ಟೀಮ್ ಇಂಡಿಯಾಕ್ಕಾಗಿ ಬದ್ರಿನಾಥ್-ಕೊಹ್ಲಿ ನಡುವೆ ಬಿಗ್ ಫೈಟ್
ಈ ಚೀಫ್ ಸೆಲೆಕ್ಟರ್ನ ನಿರ್ಧಾರ ವಿರಾಟ್ ಬದುಕನ್ನೇ ಬದಲಿಸಿತು
ಗ್ರೇಟೆಸ್ಟ್ ಕ್ರಿಕೆಟರ್ಗಳಿದ್ದ ವೆಸ್ಟ್ ಇಂಡೀಸ್ ವಿರುದ್ಧ ಕೊಹ್ಲಿ ಶತಕ
ವಿರಾಟ್ ಕೊಹ್ಲಿ ಇವತ್ತು ವಿಶ್ವ ಕ್ರಿಕೆಟ್‌ನ ಸುಲ್ತಾನನಾಗಿ ಬೆಳೆದಿದ್ದಾರೆ. ಅಭಿಮಾನಿಗಳ ನೆಚ್ಚಿನ ರನ್ ಮೆಷಿನ್. ಕಿಂಗ್ ಕೊಹ್ಲಿಯಾಗಿ ತನ್ನದೇ ಸಾಮ್ರಾಜ್ಯ ಸೃಷ್ಟಿಸಿದ್ದಾರೆ. ಕೊಹ್ಲಿಯ ಈ ಸಕ್ಸಸ್ಗೆ ಟ್ಯಾಲೆಂಟ್, ಸ್ಕಿಲ್, ಹಾರ್ಡ್ವರ್ಕ್ ಕಾರಣವಾಗಿದೆ. ಅದ್ರ ಜೊತೆಗೆ ಅದೃಷ್ಟವೂ ಕೈ ಹಿಡಿದಿದೆ. ಇದಕ್ಕೆ ಈ 3 ಘಟನೆಗಳು ಸಾಕ್ಷಿ. ಭವಿಷ್ಯಕ್ಕೇ ಕುತ್ತು ಬಂದ ಸಂದರ್ಭದಲ್ಲಿ ಇವರು ಬ್ಯಾಕ್ ಮಾಡದಿದ್ರೆ, ಯಾವಾಗಲೋ ಕೊಹ್ಲಿಯ ಕರಿಯರ್ ಖತಂ ಆಗಿ ಬಿಡ್ತಿತ್ತು.
ಪ್ರೆಶರ್ ಅನ್ನೋ ಪದದ ಅರ್ಥವೇ ಗೊತ್ತಿಲ್ಲದಂತೆ ಬ್ಯಾಟ್ ಬೀಸುವ ಕೊಹ್ಲಿ ಟೀಮ್ ಇಂಡಿಯಾ ಪಾಲಿನ ರಿಯಲ್ ಮ್ಯಾಚ್ ವಿನ್ನರ್. ಟೈಮಿಂಗ್, ಶಾಟ್ ಸೆಲೆಕ್ಷನ್, ಗೇಮ್ ರೀಡಿಂಗ್ ಎಲ್ಲದರಲ್ಲು ಮಿಸ್ಟರ್ ಪರ್ಫೆಕ್ಟ್. ಕೊಹ್ಲಿಯಲ್ಲಿರುವ ಕ್ರಿಕೆಟ್ ಕಲೆಯೇ ಯಶಸ್ಸಿನ ಸೀಕ್ರೆಟ್ ಅನ್ನೋದ್ರಲ್ಲಿ ಅನುಮಾನ ಬೇಡ. ಆದ್ರೆ, ಕೇವಲ ತನ್ನಿಲ್ಲಿರುವ ಸ್ಕಿಲ್ಸ್, ಡೆಡಿಕೇಶನ್, ಹಾರ್ಡ್ ವರ್ಕ್ನಿಂದ ಮಾತ್ರವೇ ಕೊಹ್ಲಿ ಇಂದು ಯಶಸ್ಸಿನ ಉತ್ತುಂಗಕ್ಕೇರಿಲ್ಲ. ಸಕ್ಸಸ್ ಹಿಂದೆ ಅದೃಷ್ಟದ ಆಟವೂ ನಡೆದಿದೆ. ಸಂಕಷ್ಟ ಎದುರಾದಾಗ ಕೆಲವರು ಕೈ ಹಿಡಿದೆ ಇದ್ದಿದ್ರೆ, ಕೊಹ್ಲಿ ಟೀಮ್ನಲ್ಲಿ ಇರುತ್ತಿರಲಿಲ್ಲ.
ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದೇ ರೋಚಕ
2008ರಲ್ಲಿ ಅಂಡರ್ 19 ವಿಶ್ವಕಪ್ ಗೆಲ್ಲಿಸಿಕೊಟ್ಟ ವಿರಾಟ್ ಕೊಹ್ಲಿ, ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದೇ ಒಂದು ರೋಚಕ ಕಥೆ. 2008ರಲ್ಲಿ ತಮಿಳುನಾಡಿನ S. ಬದ್ರಿನಾಥ್ ಹಾಗೂ ವಿರಾಟ್ ಕೊಹ್ಲಿ ನಡುವೆ ಟೀಮ್ ಇಂಡಿಯಾ ಎಂಟ್ರಿಗೆ ಪೈಪೋಟಿ ಏರ್ಪಟ್ಟಿತ್ತು. ನಾಯಕ ಧೋನಿ, ಕೋಚ್ ಗ್ಯಾರಿ ಕರ್ಸ್ಟ್ರನ್ ಹಾಗೂ ಬಿಸಿಸಿಐ ಚೀಫ್ ಎನ್.ಶ್ರೀನಿವಾಸನ್, ಬದ್ರಿನಾಥ್ಗೆ ಮಣೆ ಹಾಕಲು ನಿರ್ಧರಿಸಿದ್ದರು. ಆದ್ರೆ, ಅಂದಿನ ಚೀಫ್ ಸೆಲೆಕ್ಟರ್ ಆಗಿದ್ದ ದಿಲೀಪ್ ವೆಂಗ್ಸರ್ಕರ್ ಕೊಹ್ಲಿ ಪರ ಬ್ಯಾಟ್ ಬೀಸಿ ತಂಡಕ್ಕೆ ಆಯ್ಕೆ ಮಾಡಿದರು. ನಂತರ ನಡೆದಿದ್ದೆಲ್ಲ ಇತಿಹಾಸ.
‘ಗ್ಯಾರಿ ಕರ್ಸ್ಟನ್, ಧೋನಿಗೆ ಇದು ಇಷ್ಟವಿರಲಿಲ್ಲ’
ಅಸ್ಟ್ರೇಲಿಯಾದಲ್ಲಿ ಎಮರ್ಜಿಂಗ್ ಪ್ಲೇಯರ್ ಟೂರ್ನಮೆಂಟ್ ನಡೀತಾ ಇತ್ತು. ಭಾರತ, ಆಸ್ಟ್ರೇಲಿಯಾ ಸೌತ್ ಆಫ್ರಿಕಾ, ನ್ಯೂಜಿಲೆಂಡ್ 4 ತಂಡಗಳಿದ್ದವು. ನಾವು U-23 ಆಟಗಾರರನ್ನ ಆಯ್ಕೆ ಮಾಡಿ ಕಳಿಸಿದೆವು. ಆ ತಂಡದಲ್ಲಿದ್ದ ಕೊಹ್ಲಿ, ಗ್ರೇಟೆಸ್ಟ್ ಕ್ರಿಕೆಟರ್ಗಳು ತಂಡದಲ್ಲಿದ್ದ ವೆಸ್ಟ್ ಇಂಡೀಸ್ ವಿರುದ್ಧವೇ ಶತಕ ಸಿಡಿಸಿದರು. ಆಗ ನಾನು ಟೀಮ್ ಇಂಡಿಯಾಗೆ ಸೆಲೆಕ್ಟ್ ಮಾಡಲು ನಿರ್ಧರಿಸಿದೆ. ಆದ್ರೆ, ಗ್ಯಾರಿ ಕರ್ಸ್ಟನ್, ಧೋನಿಗೆ ಇದು ಇಷ್ಟವಿರಲಿಲ್ಲ.
ದಿಲೀಪ್ ವೆಂಗ್ಸರ್ಕರ್, ಭಾರತದ ಮಾಜಿ ಕ್ರಿಕೆಟ್ ಸೆಲೆಕ್ಟರ್
ಧೋನಿ, ಸೆಹ್ವಾಗ್ ಬೆಂಬಲ, ಉಳಿದ ಕೊಹ್ಲಿ ಸ್ಥಾನ
ಅದು 2012ರ ಟೀಮ್ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ. ಆ ಪ್ರವಾಸದ ಮೊದಲ 2 ಟೆಸ್ಟ್ನಲ್ಲಿ ಕೊಹ್ಲಿ ಫ್ಲಾಪ್ ಶೋ ನೀಡಿದರು. ಇದ್ರ ಬೆನ್ನಲ್ಲೇ ಸೆಲೆಕ್ಟರ್ಸ್ ಕೊಹ್ಲಿಯನ್ನ ಪ್ಲೇಯಿಂಗ್ ಇಲೆವೆನ್ನಿಂದ ಡ್ರಾಪ್ ಮಾಡಿ ರೋಹಿತ್ ಶರ್ಮಾರನ್ನ ಆಡಿಸಿ ಎಂದು ಸೂಚಿಸಿದ್ರಂತೆ. ಆದ್ರೆ, ಅಂದಿನ ನಾಯಕ ಎಮ್.ಎಸ್ ಧೋನಿ, ಉಪನಾಯಕ ವಿರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿಯನ್ನ ಬ್ಯಾಕ್ ಮಾಡಿದ್ರಂತೆ. ಇದ್ರಿಂದಾಗಿ ಕೊಹ್ಲಿ ಟೆಸ್ಟ್ ಕರಿಯರ್ ಸೇವ್ ಆಯಿತು. ಇದನ್ನ ಸ್ವತಃ ಸೆಹ್ವಾಗ್ ರಿವೀಲ್ ಮಾಡಿದ್ದಾರೆ.
‘ನಾವಿಬ್ಬರು ಕೊಹ್ಲಿಯ ಬೆಂಬಲಕ್ಕೆ ನಿಂತೆವು’
‘2012ರ ಪರ್ತ್ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿಯನ್ನ ಡ್ರಾಪ್ ಮಾಡಿ ರೋಹಿತ್ ಶರ್ಮಾರನ್ನ ಆಡಿಸಲು ಸೆಲೆಕ್ಟರ್ಸ್ ಮುಂದಾಗಿದ್ರು. ಆಗ ನಾನು ತಂಡದ ಉಪನಾಯಕನಾಗಿದ್ದೆ. ಧೋನಿ ತಂಡವನ್ನ ಮುನ್ನಡೆಸ್ತಾ ಇದ್ರು. ನಾವಿಬ್ಬರು ಕೊಹ್ಲಿಯನ್ನ ಬೆಂಬಲಿಸಲು ನಿರ್ಧರಿಸಿದ್ವಿ. ನಂತರ ಆಗಿದ್ದೆಲ್ಲ ಇತಿಹಾಸ’
ವೀರೇಂದ್ರ ಸೆಹ್ವಾಗ್, ಭಾರತದ ಮಾಜಿ ಕ್ರಿಕೆಟರ್
2014ರಲ್ಲೇ ಮುಗಿದು ಹೋಗುತ್ತಿತ್ತು ಕೊಹ್ಲಿ ಕರಿಯರ್
2014 ಇಂಗ್ಲೆಂಡ್ ಟೂರ್ನಿ ಕೊಹ್ಲಿಯ ವೈಫಲ್ಯದ ಬಗ್ಗೆ ನಿಮಗೆ ಬಿಡಿಸಿ ಹೇಳುವುದು ಬೇಡ. ಸಾಲಿಡ್ ರೆಕಾರ್ಡ್ ಹೊಂದಿದ್ದ ಕೊಹ್ಲಿಯ ಮೇಲೆ ನಿರೀಕ್ಷೆಯ ಭಾರವೇ ಇತ್ತು. ಅದ್ರೆ, ಇಂಗ್ಲೆಂಡ್ ನೆಲದಲ್ಲಿ ರನ್ಗಳಿಕೆಗೆ ತಿಣುಕಾಡಿದ್ದ ಕೊಹ್ಲಿ ಸುಲಭಕ್ಕೆ ವಿಕೆಟ್ ಒಪ್ಪಿಸಿದ್ರು. 5 ಟೆಸ್ಟ್ನಲ್ಲಿ ಕೇವಲ 134 ರನ್ಗಳಿಸಿದ ಕೊಹ್ಲಿ, ಫ್ಲಾಪ್ ಶೋ ನೀಡಿದ್ರು. ಇದಾಗ ಬಳಿಕ ಕೊಹ್ಲಿ ಭವಿಷ್ಯವೇ ಅತಂತ್ರಕ್ಕೆ ಸಿಲುಕಿತ್ತು. ಟೀಕಾಕಾರರು ಮುಗಿಬಿದ್ದಿದ್ರು, ಕೊಹ್ಲಿಯನ್ನ ಡ್ರಾಪ್ ಮಾಡಬೇಕು ಅನ್ನೋ ಕೂಗು ಜೋರಾಗಿತ್ತು.
ಇಂಗ್ಲೆಂಡ್ ಪ್ರವಾಸದಲ್ಲಿ ಫ್ಲಾಪ್ ಶೋ ನೀಡಿದ ಕೊಹ್ಲಿ, ಡಿಪ್ರೆಶನ್ಗೆ ಹೋಗಿ ಬಿಟ್ಟಿದ್ರು. ಆಗ ಕೊಹ್ಲಿಯ ಕೈ ಹಿಡಿದಿದ್ದು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್. ಕೊಹ್ಲಿ ನೆರವಿಗೆ ನಿಂತ ತೆಂಡುಲ್ಕರ್ ಕಮ್ಬ್ಯಾಕ್ ಮಾಡಲು ನೆರವಾದರು.
ಇದಿಷ್ಟೇ ಅಲ್ಲ, 2019ರ ಬಳಿಕ 3 ವರ್ಷಗಳ ಕಾಲ ಕೊಹ್ಲಿ ಶತಕದ ಬರ ಎದುರಿಸಿದಾಗ ಕೂಡ ಇಡೀ ಮ್ಯಾನೇಜ್ಮೆಂಟ್ ಕೊಹ್ಲಿಯ ಬೆನ್ನಿಗೆ ನಿಂತಿದ್ದು ನಿಮಗೂ ಗೊತ್ತಿರೋ ವಿಚಾರ. ಹೀಗಾಗಿ ಹೇಳಿದ್ದು, ತನ್ನಲ್ಲಿರೋ ಅಮೋಘ ಬ್ಯಾಟಿಂಗ್ ಸ್ಕಿಲ್ನಿಂದ ಕೊಹ್ಲಿ ಯಶಸ್ಸಿನ ಉತ್ತುಂಗಕ್ಕೇರಿದ್ದಾರೆ ಅನ್ನೋದು ಎಷ್ಟು ಸತ್ಯವೋ, ಕೊಹ್ಲಿ ಸೂಪರ್ ಸ್ಟಾರ್ ಬೆಳೆದಿದ್ದರ ಹಿಂದೆ ಹಲವರು ಬೆಂಬಲವೂ ಇದೆ ಅನ್ನೋದು ಅಷ್ಟೇ ಸತ್ಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ