newsfirstkannada.com

ಅಬ್ಬಬ್ಬಾ! ವಿಶ್ವಕಪ್​ ಗೆದ್ದ ಟೀಮ್​ ಇಂಡಿಯಾ ಆಟಗಾರರಿಗೆ ಸಿಕ್ಕ ಹಣ ಎಷ್ಟು? ಕೇಳಿದ್ರೆ ಶಾಕ್​ ಆಗ್ತೀರಾ!

Share :

Published July 8, 2024 at 7:19pm

  2024ರ ಟಿ20 ವಿಶ್ವಕಪ್‌ ಗೆದ್ದ ಟೀಮ್​​ ಇಂಡಿಯಾಗೆ ಭರ್ಜರಿ ಬಹುಮಾನ

  ಇತ್ತೀಚೆಗೆ 125 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದ ಬಿಸಿಸಿಐ!

  ವಿಶ್ವಕಪ್​ ಗೆದ್ದ ಟೀಮ್​ ಇಂಡಿಯಾ ಆಟಗಾರರಿಗೆ ಸಿಕ್ಕ ಹಣ ಎಷ್ಟು ಕೋಟಿ?

2024ರ ಟಿ20 ವಿಶ್ವಕಪ್‌ ಗೆದ್ದ ಟೀಮ್​​ ಇಂಡಿಯಾಗೆ ಇತ್ತೀಚೆಗೆ ಬಿಸಿಸಿಐ 125 ಕೋಟಿ ರೂ. ನಗದು ಬಹುಮಾನ ಘೋಷಿಸಿತ್ತು. ಈ ಬೆನ್ನಲ್ಲೀಗ ಬಿಸಿಸಿಐ ತಂಡದ ಎಲ್ಲರಿಗೂ 125 ಕೋಟಿ ರೂ. ಹಂಚಿಕೆ ಮಾಡಿದೆ ಎಂದು ವರದಿಯಾಗಿದೆ.

ಟೀಮ್​ ಇಂಡಿಯಾದ 15 ಆಟಗಾರರು, ಮೀಸಲು ಆಟಗಾರರು, ಕೋಚ್‌ ಹಾಗೂ ಸಪೋರ್ಟಿಂಗ್​​ ಸ್ಟ್ಯಾಫ್​​​ ಸೇರಿ ಒಟ್ಟು 42 ಮಂದಿಗೆ 125 ಕೋಟಿ ಹಂಚಲಾಗಿದೆ. ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಸೇರಿ ವಿಶ್ವಕಪ್​ಗಾಗಿ ತಂಡದ ಪರ ಆಡಿದ 15 ಮಂದಿ ಆಟಗಾರರಿಗೆ ತಲಾ 5 ಕೋಟಿ ರೂ. ನೀಡಲಾಗಿದೆ. ಈ ಪೈಕಿ ಕ್ಯಾಪ್ಟನ್​ ರೋಹಿತ್​​ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಕೂಡ ಇದ್ದಾರೆ.

ಇನ್ನು, ವಿಶ್ವಕಪ್​ಗೆ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದ ರಿಂಕು ಸಿಂಗ್‌, ಶುಭ್ಮನ್​​ ಗಿಲ್‌, ಆವೇಶ್‌ ಖಾನ್‌ ಹಾಗೂ ಖಲೀಲ್‌ ಅಹ್ಮದ್​ಗೆ ತಲಾ 1 ಕೋಟಿ ರೂ. ಬಹುಮಾನ ಸಿಕ್ಕಿದೆ.

ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಥೋಡ್‌, ಫೀಲ್ಡಿಂಗ್‌ ಕೋಚ್‌ ಟಿ. ದಿಲೀಪ್‌ ಕುಮಾರ್‌ ಹಾಗೂ ಬೌಲಿಂಗ್‌ ಕೋಚ್‌ ಪಾರಸ್‌ ಮಾಂಬ್ರೆಗೆ ತಲಾ 2.5 ಕೋಟಿ ಹಂಚಲಾಗಿದೆ. ಸೆಲೆಕ್ಷನ್​​ ಕಮಿಟಿ ಮುಖ್ಯಸ್ಥ ಅಜಿತ್​​ ಅಗರ್ಕರ್ ಸೇರಿ ಆಯ್ಕೆ ಸಮಿತಿ ಸದಸ್ಯರಿಗೆ ತಲಾ 1 ಕೋಟಿ ರೂ. ವಿತರಿಸಲಾಗಿದೆ.

ಭಾರತ ತಂಡದ ಭಾಗವಾಗಿದ್ದ ಕಮಲೇಶ್ ಜೈನ್, ಯೋಗೇಶ್ ಪರ್ಮಾರ್, ತುಳಸಿ ರಾಮ್ ಯುವರಾಜ್, ರಾಘವಿಂದ್ರ ದಿವಿಗಿ, ನುವಾನ್ ಉದೆನೆಕೆ, ದಯಾನಂದ್ ಗರಾನಿ, ರಾಜೀವ್ ಕುಮಾರ್, ಅರುಣ್​​ ಕಾನಡೆ ಸೇರಿ ಸೋಹಮ್ ದೇಸಾಯಿಗೆ ತಲಾ 2 ಕೋಟಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ವಿರಾಟ್​ ಕೊಹ್ಲಿ ಮೊಬೈಲ್​ ವಾಲ್​ಪೇಪರ್​ಗೆ ಯಾರ ಫೋಟೋ ಇದೆ..? ಫ್ಯಾಮಿಲಿದಂತೂ ಅಲ್ವೇ ಅಲ್ಲ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಬ್ಬಬ್ಬಾ! ವಿಶ್ವಕಪ್​ ಗೆದ್ದ ಟೀಮ್​ ಇಂಡಿಯಾ ಆಟಗಾರರಿಗೆ ಸಿಕ್ಕ ಹಣ ಎಷ್ಟು? ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2024/07/TEAM_INDIA-2.jpg

Load More