newsfirstkannada.com

ರೋಹಿತ್ ಟೀಮ್​ ಭಾರತಕ್ಕೆ ಬರಲು ಕೋಟಿ ಕೋಟಿ ದುಡ್ಡು ಖರ್ಚು.. ಒಬ್ಬೊಬ್ಬ ಪ್ಲೇಯರ್​​ಗೆ ಲಕ್ಷಾಂತರ ರೂ ವೆಚ್ಚ

Share :

Published July 7, 2024 at 2:53pm

    ಬಿಸಿಸಿಐ ಎಷ್ಟು ಕೋಟಿ ರೂಪಾಯಿಗಳನ್ನ ಖರ್ಚು ಮಾಡಿದೆ ಗೊತ್ತಾ..?

    ಬಾರ್ಬಡೋಸ್​ನಿಂದ ಡೆಲ್ಲಿಗೆ ಬರಲು ಒಬ್ಬರಿಗೆ ಲಕ್ಷಾಂತರ ರೂ ಖರ್ಚು

    ಟ್ರೋಫಿಗಿಂತಲೂ ಒಂದೂವರೆ ಪಟ್ಟು ಹೆಚ್ಚು ಹಣ ಖರ್ಚು ಆಯಿತಾ?

ಬಾರ್ಬಡೋಸ್​ನಲ್ಲಿ ಬೆರಿಲ್ ಚಂಡಮಾರುತಕ್ಕೆ ಸಿಲುಕಿದ್ದ ಟೀಮ್ ಇಂಡಿಯಾ ಆಟಗಾರರನ್ನ ಬಿಸಿಸಿಐ, ವಿಶೇಷ ವಿಮಾನದ ಮೂಲಕ ತಾಯ್ನಾಡಿಗೆ ಕರೆತಂದಿದೆ. ಇದರ ವೆಚ್ಚ ಎಷ್ಟಾಗಿರಬಹುದು ಎಂಬ ಕುತೂಹಲ ಫ್ಯಾನ್ಸ್ ವಲಯದಲ್ಲಿದೆ. ಆ ಕೌತುಕತೆಗೆ ಉತ್ತರ ಇಲ್ಲಿದೆ.

ಇದನ್ನೂ ಓದಿ: ಇಬ್ಬರು ಯೋಧರು ಹುತಾತ್ಮ.. ಗಡಿಯಲ್ಲಿ ಮತ್ತೆ ಬಾಲ ಬಿಚ್ಚಿದ್ದ ನಾಲ್ವರು ಉಗ್ರರು ಫಿನಿಶ್

ಬಿಸಿಸಿಐ.. ವಿಶ್ವ ಕ್ರಿಕೆಟ್​ನ ಶ್ರೀಮಂತ ಕ್ರಿಕೆಟ್ ಸಂಸ್ಥೆ.. ಜಸ್ಟ್ ಹಣ ಗಳಿಸುವ ವಿಚಾರದಲ್ಲಿ ಮಾತ್ರವಲ್ಲ. ಹಣದ ಹೊಳೆ ಹರಿಸುವಲ್ಲೂ ಇದಕ್ಕೆ ಸಾಟಿ ಇಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಟಿ20 ವಿಶ್ವ ಚಾಂಪಿಯನ್ನರನ್ನ ಭಾರತಕ್ಕೆ ಕರೆತರುವ ವಿಚಾರದಲ್ಲಿ ಬಿಸಿಸಿಐ ತೆಗೆದುಕೊಂಡ ನಿರ್ಧಾರ. ಜೂನ್​​ 29ರಂದೇ ಟೀಮ್ ಇಂಡಿಯಾ ಟಿ20 ವಿಶ್ವಕಪ್​​ ಗೆದ್ದಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ, ಜೂನ್​​ 1ರಂದೇ ಟ್ರೋಫಿಯೊಂದಿಗೆ ತಾಯ್ನಾಡಿಗೆ ವಾಪಸಾಗಬೇಕಿತ್ತು. ಆದ್ರೆ ಬೆರಿಲ್ ಚಂಡಮಾರುತದ ಪರಿಣಾಮ ಬಾರ್ಡಡೋಸ್​ನಲ್ಲಿ ಆಟಗಾರರು ಸಿಲುಕೊಂಡಿದ್ರು.

ಇದನ್ನೂ ಓದಿ: ದರ್ಶನ್​​ಗೆ ಶನಿ, ರಾಹು ಕಾಟ.. ರಾಜಯೋಗ ಇದೆಯಾ; ಬಂಡೆ ಮಹಾಕಾಳಿ ಪ್ರಧಾನ ಅರ್ಚಕ ನುಡಿದ ಭವಿಷ್ಯ?

ಹೀಗಾಗಿ ಜೂನ್​.4ರಂದು ವಿಶೇಷ ಏರ್​​ ಇಂಡಿಯಾ ಬೋಯಿಂಗ್ 777 ಚಾರ್ಟೆಡ್​​​​​ ಪ್ಲೈಟ್​ನಲ್ಲಿ ಟೀಮ್ ಇಂಡಿಯಾ ವಾಪಸ್ ಆಗಿತ್ತು. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಇದಕ್ಕಾಗಿ ಬಿಸಿಸಿಐ ಖರ್ಚು ಮಾಡಿದ ಹಣ ಬರೋಬ್ಬರಿ 50 ಕೋಟಿ 82 ಲಕ್ಷ ರೂಪಾಯಿ. ಅಂದ್ಹಾಗೆ ಬಾರ್ಬಡೋಸ್​ನಿಂದ ಡೆಲ್ಲಿ ಪ್ರಯಾಣದ ಸಮಯ ಸುಮಾರು 22 ಗಂಟೆಗಳು. ಒಂದು ಗಂಟೆ ಪ್ರಯಾಣಕ್ಕೆ 1.05 ಲಕ್ಷ ರೂಪಾಯಿ. ಅಂದ್ರೆ, ಒಬ್ಬ ಆಟಗಾರ ಬಾರ್ಬಡೋಸ್​ನಿಂದ ಡೆಲ್ಲಿಗೆ ಬರಲು 66 ಲಕ್ಷ ರೂಪಾಯಿ ವ್ಯಯಿಸಿದೆ. ಆಟಗಾರರು, ಸಹಾಯಕ ಸಿಬ್ಬಂದಿ ಹಾಗೂ ಪತ್ರಕರ್ತರು ಸೇರಿ ಬರೋಬ್ಬರಿ 70 ಮಂದಿ ಪ್ರಯಾಣಿಸಿದ್ದು, ವಿಮಾನ ಪ್ರಯಾಣದ ವೆಚ್ಚವೇ ಅಂದಾಜು 76 ಕೋಟಿ ರೂಪಾಯಿ ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೋಹಿತ್ ಟೀಮ್​ ಭಾರತಕ್ಕೆ ಬರಲು ಕೋಟಿ ಕೋಟಿ ದುಡ್ಡು ಖರ್ಚು.. ಒಬ್ಬೊಬ್ಬ ಪ್ಲೇಯರ್​​ಗೆ ಲಕ್ಷಾಂತರ ರೂ ವೆಚ್ಚ

https://newsfirstlive.com/wp-content/uploads/2024/07/ROHIT-4.jpg

Load More