ಲೆಫ್ಟ್ & ರೈಟ್ ಬ್ಯಾಟ್ಸ್ಮನ್ ಕ್ರೀಸ್ನಲ್ಲಿದ್ದರೆ ಕಥೆನೇ ಬೇರೆ ಇರುತ್ತೆ
ಇಶನ್, ಜೈಸ್ವಾಲ್, ತಿಲಕ್ ಟೀಮ್ನಲ್ಲಿದ್ರೆ ಏನು ಲಾಭ ಆಗುತ್ತೆ ಗೊತ್ತಾ?
ರಿಷಬ್ ಪಂತ್ ಇಲ್ಲದಿದ್ದರೂ ಈ ಮೂವರಲ್ಲಿ ಒಬ್ಬರಿದ್ದರೇ ಸಾಕಾ
ಐಸಿಸಿ ಟೂರ್ನಮೆಂಟ್ ಈ ಪದ ಕೇಳಿದ್ರೆ ಸಾಕು ಟೀಮ್ ಇಂಡಿಯಾ ಬೆಚ್ಚಿ ಬೀಳ್ತಿದೆ. ಕಳೆದ 10 ವರ್ಷದಲ್ಲಾದ ಮುಖಭಂಗಗಳು ಹೀನಾಯ ಸ್ಥಿತಿಗೆ ತಳ್ಳಿವೆ. ಆದ್ರೆ, ತವರಿನಲ್ಲಿ ನಡೆಯೋ ಏಕದಿನ ವಿಶ್ವಕಪ್ನಲ್ಲಿ ಹಾಗಾಗಬಾರದು ಅಂದ್ರೆ, ಇರೋದೊಂದೆ ದಾರಿ. ಈ ಮೂವರು ಎಡಗೈ ಬ್ಯಾಟ್ಸ್ಮನ್ಗಳು ತಂಡದಲ್ಲಿ ಇರಲೇಬೇಕು. ಈ ತ್ರಿಮೂರ್ತಿಗಳು ವಿಶ್ವಕಪ್ ರಣಾಂಗಣದಲ್ಲಿ ಆಡಿದ್ದೆ ಆದ್ರೆ, ಡೆಫಿನೆಟ್ಲಿ ಈ ಸಲ ಭಾರತದ ಅದೃಷ್ಟ ಬದಲಾಗಲಿದೆ.
ಈ ಒಂದು ಅವಕಾಶಕ್ಕಾಗಿ ಭಾರತ ಬರೋಬ್ಬರಿ 12 ವರ್ಷದಿಂದ ಕಾಯ್ತಿತ್ತು. ಕೊನೆಗೂ ಆ ಘಳಿಗೆ ಕೂಡಿ ಬಂದಿದೆ. 2023ರ ಐಸಿಸಿ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. 10 ವರ್ಷದಿಂದ ಐಸಿಸಿ ಟ್ರೋಫಿ ಗೆಲ್ಲೋಕೆ ಸಾಧ್ಯವಾಗಿಲ್ಲ. ಪ್ರತಿ ಬಾರಿ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿದಿದ್ದೆ ಬಂತು. ಆದರೆ ಕಪ್ ಮರೀಚಿಕೆಯಾಗಿದೆ. ಬರೀ ನೋವು, ಅವಮಾನ, ನಿರಾಸೆಯ ಕಾರ್ಮೊಡ ಕವಿದಿದೆ. ಈ ಬಾರಿ ತವರಿನಲ್ಲಿ ಇತಿಹಾಸ ಸೃಷ್ಟಿಸಲು ಭಾರತಕ್ಕೆ ಸುವರ್ಣಾವಕಾಶವಿದೆ.
ಈ ಮೂವರು ತಂಡದಲ್ಲಿದ್ರೆ ಭಾರತಕ್ಕೆ ನೂರಾನೆ ಬಲ.!
ದಶಕದಿಂದ ದಕ್ಕದ ಐಸಿಸಿ ಟ್ರೋಫಿ ಈ ಬಾರಿ ಒಲಿಯಬೇಕಾದ್ರೆ ಟೀಮ್ ಇಂಡಿಯಾ ಬದಲಾವಣೆ ಮಾಡಿಕೊಳ್ಳಲೇಬೇಕಿದೆ. ಡೊಮೆಸ್ಟಿಕ್ ಸರ್ಕ್ಯೂಟ್ ಹಾಗೂ ಐಪಿಎಲ್ನಲ್ಲಿ ಅಬ್ಬರಿಸಿರೋ ಈ ಫೈರಿ ಲೆಫ್ಟ್ ಹ್ಯಾಂಡರ್ಸ್ ವಿಶ್ವಕಪ್ ತಂಡದಲ್ಲಿ ಇರಬೇಕಿದೆ. ಅಷ್ಟಕ್ಕೂ ಆ ಪವರ್ಫುಲ್ ಲೆಫ್ಟಿ ದಾಂಡಿಗರು ಯಾರು ಗೊತ್ತಾ?. ಅವರೇ ಜಾರ್ಖಂಡ್ ಅಟ್ಯಾಕರ್ ಇಶಾನ್ ಕಿಶನ್ ಹೆಸರಲ್ಲೇ ಯಶಸ್ಸಿರೋ ಯಶಸ್ವಿ ಜೈಸ್ವಾಲ್ ಹಾಗೂ 20ರ ಆಂಗ್ರಿಯಂಗ್ ಮ್ಯಾನ್ ತಿಲಕ್ ವರ್ಮಾ.
ಜೈಸ್ವಾಲ್, ತಿಲಕ್, ಕಿಶನ್.. ತಂಡಕ್ಕೆ ಬೇಕೆ ಬೇಕು..!
ಈ ಮೂವರ ಹೆಸರಲ್ಲೇ ಪಾಸಿಟಿವ್ ವೈಬ್ರೇಟ್ ಇದೆ. ಸದ್ಯ ಈ ಆಂಗ್ರಿಯಂಗ್ ಸ್ಟಾರ್ಸ್ ಭಾರತಕ್ಕೆ ಬೇಕಾಗಿದ್ದಾರೆ. ಏಕದಿನದಲ್ಲಿ ಯಾರನ್ನು ಆಯ್ಕೆ ಮಾಡ್ತಾರೋ, ಬಿಡ್ತಾರೋ ಗೊತ್ತಿಲ್ಲ. ಬಟ್ ಈ ವೈಲೆಂಟ್ ಎಡಗೈ ಆಟಗಾರರನ್ನು ಆಯ್ಕೆ ಮಾಡಲೇಬೇಕಿದೆ. ಒಂದು ವೇಳೆ ಈ ತ್ರಿಮೂರ್ತಿಗಳು ಫಿಫ್ಟಿ ಓವರ್ ವರ್ಲ್ಡ್ ಕಪ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದೆ, ಆದಲ್ಲಿ ವಿಶ್ವಕಪ್ ಗೆಲ್ಲುವ ಚಾನ್ಸಸ್ ಹೆಚ್ಚಿದೆ. ಈ ಪ್ಲೇಯರ್ಸ್ ಕಪ್ ಗೆಲ್ಲಿಸಿಕೊಡುವ ಛಲ, ಹಠ, ಹಾಗೂ ಕೆಪಾಸಿಟಿ ಎಲ್ಲವೂ ಇದೆ.
ನಾವು ಆರಂಭದಿಂದಲೇ ಫೈರಿ ಎಡಗೈ ಬ್ಯಾಟ್ಸ್ಮನ್ ವಿಶ್ವಕಪ್ ತಂಡದಲ್ಲಿರಬೇಕು. ಹಾಗಾದ್ರೆ, ಮೆನ್ ಇನ್ ಬ್ಲೂ ಪಡೆ ಒನ್ಡೇ ವಿಶ್ವಕಪ್ ಗೆಲ್ಲುವ ಚಾನ್ಸಸ್ ಹೆಚ್ಚಿದೆ ಅಂತ ಹೇಳ್ತೀದ್ದೀವಿ. ಅಷ್ಟಕ್ಕೂ ಈ ಡೆಡ್ಲಿ ಪ್ಲೇಯರ್ಸ್ ಯಾಕೆ ಬೇಕು ಅಂತೀರಾ?.
ತ್ರಿಮೂರ್ತಿಗಳು ಯಾಕೆ ಬೇಕು.?
ಮ್ಯಾಚ್ ವಿನ್ನರ್ ಪಂತ್ ಸ್ಥಾನ ತುಂಬಬಲ್ಲರು..!
ರಿಷಬ್ ಪಂತ್ ಅಲಭ್ಯತೆ ಭಾರತಕ್ಕೆ ದೊಡ್ಡ ಸೆಟ್ಬ್ಯಾಕ್ ಆಗಿದೆ. ಗಾಯದಿಂದ ಚೇತರಿಸಿಕೊಳ್ತಿರೋ ಪಂತ್, ಒನ್ಡೇ ವಿಶ್ವಕಪ್ ಆಡಲಿದ್ದಾರೆ ಎಂದು ಹೇಳಲಾಗ್ತಿದೆ. ಆದ್ರೆ, ನೋ ಗ್ಯಾರಂಟಿ. ಒಂದು ವೇಳೆ ಡೇರಿಂಗ್ ಬ್ಯಾಟ್ಸ್ಮನ್ ಆಡದೇ ಹೋದಲ್ಲಿ ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್ ಹಾಗೂ ತಿಲಕ್ ವರ್ಮಾ ಅವರ ಸ್ಥಾನವನ್ನ ತುಂಬಬಲ್ಲರು. ಯಾಕಂದ್ರೆ ಮೂವರು ಅಗ್ರೆಸ್ಸಿವ್ ಆಟಗಾರರೇ. ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಕೂಡ ಟಾಪ್- 6ನಲ್ಲಿ ಎಡಗೈ ಬ್ಯಾಟ್ಸ್ಮನ್ಗಳಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಡಗೈ ಬ್ಯಾಟ್ಸ್ಮನ್ಗಳಿದ್ದರೇ ಬೆಸ್ಟ್..!
ಎಡಗೈ ಬ್ಯಾಟ್ಸ್ಮನ್ಗಳು ಟಾಪ್ ಆರ್ಡರ್ನಲ್ಲಿ ಆಡಿದ್ರೆ ವ್ಯತ್ಯಾಸ ಆಗಬಹುದು ಅಂತ ನಿಮಗೇನಾದ್ರು ಅನಿಸುತ್ತಾ?. ಖಂಡಿತ ಓಪನಿಂಗ್ ಅಗತ್ಯವಿಲ್ಲ. ಆದರೆ 3 ಅಥವಾ 4ನೇ ಸ್ಥಾನದಲ್ಲಿ ಆಡಿದ್ರೆ ಸಹಕಾರಿ. ಅದಕ್ಕೆ ಅವಕಾಶವೂ ಇದೆ. ಟಾಪ್-6 ನಲ್ಲಿ ಕನಿಷ್ಠ ಇಬ್ಬರು ಎಡಗೈ ಬ್ಯಾಟ್ಸ್ಮನ್ಗಳು ಇರಬೇಕೆಂದು ಬಯಸುತ್ತೇನೆ. ಅನೇಕ ಯುವ ಆಟಗಾರರಿದ್ದಾರೆ. ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ನೇಹಾಲ್ ವಡೇರಾ ಜತೆಗೆ ಸಾಯಿ ಸುದರ್ಶನ್ ಕೂಡ ಐಪಿಎಲ್ ಫೈನಲ್ನಲ್ಲಿ ಅದ್ಭುತವಾಗಿ ಆಡಿದ್ದಾರೆ.
ರವಿ ಶಾಸ್ತ್ರಿ, ಮಾಜಿ ಕೋಚ್
ಟೀಮ್ ಇಂಡಿಯಾಗೆ ಎಡಗೈ ಬ್ಯಾಟ್ಸ್ಮನ್ಗಳು ಅಗತ್ಯತೆ ಇರೋದಂತೂ ಸ್ಪಷ್ಟ. ಲೆಫ್ಟ್ ಹ್ಯಾಂಡ್ ಬ್ಯಾಟ್ಸ್ಮನ್ಗಳು ಎಂಟ್ರಿಯಾದ್ರೆ, ಎದುರಾಳಿ ತಂಡ ಸಂಕಷ್ಟಕ್ಕೆ ಸಿಲುಕಲಿದೆ. ಲೆಫ್ಟ್ & ರೈಟ್ ಕಾಂಬಿನೇಷನ್ ಆಟಗಾರರ ಕ್ರೀಸ್ ಕಚ್ಚಿ ನಿಂತ್ರೆ, ಫೀಲ್ಡ್ ಸೆಟಪ್, ಬೌಲಿಂಗ್ ಎಲ್ಲವೂ ಕಷ್ಟವಾಗಲಿದೆ. ಅದ್ರಲ್ಲೂ ಅಗ್ರೆಸ್ಸಿವ್ ಬ್ಯಾಟರ್ ಎಂಟ್ರಿಯಾದ್ರೆ ಎದುರಾಳಿಗಳು ತಂತ್ರಗಳು ತಲೆಕೆಳಗಾಗಲಿವೆ. ಏಕದಿನ ವಿಶ್ವಕಪ್ನಂತಹ ಬಿಗ್ ಟೂರ್ನಿ ಮುಂದಿರೋದ್ರಿಂದ ಟೀಮ್ ಇಂಡಿಯಾ ಈ ಬಗ್ಗೆ ಗಮನ ಹರಿಸಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ