newsfirstkannada.com

Super Six: ಪಾಕ್​ ಎದುರು ಸೆಣೆಸಾಡಲು ಟೀಂ ಇಂಡಿಯಾ ಪ್ಲೇಯರ್ಸ್​ ಸಖತ್​ ವರ್ಕೌಟ್​.. ವಿದೇಶದಲ್ಲಿ ಟೆನಿಸ್​​ ಪಂದ್ಯ ವೀಕ್ಷಿಸಿದ ಧೋನಿ

Share :

08-09-2023

    ಏಷ್ಯಾನ್​​ ಗೇಮ್ಸ್​ನ ಋತುರಾಜ್ ಗಾಯಕ್ವಾಡ್ ಭರ್ಜರಿ ಅಭ್ಯಾಸ

    ಯುಎಸ್​​​ ಓಪನ್​​ ಟೆನಿಸ್​​ ಪಂದ್ಯವನ್ನ ವೀಕ್ಷಿಸಿದ ಮಾಹಿ

    ಇಂಗ್ಲೀಷ್​ನ ಕೌಂಟಿ ಕ್ರಿಕೆಟ್​ನತ್ತ ಮುಖ ಮಾಡಿದ ರಾಜಸ್ಥಾನ್ ರಾಯಲ್ಸ್​

ಜಿಮ್​​​ನಲ್ಲಿ ಸೆಷನ್​​ನಲ್ಲಿ ಟೀಮ್ ಇಂಡಿಯಾ!

ಏಷ್ಯಾಕಪ್​ನ ಸೂಪರ್​​-4ಗೆ ಎಂಟ್ರಿ ನೀಡಿರುವ ಟೀಮ್ ಇಂಡಿಯಾ, ಭಾನುವಾರ ಬದ್ಧವೈರಿ ಪಾಕಿಸ್ತಾನ ಎದುರು ಸೆಣಸಾಡಲಿದೆ. ಸದ್ಯ ಮೂರು ದಿನಗಳ ವಿಶ್ರಾಂತಿಯಲ್ಲಿರುವ ಟೀಮ್ ಇಂಡಿಯಾ ಆಟಗಾರರು, ಸೂಪರ್​​​​​-4ನ ಹೈವೋಲ್ಟೇಜ್​ ಪಂದ್ಯಕ್ಕೂ ಮುನ್ನ ಜಿಮ್​ನಲ್ಲಿ ಸಖತ್ ವರ್ಕೌಟ್ ನಡೆಸಿದ್ದಾರೆ. ಮಳೆಯಿಂದಾಗಿ ನಾಯಕ ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕೆ.ಎಲ್.ರಾಹುಲ್ ಸೇರಿದಂತೆ ಇತರೆ ಆಟಗಾರರು ಜಿಮ್​ನಲ್ಲಿ ಕಸರತ್ತು ನಡೆಸ್ತಿದ್ದಾರೆ. ಈ ವಿಡಿಯೋವನ್ನ ಬಿಸಿಸಿಐ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ.

ಏಷ್ಯಾನ್​​ ಗೇಮ್ಸ್​ಗೆ ಋತುರಾಜ್ ಕಸರತ್ತು..!

ಏಷ್ಯಾನ್​​ ಗೇಮ್ಸ್​ನ ಋತುರಾಜ್ ಗಾಯಕ್ವಾಡ್ ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 23ರಿಂದ ನಡೆಯಲಿರುವ ಚೈನಾದಲ್ಲಿ ನಡೆಯಲಿರುವ ಏಷ್ಯಾನ್​ ಗೇಮ್ಸ್​ನಲ್ಲಿ ಋತುರಾಜ್ ಗಾಯಕ್ವಾಡ್​ ನೇತೃತ್ವದ ಟೀಮ್ ಇಂಡಿಯಾ ಪಾಲ್ಗೊಳ್ಳಲಿದ್ದು, ಇದಕ್ಕೂ ಮುನ್ನ ನಾಯಕ ಋತುರಾಜ್ ಗಾಯಕ್ವಾಡ್​ ನೆಟ್ಸ್​ನಲ್ಲಿ ಬೆವರಿಳಿಸುತ್ತಿದ್ದಾರೆ. ಅಕ್ಟೋಬರ್ 5ರಿಂದ ಟೀಮ್ ಇಂಡಿಯಾ ಅಭಿಯಾನ ಆರಂಭವಾಗಲಿದ್ದು, ಅಫ್ಘಾನ್ ಅಥವಾ ಭೂತಾನ್ ಎದುರು ಸೆಣಸಾಡುವ ಸಾಧ್ಯತೆ ಇದೆ.

ಯುಸ್​​​ ಓಪನ್​ ಟೆನಿಸ್ ವೀಕ್ಷಿಸಿದ ಧೋನಿ

ಐಪಿಎಲ್​​ ಬಿಡುವಿನ ವೇಳೆಯನ್ನ ಎಂಎಸ್ ಧೋನಿ ಸಖತ್​​​ ಎಂಜಾಯ ಮಾಡುತ್ತಿದ್ದಾರೆ. ಯುಎಸ್​​​ ಓಪನ್​​ ಟೆನಿಸ್​​ ಪಂದ್ಯವನ್ನ ಮಾಹಿ ವೀಕ್ಷಿಸಿದ್ದಾರೆ.ಕಾರ್ಲೋಸ್​​​ ಅಲ್ಕರಾಜ್​​ ಹಾಗೂ ಅಲೆಕ್ಸಾಂಡರ್​​​ ಜ್ವೆರೆಲ್​​​​ ನಡುವಿನ ಸೆಮಿಫೈನಲ್​ ಪಂದ್ಯವನ್ನ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದ್ದಾರೆ. ಈ ವಿಡಿಯೋ ಟ್ವಿಟ್ ಮಾಡಿರುವ ಸೋನಿ ಸ್ಪೋರ್ಟ್ಸ್ ನಮ್ಮಂತೆ ಧೋನಿ ಕೂಡ ಟೆನಿಸ್ ಅಭಿಮಾನಿ ಎಂದು ಬರೆದುಕೊಂಡಿದೆ. ಧೋನಿ ಸಾಕ್ಷಿಯಾದ ಈ ಪಂದ್ಯವನ್ನ ಕಾರ್ಲೋಸ್ ಅಲ್ಕರಾಜ್​ 6-3,6-4 ರಿಂದ ಗೆದ್ದು ಬೀಗಿದರು.

ಕೌಂಟಿ ತಂಡದ ಖರೀದಿಗೆ ಮುಂದಾದ ಆರ್​ಆರ್​..!

ಐಪಿಎಲ್​ನ ಪ್ರಖ್ಯಾತ ರಾಜಸ್ಥಾನ್ ರಾಯಲ್ಸ್​ ಇಂಗ್ಲೀಷ್​ನ ಕೌಂಟಿ ಕ್ರಿಕೆಟ್​ನತ್ತ ಮುಖ ಮಾಡಿದೆ. ಈಗಾಗಲೇ ಕೆರಿಬಿಯನ್ ಪ್ರಿಮಿಯರ್ ಲೀಗ್, ಸೌತ್ ಆಫ್ರಿಕನ್ ಟಿ20 ಲೀಗ್​​ಗಳಲ್ಲಿ ತಂಡವನ್ನ ಖರೀದಿಸಿರುವ ರಾಜಸ್ಥಾನ್ ರಾಯಲ್ಸ್​, ಈಗ ಸಂಕಷ್ಟಕ್ಕೆ ಸಿಲುಕಿರುವ ಪ್ರಸಿದ್ಧ ಕೌಂಟಿ ಕ್ರಿಕೆಟ್​ ಕ್ಲಬ್​ ಆಗಿರುವ ಯಾರ್ಕ್​ಶೇರ್​ ಖರೀದಿಗೆ ಮುಂದಾಗಿದೆ. ಇದಕ್ಕಾಗಿ ಬರೋಬ್ಬರಿ 260 ಕೋಟಿ ರೂಪಾಯಿ ಆಫರ್ ನೀಡಿರುವ ಬಗ್ಗೆ ವರದಿಯಾಗಿದೆ.

ಸೂಪರ್​ ಓವರ್​​​ನಲ್ಲಿ ಭುವಿ ಸೂಪರ್ ಬೌಲಿಂಗ್

ಟೀಮ್ ಇಂಡಿಯಾದಿಂದ ಹೊರಬಿದ್ದಿರೋ ಭುವನೇಶ್ವರ್​ ಕುಮಾರ್​​ ಯುಪಿ ಟಿ20 ಲೀಗ್​​​​ನಲ್ಲಿ ಮಿಂಚಿನ ದಾಳಿ ಮೂಲಕ ಗಮನ ಸೆಳೆದಿದ್ದಾರೆ. ನೋಯ್ಡಾ ಸೂಪರ್​​ ಕಿಂಗ್ಸ್​​​-ಕಾಶಿ ರುದ್ರಸ್ ನಡುವಿನ ನಿಗದಿತ ಓವರ್​​ ಪದ್ಯ ಟೈ ಆಗಿತ್ತು. ಸೂಪರ್ ಓವರ್​​ನಲ್ಲಿ ನೋಯ್ಡಾ ತಂಡ ಎದುರಾಳಿಗೆ 20 ರನ್ ಗುರಿ ನೀಡಿತ್ತು. ಭುವನೇಶ್ವರ್​ ಕುಮಾರ್​​ ಸೂಪರ್​ ಬೌಲಿಂಗ್​ ಮಾಡಿದ್ರು. 6 ಎಸೆತದಲ್ಲಿ ಬರೀ 11 ರನ್ ಬಿಟ್ಟು ಕೊಟ್ಟು ಗೆಲುವಿನ ರೂವಾರಿಯಾದ್ರು. ಆ ಮೂಲಕ ಟೀಮ್ ಇಂಡಿಯಾಗೆ ಕಮ್​​ಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ.

ಅಂಪೈರ್​​ ನಿರ್ಣಯ ಕಂಡು ತಬ್ಬಿಬ್ಬಾದ ಬ್ಯಾಟ್ಸ್​​ಮನ್..!

ಕ್ರಿಕೆಟ್ ಆಟ ಆಗಾಗ ಫನ್ನಿ ಮೂಮಿಂಟ್​​ಗಳಿಗೆ ಸಾಕ್ಷಿಯಾಗುತ್ತದೆ. ಅಂಪೈರ್ ನಿರ್ಣಯ ಕಂಡು ಬ್ಯಾಟ್ಸ್​​ಮನ್ ಒಬ್ಬ ತಬ್ಬಿಬ್ಬಾದ ಘಟನೆ ನಡೆದಿದೆ. ಬ್ಯಾಟ್ಸ್​​ಮನ್ ಪ್ಯಾಡ್​​​ಗೆ ಬಡಿದ ಚೆಂಡು ನೇರವಾಗಿ ವಿಕೆಟ್ ಕೀಪರ್ ಕೈ ಸೇರುತ್ತೆ. ಬೌಲರ್ ಹಾಗೂ ಕೀಪರ್ ಔಟ್ ಎಂದು ಅಪೀಲ್ ಮಾಡ್ತಾರೆ. ಆರಂಭದಲ್ಲಿ ಅಂಪೈರ್ ಏನೂ ಪ್ರತಿಕ್ರಿಯಿಸದೇ ಸುಮ್ಮನಾಗ್ತಾರೆ. ಇನ್ನೇನು ಬೌಲರ್ ಚೆಂಡಿಡಿದು ಮತ್ತೆ ಬೌಲಿಂಗ್ ಮಾಡ್ಬೇಕು ಅನ್ನುವಷ್ಟರಲ್ಲಿ ಅಂಪೈರ್​ ಔಟ್​ ಎಂದು ತೀರ್ಪು ನೀಡ್ತಾರೆ. ಅಂಪೈರ್ ನಿರ್ಧಾರ ಕಂಡು ಬ್ಯಾಟ್ಸ್​​ಮನ್ ಒಂದು ಕ್ಷಣ ಶಾಕ್​ ಆಗ್ತಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Super Six: ಪಾಕ್​ ಎದುರು ಸೆಣೆಸಾಡಲು ಟೀಂ ಇಂಡಿಯಾ ಪ್ಲೇಯರ್ಸ್​ ಸಖತ್​ ವರ್ಕೌಟ್​.. ವಿದೇಶದಲ್ಲಿ ಟೆನಿಸ್​​ ಪಂದ್ಯ ವೀಕ್ಷಿಸಿದ ಧೋನಿ

https://newsfirstlive.com/wp-content/uploads/2023/09/Super-six-1.jpg

Load More