ಬಹುನಿರೀಕ್ಷಿತ 2023ರ ಏಕದಿನ ವಿಶ್ವಕಪ್ ಟೂರ್ನಿ
ಲಂಕಾಗೆ ಟೀಂ ಇಂಡಿಯಾ 358 ರನ್ ಬಿಗ್ ಟಾರ್ಗೆಟ್
ಕೊಹ್ಲಿ, ಅಯ್ಯರ್, ಶುಭ್ಮನ್ ಗಿಲ್ ಸಿಡಿಲಬ್ಬರದ ಬ್ಯಾಟಿಂಗ್
ಸದ್ಯ ಮುಂಬೈನ ವಾಂಖೆಡೆ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಪಂದ್ಯದಲ್ಲಿ ಲಂಕಾಗೆ ಟೀಂ ಇಂಡಿಯಾ ಬರೋಬ್ಬರಿ 358 ರನ್ ಬಿಗ್ ಟಾರ್ಗೆಟ್ ಕೊಟ್ಟಿದೆ.
ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಓಪನರ್ ಆಗಿ ಬಂದ ಕ್ಯಾಪ್ಟನ್ ರೋಹಿತ್ ಶರ್ಮಾ ಕೇವಲ 4 ರನ್ಗೆ ಔಟಾಗಿ ನಿರಾಸೆ ಮೂಡಿಸಿದರು. ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಶುಭ್ಮನ್ ಗಿಲ್ ಆಸರೆಯಾದರು.
ಇನ್ನಿಂಗ್ಸ್ ಉದ್ಧಕ್ಕೂ ಅಗ್ರೆಸ್ಸಿವ್ ಆಗಿ ಬ್ಯಾಟ್ ಬೀಸಿದ ಶುಭ್ಮನ್ ಗಿಲ್ ಶತಕ ಸಿಡಿಸೋ ಬರದಲ್ಲಿ ಕುಶಲ್ ಮೆಂಡೀಸ್ ಬೌಲಿಂಗ್ ಕ್ಯಾಚ್ ಒಪ್ಪಿಸಿ ಪೆವಿಲಿಯನ್ಗೆ ತೆರಳಿದರು. ಬರೋಬ್ಬರಿ 11 ಫೋರ್, 2 ಸಿಕ್ಸರ್ ಜತೆಗೆ 92 ರನ್ ಚಚ್ಚಿದ್ರು. ಈ ಮೂಲಕ ಹೊಸ ದಾಖಲೆ ಬರೆದರು.
ತುಂಬಾ ತಾಳ್ಮೆಯಿಂದಲೇ ಬ್ಯಾಟಿಂಗ್ ಮಾಡಿದ ಕೊಹ್ಲಿ 93 ಬಾಲ್ನಲ್ಲಿ 11 ಫೋರ್ ಸಮೇತ 88 ರನ್ ಸಿಡಿಸಿದ್ದರು. ಈ ಹೊತ್ತಲ್ಲೇ ಗಿಲ್ ಶತಕ ಸಿಡಿಸಲು ಹೋಗಿ ಕುಶಲ್ ಮೆಂಡೀಸ್ ಬೌಲಿಂಗ್ನಲ್ಲಿ ಕ್ಯಾಚ್ ಕೊಟ್ಟರು.
ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ಔಟಾದ ಬಳಿಕ ಕ್ರೀಸ್ಗೆ ಬಂದ ಶ್ರೇಯಸ್ ಅಯ್ಯರ್ ಶ್ರೀಲಂಕಾ ಬೌಲರ್ಗಳ ಬೆವರಿಳಿಸಿದ್ರು. ಕೇವಲ 56 ಬಾಲ್ನಲ್ಲಿ 82 ರನ್ ಚಚ್ಚಿದ್ರು. ಬರೋಬ್ಬರಿ 6 ಸಿಕ್ಸರ್, 3 ಫೋರ್ ಬಾರಿಸಿದ್ರು ಅಯ್ಯರ್. ರವೀಂದ್ರ ಜಡೇಜಾ 34, ರಾಹುಲ್ 21 ರನ್ ಗಳಿಸಿದರು. ಟೀಂ ಇಂಡಿಯಾ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ