newsfirstkannada.com

ಕೊಹ್ಲಿ, ರೋಹಿತ್​​​ಗೆ ಮತ್ತೆ ಕೊಕ್​​; ವೆಸ್ಟ್​ ಇಂಡೀಸ್​​ ವಿರುದ್ಧ ಸೋತರೂ ಪಾಠ ಕಲಿಯದ ಟೀಂ ಇಂಡಿಯಾ!

Share :

17-08-2023

    ಐರ್ಲೆಂಡ್​​ ವಿರುದ್ಧ ಟೀಂ ಇಂಡಿಯಾ ಟಿ20 ಟೂರ್ನಿ

    ಟೀಂ ಇಂಡಿಯಾದಿಂದ ಕೊಹ್ಲಿ, ರೋಹಿತ್​ಗೆ ಕೊಕ್​​

    ವಿಂಡೀಸ್​​​​ ವಿರುದ್ಧ ಸೋತರೂ ಪಾಠ ಕಲಿಯಲಿಲ್ಲ!

ಇತ್ತೀಚೆಗೆ ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಟಿ20 ಟೂರ್ನಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿತ್ತು. ಕಾರಣ ಟೀಂ ಇಂಡಿಯಾದ ರೆಗ್ಯೂಲರ್​ ಕ್ಯಾಪ್ಟನ್​​ ರೋಹಿತ್​​ ಶರ್ಮಾ, ಮಾಜಿ ನಾಯಕ ವಿರಾಟ್​​​ ಕೊಹ್ಲಿ ಆಡದೇ ಇದ್ದಿದ್ದು. ಹಾರ್ದಿಕ್​​ ಪಾಂಡ್ಯ ನೇತೃತ್ವದಲ್ಲಿ ಟೀಂ ಇಂಡಿಯಾ ಸೋತಿದ್ದು. ಈಗ ಐರ್ಲೆಂಡ್​ ಸೀರೀಸ್​ಗೂ ಟೀಂ ಇಂಡಿಯಾ ಮ್ಯಾನೇಜ್ಮೆಂಟ್​​ ಅದೇ ತಪ್ಪು ಮಾಡುತ್ತಿದ್ಯಾ? ಅನ್ನೋ ಡೌಟ್​ ಶುರುವಾಗಿದೆ.

ಹೌದು, ಐರ್ಲೆಂಡ್​ ಸೀರೀಸ್​ಗೂ ರೋಹಿತ್​ ಶರ್ಮಾ, ವಿರಾಟ್​​ ಕೊಹ್ಲಿ ಅವರನ್ನು ಸೆಲೆಕ್ಟ್​ ಮಾಡಿಲ್ಲ. ಸೂರ್ಯಕುಮಾರ್​ ಯಾದವ್​​, ಇಶಾನ್​ ಕಿಶನ್​​, ಹಾರ್ದಿಕ್​ ಪಾಂಡ್ಯ ಸೇರಿದಂತೆ ಹಲವು ಸೀನಿಯರ್ಸ್​ ಕೂಡ ಇಲ್ಲ. ಸಂಜು ಸ್ಯಾಮ್ಸನ್​​, ವಾಷಿಂಗ್ಟನ್​ ಸುಂದರ್​​, ಜಸ್​​ಪ್ರಿತ್​ ಬುಮ್ರಾ ಹೊರತುಪಡಿಸಿ ಮತ್ತೆಲ್ಲರೂ ಹೊಸಬರೇ.

ಕೇವಲ ಕೊಹ್ಲಿ, ರೋಹಿತ್​ ಶರ್ಮಾ ಇಲ್ಲದ ಟೀಂ ವೆಸ್ಟ್​ ಇಂಡೀಸ್​ ವಿರುದ್ಧ ಸೋತಿತ್ತು. ಗಿಲ್​​, ಜೈಸ್ವಾಲ್​​, ಸೂರ್ಯಕುಮಾರ್​ ಯಾದವ್​​, ಇಶಾನ್​ ಕಿಶನ್​​, ಹಾರ್ದಿಕ್​ ಪಾಂಡ್ಯ ಇದ್ದರೂ ಸೋತಿದ್ದ ಟೀಂ ಇಂಡಿಯಾ ಈಗ ಕೇವಲ ಅನುಭವವೇ ಇಲ್ಲದ ಆಟಗಾರರನ್ನು ಹಾಕಿಕೊಂಡು ಹೇಗೆ ಗೆಲ್ಲುತ್ತದೆ ಎಂಬುದು ಸದ್ಯದ ಪ್ರಶ್ನೆ.

ಐರ್ಲೆಂಡ್​​ ವಿರುದ್ಧ ಟಿ20 ಟೂರ್ನಿ

ನಾಳೆಯಿಂದಲೇ ಐರ್ಲೆಂಡ್​ ವಿರುದ್ಧದ 3 ಪಂದ್ಯಗಳ ಟಿ20 ಟೂರ್ನಿ ಶುರುವಾಗಲಿದೆ. ಟೀಂ ಇಂಡಿಯಾದ ಕ್ಯಾಪ್ಟನ್​ ಆಗಿ ಜಸ್​ಪ್ರಿತ್​ ಬುಮ್ರಾ ನೇಮಕಗೊಂಡಿದ್ದಾರೆ. ಈ ಸೀರೀಸ್​ ಆದ್ರೂ ಗೆಲ್ಲುತ್ತಾ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿ, ರೋಹಿತ್​​​ಗೆ ಮತ್ತೆ ಕೊಕ್​​; ವೆಸ್ಟ್​ ಇಂಡೀಸ್​​ ವಿರುದ್ಧ ಸೋತರೂ ಪಾಠ ಕಲಿಯದ ಟೀಂ ಇಂಡಿಯಾ!

https://newsfirstlive.com/wp-content/uploads/2023/08/Team-India_2.webp

Load More