newsfirstkannada.com

ಸೂರ್ಯ, ದುಬೆ ಭರ್ಜರಿ ಬ್ಯಾಟಿಂಗ್​​.. ಯುಎಸ್​ಎ ವಿರುದ್ಧ ಗೆದ್ದು ಬೀಗಿದ ಟೀಮ್​ ಇಂಡಿಯಾ!

Share :

Published June 12, 2024 at 11:33pm

    ಇಂದು ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಹೈವೋಲ್ಟೇಜ್​ ಪಂದ್ಯ

    ಮೆಗಾ ಹೈವೋಲ್ಟೇಜ್​ ಪಂದ್ಯದಲ್ಲಿ ಗೆದ್ದು ಬೀಗಿದ ಟೀಮ್​​ ಇಂಡಿಯಾ

    ಯುಎಸ್​ಎ ಟೀಮ್​ ವಿರುದ್ಧ ಟೀಮ್​ ಇಂಡಿಯಾಗೆ 7 ವಿಕೆಟ್​ಗಳ ಜಯ

ಇಂದು ನಡೆದ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಹೈವೋಲ್ಟೇಜ್​ ಪಂದ್ಯದಲ್ಲಿ ಯುಎಸ್​​ಎ ಕ್ರಿಕೆಟ್​ ಟೀಮ್ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ.

ನ್ಯೂಯಾರ್ಕ್‌ ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಯುಎಸ್​ಎ ತಂಡ ನಿಗದಿತ 20 ಓವರ್​ನಲ್ಲಿ 8 ವಿಕೆಟ್​ ನಷ್ಟಕ್ಕೆ 110 ರನ್​ ಗಳಿಸಿದ್ರು. ಈ ಮೂಲಕ ಭಾರತ ತಂಡಕ್ಕೆ 111 ರನ್​ಗಳ ಗುರಿ ನೀಡಿದ್ರು.

ಯುಎಸ್​​ಎ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾ ಆರಂಭದಲ್ಲೇ ಸ್ಟಾರ್​ ಬ್ಯಾಟರ್​​​ ವಿರಾಟ್​​​ ಕೊಹ್ಲಿ ಮತ್ತು ಕ್ಯಾಪ್ಟನ್​​ ರೋಹಿತ್​ ಶರ್ಮಾ ವಿಕೆಟ್​ ಕಳೆದುಕೊಂಡಿತ್ತು. ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಮ್ ಇಂಡಿಯಾದ ಪರ ಪಂತ್​ ಕೆಲ ಹೊತ್ತು ಕ್ರೀಸ್​ನಲ್ಲಿ ನಿಂತು ಬ್ಯಾಟ್​ ಬೀಸಿದ್ರು. ತಾನು ಆಡಿದ 20 ಬಾಲ್​ನಲ್ಲಿ 1 ಸಿಕ್ಸರ್​, 1 ಫೋರ್​​ ಸಮೇತ 18 ರನ್​ ಕಲೆ ಹಾಕಿದ್ರು.

ಇನ್ನು, ಬಳಿಕ ಕೊನೆವರೆಗೂ ಕ್ರೀಸ್​ನಲ್ಲೇ ನಿಂತು ಆಡಿದ ಸೂರ್ಯಕುಮಾರ್​​ ಯಾದವ್​ ಮತ್ತು ಶಿವಂ ದುಬೆ ಉತ್ತಮ ಜೊತೆಯಾಟ ಆಡಿದ್ರು. ಸೂರ್ಯಕುಮಾರ್​ ಯಾದವ್​​ ತಾನು ಆಡಿದ 49 ಬಾಲ್​ನಲ್ಲಿ 2 ಭರ್ಜರಿ ಸಿಕ್ಸರ್​​, 2 ಫೋರ್​ ಸಮೇತ 50 ರನ್​ ಪೇರಿಸಿದ್ರು. ಇವರಿಗೆ ಸಾಥ್​ ನೀಡಿದ ಶಿವಂ ದುಬೆ 1 ಫೋರ್​​, 1 ಸಿಕ್ಸರ್​ ಸಮೇತ 31 ರನ್​​​​ ಚಚ್ಚಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ರು. ಟೀಮ್​ ಇಂಡಿಯಾ 18.2 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 111 ರನ್​ ಕಲೆ ಹಾಕಿ ಗೆದ್ದು ಬೀಗಿದೆ.

ಇದನ್ನೂ ಓದಿ: ಹಿಟ್​ಮ್ಯಾನ್​ ರೋಹಿತ್​​ಗೆ ಬಿಗ್ ಶಾಕ್.. ಮುಂಬೈ ಬ್ಯಾಟರ್​​ಗಳಿಂದ ಟೀಮ್​ಗೆ ಭಾರೀ ಆಘಾತ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸೂರ್ಯ, ದುಬೆ ಭರ್ಜರಿ ಬ್ಯಾಟಿಂಗ್​​.. ಯುಎಸ್​ಎ ವಿರುದ್ಧ ಗೆದ್ದು ಬೀಗಿದ ಟೀಮ್​ ಇಂಡಿಯಾ!

https://newsfirstlive.com/wp-content/uploads/2024/06/Suryakumar-Yadav1.jpg

Load More