಷ್ಟು ಸಾಧಿಸಬೇಕು ಅಂತಾ ಪಣ ತೊಟ್ಟರು.

ನನಗೆ ಆತನ ಯಾವ ನಡೆ ಇಲ್ಲಿಯವರೆಗೆ ಬೆಸ್ಟ್ ಅನಿಸಿದೆ ಅಂದ್ರೆ, ಆತ ಆತನನ್ನ ಸಂಪೂರ್ಣ ಬದಲಾಯಿಸಿಕೊಂಡ. 2012ರ T20 ವಿಶ್ವಕಪ್ ಆದ ಬಳಿಕ ಆತ ಆತನ ದೈಹಿಕ ಫಿಟ್ನೆಸ್​ಗೆ ಹೆಚ್ಚು ಒತ್ತು ಕೊಟ್ಟ. ಡಯಟ್ ಸಂಪೂರ್ಣ ಬದಲಿಸಿಕೊಂಡ. ಆ ಬಳಿಕ ಆತನ ಫಿಟ್ನೆಸ್, ಆತನ ಮಾನಸಿಕ ಬಲ ಬೇರೆಯದ್ದೇ ಲೆವೆಲ್ಗೆ ಹೋಯ್ತು. ಡೆಲ್ಲಿಯ ಜನರಿಗೆ ತಿನ್ನೋದು ಅಂದ್ರೆ ಇಷ್ಟ. ನನಗೂ ಇಷ್ಟ. ಆತ ಅವನ್ನೆಲ್ಲಾ ಸಂಪೂರ್ಣವಾಗಿ ಬಿಟ್ಟ. ನಾನು ನೋಡಿದಂತೆ 2011ರಿಂದ 2023ರವರೆಗೆ 2ರಿಂದ 3 ಬಾರಿ ಚೋಲೆ ಬಟೂರೆ ತಿಂದಿದ್ದನ್ನ ನಾನು ನೋಡಿದ್ದೇನೆ.

ಇಶಾಂತ್ ಶರ್ಮಾ, ಟೀಮ್​ ಇಂಡಿಯಾ ಆಟಗಾರ

ತಾನೊಬ್ಬನೇ ಅಲ್ಲ.. ವಿರಾಟ್ ಟೀಮ್ ಇಂಡಿಯಾದ ನಾಯಕನ ಪಟ್ಟಕ್ಕೇರಿದ್ದೆ ಏರಿದ್ದು, ಇಡೀ ತಂಡದ ವಾತಾವರಣವನ್ನೇ ಬದಲಾಯಿಸಿ ಬಿಟ್ರು. ಧೋನಿ, ಫಿಟ್ನೆಸ್ ಕಲ್ಚರ್ ಅನ್ನ ತಂಡಕ್ಕೆ ಪರಿಚಯಿಸಿದ್ರೆ, ಕೊಹ್ಲಿ ಇದ್ರಲ್ಲಿ ಕ್ರಾಂತಿಯನ್ನೇ ಮಾಡಿಬಿಟ್ರು. ಟೀಮ್ ಇಂಡಿಯಾದಲ್ಲಿ ಫಿಟ್ನೆಸ್ ಕ್ರಾಂತಿ ಆರಂಭದೊಂದಿಗೆ ಗೆಲುವಿನ, ದೇಶ- ವಿದೇಶಗಳಲ್ಲಿ ಗೆಲುವಿನ ಜೈತ್ರಯಾತ್ರೆಯೂ ಆರಂಭವಾಯ್ತು.

ಒಬ್ಬ ಸಾಮಾನ್ಯ ಕ್ರಿಕೆಟರ್ ಆಗಬೇಕು. ಟೀಮ್ ಇಂಡಿಯಾ ಪರ ಕಣಕ್ಕಿಳಿಯಬೇಕು ಎಂದು ಕ್ರಿಕೆಟ್ ಜರ್ನಿ ಆರಂಭಿಸಿದ ವಿರಾಟ್ ಇಂದು ವಿಶ್ವವನ್ನೇ ಗೆದ್ದಿದ್ದಾನೆ. ಆದ್ರೂ, ಕೊಹ್ಲಿಯಲ್ಲಿನ ಹಸಿವು ನೀಗಿಲ್ಲ. ಸಾಧಿಸುವ ಹಠ. ಛಲ ಬಿಡದ ಹೋರಾಟ ಕಿಂಚಿತ್ತೂ ಕುಂದಿಲ್ಲ. ಇನ್ನೂ ಐದಾರು ವರ್ಷಗಳ ಕ್ರಿಕೆಟ್ ಆಡುವಷ್ಟು ಫಿಟ್ ಆಗಿರೋ ಕೊಹ್ಲಿ, ಟೀಮ್ ಇಂಡಿಯಾದ ಇನ್ನಷ್ಟು ಪಂದ್ಯಗಳ ಗೆಲುವಿನ ರೂವಾರಿಯಾಗಲಿ ಅನ್ನೋದೇ ಅಭಿಮಾನಿಗಳ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊಹ್ಲಿಯ ಜರ್ನಿ ಎಲ್ಲರಿಗೂ ಸ್ಫೂರ್ತಿ.. ವಿರಾಟ್ ಬೆಳೆದು ಬಂದ ಹಾದಿಯೇ ರೋಚಕ; ಇಶಾಂತ್ ಶರ್ಮಾ ಹೇಳಿದ್ದೇನು?

https://newsfirstlive.com/wp-content/uploads/2023/06/VIRAT_KOHLI-2-1.jpg

Load More