newsfirstkannada.com

ಬಿಸಿಸಿಐ ಹೊಸ ಪ್ಲಾನ್​​.. ಇನ್ಮುಂದೆ ಟೀಂ ಇಂಡಿಯಾದಲ್ಲಿ ಈ ಆಟಗಾರರದ್ದೇ ಹವಾ!

Share :

26-06-2023

  ಇನ್ನೇನಿದ್ರೂ ಭಾರತ ತಂಡದಲ್ಲಿ ಯಂಗ್​ ಸ್ಟಾರ್​​ಗಳ ದರ್ಬಾರ್..!

  ಇಂಡಿಯಾದ ರೆಡ್​ ಬಾಲ್ ಕ್ರಿಕೆಟ್​ನಲ್ಲಿ ಕಿರಿಯರು ರಾರಾಜಿಸಲಿ

  ಕ್ವಾಲಿಟಿ ಬೌಲರ್ಸ್​ ಉತ್ಪಾದಿಸುವ ಫ್ಯಾಕ್ಟರಿ ಡೊಮೆಸ್ಟಿಕ್ ಕ್ರಿಕೆಟ್

ಟೀಮ್ ಇಂಡಿಯಾದಲ್ಲಿ ಹಿರಿಯ ಬೌಲರ್​ಗಳ ಗೋಲ್ಡನ್ ಎರಾ ಮುಗೀತಾ..? ಸದ್ದಿಲ್ಲದೇ ಸೀನಿಯರ್ ಬೌಲರ್​ಗಳನ್ನ ಬದಿಗೆ ಸರಿಸಿ, ಹೊಸ ಪೀಳಿಗೆಯ ಬೌಲರ್​ಗಳನ್ನು ಸಿದ್ಧಪಡಿಸಿಲು ಬಿಸಿಸಿಐ ಅಧಿಕಾರಿಗಳು ಮುಂದಾದ್ರಾ ಅನ್ನೋ ಪ್ರಶ್ನೆ ಕಾಡಲು ಶುರುವಾಗಿದೆ.

ಒಂದು ಟೈಮ್​ನಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಯುನಿಟ್ ಡಾಮಿನೇಟಿಂಗ್​ಗೆ ಹೆಸರು ವಾಸಿಯಾಗಿತ್ತು. ಆಗ ಬೌಲರ್ಸ್ ಆರ್ಭಟ ಅಷ್ಟಕಷ್ಟೇ. ಆದ್ರೆ, ವಿರಾಟ್ ಕೊಹ್ಲಿ ಯಾವಾಗ ಟೀಮ್ ಇಂಡಿಯಾ ಕ್ಯಾಪ್ಟನ್ ಆದರೋ ಅವಾಗಿನಿಂದ ಎಲ್ಲವೂ ಚೇಂಜ್ ಆಯ್ತು. ಬ್ಯಾಟ್ಸ್​ಮನ್ ಬದಲು ಬೌಲರ್​ಗಳಿಗೂ ಡಾಮಿನೇಟ್ ಮಾಡಲು ಶುರುವಿಟ್ಟುಕೊಂಡ್ರು.

ಅದೆಷ್ಟರಮಟ್ಟಿಗೆ ಕೊಹ್ಲಿ ನಾಯಕತ್ವದಲ್ಲಿ ಫಾಸ್ಟ್ ಬೌಲರ್​ಗಳು ಟೆಸ್ಟ್​ನಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ್ರು. ಅಷ್ಟರ ಮಟ್ಟಿಗೆ ಭಾರತ ತಂಡದ ಬೌಲಿಂಗ್ ಪವರ್​ ಫುಲ್ ಆಗಿತ್ತು. ಎದುರಾಳಿ ಬ್ಯಾಟ್ಸ್​ಮನ್​ಗಳು ಬೆಚ್ಚಿ ಬೀಳ್ತಿದ್ರು. ಆಸ್ಟ್ರೇಲಿಯಾವನ್ನ ಅವರದ್ದೇ ನೆಲದಲ್ಲಿ 2 ಬಾರಿ ಮಣ್ಣು ಮುಕ್ಕಿಸಿದ್ದೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್.

2018 TO 2022.. ಬೌಲರ್ಸ್ ಕಬಳಿಸಿದ್ದು 509 ವಿಕೆಟ್..

ಈ ಅಂಕಿ ಅಂಶವೇ ಸಾಕು, ಭಾರತೀಯರ ಬೌಲಿಂಗ್ ಪರಾಕ್ರಮ ಹೇಗಿತ್ತು ಅನ್ನೋದಕ್ಕೆ. 2018 ರಿಂದ 2022ರ ವರೆಗಿನ ಅವಧಿಯಲ್ಲಿ ಇಂಡಿಯನ್ ಪೇಸರ್ಸ್ ಟೆಸ್ಟ್​ನಲ್ಲಿ 506 ವಿಕೆಟ್​ಗಳನ್ನ ಕಬಳಿಸಿದ್ರು. ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಸಿರಾಜ್. ಈ ಪಂಚ ಅತಿರಥ ಮಹಾರಥ ಬೌಲರ್​ಗಳು ಬೆಂಕಿ ಚೆಂಡುಗಳನ್ನೇ ಉಗುಳಿದ್ರು. ಇದನ್ನ ಇಂಡಿಯನ್ ಪೇಸರ್​ಗಳ ಪಾಲಿಗೆ ಗೋಲ್ಡನ್ ಎರಾ ಅಂದ್ರು ತಪ್ಪಲ್ಲ.

ಸೀನಿಯರ್ ಬೌಲರ್​ಗಳ ‘ಸುವರ್ಣ ಯುಗ’ ಅಂತ್ಯ..?

ಇನ್ನೆಂದು ಮತ್ತೆ ನೀವು ಸೀನಿಯರ್ ಪೇಸ್​ ಬೌಲರ್​ಗಳ ಸುವರ್ಣ ಯುಗ ನೋಡಲು ಸಾಧ್ಯವಿಲ್ಲ. ಯಾಕಂದ್ರೆ ಇನ್ನೇನಿದ್ರೂ ಭಾರತದಲ್ಲಿ ಯಂಗ್ ಸ್ಪೀಡ್ ಸ್ಟರ್ಗಳ ದರ್ಬಾರ್ ನಡೆಯಲಿದೆ. ವೆಸ್ಟ್ಇಂಡೀಸ್ ಟೆಸ್ಟ್ ಸರಣಿಗೆ ಪ್ರಕಟಗೊಂಡಿರೋ ತಂಡವನ್ನ ನೋಡಿದ್ರೆ ಅಂತಹದೊಂದು ಹಿಂಟ್ ಸಿಕ್ಕಿದೆ. 30 ವರ್ಷ ಮೇಲ್ಪಟ್ಟ ಉಮೇಶ್ ಯಾದವ್​ರನ್ನ ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. 34ರ ಇಶಾಂತ್ ಶರ್ಮಾಗೆ ಟೀಮ್ ಇಂಡಿಯಾ ಡೋರ್ ಕ್ಲೊಸ್ ತುಂಬಾ ಕಾಲವೇ ಕಳೆದಿದೆ. ಶಮಿ ಭವಿಷ್ಯವೂ ವಿಶ್ವಕಪ್ ಬಳಿಕ ಏನಾಗುತ್ತೆ ಅಂತಾ ಹೇಳೋಕೆ ಸಾಧ್ಯವಿಲ್ಲ.

ಮೊಹಮ್ಮದ್ ಸಿರಾಜ್ ಸ್ಥಾನಕ್ಕೆ ಸದ್ಯಕ್ಕಂತು ಇಂಡಿಯಾದಲ್ಲಿ ಕುತ್ತು ಬರೋ ಸಾಧ್ಯತೆಯೇ ಇಲ್ಲ. ಇನ್ನುಳಿದಂತೆ ವಿಂಡೀಸ್ ಪ್ರವಾಸದಲ್ಲಿ ಸೀನಿಯರ್ ಬೌಲರ್​ಗಳನ್ನ ಕೈಬಿಟ್ಟು ಯುವ ಬೌಲರ್​ಗಳಿಗೆ ಸೆಲೆಕ್ಟರ್ಸ್ ಮಣೆ ಹಾಕಿದ್ದಾರೆ. ಹರಿಯಾಣದ ನವದೀಪ್​ ಸೈನಿ ಹಾಗೂ ಡೊಮೆಸ್ಟಿಕ್ ಕಿಂಗ್ ಮುಖೇಶ್ ಕುಮಾರ್​ಗೆ ಇಂಡೀಸ್ ಪ್ರವಾಸದ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಲಾಗಿದೆ. ಅಲ್ಲಿಗೆ ಬಿಸಿಸಿಐ ಪ್ಲಾನ್ ಕ್ಲಿಯರ್ ಆಗಿದೆ.

ಡೊಮೆಸ್ಟಿಕ್ ಕ್ರಿಕೆಟ್, ಕ್ವಾಲಿಟಿ ಬೌಲರ್​ಗಳನ್ನು ಉತ್ಪಾದಿಸುವ ಫ್ಯಾಕ್ಟರಿ..!

ಸದ್ಯ ಬಿಸಿಸಿಐ ವಿಜನ್ ಕ್ಲೀಯರ್ ಆಗಿದೆ. ಅದೇನಂದ್ರೆ ಭವಿಷ್ಯದಲ್ಲಿ ತಂಡವನ್ನ ಕಟ್ಟುವುದು. ಅದಕ್ಕೆ ತಕ್ಕಂತೆ ಡೊಮೆಸ್ಟಿಕ್ ಕ್ರಿಕೆಟ್​ನಿಂದ ಕ್ವಾಲಿಟಿ ಬೌಲರ್​ಗಳು ಉದಯ ಅಗ್ತಿದ್ದಾರೆ. ಕಳೆದ 4 ರಣಜಿ ಟ್ರೋಫಿಯಲ್ಲಿ 14 ಬೌಲರ್​ಗಳು 30 ಪ್ಲಸ್ ವಿಕೆಟ್ ಕಬಳಿಸಿದ್ದಾರೆ. ಆವೇಶ್ ಖಾನ್, ಆಕಾಶ್ ದೀಪ್, ಇಶಾನ್ ಪೋರೆಲ್, ಸಿಮರ್ಜಿತ್ ಸಿಂಗ್ ಹಾಗೂ ವೈಭವ್ ಅರೋರಂತ ಯುವ ವೇಗಿಗಳು ಟೀಮ್ ಇಂಡಿಯಾದ ಭವಿಷ್ಯದ ಬೌಲರ್​ಗಳಾಗಿ ಗುರುತಿಸಿಕೊಂಡಿದ್ದಾರೆ.

ಎಲ್ಲದಕ್ಕೂ ಒಂದು ಎಂಡ್ ಅನ್ನೋದು ಇದ್ದೆ ಇರುತ್ತೆ. ಸದ್ಯ ಟೀಮ್ ಇಂಡಿಯಾದಲ್ಲಿ ಸೀನಿಯರ್ ಬೌಲರ್​ಗಳನ್ನ ಓವರ್ ಟೇಕ್ ಮಾಡಲು ಯಂಗ್​ ಬೌಲರ್ಸ್ ಸಜ್ಜಾಗಿದ್ದಾರೆ. ಹಿರಿಯರಂತೆ ಕಿರಿಯರು ರೆಡ್​ ಬಾಲ್ ಕ್ರಿಕೆಟ್​ನಲ್ಲಿ ರಾರಾಜಿಸುವಂತಾಗಲಿ ಎಂಬುದು ನಮ್ಮ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಬಿಸಿಸಿಐ ಹೊಸ ಪ್ಲಾನ್​​.. ಇನ್ಮುಂದೆ ಟೀಂ ಇಂಡಿಯಾದಲ್ಲಿ ಈ ಆಟಗಾರರದ್ದೇ ಹವಾ!

https://newsfirstlive.com/wp-content/uploads/2023/06/BUMRHA_UMESH.jpg

Load More