newsfirstkannada.com

ಸೇಡಿಗೆ ಸೇಡು; ಮುಯ್ಯಿಗೆ ಮುಯ್ಯಿ; ಜಿಂಬಾಬ್ವೆ ವಿರುದ್ಧ ಭಾರತಕ್ಕೆ 100 ರನ್​​ಗಳ ರೋಚಕ ಜಯ

Share :

Published July 7, 2024 at 8:10pm

Update July 7, 2024 at 8:11pm

    ಸದ್ಯ ನಡೆಯುತ್ತಿರೋ ಜಿಂಬಾಬ್ವೆ, ಟೀಮ್​ ಇಂಡಿಯಾ ನಡುವಿನ ಟಿ20 ಸೀರೀಸ್​​

    ಟೀಮ್​​ ಇಂಡಿಯಾ, ಜಿಂಬಾಬ್ವೆ ನಡುವೆ 5 ಟಿ20 ಪಂದ್ಯಗಳ ಮಹತ್ವದ ಸರಣಿ..!

    ಜಿಂಬಾಬ್ವೆ ತಂಡದ ವಿರುದ್ಧ ಟೀಮ್​ ಇಂಡಿಯಾಗೆ 100 ರನ್​ಗಳ ಭರ್ಜರಿ ಜಯ

ಇಂದು ಹರಾರೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ಕ್ರಿಕೆಟ್​​ ತಂಡದ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಬರೋಬ್ಬರಿ 100 ರನ್​ಗಳಿಂದ ಕ್ಯಾಪ್ಟನ್​​ ಶುಭ್ಮನ್​ ಗಿಲ್​ ಪಡೆ ಗೆಲುವು ಸಿಕ್ಕಿದೆ.

ಭಾರತ ತಂಡ ನೀಡಿದ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಜಿಂಬಾಬ್ವೆ 18.4 ಓವರ್​​ನಲ್ಲಿ 134 ರನ್​ಗೆ ಆಲೌಟ್​ ಆಗಿದೆ. ವೆಸ್ಲಿ ಮಾಧೆವೆರೆ 43, ಬ್ರಿಯಾನ್ ಬೆನೆಟ್ 26, ಜೊನಾಥನ್ ಕ್ಯಾಂಪ್‌ಬೆಲ್ 10, ಲ್ಯೂಕ್ ಜೊಂಗ್ವೆ 33 ರನ್​ ಗಳಿಸಿ ವಿಕೆಟ್​ ಒಪ್ಪಿಸಿದ್ರು.

ಟಾಸ್​ ಗೆದ್ದು ಫಸ್ಟ್​ ಬ್ಯಾಟಿಂಗ್​ ಮಾಡಿದ ಟೀಮ್​ ಇಂಡಿಯಾ ಪರ ಅಭಿಷೇಕ್​ ಶರ್ಮಾ ಸಿಡಿಲಬ್ಬರದ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಇನ್ನಿಂಗ್ಸ್​ ಉದ್ಧಕ್ಕೂ ಜಿಂಬಾಬ್ವೆ ಕ್ರಿಕೆಟ್ ತಂಡದ ಬೌಲರ್​ಗಳ ಬೆಂಡೆತ್ತಿದ ಗಾಯಕ್ವಾಡ್​​ ಕೂಡ ಅಬ್ಬರಿಸಿದ್ರು.

ತಾನು ಆಡಿದ 47 ಬಾಲ್​ನಲ್ಲಿ 1 ಸಿಕ್ಸರ್​​, 11 ಫೋರ್​ ಸಮೇತ 77 ರನ್​ ಗಳಿಸಿದ್ರು. ಈ ಮೂಲಕ ಮತ್ತೆ ಗಾಯಕ್ವಾಡ್​ ಮತ್ತೆ ಫಾರ್ಮ್​ಗೆ ಬಂದ್ರು. ಈ ಹಿಂದೆ ಗಾಯಕ್ವಾಡ್​ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ.

ಕೊನೆಗೆ ಬಂದ ರಿಂಕು ಸಿಂಗ್​ ಕೂಡ ಮಿಂಚಿದ್ರು. ಕೇವಲ 22 ಬಾಲ್​ನಲ್ಲಿ 5 ಸಿಕ್ಸರ್​​, 2 ಫೋರ್​ ಸಮೇತ 48 ರನ್​​​ ಸಿಡಿಸಿ ಫಿನಿಶ್​ ಮಾಡಿದ್ರು. ಕ್ಯಾಪ್ಟನ್​ ಗಿಲ್​ ಕೇವಲ 2 ರನ್​ಗೆ ಔಟಾಗಿದ್ರು. ಟೀಮ್​ ಇಂಡಿಯಾ ನಿಗದಿತ 20 ಓವರ್​​ನಲ್ಲಿ 236 ರನ್​​ ಕಲೆ ಹಾಕಿತ್ತು.

ಇದನ್ನೂ ಓದಿ: ಟೀಮ್​ ಇಂಡಿಯಾಗೆ ಗುಡ್​ನ್ಯೂಸ್​​.. ಸ್ಟಾರ್​​ ಯುವ ಆಟಗಾರನಿಂದ ಸ್ಟ್ರಾಂಗ್​ ಕಮ್​ಬ್ಯಾಕ್​​!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸೇಡಿಗೆ ಸೇಡು; ಮುಯ್ಯಿಗೆ ಮುಯ್ಯಿ; ಜಿಂಬಾಬ್ವೆ ವಿರುದ್ಧ ಭಾರತಕ್ಕೆ 100 ರನ್​​ಗಳ ರೋಚಕ ಜಯ

https://newsfirstlive.com/wp-content/uploads/2024/07/Team-India-big-win.jpg

Load More