ಯಾರಿಗೆಲ್ಲಾ ಜಾಕ್ಪಾಟ್? ಯಾರಿಗೆ ಗೇಟ್ಪಾಸ್?
3ನೇ ಪಂದ್ಯಕ್ಕೆ ಸ್ಟಾರ್ ಪ್ಲೇಯರ್ಸ್ ಕಮ್ಬ್ಯಾಕ್
20 ತಿಂಗಳ ಬಳಿಕ ಅಶ್ವಿನ್ಗೆ ತೆರೆದ ಬಾಗಿಲು
ಮುಂಬರೋ ಆಸ್ಟ್ರೇಲಿಯಾ ಏಕದಿನ ಸರಣಿಗೆ ಟಿಮ್ ಇಂಡಿಯಾವನ್ನ ಅನೌನ್ಸ್ ಮಾಡಲಾಗಿದೆ. ಕಾಂಗರೂಗಳ ಸಂಹಾರಕ್ಕೆ ಬಲಿಷ್ಠ ತಂಡ ರೆಡಿಯಾಗಿದೆ. ಹೆಚ್ಚೇನೂ ಪ್ರಯೋಗಕ್ಕೆ ಮುಂದಾಗದಿದ್ರೂ ಕೆಲ ಅಚ್ಚರಿ ನಿರ್ಧಾರಗಳು ಹೊರಬಿದ್ದಿದೆ.
ಆಸ್ಟ್ರೇಲಿಯಾ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟ ಯಾವಾಗ? ಈ ಪ್ರಶ್ನೆಗೆ ಕೊನೆಗೂ ಆನ್ಸರ್ ಸಿಕ್ಕಿದೆ. ಸೆಪ್ಟೆಂಬರ್ 22 ರಿಂದ ಆರಂಭಗೊಳ್ಳಿರುವ ಸರಣಿಗೆ ಭಾರತ ತಂಡ ಪ್ರಕಟಗೊಂಡಿದೆ. ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಹಾಗೂ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡಿಕೊಂಡು ತಂಡ ಅನೌನ್ಸ್ ಮಾಡಿದ್ದು ಕೆಲ ಸರ್ಪ್ರೈಸ್ ನಿರ್ಧಾರ ಕೈಗೊಂಡಿದ್ದಾರೆ.
ಮೊದಲೆರಡು ಪಂದ್ಯಗಳಿಗೆ ಭಾರತ ತಂಡ ಪ್ರಕಟ
ಆಸೀಸ್ ವಿರುದ್ಧ ನಡೆಯುವ ಮೊದಲೆರಡು ಪಂದ್ಯಕ್ಕೆ ಪ್ರತ್ಯೇಕ ತಂಡವನ್ನು ಅನೌನ್ಸ್ ಮಾಡಲಾಗಿದೆ. ಸ್ಟಾರ್ ಪ್ಲೇಯರ್ಸ್ಗೆ ರೆಸ್ಟ್ ನೀಡಿ, ಯಂಗ್ಗನ್ಸ್ಗೆ ಮಣೆ ಹಾಕಲಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಹಾಗೂ ಕುಲ್ದೀಪ್ ಯಾದವ್ ಮೊದಲೆರಡು ಪಂದ್ಯಗಳಿಂದ ರೆಸ್ಟ್ ನೀಡಲಾಗಿದೆ. ಇವರ ಬದಲಿ ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.
ರೋಹಿತ್ ಶರ್ಮಾಗೆ ರೆಸ್ಟ್ ನೀಡಿದ್ದರಿಂದ ಕನ್ನಡಿಗ ಕೆ.ಎಲ್.ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ. ಆ ಮೂಲಕ ಸುದೀರ್ಘ ಸಮಯದ ಬಳಿಕ ತಂಡ ಲೀಡ್ ಮಾಡುವ ಅವಕಾಶ ಸಿಕ್ಕಂತಾಗಿದೆ. ಸ್ಟಾರ್ ಆಲ್ರೌಂಡರ್ ಜಡೇಜಾಗೆ ವೈಸ್ ಕ್ಯಾಪ್ಟನ್ ಪಟ್ಟ ಕಟ್ಟಲಾಗಿದೆ.
ಇದನ್ನೂ ಓದಿ: ಭಾರತದ ವಿರುದ್ಧ ಕೆನಡಾ ಪ್ರತಿಕಾರ; ರಾಯಭಾರಿಯನ್ನು ಹೊರ ಹಾಕಿದ ಜಸ್ಟಿನ್ ಟ್ರುಡೊ ಸರ್ಕಾರ

ಮೊದಲೆರಡು ಪಂದ್ಯಗಳಿಂದ ರೆಸ್ಟ್ ಪಡೆದಿದ್ದ ಪ್ರಮುಖ ಆಟಗಾರರು ಅಂತಿಮ ಹಾಗೂ 3ನೇ ಏಕದಿನ ಪಂದ್ಯದಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ರೋಹಿತ್ ಶರ್ಮಾ ಎಂದಿನಂತೆ ನಾಯಕತ್ವದ ಜವಾಬ್ದಾರಿ ಹೊರಲಿದ್ದಾರೆ. ಇನ್ನುಳಿದಂತೆ ರನ್ ಮಾಸ್ಟರ್ ವಿರಾಟ್ ಕೊಹ್ಲಿ ಫೈನಲ್ ಫೈಟ್ ಕಣಕ್ಕಿಳಿಯಲಿದ್ದಾರೆ. ಆಸೀಸ್ ವಿರುದ್ಧ ಅದ್ಭುತ ರೆಕಾರ್ಡ್ಸ್ ಹೊಂದಿದ್ದು, ಗುಟುರು ಹಾಕೋದು ಫಿಕ್ಸ್. ಏಷ್ಯಾಕಪ್ನಲ್ಲಿ ಉತ್ತಮ ಪರ್ಫಾಮೆನ್ಸ್ ನೀಡಿದ ವೈಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯಗೆ 3ನೇ ಪಂದ್ಯದಲ್ಲಿ ಅವಕಾಶ ನೀಡಲಾಗಿದೆ.
20 ತಿಂಗಳ ಬಳಿಕ ಸ್ಪಿನ್ ಮಾಂತ್ರಿಕ ಅಶ್ವಿನ್ಗೆ ತೆರೆದ ಬಾಗಿಲು
ಸರ್ಪ್ರೈಸ್ ಎನ್ನುವಂತೆ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಆಸೀಸ್ ಏಕದಿನ ಸರಣಿಯಲ್ಲಿ ಸ್ಥಾನ ಪಡೆದಿದ್ದಾರೆ. ಆ ಮೂಲಕ 20 ತಿಂಗಳ ಬಳಿಕ ಕೇರಂ ಸ್ಪೆಷಲಿಸ್ಟ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಇವರ ಜತೆ ಮತ್ತೋರ್ವ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ಗೂ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಒಟ್ಟಿನಲ್ಲಿ ಬಹುತೇಕ ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಿದ ತಂಡವನ್ನೇ ಆಸ್ಟ್ರೇಲಿಯಾ ವಿರುದ್ಧವು ಕಣಕ್ಕಿಳಿಸಲಾಗಿದೆ. ಅಳೆದು ತೂಗಿ ಸಜ್ಜುಗೊಳಿಸಿರೋ ಇಂಡಿಯನ್ ಟೈಗರ್ಸ್ ಕಾಂಗರೂಗಳನ್ನ ಬೇಟೆಯಾಡ್ತಾವಾ ? ಇಲ್ಲ ನಮ್ಮ ಗುಹೆಗೆ ಭಾರತೀಯ ಹುಲಿಗಳನ್ನೇ ಆಸ್ಟ್ರೇಲಿಯನ್ನರು ಬೇಟೆಯಾಡ್ತಾರಾ ಅನ್ನೋದಕ್ಕೆ ಇನ್ನೊಂದು ವಾರದಲ್ಲಿ ಕ್ಲಾರಿಟಿ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್