ಅಗ್ನಿಪರೀಕ್ಷೆಯ ಕಣದಲ್ಲಿ ಕೆರಳಿ ನಿಲ್ತಾರಾ ಪಂಜಾಬ್ ಪುತ್ತರ್
ಶುಭ್ಮನ್ ಗಿಲ್ ಸ್ಥಾನ ಆಕ್ರಮಿಸಲು ಶ್ರೇಯಸ್-ರಾಹುಲ್ ರೆಡಿ
3 ತಿಂಗಳಲ್ಲಿ 4 ಸೆಂಚುರಿ ಸಿಡಿಸಿದ ಶುಭ್ಮನ್ ಬಳಿಕ ಫುಲ್ ಡಲ್
ಟ್ರಿನಿಡಾಡ್ ಟೆಸ್ಟ್ಗೆ ಕೌಂಟ್ಡೌನ್ ಶುರುವಾಗಿದೆ. ಅತ್ತ ಪಂದ್ಯ ಆರಂಭಕ್ಕೆ ಒಂದು ದಿನ ಬಾಕಿ ಇರುವಾಗ ಶುಭ್ಮನ್ ಗಿಲ್ಗೆ ಭೀತಿ ಶುರುವಾಗಿದೆ. ಅಷ್ಟಕ್ಕೂ ಫ್ಯೂಚರ್ ಸ್ಟಾರ್ ಗಿಲ್ಗೆ ಫೈನಲ್ ಟೆಸ್ಟ್ಗೂ ಮುನ್ನ ಭಯ ಶುರುವಾಗಿದ್ದು ಏಕೆ..?
ಶುಭ್ಮನ್ ಗಿಲ್, ಈ ವರ್ಷಾರಂಭದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ ಹೆಸರು. ಮೊದಲ 3 ತಿಂಗಳಲ್ಲೇ ಬರೋಬ್ಬರಿ 4 ಸೆಂಚುರಿ ಸಿಡಿಸಿ ಕ್ರಿಕೆಟ್ ಲೋಕವನ್ನೇ ದಂಗಾಗಿಸಿದ್ರು. ಅದ್ರಲ್ಲಿ ಒಂದು ವಿಶ್ವದಾಖಲೆಯ ಡಬಲ್ ಸೆಂಚುರಿ ಸಹ ಸೇರಿಕೊಂಡಿತ್ತು. ಗಿಲ್ ಬ್ಯಾಟಿಂಗ್ ವೈಭವ ಕಣ್ತುಂಬಿಕೊಂಡೋರೆಲ್ಲ ಮೂರು ಫಾರ್ಮೆಟ್ ಪ್ಲೇಯರ್ ಅಂತ ಮುದ್ರೆ ಒತ್ತಿ ಬಿಟ್ಟಿದ್ರು. ಆದ್ರೀಗ ಇದೇ ಪ್ಯೂಚರ್ ಸ್ಟಾರ್ಗೆ ಕುತ್ತು ಬಂದೊಂದಗಿದೆ.
ಲಾಸ್ಟ್ ಚಾನ್ಸ್ನಲ್ಲಿ ಖದರ್ ತೋರಿದ್ರಷ್ಟೇ ಸ್ಥಾನ ಸೇಫ್..!
ನಾಳೆಯಿಂದ ಭಾರತ-ವೆಸ್ಟ್ ಇಂಡೀಸ್ ನಡುವೆ 2ನೇ ಹಾಗೂ ಅಂತಿಮ ಟೆಸ್ಟ್ ಆರಂಭಗೊಳ್ಳಲಿದೆ. ಟ್ರಿನಿಡಾಡ್ ಪಂದ್ಯದಲ್ಲಿ ಯಾರು ಅಬ್ಬರಿಸ್ತಾರೋ ಬಿಡ್ತಾರೋ ಗೊತ್ತಿಲ್ಲ. ಆದರೆ ಮರಿ ಕೊಹ್ಲಿ ಅಂತ ಕರೆಸಿಕೊಳ್ಳೋ ಶುಭ್ಮನ್ ಗಿಲ್ ಆರ್ಭಟಿಸಬೇಕಿದೆ. ಯಾಕಂದ್ರೆ ಈ ಪಂದ್ಯ ಗಿಲ್ಗೆ ಡು ಆರ್ ಡೈ.
ಟ್ರಿನಿಡಾಡ್ ಟೆಸ್ಟ್ಗೆ ಗಿಲ್ಗೆ ವೆರಿ ವೆರಿ ಇಂಪಾರ್ಟೆಂಟ್. ಬ್ಯಾಕ್ ವಿತ್ ಬ್ಯಾಂಗ್ ಮಾಡಲೇಬೇಕಿದೆ. ಯಾಕಂದ್ರೆ ಆಂಗ್ರಿಯಂಗ್ಮ್ಯಾನ್ ಬ್ಯಾಟ್ ಫುಲ್ ಸೈಲೆಂಟಾಗಿದೆ. ಬ್ಯಾಟ್ ಎತ್ತಿ ಮುಗಿಲು ನೋಡಿ ಸಂಭ್ರಮಿಸಿಬೇಕಿದ್ದ ಗಿಲ್ ತಲೆತಗ್ಗಿಸಿ ಪೆವಿಲಿಯನ್ನತ್ತ ಹೆಜ್ಜೆ ಹಾಕ್ತಿದ್ದಾರೆ. ಪ್ರಸಕ್ತ ವಿಂಡೀಸ್ ಸರಣಿಯಲ್ಲಾದ್ರು ಲಯಕ್ಕೆ ಮರಳ್ತಾರೆ ಅಂದುಕೊಂಡ್ರೆ ಅದು ಸುಳ್ಳಾಗಿದೆ. ಮೊದಲ ಟೆಸ್ಟ್ನಲ್ಲಿ ಜಸ್ಟ್ 6 ರನ್ಗೆ ಔಟಾಗಿ ನಿರಾಸೆ ಮೂಡಿಸಿದ್ರು.
ಗಿಲ್ ಬ್ಯಾಟ್ನಿಂದ ಬಿಗ್ ಇನ್ನಿಂಗ್ಸ್ ಮಾಯ..!
ಅವಕಾಶ ಸಿಕ್ಕಾಗಲೆಲ್ಲ ರನ್ ಹೊಳೆ ಹರಿಸಿರೋ ಗಿಲ್ಗೆ ಈಗ ಅದೇನಾಗಿದಿಯೋ ಗೊತ್ತಿಲ್ಲ. ಒಂದೊಂದು ರನ್ ಗಳಿಸಲು ಪರದಾಡ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮಾರ್ಚ್ನಲ್ಲಿ 128 ರನ್ ಹೊಡೆದಿದ್ದು ಬಿಟ್ರೆ, ಮಿಕ್ಕ ಇನ್ನಿಂಗ್ಸ್ಗಳಲ್ಲಿ ಗಿಲ್ ಬ್ಯಾಟ್ ಸೌಂಡೇ ಮಾಡಿಲ್ಲ.
ಕಳೆದ 6 ಇನ್ನಿಂಗ್ಸ್ಗಳಲ್ಲಿ ಗಿಲ್ ಬ್ಯಾಟಿಂಗ್
ಕಳೆದ 6 ಇನ್ನಿಂಗ್ಸ್ಗಳಿಂದ ಶುಭ್ಮನ್ ಗಿಲ್ 31.83 ಎವರೇಜ್ನಲ್ಲಿ 191 ರನ್ ಬಾರಿಸಿದ್ದಾರೆ. ಇದ್ರಲ್ಲಿ ಒಂದು ಶತಕ ಮೂಡಿ ಬಂದಿದ್ದು ಬಿಟ್ರೆ, ಉಳಿದ ಐದು ಇನ್ನಿಂಗ್ಸ್ಗಳಲ್ಲಿ ಸಂಪೂರ್ಣ ಮಂಕಾಗಿದ್ದಾರೆ.
ಇನ್ನೂ ವಿದೇಶಿ ನೆಲದಲ್ಲು ಗಿಲ್ ಪರ್ಫಾಮೆನ್ಸ್ ಖರಾಬಾಗಿದೆ. ತವರಿನಾಚೆ ಒಂದೇ ಒಂದು ಬಿಗ್ ಇನ್ನಿಂಗ್ ಕಟ್ಟಿಲ್ಲ. ಸಿಕ್ಕ ಅವಕಾಶಗಳನ್ನ ಕೈಚೆಲ್ಲಿ ಟೀಕೆಗೆ ಗುರಿಯಾಗಿದ್ದಾರೆ.
ಫಾರಿನ್ನಲ್ಲಿ ಕಳೆದ 5 ಇನ್ನಿಂಗ್ಸ್ಗಳಲ್ಲಿ ಗಿಲ್ ಸಾಧನೆ
ಶುಭ್ಮನ್ ಗಿಲ್, ವಿದೇಶಿ ನೆಲದಲ್ಲಿ ಆಡಿದ ಕಳೆದ 5 ಇನ್ನಿಂಗ್ಸ್ಗಳಲ್ಲಿ ಬರೀ 66 ರನ್ ಹೊಡೆದಿದ್ದಾರೆ. 20 ರನ್ ಇವರ ಬ್ಯಾಟ್ನಿಂದ ಮೂಡಿಬಂದ ಬೆಸ್ಕ್ ಸ್ಕೋರ್. ಒಂದೇ ಒಂದು ಶತಕ ಆಗ್ಲಿ ಅಥವಾ ಅರ್ಧಶತಕವನ್ನ ಹೊಡೆದಿಲ್ಲ.
ಕಮ್ಬ್ಯಾಕ್ ಮಾಡದಿದ್ರೆ ಕಿಕೌಟ್ ಗ್ಯಾರಂಟಿ..?
ಗಿಲ್ರ ಟೆಸ್ಟ್ ಸ್ಲಾಟ್ ಸದ್ಯ ಡೇಂಜರ್ ಝೋನ್ನಲ್ಲಿದೆ. ಕಮ್ಬ್ಯಾಕ್ ಮಾಡದೇ ಬೇರೆ ವಿಧಿಯಿಲ್ಲ. ಒಂದು ವೇಳೆ ಕಳಪೆ ಆಟ ಕಂಟಿನ್ಯೂ ಆದ್ರೆ ಇವರ ಸ್ಥಾನಕ್ಕೆ ಕುತ್ತು ಬರೋದು ಗ್ಯಾರಂಟಿ. ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಇಂಜುರಿಯಿಂದ ರಿಕವರಿ ಆಗ್ತಿದ್ದು, ಕಮ್ಬ್ಯಾಕ್ ನಿರೀಕ್ಷೆಯಲ್ಲಿದ್ದಾರೆ. ಚೇತರಿಕೆ ಕಂಡು ತಂಡಕ್ಕೆ ಮರಳಿದ್ದೇ ಆದಲ್ಲಿ ಶುಭ್ಮನ್ ಗಿಲ್ ಸ್ಥಾನವನ್ನ ಆಕ್ರಮಿಸಿಕೊಳ್ಳಲಿದ್ದಾರೆ. ಆಗ ಮೂರು ಫಾರ್ಮೆಟ್ನ ಆಟಗಾರ ಬರೀ 2 ಫಾಮ್ಯಾಟ್ಗೆ ಮಾತ್ರ ಸೀಮಿತವಾಗಲಿದ್ದಾರೆ.
ಹಾಗಾಬಾರದು ಅಂದ್ರೆ ಗಿಲ್ ನಾಳೆಯಿಂದ ಆರಂಭಗೊಳ್ಳುವ ವಿಂಡೀಸ್ ಎದುರಿನ ಫೈನಲ್ ಟೆಸ್ಟ್ನಲ್ಲಿ ಬೊಂಬಾಟ್ ಪ್ರದರ್ಶನ ನೀಡಲೇಬೇಕಿದೆ. ಗಿಲ್ ಸವಾಲಿನ ಚಕ್ರವ್ಯೂಹ ಬೇಧಿಸ್ತಾರಾ..? ಇಲ್ಲ ಚಕ್ರವ್ಯೂಹಕ್ಕೆ ಸಿಲುಕಿ ತಮ್ಮ ಸ್ಲಾಟ್ಗೆ ಕುತ್ತು ತಂದುಕೊಳ್ತಾರಾ ಅನ್ನೋದನ್ನ ಕಾದು ನೋಡಬೇಕು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ