ಇಂದು ಬಾಂಗ್ಲಾದೇಶ, ಟೀಮ್ ಇಂಡಿಯಾದ ಮೊದಲ ಟೆಸ್ಟ್ ಪಂದ್ಯ
ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ!
ಮೊದಲ ಇನ್ನಿಂಗ್ಸ್ನಲ್ಲಿ 80 ಓವರ್ಗಳಲ್ಲಿ 6 ವಿಕೆಟ್‌ಗೆ 339 ರನ್..!
ಟೀಮ್ ಇಂಡಿಯಾ, ಬಾಂಗ್ಲಾದೇಶದ ನಡುವಿನ ಮೊದಲ ಟೆಸ್ಟ್ ಪಂದ್ಯ ಚೆನ್ನೈನ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿದೆ. ಮೊದಲ ಟೆಸ್ಟ್‌ನ ಮೊದಲ ದಿನವೇ ಟೀಮ್ ಇಂಡಿಯಾ ಉತ್ತಮ ಸ್ಕೋರ್ ಕಲೆ ಹಾಕಿದೆ.
ಟಾಸ್ ಗೆದ್ದ ಬಾಂಗ್ಲಾದೇಶ!
ಚೆನ್ನೈನ ಚೆಪಾಕ್ ಸ್ಟೇಡಿಯಮ್ ಪಿಚ್ ವೇಗದ ಬೌಲರ್‌ಗಳಿಗೆ ನೆರವು ನೀಡಬಹುದು ಎಂದು ಅರಿತ ಬಾಂಗ್ಲಾದೇಶದ ನಾಯಕ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಹಾಗಾಗಿ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತು. ಆರಂಭದಲ್ಲೇ ಟೀಮ್ ಇಂಡಿಯಾ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭಮನ್ ಗಿಲ್ ವಿಕೆಟ್ ಒಪ್ಪಿಸಿದ್ರು.
ಟೀಮ್ ಇಂಡಿಯಾಗೆ ಕಳಪೆ ಆರಂಭ
ಟೀಮ್ ಇಂಡಿಯಾ ಕೊಹ್ಲಿ, ರೋಹಿತ್, ಗಿಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಾಲ್ಕನೇ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಹಾಗೂ ಪಂತ್ ಎಚ್ಚರಿಕೆ ಆಟವಾಡಿದ್ರು. ಐದನೇ ವಿಕೆಟ್‌ಗೆ ಜೈಸ್ವಾಲ್ ಜೊತೆಗೆ ಕೆಎಲ್ ರಾಹುಲ್ ಕೂಡ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು.
ಜಡೇಜಾ, ಅಶ್ವಿನ್ ಅಬ್ಬರ!
ಟೀಮ್ ಇಂಡಿಯಾ 144 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಬಳಿಕ ಕ್ರೀಸ್ಗೆ ಬಂದ ಸ್ಟಾರ್ ಆಲ್ರೌಂಡರ್ಸ್ ಆದ ಅಶ್ವಿನ್ ಮತ್ತು ಜಡೇಜಾ ಇನಿಂಗ್ಸ್ ಕಟ್ಟಿದ್ರು. ಬರೋಬ್ಬರಿ 195 ರನ್ಗಳ ಜೊತೆಯಾಟ ಆಡಿದ್ರು. ಸುಮಾರು 38 ಓವರ್‌ಗಳ ವರೆಗೆ ವಿಕೆಟ್ ಬೀಳದಂತೆ ಕಾಯ್ದುಕೊಂಡರು. ಅಶ್ವಿನ್ ಅಜೇಯ 102 ರನ್ ಬಾರಿಸಿದರೆ, ಜಡೇಜಾ ಅಜೇಯ 86 ರನ್ ಸಿಡಿಸಿದರು. ಭಾರತ ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ಗೆ 339 ರನ್ ಗಳಿಸಿದೆ.
ಇದನ್ನೂ ಓದಿ: 6,6,4,4,4,4,4,4,4,4,4,4; ಬಾಂಗ್ಲಾ ವಿರುದ್ಧ ಸ್ಫೋಟಕ ಶತಕ ಸಿಡಿಸಿದ ಆರ್. ಅಶ್ವಿನ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್