newsfirstkannada.com

ಎದುರಾಳಿಯ ‘ಪವರ್’​​ ಕಟ್​​​​​​​​ ಮಾಡಿದ ಬ್ಲೂ ಬಾಯ್ಸ್; ​ ಅಂದು ತೆಗಳಿಕೆ.. ಇಂದು ಹೊಗಳಿಕೆ..!

Share :

29-10-2023

    ರನ್ ಗಳಿಕೆಯಲ್ಲಿ ಟೀಮ್ ಇಂಡಿಯಾನೇ ಟಾಪರ್

    ಪವರ್​​ಪ್ಲೇನಲ್ಲಿ ಕಂಪ್ಲೀಟ್​​ ಅಟ್ಯಾಕಿಂಗ್​ ಅಪ್ರೋಚ್

    ಪವರ್​ಪ್ಲೇನಲ್ಲಿ ಹಾಲಿ ಚಾಂಪಿಯನ್ನರ​ ಪವರ್​ ಮಾಯ

ಒನ್ಡೇ ವಿಶ್ವಕಪ್​​ನಲ್ಲಿ ಟೀಮ್ ಇಂಡಿಯಾ ನೆಕ್ಸ್ಟ್​ ಲೆವೆಲ್​​​​ ಆಟವಾಡ್ತಿದೆ. ರೋಹಿತ್​​​​​​ ಶರ್ಮಾ ಬ್ರಿಗೇಡಿಯನ್​​​ನ ದಮ್ನಾರ್​​​​​ ಆಟ ಎದುರಾಳಿ ಟೀಮ್ಸ್ ಬೆಚ್ಚಿ ಬಿದ್ದಿವೆ. ಇಂದು ಅದೇ ಭಯದಲ್ಲಿ ಇಂಗ್ಲೆಂಡ್​​​​ ಕಣಕ್ಕಿಳಿಯುತ್ತಿದೆ. ಟೀಮ್ ಇಂಡಿಯಾದ ಪವರ್​​​ಪ್ಲೇನಲ್ಲಿನ ಪವರ್​ಫುಲ್​​​​​ ಆಟಕ್ಕೆ ಆಂಗ್ಲ ಕಥೆ ಹರೋಹರ ಗ್ಯಾರಂಟಿ.

ಪವರ್​​​​ ಪ್ಲೇನಲ್ಲಿ ಟೀಮ್ ಇಂಡಿಯಾ ವೇಗವಾಗಿ ರನ್​ ಗಳಿಸ್ತಿಲ್ಲ. ಓಪನರ್ಸ್​ ಅಟ್ಯಾಕಿಂಗ್​​ ಬಿಟ್ಟು ಡಿಸೆಂಟ್​ ಆಟವಾಡ್ತಿದ್ದಾರೆ. ಕಂಪ್ಲೀಟ್​​​​ ಅಪ್ರೋಚ್​ ಚೇಂಜ್ ಆಗಬೇಕು. ಹೀಗಂತ ಫ್ಯಾನ್ಸ್​​, ಕ್ರಿಕೆಟ್​​​ ಎಕ್ಸ್​​​ಫರ್ಟ್ಸ್ ಟೀಮ್ ಇಂಡಿಯಾ ವಿರುದ್ಧ ಹರಿಹಾಯ್ತಿದ್ರು. ಆದ್ರೆ ವಿಶ್ವಕಪ್​​ ರಣರಂಗದಲ್ಲಿ ಕಂಪ್ಲೀಟ್ ಉಲ್ಟಾ. ಯಾವ ಪವರ್​ಪ್ಲೇನಲ್ಲಿ ಭಾರತ ಪವರ್​​ ಕಳೆದುಕೊಂಡಿತ್ತೋ, ಅದೇ ಪವರ್​​ ಪ್ಲೇನಲ್ಲಿ ಪವರ್​ಫುಲ್​​ ಆಟವಾಡಿ ಶಹಬ್ಬಾಸ್ ಅನ್ನಿಸಿಕೊಳ್ತಿದೆ.

ವಿಶ್ವಕಪ್​ ದಂಗಲ್​​ನಲ್ಲಿ ಭಾರತಕ್ಕೆ ಪವರ್​​ಪ್ಲೇ ಬಲ

ಒಂದು ಕಾಲದಲ್ಲಿ ಯಾವುದು ಟೀಮ್ ಇಂಡಿಯಾದ ವಿಕ್ನೆಸ್​ ಆಗಿತ್ತೋ ಇಂದು ಅದೇ ಮೆನ್ ಇನ್​ ಬ್ಲೂ ಪಡೆಯ ಬಿಗ್ಗೆಸ್ಟ್​​ ಸ್ಟ್ರೆಂಥ್​ ಆಗಿ ಮಾರ್ಪಟ್ಟಿದೆ. ವಿಶ್ವಕಪ್​ ಪವರ್ ​​​ಪ್ಲೇನಲ್ಲಿ ರೋಹಿತ್​​ ಬ್ರಿಗೇಡಿಯನ್ಸ್​​​ ಸೂಪರ್​ ಡೂಪರ್​​​ ಆಟವಾಡ್ತಿದೆ. ಕಂಪ್ಲೀಟ್​​ ಅಟ್ಯಾಕಿಂಗ್ ಮೈಂಡ್​ಸೆಟ್​​​​. ಡಿಪೆನ್ಸಿವ್​​ ಅನ್ನೋ ಮಾತೇ ಇಲ್ಲ. ದಂಡಂ ದಶಗುಣಂ ಆಟವಾಡ್ತ ಎದುರಾಳಿ ತಂಡಗಳನ್ನ ದಹನ ಮಾಡ್ತಿದೆ.

ಅದ್ಯಾವ ಮಟ್ಟಿಗೆ ಅಂದ್ರೆ ಪವರ್​​ಪ್ಲೇನಲ್ಲಿ ಎದುರಾಳಿ ತಂಡಗಳ ಪವರ್​​​​ ಕಟ್ ಮಾಡಿಬಿಟ್ಟಿದೆ. ಏನಿದ್ರೂ ಇಂಡಿಯನ್​ ಕಲಿಗಳ ದರ್ಬಾರ್​​​​​​​​​​. ಬೇರೆಯವರಿಗೆ ಆರ್ಭಟಿಸಲು ಚಾನ್ಸೇ ಕೊಟ್ಟಿಲ್ಲ. ಮೊದಲ ಹತ್ತು ಓವರ್​​ಗಳಲ್ಲಿ ಸಿಕ್ಸರ್​​-ಬೌಂಡ್ರಿಗಳ ಮಳೆಯನ್ನೇ ಸುರಿಸಿದ್ದಾರೆ.

ಪವರ್​​​ಪ್ಲೇನಲ್ಲಿ ಭಾರತ

ಪ್ರಸಕ್ತ ವಿಶ್ವಕಪ್​​ನಲ್ಲಿ ಟೀಮ್ ಇಂಡಿಯಾ ಪವರ್​​ಪ್ಲೇನಲ್ಲಿ ಇಲ್ಲಿಯತನಕ ಅತ್ಯಧಿಕ 326 ರನ್ ಹೊಡೆದಿದೆ. 5 ವಿಕೆಟ್​​ ಕಳೆದುಕೊಂಡ್ರೆ, 6.5 ರನ್ ಸರಾಸರಿಯನ್ನ ಹೊಂದಿದೆ. 40 ಬೌಂಡರಿ ಹೊಡೆದ್ರೆ 14 ಸಿಕ್ಸರ್​​ಗಳು ಮೂಡಿಬಂದಿವೆ.

ಪವರ್​ಪ್ಲೇನಲ್ಲಿ ಇಂಗ್ಲೆಂಡ್​​ ಪವರ್​ ಮಾಯ

ಇಂದು ಲಕ್ನೋದಲ್ಲಿ ಬಲಿಷ್ಠ ಭಾರತವನ್ನ ಎದುರಿಸಲಿರೋ ಇಂಗ್ಲೆಂಡ್​​ ತಂಡ ಪವರ್​​​ಪ್ಲೇನಲ್ಲಿ ಅಷ್ಟೇನೂ ಸೌಂಡ್ ಮಾಡಿಲ್ಲ. ಬಜ್​​ ಬಾಲ್ ಪಾಲಿಸಿ ಕೈಕೊಟ್ಟಿದೆ. ಡಿಸಾಸ್ಟರ್​​​ ಪರ್ಫಾಮೆನ್ಸ್​ ಜೊತೆ ಪವರ್​​​ಪ್ಲೇನಲ್ಲಿ ಪವರ್​​​ ಕಳೆದುಕೊಂಡಿದೆ.

ಪವರ್​​​ಪ್ಲೇನಲ್ಲಿ ಇಂಗ್ಲೆಂಡ್

ಈ ವಿಶ್ವಕಪ್​​ನಲ್ಲಿ ಇಂಗ್ಲೆಂಡ್​​ ತಂಡ 290 ರನ್ ಬಾರಿಸಿದೆ. 5.8 ನೆಟ್​ರನ್​​​​​ರೇಟ್ ಆಗಿದ್ರೆ 9 ವಿಕೆಟ್​​​ಗಳನ್ನು ಕಳೆದುಕೊಂಡಿದೆ. ಇನ್ನು 37 ಬೌಂಡ್ರಿ ಹಾಗೂ 6 ಸಿಕ್ಸರ್​​ಗಳನ್ನು ಸಿಡಿಸಿದೆ. ಒಟ್ಟಿನಲ್ಲಿ ಪವರ್​​​ಪ್ಲೇನಲ್ಲಿ ಟೀಮ್ ಇಂಡಿಯಾದ ಪವರ್​ಫುಲ್​ ಆಟ ನೋಡ್ತಿದ್ರೆ ಇಂದು ಹಾಲಿ ಚಾಂಪಿಯನ್​​ ಇಂಗ್ಲೆಂಡ್​​​​ಗೂ ಮಾರಿಹಬ್ಬ ಕಾದಿದೆ. 5 ದಿನ ವಿಶ್ರಾಂತಿ ಬೇರೆ ಸಿಕ್ಕಿದೆ. ಹೀಗಾಗಿ ಲಕ್ನೋದಲ್ಲಿ ರೋಹಿತ್​​​​​​​ ಬಾಯ್ಸ್​​​ ಆಂಗ್ಲರನ್ನ ಮಟ್ಟಹಾಕಿದ್ರೂ ಅಶ್ಚರ್ಯವೇನಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಎದುರಾಳಿಯ ‘ಪವರ್’​​ ಕಟ್​​​​​​​​ ಮಾಡಿದ ಬ್ಲೂ ಬಾಯ್ಸ್; ​ ಅಂದು ತೆಗಳಿಕೆ.. ಇಂದು ಹೊಗಳಿಕೆ..!

https://newsfirstlive.com/wp-content/uploads/2023/10/ROHIT_GILL.jpg

Load More